ಆರಂಭದಲ್ಲೇ ಅನ್ನಭಾಗ್ಯ ಯೋಜನೆ ಜಾರಿಗೆ ಕವಿದ ಗ್ರಹಣ
ಸಿಎಂ ಸಿದ್ದರಾಮಯ್ಯ ‘ಅನ್ನಭಾಗ್ಯ’ ಕನಸಿಗೆ ಕೇಂದ್ರ ಅಡ್ಡಗಾಲು
ರಾಜ್ಯ ಸರ್ಕಾರಕ್ಕೆ ಕಡೇ ಕ್ಷಣದಲ್ಲಿ ಪ್ರಧಾನಿ ಮೋದಿ ಸರ್ಕಾರ ಶಾಕ್
ಬೆಂಗಳೂರು: ಹಸಿದ ಹೊಟ್ಟೆಗೆ ಅನ್ನಭಾಗ್ಯ ಯೋಜನೆ ನೀಡಲು ಅಣಿಯಾಗಿದ್ದ ಸಿದ್ದರಾಮಯ್ಯ ಸರ್ಕಾರಕ್ಕೆ ಕೇಂದ್ರ ಸರ್ಕಾರ ಶಾಕ್ ನೀಡಿದೆ. ಎಫ್‌ಸಿಐನಿಂದ ಅಕ್ಕಿ ಖರೀದಿಸಲು ಮುಂದಾಗಿದ್ದ ರಾಜ್ಯ ಸರ್ಕಾರಕ್ಕೆ ಕಡೇ ಕ್ಷಣದಲ್ಲಿ ಸಂಸ್ಥೆ ಶಾಕ್ ನೀಡಿದ್ದು, ಅಕ್ಕಿ ಕೊಡಲು ನಿರಾಕರಿಸಿದೆ. ಈ ನಿರ್ಧಾರದ ಬಗ್ಗೆ ಸಿಎಂ ಸಿದ್ದರಾಮಯ್ಯ ಗರಂ ಆಗಿದ್ದು, ಇದು ಕೇಂದ್ರ ಸರ್ಕಾರದ ಷಡ್ಯಂತ್ರ ಅಂತಾ ಕಿಡಿಕಾರಿದ್ದಾರೆ.
ಅನ್ನಭಾಗ್ಯ.. ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಬಡವರ ಪಾಲಿಗೆ ಅಕ್ಷಯ ಪಾತ್ರೆಯಂತಾಗಿದ್ದ ಯೋಜನೆ ಇದು.. ಸಿದ್ದರಾಮಯ್ಯ ಕನಸಿನ ಕೂಸಾಗಿ ರಾಜ್ಯದ ಜನತೆಯ ಮೆಚ್ಚುಗೆಗೆ ಪಾತ್ರವಾದ ಯೋಜನೆ ಇದು.. ಹೀಗಾಗಿ ಮತ್ತೆ ಸಿದ್ದರಾಮಯ್ಯ ನೇತೃತ್ವದಲ್ಲಿ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರೋ ಕಾಂಗ್ರೆಸ್, ಅನ್ನಭಾಗ್ಯ ಯೋಜನೆಯನ್ನ ಬಡವರ ಮಡಿಲಿಗೆ ಹಾಕಲು ಮುಂದಾಗಿತ್ತು.. ಆದ್ರೆ ಮೊದಲ ಹೆಜ್ಜೆಯಲ್ಲೇ ಅನ್ನಭಾಗ್ಯ ಯೋಜನೆ ಜಾರಿಗೆ ಗ್ರಹಣ ಕವಿದಿದೆ.
ಇದನ್ನೂ ಓದಿ: ದಿಢೀರ್ ಮಾಜಿ ಪ್ರಧಾನಿ ದೇವೇಗೌಡರನ್ನು ಭೇಟಿಯಾದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ; ಕಾರಣವೇನು?
ಸಿದ್ದು ‘ಅನ್ನಭಾಗ್ಯ’ ಕನಸಿಗೆ ಅಡ್ಡಿಯಾಯ್ತಾ ಕೇಂದ್ರ ಸರ್ಕಾರ?
ಇನ್ನೇನು ಕೆಲದಿನಗಳಲ್ಲಿ ಸಿಎಂ ಸಿದ್ದರಾಮಯ್ಯನವರ ಮಹತ್ವಾಂಕಾಕ್ಷಿ ಯೋಜನೆಯಾದ ಅನ್ನಭಾಗ್ಯ ಯೋಜನೆಯಡಿ ತಲಾ 10 ಕೆ.ಜಿ ಅಕ್ಕಿ ನೀಡಲು ಸರ್ಕಾರ ಸಿದ್ದತೆ ನಡೆಸಿತ್ತು.. ಆದ್ರೆ ರಾಜ್ಯ ಸರ್ಕಾರದ ಕನಸಿಗೆ ಕೇಂದ್ರ ಬಿಜೆಪಿ ಸರ್ಕಾರ ತಣ್ಣೀರೆರೆಚಿದೆ ಅಂತ ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ.. ಎಫ್ಸಿಐ ಮೂಲಕ ಅಕ್ಕಿ ಖರೀದಿಸಲು ಮುಂದಾಗಿದ್ದ ರಾಜ್ಯ ಸರ್ಕಾರಕ್ಕೆ, ಕಡೇ ಕ್ಷಣದಲ್ಲಿ ಅಕ್ಕಿ ಕೊಡದಿರಲು ಸಂಸ್ಥೆ ನಿರ್ಧರಿಸಿದೆಯಂತೆ. ಜುಲೈ ತಿಂಗಳಿಗೆ ಅನುಗುಣವಾಗುವಂತೆ ರಾಜ್ಯಕ್ಕೆ ಅಕ್ಕಿ ನೀಡಲು ಒಪ್ಪಿದ್ದ ಎಫ್ಸಿಐ, ಈಗ ಕೇಂದ್ರ ಸರ್ಕಾರದ ಕುಮ್ಮಕ್ಕಿನಿಂದ ಉಲ್ಟಾ ಹೊಡೆದಿದೆ ಅಂತ ಸಿದ್ದರಾಮಯ್ಯ ಗರಂ ಆಗಿದ್ದಾರೆ.
ಇದು ಕೇಂದ್ರ ಸರ್ಕಾರದ ಷಡ್ಯಂತ್ರ ಅಂತಾ ಸಿದ್ದು ಕಿಡಿ
ಕೇಂದ್ರ ಸರ್ಕಾರ ಬಡವರಿಗೆ ನೀಡುವ ಅಕ್ಕಿಯಲ್ಲಿ ರಾಜಕೀಯ ಮಾಡಬಾರದಿತ್ತು.. ಕಾಂಗ್ರೆಸ್ ಸರ್ಕಾರಕ್ಕೆ ಈ ಯೋಜನೆಯಿಂದ ಒಳ್ಳೆ ಹೆಸರು ಬರುತ್ತೆ ಅಂತ ಹೀಗೆ ಮಾಡಿದ್ದಾರೆ.. ಇವರನ್ನ ಏನಂತ ಕರಿಬೇಕು ಅಂತ ಸಿದ್ದರಾಮಯ್ಯ ಪ್ರಶ್ನಿಸಿದ್ರು.
ಇನ್ನೂ ಮತ್ತೆ ರಾಜ್ಯ ಸರ್ಕಾರದಿಂದ ಕೇಂದ್ರಕ್ಕೆ ಮನವಿ ಮಾಡ್ತೀರ ಅನ್ನೋ ಸುದ್ದಿಗಾರರ ಪ್ರಶ್ನೆಗೆ ಗರಂ ಆದ ಸಿದ್ದರಾಮಯ್ಯ ಕೇಂದ್ರ ಮೋಸ ಮಾಡಿದೆ ಅಂತ ಸಿಡಿಮಿಡಿಗೊಂಡ್ರು. ಬಿಜೆಪಿ ಸರ್ಕಾರ ಎಷ್ಟೇ ಷಡ್ಯಂತ್ರ ಮಾಡಿದ್ರೂ ನಾವು 10 ಕೆ.ಜಿ ಅಕ್ಕಿಯನ್ನ ಕೊಡೋಕೆ ತಯಾರಾಗಿದ್ದೇವೆ.. ಆದ್ರೆ ಅದಕ್ಕೆ ವಿಳಂಬವಾದ್ರೆ ಕೇಂದ್ರ ಸರ್ಕಾರವೇ ನೇರ ಕಾರಣ ಅಂತ ಸಹ ಸಿದ್ದರಾಮಯ್ಯ ಗುಡುಗಿದ್ರು.
ಸಿದ್ದು ಆರೋಪಕ್ಕೆ ಆರ್. ಅಶೋಕ್ ತಿರುಗೇಟು
ಕೇಂದ್ರ ಸರ್ಕಾರ ಈಗಾಗಲೇ 5 ಕೆ.ಜಿ. ಅಕ್ಕಿ ನೀಡುತ್ತಿದೆ. ಆದ್ರೆ ತಲಾ 10 ಕೆ.ಜಿ. ಅಕ್ಕಿ ನೀಡಲು ಎಪ್‌ಸಿಐನಿಂದ ಅಕ್ಕಿ ಖರೀದಿಸೋದು ರಾಜ್ಯ ಸರ್ಕಾರದ ಪ್ಲಾನ್ ಆಗಿತ್ತು. ಆದ್ರೆ ಕಡೇ ಕ್ಷಣದಲ್ಲಿ ಅಕ್ಕಿ ಕೊಡಲ್ಲಾ ಅಂತಾ ಪತ್ರ ಬರೆದಿರುವುದು, ಜುಲೈ ತಿಂಗಳಿಂದಲೇ 10 ಕೆ.ಜಿ. ಅಕ್ಕಿ ನೀಡೋ ಯೋಜನೆ ವಿಳಂಬವಾಗುವ ಸಾಧ್ಯತೆಯಿದೆ. ಇಷ್ಟಾದ್ರೂ ಸಿದ್ದರಾಮಯ್ಯ ಆರೋಪವನ್ನ ಬಿಜೆಪಿ ಅಲ್ಲಗಳೆದಿದೆ. ಅಕ್ಕಿ ನೀಡಲಾಗದೆ ಸಿಎಂ ಸಿದ್ದರಾಮಯ್ಯ ಹೀಗೆ ಸುಳ್ಳು ಹೇಳುತ್ತಿದ್ದಾರೆ ಎಂದು ಆರ್. ಅಶೋಕ್ ಕಿಡಿಕಾರಿದರು.
ಒಟ್ನಲ್ಲಿ ಅನ್ನಭಾಗ್ಯ ಯೋಜನೆಗೆ ಕೇಂದ್ರ ಬಿಜೆಪಿ ಸರ್ಕಾರ ಅಡ್ಡಗಾಲು ಹಾಕಿರೋದ್ರಿಂದ ಮುಂದಿನ ತಿಂಗಳು ಈ ಯೋಜನೆ ಜನರಿಗೆ ಸಿಗೋದು ಡೌಟು ಎನ್ನಲಾಗ್ತಿದೆ.. ಕೇಂದ್ರ ಸರ್ಕಾರದ ಮನವೊಲಿಸಿ ಮತ್ತೆ 5 ಕೆ.ಜಿ ಅಕ್ಕಿಯನ್ನ ಪಡೆಯುವಲ್ಲಿ ಸಿದ್ದರಾಮಯ್ಯ ಅಂಡ್ ಟೀಂ ಸಕ್ಸಸ್ ಆಗುತ್ತಾ ಅನ್ನೋದನ್ನ ಕಾದುನೋಡ್ಬೇಕಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ