newsfirstkannada.com

ಸನಾತನ ಧರ್ಮ ಡೆಂಗ್ಯೂ ವಿವಾದ; ಉದಯನಿಧಿ ಬಗ್ಗೆ ಕೊನೆಗೂ ಮೌನಮುರಿದ ಸಿಎಂ ಸಿದ್ದರಾಮಯ್ಯ

Share :

11-09-2023

  ಸನಾತನ ಧರ್ಮವನ್ನು ಡೆಂಗ್ಯೂಗೆ ಹೋಲಿಸಿದ್ದ ಉದಯನಿಧಿ

  ಮತ್ತೆ ಬಿಜೆಪಿ, ಹಿಂದೂ ಮುಖಂಡರ ಕಾಲೆಳೆದ ಸ್ಟಾಲಿನ್​ ಪುತ್ರ

  ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಿಯಾಕ್ಷನ್​​ ಹೇಗಿತ್ತು?

ಮೈಸೂರು: ಇತ್ತೀಚೆಗೆ ಸನಾತನ ಧರ್ಮವನ್ನು ಡೆಂಗ್ಯೂ, ಮಲೇರಿಯಾಗೆ ಹೋಲಿಸಿದ್ದ ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್​​ ಪುತ್ರ ಉದಯನಿಧಿ ಸ್ಟಾಲಿನ್ ಮತ್ತೆ ಸುದ್ದಿಯಾಗಿದ್ದಾರೆ. ಬ್ಯಾಕ್​ ಟು ಬ್ಯಾಕ್​​ ಟ್ವೀಟ್​​​​ ಮಾಡುವ ಮೂಲಕ ಸನಾತನ ಧರ್ಮದ ವಿರುದ್ಧ ಕಿಡಿಕಾರುತ್ತಲೇ ಇದ್ದಾರೆ. ಈಗ ಉದಯನಿಧಿ ವಿವಾದಾತ್ಮಕ ಹೇಳಿಕೆ ಬಗ್ಗೆ ಮೊದಲ ಬಾರಿಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.

ಈ ಸಂಬಂಧ ಮೈಸೂರಿನಲ್ಲಿ ಸುದ್ದಿಗಾರರ ಜತೆ ಮಾತಾಡಿದ ಸಿಎಂ ಸಿದ್ದರಾಮಯ್ಯ, ಧರ್ಮದ ಹೆಸರಲ್ಲಿ ಕೆಲವರಿಂದ ಹುಳಿ ಹಿಂಡುವ ಕೆಲಸ ಆಗುತ್ತಿದೆ. ಧರ್ಮದ ಬಗ್ಗೆ ಹೆಚ್ಚು ವ್ಯಾಖ್ಯಾನ ಮಾಡಲು ಹೋಗಲ್ಲ. ಮನುಷ್ಯರು ಪರಸ್ಪರ ಗೌರವಿಸೋದೇ ನಿಜವಾದ ಧರ್ಮ. ನಾವೆಲ್ಲಾ ವಿಶ್ವಮಾನವ ಸಂದೇಶದಂತೆ ಬಾಳಬೇಕು. ರಾಷ್ಟ್ರಕವಿ ಕುವೆಂಪುರವರ ಸಂದೇಶದಂತೆ ಬದುಕಬೇಕು ಎಂದರು.

ಏನಿದು ಉದಯನಿಧಿ ವಿವಾದ..?

ಈ ಹಿಂದೆ ಚೆನ್ನೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸನಾತನ ಧರ್ಮವೂ ಡೆಂಗ್ಯೂ, ಮಲೇರಿಯಾ ಇದ್ದಂತೆ. ಇವುಗಳನ್ನು ಎದುರಿಸಲು ಸಾಧ್ಯವಿಲ್ಲ, ಹೀಗಾಗಿ ಸಮಾಜದಿಂದಲೇ ನಿರ್ಮೂಲನೆ ಮಾಡಬೇಕು ಎಂದಿದ್ದರು. ಈ ಹೇಳಿಕೆಗೆ ಇಡೀ ದೇಶಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಮತ್ತೆ ಇದನ್ನು ಸರ್ಮರ್ಥಿಸಿಕೊಂಡಿದ್ದ ಉದಯನಿಧಿ, ಯಾರ ಕ್ಷಮೆ ಕೇಳುವುದಿಲ್ಲ. ಯಾವುದೇ ರೀತಿಯ ಕಾನೂನು ಹೋರಾಟಕ್ಕೆ ಸಿದ್ಧ ಎಂದಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸನಾತನ ಧರ್ಮ ಡೆಂಗ್ಯೂ ವಿವಾದ; ಉದಯನಿಧಿ ಬಗ್ಗೆ ಕೊನೆಗೂ ಮೌನಮುರಿದ ಸಿಎಂ ಸಿದ್ದರಾಮಯ್ಯ

https://newsfirstlive.com/wp-content/uploads/2023/08/Cm-Siddaramaiah.jpg

Load More