newsfirstkannada.com

ನಿಖಿಲ್ ಎಲ್ಲಿದ್ದೀಯಪ್ಪಾ.. ಯತೀಂದ್ರ ಮೇಲೆ ಕಿಡಿಕಾರಿದ ಕುಮಾರಸ್ವಾಮಿಗೆ ಸಿಎಂ ಸಿದ್ದರಾಮಯ್ಯ ಟಾಂಗ್‌; ಏನಂದ್ರು?

Share :

18-11-2023

  ಕರೆಂಟ್‌ ಕದ್ದ ಕಳ್ಳ.. ಕಲೆಕ್ಷನ್ ಕಿಂಗ್‌.. ಸುಲಿಗೆಪುತ್ರ ಅನ್ನೋ ವಾಕ್ಸಮರ

  ನಿಖಿಲ್ ಎಲ್ಲಿದ್ದೀಯಪ್ಪಾ ಅನ್ನೋ ಡೈಲಾಗ್ ಮೂಲಕ ಸಿಎಂ ಸಿದ್ದು ಟಾಂಗ್‌

  ರಾಜ್ಯದಲ್ಲಿ ಕುಮಾರಸ್ವಾಮಿ ಎಂಬ ಹೆಸರಿನವರು ಸಾವಿರಾರು ಜನ ಇದ್ದಾರೆ

ಬೆಂಗಳೂರು: ಕರೆಂಟ್‌ ಕದ್ದ ಕಳ್ಳ.. ಕಲೆಕ್ಷನ್ ಕಿಂಗ್‌.. ಸುಲಿಗೆಪುತ್ರ.. ಕಾಸಿಗಾಗಿ ಹುದ್ದೆಯ ವರ್ಗಾವಣೆ. ಹೀಗೆ ಸಾಲು, ಸಾಲು ವಾಗ್ಬಾಣಗಳನ್ನು ಹೂಡುತ್ತಿರುವ ಮಾಜಿ ಸಿಎಂ ಹೆಚ್‌.ಡಿ ಕುಮಾರಸ್ವಾಮಿ ಹಾಗೂ ಸಿಎಂ ಸಿದ್ದರಾಮಯ್ಯ ಅವರ ಮಧ್ಯೆ ರಾಜಕೀಯದ ಯುದ್ಧ ಜೋರಾಗಿದೆ. ಗಂಭೀರ ಆರೋಪ ಮಾಡುತ್ತಿರುವ ಕುಮಾರಸ್ವಾಮಿ ಅವರಿಗೆ ಸಿಎಂ ಸಿದ್ದರಾಮಯ್ಯ ಕೂಡ ಸಖತ್ ಟಾಂಗ್ ಕೊಟ್ಟಿದ್ದಾರೆ.

ಸೋಷಿಯಲ್ ಮೀಡಿಯಾ Xನಲ್ಲಿ ಇಂದು ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಕುಮಾರಸ್ವಾಮಿ ಎಂಬ ಹೆಸರಿನವರು ಸಾವಿರಾರು ಮಂದಿ ಇದ್ದಾರೆ. ಅವರಲ್ಲಿಯೂ ಒಂದಷ್ಟು ಪಕ್ಕಾ ಕ್ರಿಮಿನಲ್‌ಗಳೂ ಇದ್ದಾರೆ. ಹೆಸರಿನ ಕಾರಣಕ್ಕಾಗಿ ಅವರೆಲ್ಲರ ಪಾಪಕರ್ಮಗಳ ಹೊರೆಯನ್ನು ಹೆಚ್.ಡಿ ಕುಮಾರಸ್ವಾಮಿಯವರ ತಲೆ ಮೇಲೆ ಹೊರಿಸಲಿಕ್ಕೆ ಆಗುತ್ತಾ? ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಕಲೆಕ್ಷನ್‌ ಪ್ರಿನ್ಸ್‌ ವಿಡಿಯೋದಲ್ಲಿ ನುಸುಳಿದ್ದ ವಿವೇಕಾನಂದ ವರ್ಗಾವಣೆ ಪಟ್ಟಿಯಲ್ಲಿ ಬಂದಿದ್ದು ಹೇಗೆ? ಕುಮಾರಸ್ವಾಮಿ ಪ್ರಶ್ನೆ..!

ಇನ್ನು ಮುಂದುವರೆದು ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಕುಮಾರಸ್ವಾಮಿ ಅವರು ಮಾಡುತ್ತಿರುವ ಆರೋಪಕ್ಕೆ ಸಿಎಂ ಸಿದ್ದರಾಮಯಮಯ್ಯ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಅಂದು ಎಲ್ಲಿದೀಯಪ್ಪಾ ನಿಖಿಲ್ ಎಂದು ಸಾರ್ವಜನಿಕ ಸಭೆಯಲ್ಲಿ ಕುಮಾರಸ್ವಾಮಿ ಕೂಗಿದಾಗ ಅಲ್ಲಿ ಎಷ್ಟು ಮಂದಿ ಆ ಹೆಸರಿನವರಿದ್ದರೋ ಏನೋ? ಓಗೊಟ್ಟಿದ್ದು ಇವರ ಮಗ ಮಾತ್ರ ಅಲ್ವಾ? ಉಳಿದವರು ಓಗೊಟ್ಟಿದ್ದರೂ ಅವರನ್ನು ಮಕ್ಕಳು ಎಂದು ಇವರು ಒಪ್ಪಿಕೊಳ್ಳುತ್ತಿದ್ರಾ? ಎಂದು ಕುಮಾರಸ್ವಾಮಿ ವಿರುದ್ಧ ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕರೆಂಟ್ ಕಳ್ಳ ಎನ್ನುತ್ತಿದ್ದ ಕಾಂಗ್ರೆಸ್‌ ವಿರುದ್ಧ ಕಿಡಿಕಾರಿದ್ದ ಹೆಚ್‌.ಡಿ ಕುಮಾರಸ್ವಾಮಿ ಅವರು ಯಾರೋ ಮಾಡಿದ ತಪ್ಪಿಗೆ ನಾನು ದಂಡ ಕಟ್ಟಿದ್ದೇನೆ. ಕುಮಾರಸ್ವಾಮಿ ಅಂದ್ರೆ ರಾಜ್ಯದಲ್ಲಿ ಇರೋದು ನಾನೊಬ್ಬನೇನಾ ಎಂದು ಪ್ರಶ್ನಿಸಿದ್ದರು. ಹೆಚ್‌ಡಿಕೆ ಅವರ ಈ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ಎಲ್ಲಿದೀಯಪ್ಪಾ ನಿಖಿಲ್ ಎಂದು ಸಖತ್ ಟ್ರೋಲ್ ಆಗಿದ್ದ ಡೈಲಾಗ್‌ ಅನ್ನು ಅಸ್ತ್ರವಾಗಿ ಬಳಸಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಿಖಿಲ್ ಎಲ್ಲಿದ್ದೀಯಪ್ಪಾ.. ಯತೀಂದ್ರ ಮೇಲೆ ಕಿಡಿಕಾರಿದ ಕುಮಾರಸ್ವಾಮಿಗೆ ಸಿಎಂ ಸಿದ್ದರಾಮಯ್ಯ ಟಾಂಗ್‌; ಏನಂದ್ರು?

https://newsfirstlive.com/wp-content/uploads/2023/11/Siddaramaiah-on-HDK.jpg

Load More