ಕರ್ನಾಟಕ ಜನಮನ ಸಮಾವೇಶ ಕಾರ್ಯಕ್ರಮದಲ್ಲಿ ಸಿಎಂ ಭಾಗಿ
ಸಂವಾದದಲ್ಲಿ ಸಿಎಂ ಸಿದ್ದರಾಮಯ್ಯರಿಗೆ ಕೇಳಿದ ಪ್ರಶ್ನೆ ಯಾವುವು.?
ಜಾತಿ ಸೋಂಕು ತಗುಲಿದರೆ ನಾವು ಅಂದುಕೊಂಡಿದ್ದು ಆಗುವುದಿಲ್ಲ
ಬೆಂಗಳೂರು: ಇಂದಿನ ವಿದ್ಯಾರ್ಥಿಗಳು ಹೆಚ್ಚು ಜಾತಿವಾದಿಗಳಾಗಿ ಮೌಡ್ಯಾಚರಣೆಗೆ ಒಳಗಾಗುತ್ತಿದ್ದು ಶಿಕ್ಷೆ ಮೂಲಕವೇ ಎಲ್ಲ ಸರಿಪಡಿಸಲು ಸಾಧ್ಯವಿಲ್ಲ. ಹೀಗಾಗಿ ಜಾತ್ಯತೀತ ರಾಷ್ಟ್ರ ನಿರ್ಮಾಣ ಮಾಡಬೇಕಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ನಗರದ ದೇವರಾಜು ಅರಸು ಭವನದಲ್ಲಿ ಪ್ರಬುದ್ಧ ಕರ್ನಾಟಕ ಜನಮನ ಸಮಾವೇಶ ಹಾಗೂ ಸಿಎಂ ಜತೆ ಸಂವಾದ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ಸಾಹಿತಿ ಜಿ. ರಾಮಕೃಷ್ಣ ಭಾಗಿಯಾಗಿ ಮನುಷ್ಯ ಜಾತಿ ನಾನೊಂದೇ ವಲಂ ಬರವಣಿಗೆಯ ಬಾವುಟ ಅನಾವರಣ ಮಾಡಿ ಕಾರ್ಯಕ್ರಮ ಉದ್ಘಾಟನೆ ಮಾಡಿದರು.
ಸಂವಾದದಲ್ಲಿ ಸಿಎಂ ಸಿದ್ದರಾಮಯ್ಯರಿಗೆ ಕೆಲವು ಪ್ರಶ್ನೆಗಳನ್ನು ಕೇಳಲಾಯಿತು. ಈ ಬಗ್ಗೆ ಸಿಎಂ ಉತ್ತರ ನೀಡಿರುವುದು ಹೀಗಿತ್ತು.
ಪ್ರಶ್ನೆ- ಎಲ್ಲ ಮಕ್ಕಳಿಗೆ ಉಚಿತ ಶಿಕ್ಷಣ (RTE) ನೀಡುವ ಬಗ್ಗೆ ನಿಮ್ಮ ಅಭಿಪ್ರಾಯ ಏನು?
ಸಿಎಂ ಸಿದ್ದರಾಮಯ್ಯ: ನಾವು ಅಧಿಕಾರಕ್ಕೆ ಬರುವ ಮೊದಲೇ ಪಠ್ಯ ತಿರುಚಿದ್ದರು. ಅದನ್ನು ಬೋಧನೆ ಮಾಡದಂತೆ ಸೂಚಿಸಲಾಗಿದೆ. ವಿದ್ಯಾರ್ಥಿಗಳು ಹೆಚ್ಚು ಜಾತಿವಾದಿಗಳು ಆಗಿ ಮೌಡ್ಯಾಚರಣೆಗೆ ಒಳಗಾಗ್ತಿದ್ದಾರೆ. ಇದನ್ನು ಶಿಕ್ಷೆಯಿಂದ ಸರಿಪಡಿಸಲು ಸಾಧ್ಯವಿಲ್ಲ. ಹೀಗಾಗಿ ಜಾತ್ಯತೀತ ರಾಷ್ಟ್ರ ನಿರ್ಮಿಸಬೇಕು. ಜಾತಿ ಸೋಂಕು ತಗುಲಿದರೆ ಇದು ಸಾಧ್ಯವಾಗಲ್ಲ. ಬೋಧಕರು ಜಾತ್ಯತೀತರು ಆಗಿರುತ್ತಾರೆಂದು ಹೇಳಲಾಗಲ್ಲ. ಅವರು ಜಾತ್ಯತೀತ ಅಲ್ಲದಿದ್ದರೇ ಮಕ್ಕಳಿಗೆ ಶಿಕ್ಷಣ ಹೇಗೆ ನೀಡಲು ಸಾಧ್ಯ ಹೇಳಿ. ಸಂವಿಧಾನಕ್ಕೆ ವಿರುದ್ಧವಾಗಿ ನಡೆದರೆ ನಾವು ಅಂದುಕೊಂಡಿರುವುದು ಆಗಲ್ಲ. ಇದರಿಂದಾಗಿಯೆ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಯಿಂದ ಮಕ್ಕಳನ್ನ ಸಾಮಾಜಿಕ ಜವಾಬ್ದಾರಿವಂತರಾಗಿ ಬೆಳೆಸಲು ಸಾಧ್ಯವಾಗಲಿದೆ ಎಂದು ಹೇಳಿದ್ದಾರೆ.
ಪ್ರಶ್ನೆ- ಗುತ್ತಿಗೆ ನೌಕರಿಯನ್ನು ಖಾಯಂ ನೇಮಕಾತಿ ಮಾಡುವ ಬಗ್ಗೆ ಕಾಂಗ್ರೆಸ್ ಸರ್ಕಾರದ ನಿರ್ಧಾರವೇನು?
ಸಿಎಂ ಸಿದ್ದರಾಮಯ್ಯ: ರಾಜ್ಯದಲ್ಲಿ ಸರ್ಕಾರಿ ಹುದ್ದೆ 7 ಲಕ್ಷಕ್ಕೂ ಹೆಚ್ಚಿವೆ. ಇದರಲ್ಲಿ 5 ಲಕ್ಷ ತುಂಬಿದ್ದು, 2 ಲಕ್ಷ ಹುದ್ದೆ ಖಾಲಿ ಇವೆ. ಹೀಗಾಗಿ ಹೊರಗುತ್ತಿಗೆ ಮೊರೆ ಹೋಗಲಾಗಿದೆ. ಗುತ್ತಿಗೆ ಹುದ್ದೆ ಭರ್ತಿ ಮಾಡಲು ಮೀಸಲಾತಿ ಇಲ್ಲ. ಮೀಸಲಾತಿ ಇಲ್ಲದಿದ್ರೆ ಸಾಮಾಜಿಕ ನ್ಯಾಯ ಇಲ್ಲ. ಪ್ರಣಾಳಿಕೆಯಲ್ಲಿ ಹುದ್ದೆ ಭರ್ತಿ ಬಗ್ಗೆ ಇದೆ. ಹೀಗಾಗಿ ಹಂತ ಹಂತವಾಗಿ ಶಿಕ್ಷಣ, ಪೊಲೀಸ್, ಆರೋಗ್ಯ ಇಲಾಖೆಯಲ್ಲಿನ ಹುದ್ದೆಗಳನ್ನು ತುಂಬುತ್ತೇವೆ ಎಂದು ಹೇಳಿದರು.
ಪ್ರಶ್ನೆ- ಕರ್ನಾಟಕದಲ್ಲಿ ಕನ್ನಡವು ಸೇರಿದಂತೆ ಭಾಷೆಗಳ ಉಳಿವಿಗೆ ಭಾಷನೀತಿ ತರಲು ಸಾಧ್ಯವೇ?
ಸಿಎಂ ಸಿದ್ದರಾಮಯ್ಯ: ಭಾಷಾ ನೀತಿ ಮಾಡಲು ಸಾಧ್ಯವಾಗಿಲ್ಲ. ಈ ಬಗ್ಗೆ ಸಚಿವರು, ಪರಿಣಿತರು, ವಿಚಾರವಾದಿಗಳು, ಸಾಹಿತಿಗಳ ಜೊತೆ ಚರ್ಚೆ ನಡೆಸಿ ಅನುಷ್ಠಾನಕ್ಕೆ ಚಿಂತನೆ ನಡೆಸಲಾಗುವುದು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ