5 ಗ್ಯಾರಂಟಿಗಳ ಜಾರಿಗೆ 59 ಸಾವಿರ ಕೋಟಿ ವೆಚ್ಚ
ಶಕ್ತಿ ಯೋಜನೆ ನೋಡಿ ವಿರೋಧ ಪಕ್ಷಗಳಿಗೆ ನಡುಕ
ಎಷ್ಟೇ ಕಷ್ಟ ಬಂದ್ರೂ ಉಚಿತ ಗ್ಯಾರಂಟಿ ಜಾರಿ ಖಚಿತ
ಬೆಂಗಳೂರು: ರಾಜ್ಯದ ಮಹಿಳೆಯರಿಗೆ ಉಚಿತ ಸಾರಿಗೆ ಸಂಚಾರ ನೀಡುವ ಶಕ್ತಿ ಯೋಜನೆಗೆ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ ಟೀಕೆ ಮಾಡುವವರಿಗೆ ತಿರುಗೇಟು ಕೊಟ್ಟಿದ್ದಾರೆ. ಸುಮ್ಮನೆ ಗೇಲಿ ಮಾಡೋದಲ್ಲ. ಗೇಲಿ ಮಾಡುವವರು ಅಲ್ಲೇ ಇರ್ತಾರೆ. ನಾವು ನುಡಿದಂತೆ ನಡೆಯುತ್ತೇವೆ ಹೀಗಾಗಿ ವಿರೋಧ ಪಕ್ಷಗಳಿಗೆ ಈಗ ನಡುಕ ಶುರುವಾಗಿದೆ. ಉಳಿದ 4 ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವುದು ಖಚಿತ ಎಂದು ಗುಡುಗಿದ್ದಾರೆ.
ಹೆಣ್ಣು ಮಕ್ಕಳಿಗೆ ಶಕ್ತಿ ತುಂಬಲು ಶಕ್ತಿ ಎಂದು ಹೆಸರಿಡಲಾಗಿದೆ. ಬೇರೆ ರಾಜ್ಯಕ್ಕೆ ಹೋಗಿ ಶಕ್ತಿ ಯೋಜನೆ ಕೇಳಬೇಡಿ. ಅತ್ಯಂತ ಸಂತೋಷದಿಂದ ಕಾರ್ಯಕ್ರಮ ಉದ್ಘಾಟನೆ ಮಾಡಿದ್ದೇನೆ. ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳು ಅಶಕ್ತರಿಗೆ ಶಕ್ತಿ ತುಂಬುವ ಕೆಲಸ ಮಾಡ್ತೇವೆ. ಜುಲೈ 1ರಿಂದ ಗೃಹ ಜ್ಯೋತಿ ಯೋಜನೆ ಜಾರಿಗೊಳಿಸುತ್ತಿದ್ದೇವೆ. ಎಲ್ಲರಿಗೂ 200 ಯೂನಿಟ್ ಉಚಿತ ವಿದ್ಯುತ್ ನೀಡಿ ಎಂದು ಎಡಬಿಡಂಗಿ ರೀತಿ ಹೇಳಿಕೆ ನೀಡ್ತಾರೆ. ಇದಕ್ಕೆ ತರ್ಕ ಇದ್ಯಾ? ಇದರಿಂದ ಜನ ದಾರಿ ತಪ್ಪಲ್ಲ. ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ರಾಜ್ಯ ದಿವಾಳಿ ಆಗುತ್ತದೆ. ಕೊಟ್ಟ ಮಾತಿನಂತೆ ನಡೆದುಕೊಳ್ಳಲು ಸಾಧ್ಯವಿಲ್ಲ ಎಂದಿದ್ರು. ಎಷ್ಟೇ ಕಷ್ಟ ಬಂದ್ರೂ ಗ್ಯಾರಂಟಿ ಯೋಜನೆ ಜಾರಿ ಖಚಿತ. ಐದು ಗ್ಯಾರಂಟಿಗಳ ಜಾರಿಗೆ 59 ಸಾವಿರ ಕೋಟಿ ರೂಪಾಯಿ ವೆಚ್ಚ ಆಗಲಿದೆ. ಎಲ್ಲರೂ ಮೆಚ್ಚಿಕೊಳ್ಳುವ ಯೋಜನೆ ಇದಾಗಿದೆ. ಯಾವ ಜನರಿಗೆ ಖರ್ಚು ಮಾಡ್ತೇವೆ ಎಂಬುದೇ ಇಲ್ಲಿ ಮುಖ್ಯವಾಗುತ್ತದೆ.
ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಮಧ್ಯವರ್ತಿಗಳು ಇರೋದಿಲ್ಲ. ನೇರವಾಗಿ ಫಲಾನುಭವಿಗಳಿಗೆ ಯೋಜನೆಗಳು ತಲುಪುತ್ತವೆ. ಬಡವರ ಜೇಬಿನಲ್ಲಿ ದುಡ್ಡಿಡೋದು ನಮ್ಮ ಕೆಲಸ. ನೂರಕ್ಕೆ ನೂರು ಗ್ಯಾರಂಟಿ ಯೋಜನೆ ಜಾರಿ ಖಚಿತ ಎಂದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ