newsfirstkannada.com

ಹಾವೇರಿ​​ ಜಿಲ್ಲಾಸ್ಪತ್ರೆಗೆ ದಿಢೀರ್ ಭೇಟಿ ಕೊಟ್ಟ ಸಿಎಂ ಸಿದ್ದರಾಮಯ್ಯ.. ಸ್ಥಳದಲ್ಲೇ ಅಧಿಕಾರಿಯ ಸಸ್ಪೆಂಡ್​​

Share :

26-07-2023

    ಮಾಜಿ ಸಿಎಂ ಬೊಮ್ಮಾಯಿ‌ ತವರು ಜಿಲ್ಲೆಗೆ ಸಿಎಂ ಸಿದ್ದರಾಮಯ್ಯ ಭೇಟಿ

    ಹಾವೇರಿ ಜಿಲ್ಲೆ ಹಿಂದುಳಿದಿರೋದ್ಯಾಕೆ ಎಂದು ಅಧಿಕಾರಿಗಳಿಗೆ ಪ್ರಶ್ನಿಸಿದ ಸಿಎಂ

    ಆಡಳಿತ ವ್ಯವಸ್ಥೆಗೆ ಚುರುಕು ಮುಟ್ಟಿಸಿದ ಸಿಎಂ ಸಿದ್ದರಾಮಯ್ಯ

ರಾಜ್ಯದ ಬಜೆಟ್ ನಂತರ ಮಾಜಿ ಸಿಎಂ ಬೊಮ್ಮಾಯಿ‌ ತವರು ಜಿಲ್ಲೆ ಹಾವೇರಿಗೆ ಸಿದ್ದರಾಮಯ್ಯ ಭೇಟಿ ನೀಡಿದ್ರು. ಜಡಗಟ್ಟಿದ ಆಡಳಿತ ವ್ಯವಸ್ಥೆಗೆ ಚುರುಕು ಮುಟ್ಟಿಸಿದ್ರು. ಸಿಎಂ ಪ್ರಶ್ನೆಗಳಿಗೆ ಡಿಸಿ ಸಮೇತ ಎಲ್ಲಾ ಅಧಿಕಾರಿಗಳು ಬೆವತು ಹೋದ್ರು.

ಏಲಕ್ಕಿ ನಾಡಿನಲ್ಲಿ ಅಧಿಕಾರಿಗಳ ಬೆಂಡೆತ್ತಿದ ಸಿದ್ದರಾಮಯ್ಯ!

ಸಿಎಂ ಸಿದ್ದರಾಮಯ್ಯ ನಿನ್ನೆ ಹಾವೇರಿಯಲ್ಲಿ ಮ್ಯಾರಾಥಾನ್​ ಸಭೆ ನಡೆಸಿದ್ರು. ಮಾಜಿ ಸಿಎಂ ಬೊಮ್ಮಾಯಿ ತವರೂ ಜಿಲ್ಲೆಯ ಪ್ರಗತಿ ಪರಿಶೀಲಿಸಿ, ಅಧಿಕಾರಿಗಳನ್ನ ಅಕ್ಷರಶಃ ಬೆಂಡೆತ್ತಿದ್ರು. ಮಾತಿನ ಚಾಟಿ ಅಷ್ಟೇ ಅಲ್ಲದೆ, ಅಧಿಕಾರಿಗಳನ್ನ ಅಮಾನತು ಮಾಡಿ ಆಡಳಿತಕ್ಕೆ ಚುರುಕು ಮುಟ್ಟಿಸಿದ್ರು. ಇಂಟ್ರಸ್ಟಿಂಗ್​​ ಅಂದ್ರೆ, ಬೊಮ್ಮಾಯಿ ಅವಧಿ ಅಭಿವೃದ್ಧಿ ಕಾರ್ಯಗಳ ಮಾಹಿತಿ ಪಡೆದು ಕಿಡಿಕಾರಿದ್ರು. ಅಷ್ಟಕ್ಕೂ ಸಭೆಯಲ್ಲಿ ಸಿಎಂ ತಗೊಂಡ ತರಾಟೆ ಹೇಗಿತ್ತು ಅನ್ನೋದನ್ನ ತೋರಿಸ್ತೀವಿ ನೋಡಿ.

ಮಾಜಿ ಸಿಎಂ ತವರು ಹಾವೇರಿ ಜಿಲ್ಲೆ ಹಿಂದುಳಿದಿರೋದ್ಯಾಕೆ?

ಮಾನವ ಅಭಿವೃದ್ಧಿ ಸೂಚ್ಯಂಕ, ಉದ್ಯೋಗ ಸೃಷ್ಟಿ ಸೇರಿ ಎಲ್ಲಾ ವಿಚಾರದಲ್ಲೂ ಹಾವೇರಿ ಜಿಲ್ಲೆ ಹಿಂದುಳಿದಿದ್ಯಾಕೆ ಅಂತ ಪ್ರಶ್ನಿಸಿದ್ರು. ಡಿಸಿ ರಘುನಂದನ್​​ ಮೂರ್ತಿರನ್ನ ತರಾಟೆಗೆ ತೆಗೊಂಡ್ರು. ನೀನು ಎಷ್ಟು ದಿನದಿಂದ ಇದಿಯಾ ಎಂದ ಸಿಎಂ, ಉದ್ಯೋಗ ಸೃಷ್ಟಿ ಮಾಡಲು ಏನ್ ಮಾಡ್ತಿಯಾ ಅಂತ ಕೇಳಿದ್ರು. ಈ ವೇಳೆ ಉತ್ತರ ನೀಡಲು ಪರದಾಡಿದ ಡಿಸಿಗೆ ಕಥೆ ಎಲ್ಲ ಬೇಡ ಉತ್ತರ ಹೇಳು ಅಂತ ಸಿಎಂ ಏಕವಚನದಲ್ಲೇ ಕ್ಲಾಸ್​​ ತಗೊಂಡ್ರು.

ಗೃಹಜ್ಯೋತಿ, ಗೃಹಲಕ್ಷ್ಮಿ ಯೋಜನೆ ನೋಂದಣಿ ಹೇಗಿದೆ?

ಸಭೆಯಲ್ಲಿ ಗೃಹಲಕ್ಷ್ಮೀ ಯೋಜನೆ ನೋಂದಣಿ ಬಗ್ಗೆ ಸಿಎಂ ಮಾಹಿತಿ ಪಡೆದ್ರು. ಒಟ್ಟು 4 ಲಕ್ಷ ಫಲಾನುಭವಿಗಳಿದ್ದು, ಮಳೆ ಕಾರಣಕ್ಕೆ ನೋಂದಣಿ ಕಡಿಮೆ ಆಗಿದೆ ಅಂತ ಡಿಸಿ ತಿಳಿಸಿದ್ರು. ಆಗಸ್ಟ್​ 5ಕ್ಕೆ ಕಲಬುರ್ಗಿಯಲ್ಲಿ ಗೃಹಜ್ಯೋತಿ ಉದ್ಘಾಟನೆ ಆಗ್ತಿದೆ. ಅಷ್ಟರಲ್ಲಿ ನೋಂದಣಿ ಕಂಪ್ಲೀಟ್​​ ಆಗಬೇಕು ಅಂತ ಟಾಸ್ಕ್​ ಕೊಟ್ರು.

ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ವೆಚ್ಚ ಹೆಚ್ಚಳ ಆಗಿದ್ಯಾಕೆ?

ಹಾವೇರಿ ಮೆಡಿಕಲ್ ಕಾಲೇಜು ನಿರ್ಮಾಣದ ಅಂದಾಜು ವೆಚ್ಚ 365 ಕೋಟಿ. ಈಗ 499 ಕೋಟಿ ರೂಪಾಯಿ ಹೇಗೆ ಆಯ್ತು? 136 ಕೋಟಿ ಹೆಚ್ಚಳ ಆಗಿದ್ಯಾಕೆ? ಅದರ ಜವಾಬ್ದಾರಿ ಯಾರು ಅಂತ ಸಿದ್ದು ಪ್ರಶ್ನಿಸಿದ್ರು. ಎಸ್​ಐಟಿ ತನಿಖೆಗೆ ಒಪ್ಪಿಸಿದ್ದೇವೆ. ವರದಿ ಬರಲಿ ಕ್ರಮಕೈಗೊಳ್ತಿನಿ ಅಂತ ಎಚ್ಚರಿಕೆ ಕೊಟ್ರು.

ಏ ಯಾವನಯ್ಯ ನೀನು? ಆಸ್ಪತ್ರೆ ಸೋರ್ತಿದೆ ಏನ್​​ ಮಾಡ್ತಿದ್ಯಾ?

ಮಳೆಯಿಂದ ಹಾವೇರಿ ಜಿಲ್ಲಾಸ್ಪತ್ರೆ ಕಟ್ಟಡ ಸೋರ್ತಿದೆ. ಈ ಹಿನ್ನೆಲೆ ಆರೋಗ್ಯ ಇಲಾಖೆ ಮುಖ್ಯ ಇಂಜಿನಿಯರ್​ ಮಂಜಪ್ಪರನ್ನ ಸಿಎಂ ಚಳಿ ಬಿಡಿಸಿದ್ರು. ಎಷ್ಟು ವರ್ಷದಿಂದ ಇಂಜಿನಿಯರ್ ಆಗಿದ್ಯಾ? ಜಿಲ್ಲಾಸ್ಪತ್ರೆ ಕಟ್ಟಡ ಸೋರ್ತಿದೆ ನೋಡಿದ್ಯಾ? ನಿಮ್ಮ ಮನೆಯವರೇ ಚಿಕಿತ್ಸೆ ಪಡೆಯುತ್ತಿದ್ರೆ ಏನ್ ಮಾಡ್ತಿದ್ದೆ ಅಂತ ಗರಂ ಆದ್ರು. ಸಿಎಂ ಮಾತಿಗೆ ಮಂಜಪ್ಪ ತಪ್ಪಿತಸ್ಥ ಭಾವನೆಯಲ್ಲಿ ತಲೆ ತಗ್ಗಿಸಿ ನಿಂತ್ರು.

ದಿಢೀರ್​​ ಜಿಲ್ಲಾಸ್ಪತ್ರೆಗೆ ಭೇಟಿ, ಸ್ಥಳದಲ್ಲೇ ಅಧಿಕಾರಿ ಸಸ್ಪೆಂಡ್​​

ಸಭೆಗೆ ಹಾಜರಾಗುವ ಮೊದಲು ಹಾವೇರಿ ಜಿಲ್ಲಾಸ್ಪತ್ರೆಗೆ ಸಿಎಂ ದಿಢೀರ್​ ಭೇಟಿ ನೀಡಿದ್ದು. ಆಸ್ಪತ್ರೆ ಅವ್ಯವಸ್ಥೆ ಕುರಿತು ಅಧಿಕಾರಿಗಳಿಗೆ ಹಿಗ್ಗಾಮುಗ್ಗ ತರಾಟೆಗೆ ತಗೊಂಡ್ರು. ಮಳೆಗೆ ಜಿಲ್ಲಾ ಆಸ್ಪತ್ರೆ ಸೋರುತ್ತಿರೋ ಹಿನ್ನಲೆ ವಾರ್ಡ್​ಗಳನ್ನ ಚೆಕ್ ಮಾಡಿದ್ರು.. ಇದೆಲ್ಲವನ್ನ ಗಮನಿಸಿ ಕೆಂಡವಾದ ಸಿಎಂ ಸ್ಥಳದಲ್ಲೇ ಹೆಲ್ತ್ ಆಫೀಸರ್ ಎಇಇ ಮಂಜುನಾಥ್​ರನ್ನ ಅಮಾನತು ಮಾಡಿದ್ರು..

ಒಟ್ಟಾರೆ, ಜಡ ಹಿಡಿದಿರುವ ಆಡಳಿತ ವ್ಯವಸ್ಥೆಗೆ ಸಿಎಂ ಚುರುಕು ಮುಟ್ಟಿಸಿದ್ದಾರೆ.. ಇನ್ನಾದ್ರೂ ಏಲಕ್ಕಿ ಕಂಪಿನ ನಾಡು ಅಭಿವೃದ್ಧಿ ಆಗುತ್ತಾ ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹಾವೇರಿ​​ ಜಿಲ್ಲಾಸ್ಪತ್ರೆಗೆ ದಿಢೀರ್ ಭೇಟಿ ಕೊಟ್ಟ ಸಿಎಂ ಸಿದ್ದರಾಮಯ್ಯ.. ಸ್ಥಳದಲ್ಲೇ ಅಧಿಕಾರಿಯ ಸಸ್ಪೆಂಡ್​​

https://newsfirstlive.com/wp-content/uploads/2023/07/Siddaramaiah-2.jpg

Load More