newsfirstkannada.com

ವಿಪಕ್ಷ ನಾಯಕ ಯಾರು? ಬಿಜೆಪಿ ಹೈಕಮಾಂಡ್​ ಮಣೆ ಯಾರಿಗೆ? ಸಿಎಂ ಸಿದ್ದು ಮಾತಿನ ರಹಸ್ಯವೇನು?

Share :

13-07-2023

    ವಿಧಾನಸಭೆಯಲ್ಲಿ ಗದ್ದಲ ಸೃಷ್ಟಿಸಿದ ‘ವಿಪಕ್ಷ ನಾಯಕ’!

    ಯಾರಿಗೆ ಪಟ್ಟ ಅನ್ನೋ ಅಡ್ಡಕತ್ತರಿಯಲ್ಲಿ ಕೇಸರಿ ಪಡೆ

    ಸಿಎಂ ಸಿದ್ದುಗೆ ಸಿಕ್ಕಿಬಿಡ್ತಾ ಡೆಲ್ಲಿ ಸೋರ್ಸ್​​ ಮಾಹಿತಿ!?

ಬೆಂಗಳೂರು: ವಿಧಾನಸಭೆ ವಿಪಕ್ಷ ನಾಯಕ ಯಾರು? ಯಾರಿಗೆ ಹೈಕಮಾಂಡ್​ ಮಣೆ ಹಾಕುತ್ತೆ? ಶಾಡೋ ಸಿಎಂ ಸ್ಥಾನಕ್ಕೆ ಯಾರೆಲ್ಲಾ ರೇಸ್​ನಲ್ಲಿದ್ದಾರೆ. ಹೀಗೆ ಹತ್ತಾರು ಪ್ರಶ್ನೆಗಳ ಎಲ್ಲಾ ಅಂತೆಕಂತೆಗಳು ಅಡಕಲು ಸೇರಿ, ಗುಡ್ಡವೇ ಕೊರೆದಿವೆ. ಯಾರಿಗೆ ಪಟ್ಟ ಕಟ್ಟಬೇಕು ಅನ್ನೋ ಅಡ್ಡಕತ್ತರಿಯಲ್ಲೇ ಕಾಲಹರಣ ಆಗಿ ಹೋಗಿದೆ. ಚುನಾವಣೆ ಸೋತ ಬಳಿಕ ರಾಜ್ಯದ ಮೇಲಿನ ಮಮಕಾರ ಮರೆತ ಡೆಲ್ಲಿ ದೊರೆಗಳು ಯಾವುದೇ ಹುಕುಂ ಹೊರಡಿಸಿಲ್ಲ. ಕಾರಣ ರಾಜ್ಯ ಸಂಸದೀಯ ವ್ಯವಸ್ಥೆ, ಮುಜುಗರದಿಂದ ತಲೆ ತಗ್ಗಿಸಿದೆ.

ಮಾಜಿ ಸಿಎಂ ಕುಮಾರಸ್ವಾಮಿ ಗೃಹ ಜ್ಯೋತಿ ಬಗ್ಗೆ ಮಾತನಾಡುವಾಗ ಯತ್ನಾಳ್​​​ ಪದೇ ಪದೇ ಎಂಟ್ರಿ ಕೊಟ್ರು. ಇದಕ್ಕೆ ಸಿಎಂ ಸಿದ್ದರಾಮಯ್ಯ, ಬಿಜೆಪಿ ಬುಡಕ್ಕೆ ವಿಪಕ್ಷ ಸ್ಥಾನದ ಕೆಂಡ ಕಟ್ಟಿದ್ರು. ನೀವು ಹೀಗೆ ಮಾತಾಡ್ತಿದ್ರೆ ಸಂಸದೀಯ ಪಟು ಆಗಲ್ಲ. ನಿಮ್ಮನ್ನು ವಿಪಕ್ಷ ನಾಯಕನಾಗೂ ಮಾಡಲ್ಲ. ಇದು ನನಗಿರುವ ಮಾಹಿತಿ ಅಂತ ಸೋರ್ಸ್​​​ ಬಿಟ್ಟುಕೊಡದೆ ಯತ್ನಾಳ್​​​ ಕಾಲೆಳೆದ್ರು.

ಸಿಎಂ ಸಿದ್ದು ಪ್ರಕಾರ ವಿಪಕ್ಷ ಸ್ಥಾನಕ್ಕೆ ಯಾಱರು ರೇಸ್​ನಲ್ಲಿದ್ದಾರೆ?

ಸಿದ್ದು ಮಾತಿನ ವರಸೆ ಇಷ್ಟಕ್ಕೆ ನಿಲ್ಲಲ್ಲ. ಸದನದಲ್ಲಿ ವಿಪಕ್ಷ ಸ್ಥಾನದ ಆಕಾಂಕ್ಷಿಗಳ ಪಟ್ಟಿಯನ್ನೇ ಪ್ರಕಟಿಸಿದ್ರು. ಆರಗ ಜ್ಞಾನೇಂದ್ರ ಆಕಾಂಕ್ಷಿ ಅಲ್ಲ.‌ ಆದ್ರೆ ಅಶ್ವತ್ಥ್​ ನಾರಾಯಣ್​, ಬೊಮ್ಮಾಯಿ ಆಕಾಂಕ್ಷಿ ಆಗಿದ್ದಾರೆ ಎಂದರು.

ಅಡ್ಜಸ್ಟ್​ಮೆಂಟ್​​​ ಸಾಬೀತಾದ್ರೆ ರಾಜಕೀಯದಿಂದ ನಿವೃತ್ತಿ

ಹೊಂದಾಣಿಕೆ ರಾಜಕಾರಣ. ರಾಜ್ಯ ರಾಜಕೀಯದಲ್ಲಿ ಹೊಂದಿಸಿ ಬರೆಯುವ ಈ ಪದಗಳಿಗೆ ರೋಷಗೊಂಡ ಸಿಎಂ ಸದನದಲ್ಲಿ ಕೆಂಡವಾದ್ರು. ಅಡ್ಜೆಸ್ಟ್​ಮೆಂಟ್ ಸಾಬೀತಾದ್ರೆ ರಾಜಕೀಯ ನಿವೃತ್ತಿ ಘೋಷಣೆ ಮಾಡ್ತೀನಿ ಎಂದು ಯತ್ನಾಳ್​ಗೆ ಸವಾಲು ಹಾಕಿದ್ರು.

ಜೆಡಿಎಸ್​​​ ಬಾಗಿಲಿಗೆ ವಿಪಕ್ಷ ಸ್ಥಾನ?

ಕೈಗೆ ಬಂದ ತುತ್ತು ಬಾಯಿಗೆ ಬಾರದು. ಸದ್ಯ ಬಿಜೆಪಿಗೆ ಬಂದ ತುತ್ತಿನ ಬಗ್ಗೆ ಸವದಿ ಹೊಸ ಭವಿಷ್ಯ ನುಡಿದ್ರು. ಬಿಜೆಪಿಯಲ್ಲಿ ವಿಪಕ್ಷ ಸ್ಥಾನಕ್ಕೆ ಪೈಪೋಟಿ ಇದೆ, ಕಚ್ಚಾಟವೂ ಇದೆ. ಆದ್ರೆ ಏನ್​ ಪ್ರಯೋಜನ? ಕುಮಾರಸ್ವಾಮಿಯವರೇ ವಿಪಕ್ಷ ಸ್ಥಾನದಲ್ಲಿ ಕೂತು ಕೆಲಸ ಮಾಡ್ತಿದ್ದಾರೆ. ವೈಟ್‌ ಆಂಡ್ ಸಿ ಈ ಸ್ಥಾನ ಜೆಡಿಎಸ್ ಬಾಗಿಲಿಗೇ ಬರಲಿದೆ ಅಂತ ಸವದಿ ಜ್ಯೋತಿಷಿ ಪೋಷಾಕು ತೊಟ್ರು.

ಯಡಿಯೂರಪ್ಪರನ್ನ ಅಧಿಕಾರದಿಂದ ಯಾಕೆ ಇಳಿಸಿದ್ರು?

ಅಂದ್ಹಾಗೆ, ಎರಡು ವರ್ಷ ಹಿಂದಿನ ಐತಿಹಾಸಿಕ ಘಟನೆಯನ್ನ ಸದನಕ್ಕೆ ಎಳೆದು ತಂದ ಜೆಡಿಎಸ್​​​ನ ಜಿ.ಟಿ ದೇವೇಗೌಡ್ರು. ಯಡಿಯೂರಪ್ಪರನ್ನ ಅಧಿಕಾರದಿಂದ ಯಾಕೆ ಇಳಿಸಿದ್ರು ಈಗಲೂ ಗೊತ್ತಾಗ್ತಿಲ್ಲ ಗತಕ್ಕೆ ತೆರಳಿದ್ರು. ಮೋದಿ ಬಿಟ್ರೆ ಯಾರಿಗೂ ಗೊತ್ತಿಲ್ಲ. ಅವತ್ತು ಡಿಸಿಎಂ ಆಗಿದ್ದ ಸವದಿ ನಿಮಗೇನಾದ್ರೂ ಗೊತ್ತಾ? ಸವದಿಯನ್ನ ಮಾತಿಗೆ ಎಳೆದ್ರು.

ಅಕ್ಕಿ ವಿಚಾರದಲ್ಲಿ ಹೆಚ್​ಡಿಕೆ ಕೊಟ್ರು ಬೆಸ್ಟ್​​ ಅಡ್ವೈಸ್​​​!

ಅನ್ನಭಾಗ್ಯ ಯೋಜನೆ ಬಗ್ಗೆ ಸದನದಲ್ಲಿ ಪ್ರಸ್ತಾಪಿಸಿದ ಮಾಜಿ ಸಿಎಂ ಕುಮಾರಸ್ವಾಮಿ, ಧನಭಾಗ್ಯಕ್ಕೆ ಸಾಫ್ಟ್​​​ ಆಗಿ ಕ್ಯಾತೆ ತೆಗೆದರು. ಪೌಷ್ಠಿಕ ಆಹಾರದ ಕೊರತೆ ಇರೋರಿಗೆ ಬೇಳೆ, ಎಣ್ಣೆ, ಬೆಲ್ಲ ಕೊಡಬಹುದು ಎಂದು ಅಡ್ವೈಸ್​​ ಮಾಡಿದ್ರು. ಅಲ್ಲದೆ, ಆದ್ರೆ ನುಡಿದಂತೆ ಸಂಪೂರ್ಣ ನಡೆದಿಲ್ಲ ಸರ್ಕಾರಕ್ಕೆ ಚಾಟಿ ಬೀಸಿದ್ರು.

ಸದನದಲ್ಲಿ ಸರ್ಕಾರದ ವಿರುದ್ಧ ರೇವಣ್ಣ ಕಾರಿದ್ರು ಕಿಡಿ!

ಸದನ ಬೇರೆ ಯಾವುದೋ ಮೂಡ್​​ನಲ್ಲಿದ್ದಾಗ ಎದ್ದು ನಿಂತ ರೇವಣ್ಣ, ಮತ್ತದೇ ತವರಿನ ಹಾಲತ್​​​​ ಬಗ್ಗೆ ಮಾತನಾಡಿದ್ರು. ಹಾಸನ ಆರ್ಟ್ಸ್ ಕಾಲೇಜಿನಲ್ಲಿ‌ ಮುಸ್ಲಿಮರು ಎಂಬ ಕಾರಣಕ್ಕಾಗಿ ಪ್ರಾಂಶುಪಾಲ ಹುದ್ದೆ ಕೊಟ್ಟಿಲ್ಲ. ಬದಲಿಗೆ ಜೂನಿಯರ್ ವ್ಯಕ್ತಿಗೆ ಹುದ್ದೆ ನೀಡಲಾಗಿದೆ. ಅಯ್ಯೋ ಕಾಂಗ್ರೆಸ್​​ ಸರ್ಕಾರ ಬಂದ್ರೂ ಸಾಬ್ರಿಗೆ ರಕ್ಷಣೆ ಇಲ್ಲ ಬಿಡ್ರಿ ಅಂತ ಬೇಸರದಲ್ಲಿ ಮರಳಿ ಕುರ್ಚಿಗೆ ಒರಗಿದ್ರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಿಪಕ್ಷ ನಾಯಕ ಯಾರು? ಬಿಜೆಪಿ ಹೈಕಮಾಂಡ್​ ಮಣೆ ಯಾರಿಗೆ? ಸಿಎಂ ಸಿದ್ದು ಮಾತಿನ ರಹಸ್ಯವೇನು?

https://newsfirstlive.com/wp-content/uploads/2023/07/Siddu_Session.jpg

Load More