newsfirstkannada.com

IBSA World ಗೇಮ್ಸ್​ನ ಅಂಧರ ಕ್ರಿಕೆಟ್​ನಲ್ಲಿ ಭಾರತ ಚಾಂಪಿಯನ್.. ಅಭಿನಂದನೆ ಸಲ್ಲಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

Share :

27-08-2023

    ಮೊದಲು ಬ್ಯಾಟಿಂಗ್‌ ಮಾಡಿದ್ದ ಆಸ್ಟ್ರೇಲಿಯಾ ತಂಡ

    ಇಂಗ್ಲೆಂಡಿನ ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಫೈನಲ್ ಪಂದ್ಯ

    3.3 ಓವರ್‌ನಲ್ಲಿ ಭಾರತ ತಂಡ ಎಷ್ಟು ರನ್ ಬಾರಿಸಿತು?

ಇಂಗ್ಲೆಂಡಿನ ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಇಂಟರ್‌ ನ್ಯಾಷನಲ್‌ ಸ್ಪೋರ್ಟ್ಸ್‌ ಫೆಡರೇಶನ್‌ ವರ್ಲ್ಡ್‌ಗೇಮ್ಸ್‌ನ ಫೈನಲ್‌ ಪಂದ್ಯದಲ್ಲಿ ಭಾರತ ಮಹಿಳಾ ಅಂಧರ ಕ್ರಿಕೆಟ್‌ ತಂಡ ಚಾಂಪಿಯನ್‌ ಆಗಿ ಹೊರಹೊಮ್ಮಿದೆ.

ಆಸ್ಟ್ರೇಲಿಯಾ ಮಹಿಳಾ ಅಂಧರ ಕ್ರಿಕೆಟ್‌ ತಂಡದ ವಿರುದ್ಧ 9 ವಿಕೆಟ್‌ಗಳ ಜಯ ಸಾಧಿಸುವ ಮೂಲಕ ಐತಿಹಾಸಿಕ ಗೆಲುವು ದಾಖಲಿಸಿದೆ. ಮೊದಲು ಬ್ಯಾಟಿಂಗ್‌ ಮಾಡಿದ್ದ ಆಸ್ಟ್ರೇಲಿಯಾ VI ಮಹಿಳಾ ತಂಡ 20 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 114 ರನ್‌ ಗಳಿಸಿತ್ತು. 115 ರನ್‌ ಗಳ ಗುರಿ ಬೆನ್ನತ್ತಿದ್ದ ಭಾರತ ತಂಡ ಸ್ಫೋಟಕ ಆರಂಭ ಪಡೆದುಕೊಂಡಿತ್ತು. ಭಾರತದ ವನಿತೆಯರು ಕೇವಲ 3.3 ಓವರ್‌ಗಳಲ್ಲೇ 1 ವಿಕೆಟ್‌ ನಷ್ಟಕ್ಕೆ 43 ರನ್‌ ಚಚ್ಚಿ ಗೆಲುವು ಕೈವಶ ಮಾಡಿಕೊಂಡರು.

ಆಸ್ಟ್ರೇಲಿಯಾ ವಿರುದ್ಧದ ಫೈನಲ್​ ಪಂದ್ಯದಲ್ಲಿ ಭಾರತದ ಮಹಿಳೆಯರು ಗೆದ್ದು ಬೀಗಿದಕ್ಕೆ ಸಿಎಂ ಸಿದ್ದರಾಮಯ್ಯ ಅವರು ಎಕ್ಸ್​ನಲ್ಲಿ ಪೋಸ್ಟ್​ ಶೇರ್ ಮಾಡುವ ಮೂಲಕ ಶುಭ ಕೋರಿದ್ದಾರೆ. ಕ್ರಿಕೆಟ್​ನಲ್ಲಿ ಸ್ಪೂರ್ತಿದಾಯಕ ಪ್ರದರ್ಶನ ನೀಡಿ ಭಾರತ ತಂಡ ಐತಿಹಾಸಿಕ ಗೆಲುವು ಸಾಧಿಸಿರುವುದಕ್ಕೆ ದೇಶ ಹೆಮ್ಮೆ ಪಡುತ್ತಿದೆ ಎಂದು ಬರೆದುಕೊಂಡಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

IBSA World ಗೇಮ್ಸ್​ನ ಅಂಧರ ಕ್ರಿಕೆಟ್​ನಲ್ಲಿ ಭಾರತ ಚಾಂಪಿಯನ್.. ಅಭಿನಂದನೆ ಸಲ್ಲಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

https://newsfirstlive.com/wp-content/uploads/2023/08/CM_SIDDARAMAIAH-1.jpg

Load More