newsfirstkannada.com

ಬಿಕೆ ಹರಿಪ್ರಸಾದ್​ ವಿರುದ್ಧ ಸಿಡಿದೆದ್ದ CM ಸಿದ್ದರಾಮಯ್ಯ ಟೀಮ್​.. ಹೈಕಮಾಂಡ್ ಅಂಗಳ ತಲುಪಿದ ಕಾಂಗ್ರೆಸ್​ ಕಿತ್ತಾಟ..!

Share :

12-09-2023

  ಈ ತರ ಬಹಿರಂಗವಾಗಿ ಮಾತನಾಡುವುದು ತಪ್ಪು ಎಂದ ರಾಯರೆಡ್ಡಿ

  ತಮ್ಮ ವಿರುದ್ಧ ಮಾತನಾಡಿದವರಿಗೆ ಟಾಂಗ್ ಕೊಟ್ಟ ಬಿ.ಕೆ ಹರಿಪ್ರಸಾದ್

  ಸಚಿವ ಸ್ಥಾನ ಸಿಗದಿದ್ದಕ್ಕೆ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಕ್​ ಪ್ರಹಾರ..!

ದುಶ್ಮನ್​ ಕಹಾಹೇ ಅಂದ್ರೆ ಬಗಲ್​ ಮೇ ಹೇ ಅನ್ನೋ ಹಾಗೆ ರಾಜ್ಯ ಕಾಂಗ್ರೆಸ್​ ಸರ್ಕಾರಕ್ಕೆ ಹಿತ ಶತ್ರುಗಳ ಕಾಟ ಹೆಚ್ಚಾಗಿದೆ. ಆಗಾಗ ಸಿದ್ದರಾಮಯ್ಯ ಸರ್ಕಾರದಲ್ಲಿ ಪತ್ರವಾರ್‌ ಕೂಡ ನಡೆಯುತ್ತಿದೆ. ಈ ಮಧ್ಯೆ ಕಾಂಗ್ರೆಸ್ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್, ಸಿಎಂ ವಿರುದ್ಧವೇ ನೇರ ವಾಗ್ದಾಳಿ ನಡೆಸ್ತಿದ್ದಾರೆ. ಇದೀಗ ಸಿದ್ದು ವಿರುದ್ಧ ಮಾತಿನ ಸಿಡಿಗುಂಡು ಸಿಡಿಸ್ತಿರೋ ಬಿಕೆ ಹರಿಪ್ರಸಾದ್​ ವಿರುದ್ಧ ಸಿದ್ದು ಟೀಂ ಸಿಡಿದೆದ್ದಿದ್ದು ಹರಿಪ್ರಸಾದ್‌ಗೆ ತಿರುಗೇಟು ಕೊಟ್ಟಿದೆ.

ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಆಂತರಿಕ ಕಚ್ಚಾಟ ಭುಗಿಲೆದ್ದಿದೆ. ಸಿಎಂ ಸಿದ್ದರಾಮಯ್ಯಗೆ ಹಿತಶತ್ರುಗಳ ಕಾಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅದರಲ್ಲೂ ಸಿದ್ದರಾಮಯ್ಯ ವಿರುದ್ಧ ಬಿ.ಕೆ.ಹರಿಪ್ರಸಾದ್​​​ ಬೆಂಕಿಯನ್ನೇ ಉಗುಳುತ್ತಿದ್ದಾರೆ. ಈ ಪ್ರಕರಣ ಹೈಕಮಾಂಡ್ ಅಂಗಳವನ್ನೂ ತಲುಪಿದೆ. ಇದು ಕಾಂಗ್ರೆಸ್ ಹಣಿಯಲು ಕಾಯುತ್ತಿರುವ ಬಿಜೆಪಿಗೆ ಹೊಸ ಅಸ್ತ್ರ ಸಿಕ್ಕಂತಾಗಿದೆ. ಇದೀಗ ಕಾಂಗ್ರೆಸ್‌ನಲ್ಲಿ ಬಿ.ಕೆ ಹರಿಪ್ರಸಾದ್ ವರ್ಸಸ್‌ ಸಿದ್ದು ಟೀಂ ಎಂಬ ಸಮರ ಶುರುವಾಗಿದೆ.

ಸ್ವಪಕ್ಷದ ನಾಯಕನ ವಿರುದ್ಧ ಸಿಡಿದೆದ್ದ ಕಾಂಗ್ರೆಸ್ ನಾಯಕರು

ಕಾಂಗ್ರೆಸ್ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್ ಎಲ್ಲೆ ಹೋದ್ರೂ ವಿಪಕ್ಷಗಳನ್ನ ಕಾಡೋದಕ್ಕಿಂತ ಸಿದ್ದರಾಮಯ್ಯರನ್ನೇ ಟಾರ್ಗೆಟ್ ಮಾಡ್ತಿದ್ದಾರೆ. ವೇದಿಕೆ ಮೇಲೆ ಸಿಎಂ ಸಿದ್ದರಾಮಯ್ಯ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸ್ತಿದ್ದಾರೆ. ಸಚಿವ ಸ್ಥಾನ ಸಿಗದ ಸಿಟ್ಟು ಸಿದ್ದರಾಮಯ್ಯ ವಿರುದ್ಧ ವಾಕ್​ ಪ್ರಹಾರವಾಗಿ ಬದಲಾಗಿದೆ. ಕಳೆದ ಕೆಲ ದಿನಗಳ ಹಿಂದಷ್ಟೇ ಪಂಚೆ ಹಾಕ್ಕೊಂಡು ಖಾಕಿ ಚಡ್ಡಿ ಹಾಕಿದ್ರೆ ಸಮಾಜವಾದಿ ಆಗಲ್ಲ ಅಂತ ಸಿದ್ದರಾಮಯ್ಯ ವಿರುದ್ಧ ಮಾತಿನ ಕೆಂಡ ಉಗುಳಿದ್ರು. ಇದೀಗ ಬಿಕೆಹೆಚ್‌ ಮಾತಿಗೆ ಸಿದ್ದರಾಮಯ್ಯ ಟೀಂ ಸದಸ್ಯರು ತಿರುಗೇಟು ಕೊಟ್ಟಿದ್ದಾರೆ. ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ ಅಂತ ಹರಿಪ್ರಸಾದ್ ಮಾತುಗಳಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ದೊಡ್ಡ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಎಂ.ಬಿ ಪಾಟೀಲ್

‘ಅವರಿಗೆ ವ್ಯಕ್ತಿತ್ವಕ್ಕೆ ತಕ್ಕದ್ದಲ್ಲ’

ಹರಿಪ್ರಸಾದ್ ಅವರಿಗೆ ತಪ್ಪು ಎಂದು ಅನಿಸಿದ್ರೆ ನೇರ ನಾಯಕರ ಮುಂದೆ ಹೋಗಿ ಹೇಳಬೇಕು. ಆದರೆ ಬೇರೆ ಬೇರೆ ವೇದಿಕೆಗಳಲ್ಲಿ ಹೇಳಿಕೆ ಕೊಡುವುದು ಅವರ ವ್ಯಕ್ತಿತ್ವಕ್ಕೆ ಶೋಭೆ ತರುವಂತಹದ್ದಲ್ಲ. ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಸುರ್ಜೇವಾಲಾರಿಗೆ ನಾಲ್ಕು ಗೋಡೆಗಳ ಮಧ್ಯೆ ಹೇಳಿ. ಈ ರೀತಿ ಮಾಡುವುದು ಅವರ ಹಿರಿತನಕ್ಕೆ, ವ್ಯಕ್ತಿತ್ವಕ್ಕೆ ಸರಿಯಾದ ಬೆಳವಣಿಗೆಯಲ್ಲ.

ಎಂ.ಬಿ. ಪಾಟೀಲ್‌, ಸಚಿವ

‘ಎಲ್ಲರಿಗೂ ಅವಕಾಶ ನೀಡಲು ಸಾಧ್ಯವಿಲ್ಲ’

ಸಿಎಂ ಸ್ಪಷ್ಟವಾಗಿ ಹೇಳಿದ್ದಾರೆ. ಅವರು ನನ್ನ ಹೆಸರು ಹೇಳಿಲ್ಲ ಎಂದು ಹೇಳಿದ್ದಾರೆ. ಹೀಗಾಗಿ ಅವರ ಬಗ್ಗೆ ಮಾತನಾಡಲ್ಲ. ಬಹಳಷ್ಟು ಜನಕ್ಕೆ ಸೂಕ್ತವಾದ ಸ್ಥಾನಮಾನ ಕೊಡಲು ಆಗಲ್ಲ. ಒಂದೇ ಕುರ್ಚಿ ಇರುತ್ತದೆ. ಬಹಳಷ್ಟು ಜನ ಆಕಾಂಕ್ಷಿಗಳಿರುತ್ತಾರೆ. ಅವರ ಕೊಡುಗೆಗೆ ತಕ್ಕಂತೆ ಸ್ಥಾನ ಸಿಗಲ್ಲ.

ಪ್ರಿಯಾಂಕ್ ಖರ್ಗೆ, ಸಚಿವ

ಹರಿಪ್ರಸಾದ್ ಹೇಳಿಕೆ ಸರಿಯಲ್ಲ ಎಂದ ದಿನೇಶ್ ಗುಂಡೂರಾವ್

ಇನ್ನೂ ಸಿದ್ದರಾಮಯ್ಯರ ಪರ ಮತ್ತೊಬ್ಬ ಸಚಿವ ದಿನೇಶ್ ಗುಂಡೂರಾವ್ ಕೂಡಾ ಬ್ಯಾಟ್‌ ಬೀಸಿದ್ದಾರೆ. ಹರಿಪ್ರಸಾದ್ ಯಾರ ಬಗ್ಗೆ ಟೀಕೆ ಮಾಡ್ತಾರೆ, ಯಾಕೆ ಮಾಡ್ತಾರೆ ಅರ್ಥವಾಗ್ತಿಲ್ಲ. ಒಬ್ಬ ರಾಜಕಾರಣಿ ಆ ಥರ ಮಾತನಾಡಬಾರದು ಅಂತ ಪಾಠ ಬೋಧಿಸಿದ್ದಾರೆ. ಇತ್ತ ಸರ್ಕಾರದ ವಿರುದ್ಧವೇ ಪತ್ರ ಚಳುವಳಿ ಮಾಡಿದ್ದ ಮಾಜಿ ಸಚಿವ ಬಸವರಾಜರಾಯ ರೆಡ್ಡಿ ಕೂಡಾ ಸಿಎಂ ಬೆನ್ನಿಗೆ ನಿಂತಿದ್ದಾರೆ. ಸಿಎಂ ಸಿದ್ದರಾಮಯ್ಯ ಒಬ್ಬ ಉತ್ತಮ ಆಡಳಿತಗಾರ ಎಂಬ ಹೊಗಳಿಕೆ ಮಾತನ್ನಾಡಿದ್ದಾರೆ.

ಬಹಿರಂಗ ಹೇಳಿಕೆ ನೀಡೋದು ತಪ್ಪು

ಸಿದ್ದರಾಮಯ್ಯ ಒಳ್ಳೆಯ ಆಡಳಿತಗಾರ. ಅವರಿಗೆ ಸಾಮಾಜಿಕ ನ್ಯಾಯದ ಬಗ್ಗೆ ದೊಡ್ಡ ಪರಿಕಲ್ಪನೆ ಇದೆ. ಜಾತಿ ವ್ಯವಸ್ಥೆಯಲ್ಲಿ ಅನುಕೂಲ ಮಾಡಿಕೊಡಬೇಕು ಎನ್ನುವುದು ಅವರಿಗೆ ಇದೆ. ಆದ್ರೆ ಹರಿಪ್ರಸಾದ್ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ಚೆನ್ನಾಗಿ ಗೊತ್ತಿದೆ. ಅವರು ಮಾತನಾಡುವುದರಿಂದ ಉತ್ತಮ. ಅವರ ಸಮಸ್ಯೆ ಪರಿಹಾರ ಆಗುತ್ತದೆ. ​

ಬಸವರಾಜ ರಾಯರೆಡ್ಡಿ, ಮಾಜಿ ಸಚಿವ

‘ಹೈ ಕಮಾಂಡ್‌ಗೆ ದೂರು ನೀಡೋರು ಹಗರಣಗಳಿಂದ ಪಾರಾಗಲಿ’

ಇನ್ನೂ ತಮ್ಮ ವಿರುದ್ಧವೇ ಸ್ವಪಕ್ಷೀಯ ನಾಯಕರು ಮಾತಿನ ದಾಳಿಗೆ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಮಾತಿನ ಚಾಟಿ ಬೀಸಿದ್ದಾರೆ. ಅದರಲ್ಲೂ ತಮ್ಮ ವಿರುದ್ಧ ಹೈಕಮಾಂಡ್‌ಗೆ ದೂರು ನೀಡಿದ್ದ ಮಾಲೂರು ಶಾಸಕ ಕೆ.ವೈ. ನಂಜೇಗೌಡ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ. ಜೊತೆಗೆ ನನ್ನ ವಿರುದ್ಧ ಹೈಕಮಾಂಡ್​ಗೆ ದೂರು ನೀಡುವವರು ಮೊದಲು ತಮ್ಮ ಮೇಲಿರುವ ಹಗರಣಗಳಿಂದ ಪಾರಾಗಲಿ ಅಂತ ಟಕ್ಕರ್ ಕೊಟ್ಟಿದ್ದಾರೆ.

ಬಿ.ಕೆ ಹರಿಪ್ರಸಾದ್ ಮತ್ತು ಸಿಎಂ ಸಿದ್ದರಾಮಯ್ಯ

ದೂರು ನೀಡೋರು ಹಗರಣಗಳಿಂದ ಪಾರಾಗಿ

ಯಾರು ನನ್ನ ಮೇಲೆ ಹೇಳುತ್ತಾರೋ ಅವರು ಕೆಲ ಹಗರಣದಿಂದ ಹೊರ ಬರಲಿ. ಅದರಿಂದ ಹೊರ ಬರುತ್ತೇನೆ ಎಂದರೇ ಧೈರ್ಯದಿಂದ ಹೇಳಿಕೆ ಕೊಡಲಿ. ದೂರು ಕೊಡೋರು ಅವರೇನು ಅಂತ ತಿಳಿದುಕೊಳ್ಳಬೇಕು.

ಬಿ.ಕೆ. ಹರಿಪ್ರಸಾದ್‌, ಪರಿಷತ್ ಸದಸ್ಯ

ಹಸ್ತದ ಮನೆಯಲ್ಲಿ ಹರಿಪ್ರಸಾದ್‌ ಮಾತು ಹಲ್‌ಚಲ್ ಎಬ್ಬಿಸಿದೆ. ಹ್ಯೂಬ್ಲೋಟ್‌ ವಾಚ್‌ ಇತಿಹಾಸ ಕೆದಕಿ ಖಾಕಿ ಚಡ್ಡಿಯ ಮಾತಿನ ಟಾಂಗ್‌ ಕೊಟ್ಟು ಸಮಾಜವಾದಿ ನಾಯಕನಿಗೆ ಸೆಡ್ಡು ಹೊಡಿದಿದ್ದ ಹರಿಗೆ ಕೈ ನಾಯಕರೇ ಮಾತಿನ ಪ್ರಸಾದ ಕೊಟ್ಟಿದ್ದಾರೆ. ಇದೀಗ ಇಬ್ಬರು ಕೈ ಮಹಾ ನಾಯಕರ ಮಾತಿನ ಗುದ್ದಾಟಕ್ಕೆ ಬ್ರೇಕ್‌ ಹಾಕಲು ಹೈ ಕಮಾಂಡ್ ಅದ್ಯಾವ ಕ್ರಮ ಕೈಗೊಳ್ಳುತ್ತೋ ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಿಕೆ ಹರಿಪ್ರಸಾದ್​ ವಿರುದ್ಧ ಸಿಡಿದೆದ್ದ CM ಸಿದ್ದರಾಮಯ್ಯ ಟೀಮ್​.. ಹೈಕಮಾಂಡ್ ಅಂಗಳ ತಲುಪಿದ ಕಾಂಗ್ರೆಸ್​ ಕಿತ್ತಾಟ..!

https://newsfirstlive.com/wp-content/uploads/2023/09/SIDDARAMAIAH_HARIPRASAD.jpg

Load More