newsfirstkannada.com

ಬಂದ ದಾರಿಗೆ ಸುಂಕವಿಲ್ಲ; ಅಕ್ಕಿಗಾಗಿ ಬಂದ ಸಿದ್ದರಾಮಯ್ಯ, KH ಮುನಿಯಪ್ಪಗೆ ಭಾರೀ ಅವಮಾನ!

Share :

22-06-2023

    ಸಿಎಂ ಸಿದ್ದರಾಮಯ್ಯ, ಸಚಿವ ಕೆ.ಎಚ್​​ ಮುನಿಯಪ್ಪ ಘರ್​​ ವಾಪಸಿ

    ಬಂದ ದಾರಿಗೆ ಸುಂಕವಿಲ್ಲ ದೆಹಲಿಯಿಂದ ಮರಳಿದ ನಾಯಕರು!

    ಸಿಎಂ ಸಿದ್ದರಾಮಯ್ಯಗೆ ಅಮಿತ್​ ಶಾ ಕೊಟ್ಟ ಭರವಸೆಯೇನು..?

ಬೆಂಗಳೂರು: ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಸಿಎಂ ಸಿದ್ದರಾಮಯ್ಯ, ಆಹಾರ ಸಚಿವ ಮುನಿಯಪ್ಪ ಘರ್​​ ವಾಪಸಿ ಆಗಿದ್ದಾರೆ. ಹೆಚ್ಚುವರಿ ಅಕ್ಕಿಗೆ ಮನವಿ ಮಾಡಲು ತೆರಳಿದ್ದ ಇಬ್ಬರಿಗೂ ಮೂರು ದಿನವಾದರೂ ಅನ್ನಭಾಗ್ಯಕ್ಕೆ ಭರವಸೆ ಸಿಕ್ಕಿಲ್ಲ. ಅಮಿತ್​​ ಶಾ ಭೇಟಿಯಾದರೂ ಸಿದ್ದರಾಮಯ್ಯಗೆ ಯಾವುದೇ ಆಶ್ವಾಸನೆ ದಕ್ಕಿಲ್ಲ. ಇತ್ತ, ಪಿಯೂಷ್​​ ಗೋಯಲ್​​ ಮಾತ್ರ ಕೆ.ಹೆಚ್ ಮುನಿಯಪ್ಪ ಅವರ ಕಣ್ಣು ತಪ್ಪಿಸಿದ್ದಾರೆ. ಭೇಟಿಗೆ ಕೊಟ್ಟ ಸಮಯವನ್ನು ವಾಪಸ್​​ ಪಡೆದು ಅವಮಾನ ಮಾಡಿದ್ದಾರೆ.

ಅನ್ನಭಾಗ್ಯ ಸಿಎಂ ಸಿದ್ದರಾಮಯ್ಯಗೆ ನಾಡಿನಲ್ಲಿ ಅನ್ನರಾಮಯ್ಯ ಎಂಬ ಹೆಸರು ತಂದ ಯೋಜನೆ. ಈ ಬಾರಿ 10 ಕೆ.ಜಿ ಅಕ್ಕಿ ಕೊಡುವ ಭರವಸೆ ನೀಡಿದ್ದ ಕಾಂಗ್ರೆಸ್​​, ಯೋಜನೆ ಜಾರಿಗಾಗಿ ಜಿದ್ದಿಗೆ ಬಿದ್ದಿದೆ. ಬೆಂಗಳೂರಿನಲ್ಲಿ ಪತ್ರದ ಮೂಲಕ ಶುರುವಾದ ರೈಸ್​​ ಪಾಲಿಟಿಕ್ಸ್ ಸಮರ​​ ಡೆಲ್ಲಿ ಅಂಗಳಕ್ಕೆ ತಲುಪಿತ್ತು. ಸ್ವತಃ ಸಿದ್ದರಾಮಯ್ಯ ಅವರೇ ಅಕ್ಕಿ ಯುದ್ಧದ ನೇತೃತ್ವ ವಹಿಸಿದ್ದು, ಕೇಂದ್ರ ಸಚಿವರ ಜತೆ ಮಾತುಕತೆ ಆಡಿದ್ದಾರೆ.

ಅನ್ನ ಭಾಗ್ಯ ಯೋಜನೆ ಜಾರಿ ಮತ್ತಷ್ಟು ವಿಳಂಬ ಫಿಕ್ಸ್

ಬುಧವಾರ ಡೆಲ್ಲಿ ಡೋರ್​​​ ಬಾರಿಸಿದ ಸಿದ್ದರಾಮಯ್ಯ, ಅಕ್ಕಿಯುದ್ಧ ಅಮಿತ್​​​ ಶಾ ನಿವಾಸಕ್ಕೆ ತಲುಪಿಸಿದ್ದರು. ಹೇಗಾದ್ರೂ ಮಾಡಿ ಕೇಂದ್ರದಿಂದ ಅಕ್ಕಿ ತರಲೇಬೇಕೆಂದು ಪಣ ತೊಟ್ಟಿದ್ದ ಸಿದ್ದು, ಕಾಂಗ್ರೆಸ್ ಹೈಕಮಾಂಡ್ ನಾಯಕರನ್ನ, ಕೇಂದ್ರ ಸಚಿವರನ್ನೂ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಹೀಗೆ ಕೇಂದ್ರ ಸಚಿವರನ್ನ ಭೇಟಿಯಾದ್ರೂ, ಹಲವು ರಾಜ್ಯಗಳ ಬಳಿ ಅಕ್ಕಿಗಾಗಿ ಬೇಡಿಕೆ ಇಟ್ಟರೂ ಅಗತ್ಯವಿದ್ದಷ್ಟು ಸಿಗ್ತಿಲ್ಲ. ಹೀಗಾಗಿ ಅನ್ನಭಾಗ್ಯ ಅಕ್ಕಿ ಬಡವರ ಮನೆ ಸೇರೋದು ಕೊಂಚ ವಿಳಂಬದ ಸುಳಿವು ನೀಡಿದ್ದಾರೆ.

ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ರಾಜ್ಯಕ್ಕೆ ವಾಪಸ್ ಆಗಿದ್ದಾರೆ. ಆಹಾರ ಸಚಿವ ಮುನಿಯಪ್ಪ ಕೂಡ ರಿಟರ್ನ್​​​ ಆಗಿದ್ದಾರೆ. ದೆಹಲಿಯಲ್ಲಿ ಮಾತನಾಡಿರೋ ಸಿದ್ದರಾಮಯ್ಯ, ಯೋಜನೆ ಜಾರಿ ಆಗೋದು ವಿಳಂಬವಾಗಲಿದೆ ಎಂಬ ಮಾಹಿತಿ ನೀಡಿದ್ದಾರೆ.

ಡೆಲ್ಲಿಯಲ್ಲಿ ಅಕ್ಕಿ ಕಿತ್ತಾಟ

ಬಿಪಿಎಲ್, ಅಂತ್ಯೋದಯ ಕಾರ್ಡುದಾರರಿಗೆ 10 ಕೆಜಿ ಅಕ್ಕಿಯನ್ನ ನೀಡುವ ಭರವಸೆ ನೀಡಿದ್ದೇವೆ. ಇದಕ್ಕೀಗ ರಾಜ್ಯಕ್ಕೆ 2.4 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಬೇಕಿದೆ. ನಿಗದಿತ ದರಕ್ಕೆ ನಾವು ಕೇಂದ್ರದಿಂದ ಅಕ್ಕಿ ಖರೀದಿ ಮಾಡ್ತೇವೆ ಎಂದು ಅಮಿತ್​ ಶಾಗೆ ಸಿದ್ದರಾಮಯ್ಯ ಬೇಡಿಕೆ ಇಟ್ಟಿದ್ದಾರೆ. ಆದ್ರೆ, ಈ ವೇಳೆ, ಕೇಂದ್ರ ಆಹಾರ ಸಚಿವ ಪಿಯೂಷ್​​ ಗೋಯಲ್​​​ ಜತೆ ಚರ್ಚಿಸಿ ತಮಗೆ ತಿಳಿಸುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಭರವಸೆ ಅಷ್ಟೇ ನೀಡಿದ್ದಾರೆ.

ಬೆಳಗ್ಗೆ ಮಾತನಾಡಿದ ಸಿದ್ದರಾಮಯ್ಯ, ತಮ್ಮ ಜೊತೆ ಎಫ್​​ಸಿಐ ನಡೆದುಕೊಂಡ ವ್ಯವಹಾರದ ಬಗ್ಗೆ ಮಾಹಿತಿ ನೀಡಿದ್ದಾಗಿ ತಿಳಿಸಿದ್ದಾರೆ. ಅಕ್ಕಿಗಾಗಿ ಎಫ್​​ಸಿಐಗೆ ಪತ್ರ ಬರೆದಿದ್ದೀವಿ. ಅವರು ಕೂಡ ಒಪ್ಪಿಗೆ ಸೂಚಿಸಿದ್ರು. ಆದ್ರೆ ಮರು ದಿನ ಪತ್ರ ಬರೆದು ನಿರಾಕರಿಸಿದ್ದಾರೆ. ರಾಜಕೀಯ ಮಾಡಿದ್ದಾರೆ ಅನಿಸುತ್ತೆ. ಬಡವರಿಗೆ ಕೊಡುವ ಯೋಜನೆಯಲ್ಲಿ ದ್ವೇಷದ ರಾಜಕಾರಣ ಬೇಡ ಅಂತ ತಿಳಿಸಿದ್ದಾಗಿ ಹೇಳಿದ್ದಾರೆ.

ಗೋಯಲ್ ಭೇಟಿಗೆ ಮುನಿಯಪ್ಪ ನಡೆಸಿದ ಸರ್ಕಸ್ ಫೇಲ್​​

ಹೆಚ್ಚುವರಿ ಅಕ್ಕಿಗೆ ಮನವಿ ಮಾಡಲು ಸಿಎಂ ಸಿದ್ದು, ಸಚಿವ ಮುನಿಯಪ್ಪ ದೆಹಲಿಯಲ್ಲೇ ಮೂರು ದಿನ ವಾಸ್ತವ್ಯ ಹೂಡಿದ್ರು. ಆದ್ರೆ, ಕೇಂದ್ರ ಆಹಾರ ಸಚಿವ ಪಿಯೂಷ್ ಗೋಯಲ್, ಮಹಾರಾಷ್ಟ್ರ ಪ್ರವಾಸದಲ್ಲಿರುವ ಹಿನ್ನೆಲೆ ಭೇಟಿಗೆ ಅವಕಾಶ ಸಿಕ್ಕಿಲ್ಲ. ಹೀಗಾಗಿ ಇಬ್ಬರು ರಾಜ್ಯಕ್ಕೆ ವಾಪಸ್ ಆಗಿದ್ದಾರೆ. ಬಹುತೇಕ ಆಗಸ್ಟ್​ ತಿಂಗಳಿನಿಂದಲೇ ಅನ್ನಭಾಗ್ಯ ಜಾರಿ ಆಗುವ ಬಗ್ಗೆ ಮುನಿಯಪ್ಪ ಸುಳಿವು ನೀಡಿದ್ದಾರೆ.

ಒಟ್ಟಾರೆ, ಬಡವರ ಒಲೆ ಮೇಲೆ ಸರ್ಕಾರಿ ಅಕ್ಕಿ ಬೇಯಲೇಬೇಕು. ಅನ್ನಭಾಗ್ಯ ಜಾರಿ ಆಗಲೇಬೇಕು ಅಂತ ಸಿದ್ದರಾಮಯ್ಯ ಸರ್ಕಾರ ಹಠಕ್ಕೆ ಬಿದ್ದಿದೆ. ಇದಕ್ಕಾಗಿ ಅನ್ಯ ರಾಜ್ಯಗಳ ಬಾಗಿಲು ಕೂಡ ಬಡೆದಿರುವ ಸಿದ್ದು, ಸ್ವಲ್ಪ ದುಬಾರಿಯ ಹೊರೆಯ ಆತಂಕ ಇದೆ. ಆಗಸ್ಟ್​​ನಲ್ಲಿ ಅನ್ನಭಾಗ್ಯ ಜಾರಿ ಆಗಿದ್ದಲ್ಲಿ ಸಮಯದ ಅವಕಾಶ ಹೆಚ್ಚಾಗಲಿದ್ದು, ಕೇಂದ್ರ ಮತ್ತು ಅನ್ಯ ರಾಜ್ಯಗಳ ಜೊತೆ ಸಂಪರ್ಕ ಚೌಕಾಸಿಗೆ ಟೈಮ್​ ಸಿಗಲಿದೆ. ಸದ್ಯಕ್ಕೆ ಕೇಂದ್ರದಿಂದ ಅಕ್ಕಿ ಸಿಗೋದು ಡೌಟ್​ ಆಗಿದ್ದು, ಪ್ಲಾನ್​​ ಬಿ ಅನಿವಾರ್ಯ ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಂದ ದಾರಿಗೆ ಸುಂಕವಿಲ್ಲ; ಅಕ್ಕಿಗಾಗಿ ಬಂದ ಸಿದ್ದರಾಮಯ್ಯ, KH ಮುನಿಯಪ್ಪಗೆ ಭಾರೀ ಅವಮಾನ!

https://newsfirstlive.com/wp-content/uploads/2023/06/CM-Siddaramaiah-Delhi.jpg

Load More