ಹಠಾತ್ ಹೃದಯಾಘಾತದಿಂದ ಸ್ಪಂದನಾ ನಿಧನ
ಬಿ.ಕೆ.ಶಿವರಾಂ ನಿವಾಸದಲ್ಲಿ ಗಣ್ಯರಿಂದ ಅಂತಿಮ ದರ್ಶನ
ಮುಖ್ಯಮಂತ್ರಿಗೆ ಸಾಥ್ ನೀಡಿದ ರಾಜಕೀಯ ನಾಯಕರು
ಹಠಾತ್ ಹೃದಯಾಘಾತದಿಂದ ಸಾವನ್ನಪ್ಪಿರುವ ಸ್ಪಂದನಾ ರಾಘವೇಂದ್ರ ಅವರ ಅಂತಿಮ ದರ್ಶನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಪಡೆದುಕೊಂಡರು. ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿ.ಕೆ.ಶಿವರಾಂ ನಿವಾಸದಲ್ಲಿ ಅಂತಿಮ ದರ್ಶನ ಪಡೆದುಕೊಂಡರು.
ಬಳಿಕ ಮಾಧ್ಯಮಗಳ ಜೊತೆ ಮಾತನಾಡಿರುವ ಸಿದ್ದರಾಮಯ್ಯ, ಸ್ಪಂದನಾ ಅಕಾಲಿಕ ಮರಣ ಎಲ್ಲರಿಗೂ ನೋವು ತಂದಿದೆ. ಶಿವರಾಂ ಅವರ ಕುಟುಂಬದ ದುಃಖಕ್ಕೆ ಸಾಂತ್ವನ ಸಿಗಲಿ. ಬಹಳ ವರ್ಷ ಬದುಕಿ ಬಾಳಬೇಕಿದ್ದ ಜೋಡಿ. ಅವರ ಪತಿ ಖ್ಯಾತ ಸಿನಿಮಾ ನಟರು, ಬಾಲ್ಯದಿಂದಲೂ ಅವರು ನಟನೆಯಲ್ಲಿ ತೊಡಗಿಸಿಕೊಂಡವರು.
ಸ್ಪಂದನಾ ಜೀವನದಲ್ಲಿ ಇನ್ನೂ ತುಂಬಾನೇ ನೋಡಬೇಕಾಗಿತ್ತು. ಬಹಳ ಸುಂದರವಾದ ಜೀವನ ಅವರದ್ದಾಗಿತ್ತು. ಟಿವಿಯಲ್ಲಿ ಅವರ ಬಗ್ಗೆ ನಾನು ನೋಡಿ ತಿಳಿದುಕೊಂಡೆ. ಬ್ಯಾಂಕಾಕ್ನಲ್ಲಿಮೃತಪಟ್ಟಿರುವುದು ಬಹಳ ನೋವು ತಂದಿದೆ. ಬಿ.ಕೆ.ಶಿವರಾಂ ಕುಟುಂಬಕ್ಕೆ ದೇವರು ಶಕ್ತಿ ಕೊಡಲಿ. ಸ್ಪಂದನಾ ಆತ್ಮಕ್ಕೆ ಶಾಂತಿ ಸಿಗಲಿ ಪ್ರಾರ್ಥಿಸುತ್ತೇನೆ ಎಂದರು.
ವಿಶೇಷ ಸೂಚನೆ: ಸಿನಿಮಾ ಲೋಕದ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ಚಿತ್ರಪ್ರೇಮಿಗಳೇ’ ಪ್ರತಿದಿನ ಸಂಜೆ 5.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್