newsfirstkannada.com

ವಿಧಾನಸೌಧದಲ್ಲಿ ಮೂಢನಂಬಿಕೆಗೆ ಬ್ರೇಕ್; ವಾಸ್ತು ಸರಿಯಿಲ್ಲ ಎಂದು ಮುಚ್ಚಿದ್ದ ಬಾಗಿಲು ತೆರೆಸಿದ CM ಸಿದ್ದು

Share :

24-06-2023

    ವಿಧಾನಸೌಧದಲ್ಲಿ ಮೂಢನಂಬಿಕೆಗೆ ಬ್ರೇಕ್ ಹಾಕಿದ ಸಿಎಂ ಸಿದ್ದರಾಮಯ್ಯ

    ಅಧಿಕಾರಿಗಳಿಗೆ ಬೈದು ವಾಸ್ತು ಸರಿಯಿಲ್ಲ ಎಂದು ಮುಚ್ಚಿದ್ದ ಬಾಗಿಲು ತೆರೆಸಿದ್ರು

    ಒಳ್ಳೆ ಗಾಳಿ ಬೆಳಕು ಬಂದರೆ ಅದುವೇ ಉತ್ತಮ ವಾಸ್ತು ಎಂದ ಸಿದ್ದರಾಮಯ್ಯ!

ಬೆಂಗಳೂರು: ವಾಸ್ತು ಸರಿ ಇಲ್ಲ ಎಂದು ಬಂದ್​ ಮಾಡಲಾಗಿದ್ದ ವಿಧಾನಸೌಧದ ಸಿಎಂ ಕಚೇರಿ ಪಶ್ಚಿಮ ದ್ವಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತೆರೆಸಿದ್ದಾರೆ.

ಇಂದು ಅನ್ನಭಾಗ್ಯ ಯೋಜನೆ ಜಾರಿ ಸಂಬಂಧ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಲು ಬಂದ ಸಿಎಂ ಸಿದ್ದರಾಮಯ್ಯ ಪಶ್ಚಿಮ ದ್ವಾರ ಬಂದ್ ಆಗಿದ್ದು ಗಮನಿಸಿದ್ದರು. ಯಾಕೆ ಈ ಬಾಗಿಲು ಬಂದ್​ ಮಾಡಿದ್ದೀರಿ ಎಂದು ಅಧಿಕಾರಿಗಳಿಗೆ ಪ್ರಶ್ನಿಸಿದ್ದರು. ಸಿಎಂ ಪ್ರಶ್ನೆಗೆ ಅಧಿಕಾರಿಗಳು ವಾಸ್ತು ಕಾರಣದಿಂದ ಬಂದ್ ಮಾಡಿದ್ದೇವೆ ಎಂದರು. ಈ ಕೂಡಲೇ ಯಾವ ವಾಸ್ತು ಇಲ್ಲ ಪಶ್ಚಿಮ ದ್ವಾರ ತೆರೆಯಿರಿ ಎಂದು ಆದೇಶಿಸಿದರು.

ಬಳಿಕ ಸಿದ್ದರಾಮಯ್ಯ ಪಶ್ಚಿಮ ದ್ವಾರದ ಮೂಲಕವೇ ತಮ್ಮ ಕಚೇರಿ ಪ್ರವೇಶಿಸಿದರು. ಆರೋಗ್ಯಕರ ಮನಸ್ಸು, ಸ್ವಚ್ಚ ಹೃದಯ, ಜನಪರ ಕಾಳಜಿ, ಒಳ್ಳೆ ಗಾಳಿ ಬೆಳಕು ಬಂದರೆ ಅದುವೇ ಉತ್ತಮ ವಾಸ್ತು ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಿಧಾನಸೌಧದಲ್ಲಿ ಮೂಢನಂಬಿಕೆಗೆ ಬ್ರೇಕ್; ವಾಸ್ತು ಸರಿಯಿಲ್ಲ ಎಂದು ಮುಚ್ಚಿದ್ದ ಬಾಗಿಲು ತೆರೆಸಿದ CM ಸಿದ್ದು

https://newsfirstlive.com/wp-content/uploads/2023/06/CM-Siddaramaih.jpg

Load More