newsfirstkannada.com

ಆಲಮಟ್ಟಿ ಜಲಾಶಯದ ಒಳಹರಿವು ಮತ್ತೆ ಹೆಚ್ಚಳ.. ಸಿಎಂ ಸಿದ್ದರಾಮಯ್ಯರಿಂದ ನಾಳೆ ಬಾಗಿನ ಅರ್ಪಣೆ

Share :

Published September 1, 2023 at 10:04am

Update September 1, 2023 at 1:29pm

    ನಾಳೆ ಆಲಮಟ್ಟಿ ಜಲಾಶಯದ ದಡದಲ್ಲಿ ಸಡಗರ ಸಂಭ್ರಮ

    ಮಳೆಯಿಂದಾಗಿ ಮತ್ತೆ ಒಳಹರಿವು ಹೆಚ್ಚು, ರೈತರಲ್ಲಿ ಸಂತಸ

    ಬಾಗಿನ ಅರ್ಪಣೆ ಜೊತೆಗೆ ಗಂಗಾಪೂಜೆ ಮಾಡಲಿರೋ ಸಿಎಂ

ವಿಜಯಪುರ: ಆಲಮಟ್ಟಿ ಜಲಾಶಯದ ಸುತ್ತ ಮಳೆ ಹಿನ್ನೆಲೆಯಲ್ಲಿ ಒಳ ಹರಿವು ಮತ್ತೆ ಹೆಚ್ಚಳವಾದ ಸಂತಸದ ಜೊತೆಗೆ ನಾಳೆ ಸಿಎಂ ಸಿದ್ದರಾಮಯ್ಯ ಅವರು ಬಾಗಿನ ಅರ್ಪಣೆ ಮಾಡಲಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರು ಸೆಪ್ಟೆಂಬರ್ 2 ರಂದು ಮೊದಲು ಬೆಂಗಳೂರಿನಿಂದ ವಿಶೇಷ ವಿಮಾನ ಮೂಲಕ ಬಳ್ಳಾರಿಯ ಜಿಂದಾಲ್​ಗೆ ತೆರಳುವರು. ಬಳಿಕ ಅಲ್ಲಿಂದ ಹೆಲಿಕ್ಯಾಪ್ಟರ್​ನಿಂದ ತೆರಳಿ ಬೆಳಗ್ಗೆ 11-45ರ ಆಲಮಟ್ಟಿ ಜಲಾಶಯಕ್ಕೆ ಭೇಟಿ ನೀಡಲಿದ್ದಾರೆ. ನಂತರ ಕೃಷ್ಣಾ ಜಲಮೂಲ ಗಂಗಾಪೂಜೆ ಹಾಗೂ ಬಾಗಿನವನ್ನು ಸಿದ್ದರಾಮಯ್ಯ ಅರ್ಪಿಸಲಿದ್ದಾರೆ. ಇದೇ ವೇಳೆ ಡಿಸಿಎಂ ಡಿ.ಕೆ ಶಿವಕುಮಾರ್, ಸಚಿವರಾದ ಎಂ.ಬಿ ಪಾಟೀಲ್, ಆರ್​.ಬಿ. ತಿಮ್ಮಾಪುರ ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಅಲ್ಲದೇ ಬಾಗಲಕೋಟೆ, ವಿಜಯಪುರ ಜಿಲ್ಲೆಯ ಶಾಸಕರು. ಸಂಸದರು ಭಾಗಿಯಾಗುವರು.

ಬಾಗಿನ ಅರ್ಪಣೆ ನಂತರ ಆಲಮಟ್ಟಿ ಕೆಬಿಜೆಎನ್​ಎಲ್ ವ್ಯವಸ್ಥಾಪಕರ ಕಚೇರಿಯಲ್ಲಿ ಯುಕೆಪಿ ಯುನಿಟ್- 3 ಭೂ ಸ್ವಾಧೀನ, ಪುನರ್ವಸತಿ ಪುನರ್​ ನಿರ್ಮಾಣ ಕುರಿತು ಸಭೆ ನಡೆಯಲಿದೆ. ಈ ಸಭೆ ಮುಗಿಯುತ್ತಿದ್ದಂತೆ ಸಿಎಂ ಸಿದ್ದರಾಮಯ್ಯ ಅವರು ಮಧ್ಯಾಹ್ನ 3 ಗಂಟೆಗೆ ಹೆಲಿಕಾಪ್ಟರ್ ಮೂಲಕ ಬಳ್ಳಾರಿಗೆ ಬಂದು, ಅಲ್ಲಿಂದ ವಿಮಾನ ಮೂಲಕ ಮತ್ತೆ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ.

ಇನ್ನು ಬಾಗಲಕೋಟೆ, ವಿಜಯಪುರ ಜಿಲ್ಲೆಗಳ ಜಲಾನಯನ ಪ್ರದೇಶ ವ್ಯಾಪ್ತಿಯಲ್ಲಿ ಮತ್ತೆ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಆಲಮಟ್ಟಿ ಜಲಾಶಯಕ್ಕೆ ಮತ್ತೆ ಒಳಹರಿವು ಹೆಚ್ಚಾಗಿದೆ. ಕಳೆದ ಕೆಲ ದಿನಗಳಿಂದ ಮಳೆಯಿಲ್ಲದೇ ಒಳಹರಿವು ಕಡಿಮೆ ಆಗಿತ್ತು. ಆದ್ರೆ 5,767 ಕ್ಯೂಸೆಕ್​ ಒಳಹರಿವು ಏರಿಕೆ ಆಗಿದೆ.

  • ಆಲಮಟ್ಟಿ ಜಲಾಶಯ ಸಾಮಾರ್ಥ್ಯ: 123.081 ಟಿಎಂಸಿ
  • ಇಂದಿನ ಸಂಗ್ರಹ : 121.957ಟಿಎಂಸಿ
  • ಹೊರ ಹರಿವು: 1,705 ಕ್ಯೂಸೆಕ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಆಲಮಟ್ಟಿ ಜಲಾಶಯದ ಒಳಹರಿವು ಮತ್ತೆ ಹೆಚ್ಚಳ.. ಸಿಎಂ ಸಿದ್ದರಾಮಯ್ಯರಿಂದ ನಾಳೆ ಬಾಗಿನ ಅರ್ಪಣೆ

https://newsfirstlive.com/wp-content/uploads/2023/09/CM_SIDDARAMAIAH-2.jpg

Load More