newsfirstkannada.com

×

ಹಳೇ ಸೇಡು ತೀರಿಸಿಕೊಳ್ಳಲು ಮುಂದಾದ ಸಿಎಂ ಸಿದ್ದು; ಬಿಜೆಪಿ ನಾಯಕರಿಗೆ ಶುರುವಾಯ್ತು ಬಂಧನದ ಭೀತಿ!

Share :

Published June 28, 2023 at 6:26am

Update June 28, 2023 at 6:30am

    ಬಿಜೆಪಿ ಅವಧಿಯಲ್ಲಿನ ಅಕ್ರಮಗಳ ತನಿಖೆಗೆ ‘ಕೈ’ ಹಾಕಿದ ಸಿಎಂ

    ಬಿಜೆಪಿ ಅವಧಿಯಲ್ಲೂ SIT ರಚನೆಗೆ ಆಗ್ರಹಿಸಿದ್ದ ಕಾಂಗ್ರೆಸ್ಸಿಗರು

    ಬಿಜೆಪಿ ಪ್ರಭಾವಿ ನಾಯಕರು, ಅಧಿಕಾರಿಗಳಿಗೆ ಶುರು ನಡುಕ!

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್​ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಬಿಜೆಪಿಯ ಬುಡವನ್ನೇ ಅಲ್ಲಾಡಿಸಲು ಕೈ ಹಾಕಿದೆ. ಹಿಂದಿನ ಸರ್ಕಾರದ ಎಲ್ಲಾ ಅವ್ಯವಹಾರಗಳ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪುನರುಚ್ಚರಿಸಿದ್ದಾರೆ. ಈ ಬಗ್ಗೆ ಇಂದು ನಡೆಯೋ ಸಚಿವ ಸಂಪುಟ ಸಭೆಯಲ್ಲಿ ಒಂದು ನಿರ್ಧಾರಕ್ಕೆ ಬರುವ ಸಾಧ್ಯತೆ ಇದೆ. ಈ ಮೂಲಕ ಕಾಂಗ್ರೆಸ್​ ವಿರುದ್ಧ ಗ್ಯಾರೆಂಟಿ ಅಸ್ತ್ರ ಪ್ರಯೋಗಿಸಿರುವ ಬಿಜೆಪಿ ಮೇಲೆ ಎಸ್​ಐಟಿ ಚೂಬಿಡಲು ರಣತಂತ್ರ ರೂಪಿಸಿದೆ.

ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಮುಗಿದಿದೆ. ಕಾಂಗ್ರೆಸ್​ ಅಧಿಕಾರಕ್ಕೆ ಬಂದಿದ್ರೆ, ಬಿಜೆಪಿ ವಿಪಕ್ಷ ಸ್ಥಾನದಲ್ಲಿ ಕುಳಿತಿದೆ. ಸೋಲಿನ ಸೇಡು ತೀರಿಸಿಕೊಳ್ಳಲು ಕಾಯುತ್ತಿರುವ ಕೇಸರಿ ಪಡೆ ಗ್ಯಾರೆಂಟಿ ಯೋಜನೆಗಳನ್ನು ಜಾರಿಗೊಳಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಲು ರಾಜ್ಯಾದ್ಯಂತ ಪ್ರತಿಭಟನೆಗೆ ಸಜ್ಜಾಗಿದೆ. ಇದರ ಬೆನ್ನಲ್ಲೇ ಎಚ್ಚೆತ್ತ ಕಾಂಗ್ರೆಸ್​ ಸರ್ಕಾರ, ಬಿಜೆಪಿಯ ಬಾಯಿಗೆ ಬೀಗ ಹಾಕಲು ಹಿಂದಿನ ಸರ್ಕಾರದಲ್ಲಿ ಕೇಳಿ ಬಂದ ಹಗರಣಗಳ ಬುಡಕ್ಕೆ ಕೈ ಹಾಕಿದೆ.

ಚುನಾವಣಾ ಸಮಯದಲ್ಲೇ ಹಿಂದಿನ ಬಿಜೆಪಿ ಸರ್ಕಾರದ ಹಗರಣಗಳ ಬಗ್ಗೆ ಕಾಂಗ್ರೆಸ್​ ಸಚಿವರಾದ ಪ್ರಿಯಾಂಕ್​ ಖರ್ಗೆ, ದಿನೇಶ್ ​ಗುಂಡೂರಾವ್​, ಕೃಷ್ಣ ಬೈರೇಗೌಡ ಕೆಂಡಕಾರಿದ್ದರು. ಕಳೆದ ಸಚಿವ ಸಂಪುಟ ಸಭೆಯಲ್ಲೇ ಬಿಜೆಪಿ ಅವಧಿಯಲ್ಲಿನ ಆರೋಪಗಳ ತನಿಖೆಗೆ ಎಸ್​ಐಟಿ ತಂಡ ರಚನೆ ಮಾಡುವಂತೆ ಆಗ್ರಹಿಸಿದ್ದರು. ಇನ್ನು ಕೆಲ ಬಿಜೆಪಿ ನಾಯಕರು, ರಾಜ್ಯದಲ್ಲಿ ಹೊಂದಾಣಿಕೆ ರಾಜಕೀಯ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ. ಇದೆಲ್ಲದಕ್ಕೂ ಉತ್ತರ ನೀಡಿರುವ ಸಿಎಂ ಸಿದ್ದರಾಮಯ್ಯ, ಮೆಡಿಕಲ್ ಕಾಲೇಜುಗಳ ನಿರ್ಮಾಣ ಅಕ್ರಮ, ಬಿಟ್​ ಕಾಯಿನ್​, ಪಿಎಸ್​ಐ ಡೀಲ್​, 40 ಪರ್ಸೆಂಟ್​ ಕಮಿಷನ್​ ಕೇಸ್​ ಸೇರಿ ಹಿಂದಿನ ಬಿಜೆಪಿ ಆಡಳಿತದಲ್ಲಿ ನಡೆದಿದೆ ಎನ್ನಲಾದ ಎಲ್ಲಾ ಹಗರಣಗಳು ತನಿಖೆ ಮಾಡಲಾಗುವುದು. ತಪ್ಪಿತಸ್ಥರಿಗೆ ಶಿಕ್ಷೆ ನೀಡಲಾಗುವುದು ಎಂದಿದ್ದಾರೆ.

ಮತ್ತೆ ಸಿಐಡಿ ಹೆಗಲೇರುತ್ತಾ ಬಿಟ್​ ಕಾಯಿನ್​ ಕೇಸ್​?

2021-22ರಲ್ಲಿ ರಾಜಕೀಯ ಕೋಲಾಹಲ ಎಬ್ಬಿಸಿದ್ದ, ರಾಷ್ಟ್ರಮಟ್ಟದಲ್ಲಿ ಸುದ್ದು ಮಾಡಿದ್ದ ಬಿಟ್​ ಕಾಯಿನ್​ ಪ್ರಕರಣವನ್ನು ಕಾಂಗ್ರೆಸ್​ ಸರ್ಕಾರ ಮತ್ತೆ ಕೆದಕಿದೆ. ಅಂತಾರಾಷ್ಟ್ರೀಯ ಹ್ಯಾಕರ್ ಶ್ರೀಕಾಂತ್ ಅಲಿಯಾಸ್ ಶ್ರೀಕಿಯನ್ನು ಬಂಧಿಸಿದ ನಂತರ ಈ ಹಗರಣ ಬೆಳಕಿಗೆ ಬಂದಿತ್ತು. ಬಿಟ್‌ ಕಾಯಿನ್ ಹಗರಣದ ಪ್ರಕರಣವನ್ನು ಮರು ತನಿಖೆಗಾಗಿ ಸಿಐಡಿಗೆ ಹಸ್ತಾಂತರಿಸಲು ಸಿದ್ಧವಾಗಿದೆ. ಈ ಬಗ್ಗೆ ಬೆಂಗಳೂರಿನ ಪೊಲೀಸ್ ಕಮಿಷನರ್ ಬಿ. ದಯಾನಂದ್ ಅವರು ಕರ್ನಾಟಕ ಡಿಜಿಪಿ ಅಲೋಕ್ ಮೋಹನ್ ಅವರಿಗೆ ಪತ್ರ ಬರೆದು ಪ್ರಕರಣದ ತನಿಖೆಯನ್ನು ಸಿಐಡಿಗೆ ಹಸ್ತಾಂತರಿಸುವಂತೆ ಮನವಿ ಮಾಡಿದ್ದಾರೆ. ಇನ್ನು ಗೃಹ ಸಚಿವ ಡಾ.ಜಿ ಪರಮೇಶ್ವರ್​ ಕೂಡ ಇದೇ ಮಾತನ್ನು ಹೇಳಿದ್ದಾರೆ. ಇದರಿಂದ ಕೆಲ ಪ್ರಭಾವಿ ನಾಯಕರು, ಹಾಗೂ ಅಧಿಕಾರಿಗಳಲ್ಲಿ ನಾಯಕರಲ್ಲಿ ನಡುಕ ಹುಟ್ಟಿಸಿದೆ.

ಚಾಮರಾಜನಗರದ ಆಕ್ಸಿಜನ್​ ದುರಂತ ಕೇಸ್​ಗೆ ಮರುಜೀವ?

ಚಾಮರಾಜನಗರ ಆಕ್ಸಿಜನ್ ದುರಂತ ವಿಚಾರಕ್ಕೆ ಸಂಬಂಧಿಸಿದಂತೆ ಮರು ತನಿಖೆಗೆ ಒಪ್ಪಿಗೆ ಕೊಡಿ ಎಂದು ಸರ್ಕಾರಕ್ಕೆ ಪತ್ರ ಬರೆದಿದ್ದೇವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಕೊರೊನಾ ಸಮಯದಲ್ಲಿ ರಾಜ್ಯದಲ್ಲಿ ಸಂಭವಿಸಿದ ದೊಡ್ಡ ದುರಂತ ಚಾಮರಾಜನಗರ ಆಕ್ಸಿಜನ್ ದುರಂತ ವಿಚಾರಕ್ಕೆ ಸಂಬಂಧಿಸಿದಂತೆ ಚಾರ್ಚ್ ಫ್ರೇಮ್ ಪ್ರತಿಯನ್ನು ಶೀಘ್ರದಲ್ಲೇ ಸರ್ಕಾರಕ್ಕೆ ಕಳುಹಿಸುತ್ತೇವೆ. ಈ ಬಗ್ಗೆ ಸರ್ಕಾರ ನಂತರ ತೀರ್ಮಾನ ಕೈಗೊಳ್ಳುತ್ತದೆ ಎಂದಿದ್ದಾರೆ. ನಾವು ಎಲ್ಲವನ್ನೂ ಒಟ್ಟಿಗೆ ತನಿಖೆ ನಡೆಸಲ್ಲ, ಕೇಸ್​ ಬೈ ಕೇಸ್​ ನಿರ್ದಿಷ್ಟ ಪ್ರಕರಣಗಳನ್ನು ಮಾತ್ರ ತನಿಖೆ ಮಾಡ್ತೀವಿ ಎಂದು ಕೃಷ್ಣ ಬೈರೇಗೌಡ ಹೇಳಿದ್ದಾರೆ.

ರಾಜ್ಯ ಸರ್ಕಾರದ ಎಸ್​ಐಟಿ ಅಸ್ತ್ರಕ್ಕೆ ಬೊಮ್ಮಾಯಿ ಟಕ್ಕರ್​

ಇನ್ನು ಸಿಎಂ ತನಿಖಾಸ್ತ್ರಕ್ಕೆ ಮಾಜಿ ಸಿಎಂ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ. ಅವರು ಯಾವುದೇ ತನಿಖೆಯನ್ನಾದರೂ ನಡೆಸಲಿ ನಾವು ಸ್ವಾಗತಿಸುತ್ತೇವೆ ಎಂದಿದ್ದಾರೆ. ಒಟ್ಟಾರೆ ಕಾಂಗ್ರೆಸ್​ ಮತ್ತು ಬಿಜೆಪಿ ಎರಡೂ ರಾಷ್ಟ್ರೀಯ ಪಕ್ಷಗಳೂ ರಾಜಕೀಯ ಪೈಪೋಟಿಗೆ ಇಳಿದಿದೆ. ಅವರ ಹುಳಕನ್ನು ಇವರು.. ಇವರ ಹುಳಕುನ್ನು ಅವರ, ಜನರ ಮುಂದೆ ಬಟಾಬಯಲು ಮಾಡಲು, ತಯಾರಿ ನಡೆಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹಳೇ ಸೇಡು ತೀರಿಸಿಕೊಳ್ಳಲು ಮುಂದಾದ ಸಿಎಂ ಸಿದ್ದು; ಬಿಜೆಪಿ ನಾಯಕರಿಗೆ ಶುರುವಾಯ್ತು ಬಂಧನದ ಭೀತಿ!

https://newsfirstlive.com/wp-content/uploads/2023/06/Siddaramaiah-14.jpg

Load More