newsfirstkannada.com

ಬೀದಿಗೆ ಬಂದ ಕಾಂಗ್ರೆಸ್​​ ಜಗಳ; ಬಿ.ಕೆ ಹರಿಪ್ರಸಾದ್​​ಗೆ ಕೌಂಟರ್​​ ಕೊಟ್ರಾ ಸಿಎಂ ಸಿದ್ದರಾಮಯ್ಯ..?

Share :

09-09-2023

  ತನ್ನನ್ನು ಮಂತ್ರಿ ಮಾಡದ ಸಿಎಂ ಸಿದ್ದರಾಮಯ್ಯ ವಿರುದ್ಧ ಆಕ್ರೋಶ

  ಭಾರೀ ಆಕ್ರೋಶ ಹೊರಹಾಕಿದ ಕಾಂಗ್ರೆಸ್​ ನಾಯಕ ಹರಿಪ್ರಸಾದ್​​!

  ಸಚಿವ ಸ್ಥಾನ ನೀಡದ ಸಿಎಂ ಸಿದ್ದರಾಮಯ್ಯಗೆ ಥ್ಯಾಂಕ್ಸ್​ ಎಂದಿದ್ರು!

ಬೆಂಗಳೂರು: ತನ್ನನ್ನು ಮಂತ್ರಿ ಮಾಡದ ಸಿಎಂ ಸಿದ್ದರಾಮಯ್ಯ ವಿರುದ್ಧ ಐಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಹಾಗೂ ಎಂಎಲ್‌ಸಿ ಬಿ.ಕೆ ಹರಿಪ್ರಸಾದ್ ಮತ್ತೊಮ್ಮೆ ಆಕ್ರೋಶ ಹೊರಹಾಕಿದ್ದರು. ವೋಟ್​​ ಹಾಕಲು ನಾವು, ಅಧಿಕಾರ ಮಾತ್ರ ಮತ್ತೊಬ್ಬರಿಗೆ ಎಂದು ಸಿದ್ದರಾಮಯ್ಯ ಮೇಲೆ ಕೆಂಡಕಾರಿದ್ದರು. ಈಗ ಹರಿಪ್ರಸಾದ್​ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.

ಈ ಸಂಬಂಧ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಎಂ ಸಿದ್ದರಾಮಯ್ಯ, ನಾನು ಬಿ.ಕೆ ಹರಿಪ್ರಸಾದ್​​ ಹೇಳಿಕೆಗೆ ಪ್ರತಿಕ್ರಿಯೆ ನೀಡಲ್ಲ. ಇವರ ಸಾಮಾನ್ಯ ಹೇಳಿಕೆಗಳಿಗೆ ನಾನು ರಿಯಾಕ್ಟ್​ ಮಾಡೋ ಅಗತ್ಯ ಇಲ್ಲ. ನಾನು ಆಮೇಲೆ ಮಾತಾಡುತ್ತೇನೆ ಎಂದು ಹೇಳಿ ಹೊರಟು ಹೋದರು.

ಬಿ.ಕೆ ಹರಿಪ್ರಸಾದ್ ಹೇಳಿದ್ದೇನು..?

ಇಂದು ಅರಮನೆ ಮೈದಾನದಲ್ಲಿ ನಡೆದ ಬಿಲ್ಲವ-ಈಡಿಗ ಬೆಂಬಲಿಗರ ಸಭೆ ಕರೆದಿದ್ದರು. ಈ ಸಭೆಯಲ್ಲಿ ಮಾತಾಡಿದ ಹರಿಪ್ರಸಾದ್​​, ತನಗೆ ಮಂತ್ರಿ ಸ್ಥಾನ ನೀಡದ ಸಿದ್ದರಾಮಯ್ಯ ವಿರುದ್ಧ ತೊಡೆ ತಟ್ಟಿದ್ದಾರೆ. ನಮ್ಮ ಸಮಾವೇಶಕ್ಕೆ ದಕ್ಷಿಣ ಕನ್ನಡ ಮತ್ತು ಉಡುಪಿಯಿಂದ ಸಾವಿರಾರು ಸಂಖ್ಯೆಯಲ್ಲಿ ಜನ ಬರಲಿದ್ದಾರೆ. ನಮ್ಮ ಸಮಾವೇಶವನ್ನು ಸರ್ಕಾರದ ‘ಉನ್ನತ ಅಧಿಕಾರಿಗಳು’ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ನೇಮಕಾತಿ ಮತ್ತು ಪ್ರಮುಖ ಹುದ್ದೆಗಳಲ್ಲಿ ನಮ್ಮವರಿಗೆ ಸಾಕಷ್ಟು ಪ್ರಮಾಣದಲ್ಲಿ ಅವಕಾಶಗಳು ಒದಗಿಸಬೇಕು ಎಂದರು.

ಬಡವರ ಬಂಧು ಬಂಗಾರಪ್ಪ ಎಂದು ಜಾತಿ ರಾಜಕೀಯ ಮಾಡಿಲ್ಲ. ಕಾಗೋಡು ತಿಮ್ಮಪ್ಪ ಸಮಾಜವಾದಿ ಆಗಿದ್ದರು. ಇಂದಿಗೂ ಅವರಿಗೆ ಒಂದು ಕಾರಿಲ್ಲ. ಸಮಾಜವಾದ ಎಂದರೆ ಎಲ್ಲರಿಗೂ ಸಮಾನ ಹಕ್ಕು ನೀಡುವುದು. ಯಾರೋ ಕೆಲವರು ವಾಚ್​​ ಹಾಕಿಕೊಂಡು, ಪಂಚೆ ಕಟ್ಕೊಂಡು, ಒಳಗೆ ಕಾಕಿ ಚಡ್ಡಿ ಹಾಕಿಕೊಂಡು ಸಮಾಜವಾದದ ಬಗ್ಗೆ ಮಾತಾಡುತ್ತಾರೆ. ಇದು ಕೇವಲ ತೋರ್ಪಡಿಕೆ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ವಿರುದ್ಧ ಕಿರಿಕಾರಿದ್ದರು ಹರಿಪ್ರಸಾದ್​​.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೀದಿಗೆ ಬಂದ ಕಾಂಗ್ರೆಸ್​​ ಜಗಳ; ಬಿ.ಕೆ ಹರಿಪ್ರಸಾದ್​​ಗೆ ಕೌಂಟರ್​​ ಕೊಟ್ರಾ ಸಿಎಂ ಸಿದ್ದರಾಮಯ್ಯ..?

https://newsfirstlive.com/wp-content/uploads/2023/09/Siddu_Hariprasad.jpg

Load More