newsfirstkannada.com

ದುಬಾರಿ ಕರೆಂಟ್ ಬಿಲ್​​ನಿಂದ ಕಂಗೆಟ್ಟ ಜನ; ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಹೇಳಿದ್ದೇನು..?

Share :

10-06-2023

    ಕರ್ನಾಟಕ ಜನರಿಗೆ ದುಬಾರಿ ಕರೆಂಟ್​ ಬಿಲ್​ ಶಾಕ್..!​​

    300 ರೂ. ಇದ್ದ ಕರೆಂಟ್​ ಬಿಲ್​​ ದಿಢೀರ್​​ ಸಾವಿರಕ್ಕೇರಿಕೆ

    ದುಬಾರಿ ಕರೆಂಟ್​ ಬಿಲ್​ ಬಗ್ಗೆ ಸಿಎಂ ಸಿದ್ದು ಏನಂದ್ರು..?

ಬೆಂಗಳೂರು: ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಗೆ ಮುನ್ನ ನೀಡಿದ ಭರವಸೆಯಂತೆ ಅಧಿಕಾರಕ್ಕೆ ಬಂದ ಕೂಡಲೇ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್​ ಸರ್ಕಾರವೂ ಐದು ಗ್ಯಾರಂಟಿಗಳನ್ನು ಜಾರಿ ಮಾಡಿ ಆದೇಶಿಸಿದೆ. ಈ ಪೈಕಿ ರಾಜ್ಯದ ಎಲ್ಲಾ ಮನೆಗಳಿಗೂ 200 ಯೂನಿಟ್​​​ ಕರೆಂಟ್​ ಫ್ರೀ ನೀಡುವ ಸ್ಕೀಮ್​​ ಗೃಹಜ್ಯೋತಿ ಒಂದು.

ಒಂದೆಡೆ ಮುಂದಿನ ತಿಂಗಳಿನಿಂದ 200 ಯೂನಿಟ್​​​ ಒಳಗೆ ವಿದ್ಯುತ್​ ಬಳಸೋ ಮನೆಗೆ ಎಲ್ಲರಿಗೂ ಫ್ರೀ ಎಂದು ಸಿಎಂ ಸಿದ್ದರಾಮಯ್ಯ ಅವರೇ ಸ್ಪಷ್ಟನೆ ನೀಡಿದ್ದಾರೆ. ನಾವು ಬಾಡಿಗೆದಾರರು, ಮನೆ ಮಾಲೀಕರು ಎಂದು ಯಾವುದೇ ವ್ಯತ್ಯಾಸ ಮಾಡುವುದಿಲ್ಲ. ಎಲ್ಲರಿಗೆ ಉಚಿತ 200 ಯೂನಿಟ್​​​ ಕರೆಂಟ್​ ಕೊಡುತ್ತೇವೆ ಎಂದಿದ್ದಾರೆ ಸಿಎಂ ಸಿದ್ದರಾಮಯ್ಯ. ಈ ಮುನ್ನವೇ ರಾಜ್ಯದ ಜನರಿಗೆ ಸರ್ಕಾರ ಕರೆಂಟ್​ ಶಾಕ್​ ಕೊಟ್ಟಿದೆ.

ಯೆಸ್​​, ಕಳೆದ ತಿಂಗಳು ಕೇವಲ 300 ರೂ. ಬಂದಿದ್ದ ಕರೆಂಟ್​ ಬಿಲ್​​ ಈ ಬಾರಿ ಏಕಾಏಕಿ ಒಂದು ಸಾವಿರಕ್ಕೆ ಏರಿಕೆಯಾಗಿದೆ. 600 ರೂ. ಬಂದಿದ್ದ ಕರೆಂಟ್​ ಬಿಲ್​​ 2 ಸಾವಿರ, 3 ಸಾವಿರ ಹೀಗೆ ಬೇಕಾಬಿಟ್ಟಿ ಆಗಿದೆ. ಈ ಬಗ್ಗೆ ಬೆಸ್ಕಾಂ ಅಧಿಕಾರಿಗಳು ವಿದ್ಯುತ್​ ಬಿಲ್​​ ಪರಿಷ್ಕರಣೆ ಆದ್ದರಿಂದ ರೀಡರ್​ ಸಮಸ್ಯೆ ಆಗಿದೆ. ಹೀಗಾಗಿ ತಾಂತ್ರಿಕ ದೋಷದಿಂದ ಬಿಲ್​ ಹೆಚ್ಚು ಬಂದಿದೆ. ನಾವು ಇದನ್ನು ಕೂಡಲೇ ಸರಿ ಮಾಡುತ್ತೇವೆ. ಅಲ್ಲಿಯವರೆಗೂ ಯಾರು ಕರೆಂಟ್​ ಬಿಲ್​ ಕಟ್ಟಬೇಡಿ ಎಂದಿದ್ದಾರೆ. ಈ ಮಧ್ಯೆ ಸಿಎಂ ಸಿದ್ದರಾಮಯ್ಯ ಕೂಡ ದುಬಾರಿ ಕರೆಂಟ್​ ಬಿಲ್​ ಬಗ್ಗೆ ಮಾತಾಡಿದ್ದಾರೆ.

ಸಿಎಂ ಸಿದ್ದರಾಮಯ್ಯ ಹೇಳಿದ್ದೇನು..?

ಸರ್ಕಾರ ಪ್ರತೀ ವರ್ಷ ಮಾರ್ಚ್​, ಏಪ್ರಿಲ್​ ತಿಂಗಳಿನಲ್ಲಿ ವಿದ್ಯುತ್​ ಬಿಲ್​​ ಪರಿಷ್ಕರಣೆ ಮಾಡುತ್ತದೆ. ಚುನಾವಣೆಯಿಂದ ಕೋಡ್​ ಆಫ್​ ಕಂಡಕ್ಟ್​ ಇದ್ದ ಕಾರಣ ಈ ಬಾರಿ ಏಪ್ರಿಲ್​ನಲ್ಲಿ ವಿದ್ಯುತ್​ ಬಿಲ್​​ ಪರಿಷ್ಕರಣೆ ಮಾಡಲಾಗಲಿಲ್ಲ. ಈಗ ಕರೆಂಟ್​ ಬಿಲ್​ ಹೆಚ್ಚಳದ ಕುರಿತು ಆದೇಶ ಹೊರಡಿಸಲಾಗಿದೆ. ಇದು ಹಿಂದಿನಿಂದ ತಿಂಗಳಿನಿಂದಲೇ ಅನ್ವಯ ಆಗಲಿದೆ. ಹೀಗಾಗಿ ಕರೆಂಟ್​ ಬಿಲ್​ ಹೆಚ್ಚಾಗಿ ಬಂದಿದೆ ಅಷ್ಟೇ ಎಂದರು ಸಿಎಂ ಸಿದ್ದರಾಮಯ್ಯ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದುಬಾರಿ ಕರೆಂಟ್ ಬಿಲ್​​ನಿಂದ ಕಂಗೆಟ್ಟ ಜನ; ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಹೇಳಿದ್ದೇನು..?

https://newsfirstlive.com/wp-content/uploads/2023/06/Siddaramaiah_12.jpg

Load More