newsfirstkannada.com

ಗ್ಯಾರಂಟಿ ಜಾರಿಗೆ ತರಲು ಮುಂದಾದ ಸಿಎಂ ಸಿದ್ದರಾಮಯ್ಯ; ಸಂಪುಟ ಸಭೆಯಲ್ಲಿ ತೀರ್ಮಾನ

Share :

30-05-2023

    ಗ್ಯಾರಂಟಿ ಜಾರಿಗೆ ವರದಿ ಸಿದ್ಧಪಡಿಸುವಂತೆ ಸೂಚನೆ

    ಬುಧವಾರ ಎಲ್ಲ ಸಚಿವರೊಂದಿಗೆ ಸಿಎಂ ಸಮಾಲೋಚನೆ

    ಗುರುವಾರ ನಡೆಯುವ ಸಂಪುಟ ಸಭೆಯಲ್ಲಿ ತೀರ್ಮಾನ

ರಾಜ್ಯದಲ್ಲಿ ಕಾಂಗ್ರೆಸ್ ಗ್ಯಾರಂಟಿ ಜಟಾಪಟಿ ಜೋರಾಗಿದೆ. ಸರ್ಕಾರ ಯಾವಾಗ ಗ್ಯಾರಂಟಿಗಳನ್ನ ಜಾರಿಗೊಳಿಸುತ್ತೆ ಎಂಬ ಚರ್ಚೆ ಜೋರಾಗಿದೆ. ಈಗಾಗಲೇ ವಿದ್ಯುತ್‌ ಬಿಲ್ ಕಟ್ಟಲು ಜನರು ಹಿಂದೇಟು ಹಾಕ್ತಿದ್ದಾರೆ. ಸರ್ಕಾರ ಬಸ್‌ನಲ್ಲಿ ಟಿಕೆಟ್ ತೆಗೆದುಕೊಳ್ಳದೇ ಗಲಾಟೆ ಮಾಡ್ತಿದ್ದಾರೆ. ವಿಪಕ್ಷಗಳು ಗ್ಯಾರಂಟಿ ಬಾಣವನ್ನ ಸರ್ಕಾರದ ವಿರುದ್ಧ ಪ್ರಯೋಗಿಸ್ತಿವೆ.. ಇದೆಲ್ಲದಕ್ಕೂ ಬ್ರೇಕ್ ಹಾಕಲು ಸಿದ್ದು ಸರ್ಕಾರ ಗ್ಯಾರಂಟಿ ವರ್ಕೌಟ್ ಮಾಡಲು ಪ್ಲಾನ್ ರೂಪಿಸಿದೆ.

ಗ್ಯಾರಂಟಿ ಭರವಸೆಗಳು.. ಈ ಐದು ವಾಗ್ದಾನಗಳಿಂದಲೇ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಆದ್ರೆ ಇದೇ ಗ್ಯಾರಂಟಿಗನ್ನ ಜಾರಿ ತರಲು ಕಾಂಗ್ರೆಸ್​ ಸರ್ಕಾರ ಪರದಾಡ್ತಿದೆ. ಇತ್ತ ರಾಜ್ಯಾದ್ಯಂತ ಜನರು ಕರೆಂಟ್​ ಬಿಲ್​ ಕಟ್ಟದೇ, ಬಸ್ ಟಿಕೆಟ್ ತೆಗೆಯದೇ ಗದ್ದಲ-ಗಲಾಟೆವರೆಗೂ ಹೋಗಿದೆ.. ವಿಪಕ್ಷಗಳು ಗ್ಯಾರಂಟಿ ಜಾರಿಗಾಗಿ ಪಟ್ಟು ಹಿಡಿದಿವೆ. ಜೂನ್ 1 ರಿಂದ ಗ್ಯಾರಂಟಿ ಪ್ರತಿಭಟನೆ ಎಂಬ ಎಚ್ಚರಿಕೆ ಕೊಟ್ಟಿವೆ. ಹೀಗಾಗಿ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಜಾರಿಗೆ ಸರ್ಕಸ್ ಶುರು ಮಾಡಿದೆ.

ಗ್ಯಾರಂಟಿಗಳ ಜಾರಿಗೆ ಗುರುವಾರ ಸಚಿವ ಸಂಪುಟ ಸಭೆ

ಮೊದಲ ಕ್ಯಾಬಿನೆಟ್ ಸಭೆಯಲ್ಲಿ ಗ್ಯಾರಂಟಿಗಳಿಗೆ ರಾಜ್ಯ ಸರ್ಕಾರ ತಾತ್ವಿಕ ಒಪ್ಪಿಗೆ ಸೂಚಿಸಿತ್ತು.. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಗ್ಯಾರಂಟಿ ಜಾರಿ ಮಾಡೋದಾಗಿ ತಿಳಿಸಿತ್ತು. ಇದೀಗ ಯಾವಾಗ ಗ್ಯಾರಂಟಿ ಜಾರಿ ಎಂಬ ಪ್ರಶ್ನೆ ಎದ್ದಿತ್ತು. ಇದೀಗ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ನಿನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಹಣಕಾಸು, ಸಾರಿಗೆ, ಆಹಾರ ಮತ್ತು ನಾಗರಿಕ ಸರಬರಾಜು, ಇಂಧನ ಮತ್ತಿತರ ಇಲಾಖೆಗಳ ಹಿರಿಯ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದ್ರು.. ಈ ಸಭೆಯಲ್ಲಿ  ಗೃಹಜ್ಯೋತಿ, ಗೃಹ ಲಕ್ಷ್ಮಿ, ಅನ್ನಭಾಗ್ಯ, ಯುವ ನಿಧಿ ಹಾಗೂ ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ ಸೌಲಭ್ಯ ನೀಡುವ ಯೋಜನೆಗಳ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.. ಅಲ್ಲದೇ ಗ್ಯಾರಂಟಿಗಳ ಜಾರಿಗೆ ಕಾರ್ಯತಂತ್ರ ರೂಪಿಸುವಂತೆ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

 ಗ್ಯಾರಂಟಿ ಜಾರಿಗೆ ಕಸರತ್ತು

  1. ಗ್ಯಾರಂಟಿ ಜಾರಿಗೆ ವರದಿ ಸಿದ್ಧಪಡಿಸುವಂತೆ ಸೂಚನೆ
  2. ಬುಧವಾರ ಎಲ್ಲ ಸಚಿವರೊಂದಿಗೆ ಸಿಎಂ ಸಮಾಲೋಚನೆ
  3. ಗುರುವಾರ ನಡೆಯುವ ಸಂಪುಟ ಸಭೆಯಲ್ಲಿ ತೀರ್ಮಾನ

ಅಧಿಕಾರಿಗಳ ಜೊತೆ ಸಭೆ ನಡೆಸಿದ ಸಿಎಂ, ಗ್ಯಾರಂಟಿ ಜಾರಿಗೆ ವರದಿಯೊಂದನ್ನ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.. ಅಲ್ಲದೇ ಗ್ಯಾರಂಟಿಗಳ ಜಾರಿ ಬಗ್ಗೆ ಬುಧವಾರ ಅಂದ್ರೆ ನಾಳೆ ಎಲ್ಲಾ ಸಚಿವರೊಂದಿಗೆ ಸಿಎಂ ಸಮಾಲೋಚನೆ ನಡೆಸಲಿದ್ದಾರೆ. ಗುರುವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಅಧಿಕೃತವಾಗಿ ಗ್ಯಾರಂಟಿಗಳ ಜಾರಿಗೊಳಿಸುವ ಬಗ್ಗೆ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.

 ಇವತ್ತು ಸಾರಿಗೆ ನಿಗಮಗಳ ಜೊತೆ ರಾಮಲಿಂಗಾ ರೆಡ್ಡಿ ಸಭೆ

ರಾಜ್ಯ ಸರ್ಕಾರಕ್ಕೆ ತಲೆನೋವು ತರಿಸಿರೋದು ಮಹಿಳೆಯರಿಗೆ ಫ್ರೀ ಬಸ್‌ ಪಾಸ್ ಯೋಜನೆ. ಇದೀಗ ಈ ಯೋಜನೆಯ ಆಗುಹೋಗುಗಗಳ ಬಗ್ಗೆ ಚರ್ಚಿಸಲು ಇವತ್ತು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ  ಕೆಎಸ್‌ಆರ್‌ಟಿಸಿಯ ನಾಲ್ಕು ನಿಗಮಗಳ ವ್ಯವಸ್ಥಾಪಕ ನಿರ್ದೇಶಕ ಸಭೆಯನ್ನ ಕರೆದಿದ್ದಾರೆ. ಇನ್ನೂ ಎಷ್ಟು ಮಂದಿ ಮಹಿಳೆಯರು ಸಾರಿಗೆ ಬಸ್‌ಗಳಲ್ಲಿ ಪ್ರಯಾಣಿಸುತ್ತಾರೋ ಅಷ್ಟು ಹಣವನ್ನ ಸರ್ಕಾರವೇ ನಾಲ್ಕು ನಿಗಮಗಳಿಗೆ ಕೊಡಬೇಕಾಗುತ್ತೆ ಎಂಬ ಮಾಹಿತಿಯನ್ನ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.. ಇತ್ತ ಸಚಿವ ಹೆಚ್‌.ಕೆ. ಪಾಟೀಲ್ ಕೂಡಾ ಗ್ಯಾರಂಟಿಗಳ ಜಾರಿ ಬಗ್ಗೆ ಭರವಸೆ ನೀಡಿದ್ದಾರೆ.

ಒಟ್ಟಾರೆ, ರಾಜ್ಯದಲ್ಲಿ ಗ್ಯಾರಂಟಿ.. ಗ್ಯಾರಂಟಿ ಎಂಬ ಸದ್ದು ಎಲ್ಲೆಡೆ ಜೋರಾಗಿದೆ.. ವಿಪಕ್ಷಗಳು ಗ್ಯಾರಂಟಿಯ ಗಂಟನ್ನೇ ಹಿಡಿದು ಸರ್ಕಾರದ ಕೊರಳಿಗೆ ಉರುಳು ಹಾಕಲು ಸನ್ನದ್ಧವಾಗಿದೆ.. ಇದೀಗ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಅನುಷ್ಠಾನಕ್ಕೆ ತರಲು ಸಿದ್ಧವಾಗಿದೆ.. ಸದ್ಯ ಕಾಂಗ್ರೆಸ್‌ನ ಗ್ಯಾರಂಟಿಗಳು ಹೇಗಿರಲಿವೆ ಅನ್ನೋ ಕೌತುಕ ರಾಜ್ಯದ ಜನರಲ್ಲಿ ಮನೆಮಾಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಗ್ಯಾರಂಟಿ ಜಾರಿಗೆ ತರಲು ಮುಂದಾದ ಸಿಎಂ ಸಿದ್ದರಾಮಯ್ಯ; ಸಂಪುಟ ಸಭೆಯಲ್ಲಿ ತೀರ್ಮಾನ

https://newsfirstlive.com/wp-content/uploads/2023/05/CM-Siddaramaiah-1.jpg

Load More