newsfirstkannada.com

ಪ್ರಧಾನಿ ಮೋದಿಯನ್ನು ಭೇಟಿಯಾದ ಸಿದ್ದರಾಮಯ್ಯ; ಮೈಸೂರು ಪೇಟ ತೊಡಿಸಿ, ಸ್ಪೆಷಲ್ ಗಿಫ್ಟ್​ ನೀಡಿ ಗೌರವಿಸಿದ CM

Share :

03-08-2023

    ಮುಖ್ಯಮಂತ್ರಿಯಾದ ಬಳಿಕ ಇದು ಮೊದಲನೇ ಭೇಟಿ

    ಸಿದ್ದರಾಮಯ್ಯಗೆ ಬರ್ತ್​​ಡೇ ಶುಭಾಶಯ ಕೋರಿದ ಮೋದಿ

    ರಾಜ್ಯದ ಅಭಿವೃದ್ಧಿ, ಅನುದಾನದ ಬಗ್ಗೆ ಚರ್ಚೆ ನಡೆಸಿದ ಸಿದ್ದು

ದೆಹಲಿ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿ ಮಾಡಿದ್ದಾರೆ. ಸಂಸತ್ ಭವನದ ಕಚೇರಿಯಲ್ಲಿ ಪ್ರಧಾನಿಯನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಏನೆಲ್ಲ ಚರ್ಚೆ..?

ಭೇಟಿ ವೇಳೆ ಇಬ್ಬರು ನಾಯಕರು ಉಭಯ ಕುಶಲೋಪರಿ ನಡೆಸಿದರು. ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಸಿದ್ದರಾಮಯ್ಯಗೆ ಶುಭಾಶಯಗಳನ್ನು ತಿಳಿಸಿದರು. 76ನೇ ವಸಂತಕ್ಕೆ ಸಿದ್ದರಾಮಯ್ಯ ಇವತ್ತು ಕಾಲಿಟ್ಟಿದ್ದಾರೆ. ರಾಜ್ಯದ ಅಭಿವೃದ್ಧಿ, ಅನುದಾನದ ವಿಚಾರವಾಗಿ ಪ್ರಧಾನಿ ಮೋದಿ ಜೊತೆ ಸಿದ್ದರಾಮಯ್ಯ ಚರ್ಚೆ ನಡೆಸಿದ್ದಾರೆ.

ಯಾರೆಲ್ಲ ಭೇಟಿ..?

ಅನ್ನಭಾಗ್ಯಕ್ಕೆ ಅಕ್ಕಿ, ರಾಜ್ಯ ಅಭಿವೃದ್ಧಿಗೆ ಹೆಚ್ಚಿನ ಅನುದಾನ, ನೀರಾವರಿ ಯೋಜನೆಗಳಿಗೆ ಅನುದಾನ, ನರೇಗಾಗಿ ಹೆಚ್ಚಿನ ಹಣಕಾಸು ನೀಡುವಂತೆ ಕೋರಿದ್ದಾರೆ ಎನ್ನಲಾಗಿದೆ. ಮೋದಿ ಭೇಟಿ ನಂತರ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ಕೇಂದ್ರ ಸಚಿವ ರಾಜನಾಥ್ ಸಿಂಗ್, ನಿತಿನ್ ಗಡ್ಕರಿಯನ್ನೂ ಸಿದ್ದರಾಮಯ್ಯ ಭೇಟಿ ಆಗಲಿದ್ದಾರೆ.

ರಾಜ್ಯದ ಬೇಡಿಕೆ ಏನು..?

ನಿರ್ಮಲಾ ಸೀತಾರಾಮನ್ ಭೇಟಿ ವೇಳೆ 15ನೇ ಹಣಕಾಸು ಆಯೋಗದಲ್ಲಿ ಆಗಿರುವ ಅನ್ಯಾಯವನ್ನು ಸರಿಪಡಿಸುವಂತೆ ಮನವಿ ಮಾಡಿಕೊಳ್ಳುವ ಸಾಧ್ಯತೆ ಇದೆ. 15ನೇ ಹಣಕಾಸು ಆಯೋಗದ ಶಿಫಾರಸ್ಸಿನ ಪ್ರಕಾರ, 5495 ಕೋಟಿ ರೂಪಾಯಿ ಹಣವನ್ನು ಮಧ್ಯಂತರ ಪರಿಹಾರವಾಗಿ ನೀಡುವಂತೆ ಕೋರಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ಇನ್ನು ರಾಜನಾಥ್ ಸಿಂಗ್ ಭೇಟಿಯಲ್ಲಿ, ಮೈಸೂರು ದಸರಾ ಸಂದರ್ಭದಲ್ಲಿ ಏರ್​ಶೋ ನಡೆಸಲು ಅಗತ್ಯ ಅನುಮತಿ ಕೇಳಲಿದ್ದಾರೆ. ಹಾಗೆಯೇ ನಿತಿನ್ ಗಡ್ಕರಿ ಭೇಟಿ ವೇಳೆ, ರಾಜ್ಯದ ರಸ್ತೆಗಳ ಅಭಿವೃದ್ಧಿಗೆ ಕೇಂದ್ರದ ಸಹಕಾರ ಕೇಳಲಿದ್ದಾರೆ ಎಂದು ತಿಳಿದುಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪ್ರಧಾನಿ ಮೋದಿಯನ್ನು ಭೇಟಿಯಾದ ಸಿದ್ದರಾಮಯ್ಯ; ಮೈಸೂರು ಪೇಟ ತೊಡಿಸಿ, ಸ್ಪೆಷಲ್ ಗಿಫ್ಟ್​ ನೀಡಿ ಗೌರವಿಸಿದ CM

https://newsfirstlive.com/wp-content/uploads/2023/08/Siddaramaiah-PM-Modi.jpg

Load More