ಆಗಸ್ಟ್ 26 ರಂದು ಪ್ರಧಾನಿ ಮೋದಿಯವರು ಇಸ್ರೋಗೆ ಭೇಟಿ
ನಿನ್ನೆಯೇ DCM ಡಿ.ಕೆ ಶಿವಕುಮಾರ್ ಭೇಟಿ ನೀಡಿ ಅಭಿನಂದನೆ..!
ಸಿಎಂ ಜತೆ ಬೆಂಗಳೂರು ಡಿಸಿ ದಯಾನಂದ ಸೇರಿ ಸಿಬ್ಬಂದಿ ಸಾಥ್
ಬೆಂಗಳೂರು: ಭಾರತದ ಮಹತ್ವಾಕಾಂಕ್ಷೆ ಯೋಜನೆಯಾದ ಚಂದ್ರಯಾನ-3 ಯಶಸ್ವಿಯಾಗಿದ್ದು, ಈ ಮೂಲಕ ನಿನ್ನೆ ಇಸ್ರೋ ಸಂಸ್ಥೆ ಮಹತ್ತರವಾದ ಸಾಧನೆ ಮಾಡಿ ವಿಶ್ವದ ಗಮನ ಸೆಳೆಯಿತು. ವಿಶ್ವದ ಯಾವ ದೇಶ ಮಾಡದಂತಹ ಸಾಧನೆಯನ್ನು ಭಾರತ ಮಾಡಿ ತೋರಿಸಿದ್ದು ಚಂದ್ರನ ದಕ್ಷಿಣ ಧ್ರುವದ ಮೇಲೆ ತನ್ನ ಅಧಿಪತ್ಯ ಸಾಧಿಸಿದೆ. ಇದಿರಿಂದ ಇಸ್ರೋ ಸಂಸ್ಥೆಗೆ ಎಲ್ಲೆಡೆಯಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿವೆ. ಈ ನಡುವೆ ಸಿಎಂ ಸಿದ್ದರಾಮಯ್ಯ ಅವರು ಇಂದು ಇಸ್ರೋ ಸಂಸ್ಥೆಗೆ ಭೇಟಿ ನೀಡಿ ವಿಜ್ಞಾನಿಗಳನ್ನು ಅಭಿನಂದಿಸಿದ್ದಾರೆ.
ಬೆಂಗಳೂರಿನ ಪೀಣ್ಯದಲ್ಲಿರುವ ಭಾರತದ ಬಾಹ್ಯಾಕಾಶ ಸಂಸ್ಥೆ (ಇಸ್ರೋ)ಗೆ ಸಿಎಂ ಸಿದ್ದರಾಮಯ್ಯ ಅವರು ಭೇಟಿ ನೀಡಿದರು. ನಿನ್ನೆ ಚಂದ್ರಯಾನ-3ಯ ಸ್ಮೂತ್ ಲ್ಯಾಂಡಿಂಗ್ ಸಕ್ಸಸ್ ಆದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಇಸ್ರೋದ ಎಲ್ಲ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿ ಪ್ರತಿಯೊಬ್ಬರಿಗೂ ಹಸ್ತಲಾಘನ ನೀಡಿದರು. ವಿಶೇಷ ಅಂದರೆ ಇಸ್ರೋ ಮುಖ್ಯಸ್ಥ ಎಸ್ ಸೋಮನಾಥ್ ಅವರಿಗೆ ಶಾಲು ಹೊದಿಸಿ ಮೈಸೂರು ಪೇಟಾ ತೊಡಿಸಿ ಸನ್ಮಾನಿಸಿದರು. ಇದೇ ವೇಳೆ ಸಿಎಂ ಸಿದ್ದರಾಮಯ್ಯರಿಗೆ ಬೆಂಗಳೂರಿನ ಜಿಲ್ಲಾಧಿಕಾರಿ ದಯಾನಂದ ಸೇರಿ ಇತರೆ ಅಧಿಕಾರಿಗಳು ಸಾಥ್ ನೀಡಿದರು.
ಬೆಂಗಳೂರು ಇಸ್ರೋ ಕಚೇರಿಗೆ ಭೇಟಿ ಕೊಟ್ಟ CM ಸಿದ್ದರಾಮಯ್ಯ..@siddaramaiah @isro#Siddaramaiah #Bangalore #ISRO #Office #Chandrayaan3 #VikramLander #ISRO #ISROStaffs #NewsFirstKannada pic.twitter.com/3bWoqYWN66
— NewsFirst Kannada (@NewsFirstKan) August 24, 2023
ಇಸ್ರೋ ಮುಖ್ಯಸ್ಥ ಎಸ್ ಸೋಮನಾಥ್ ಹಾಗೂ ಸಿಎಂ ಅವರು ಕೆಲವೊಂದು ಮಾಹಿತಿಗಳನ್ನು ಶೇರ್ ಮಾಡಿಕೊಂಡರು. ನಿನ್ನೆ ಐತಿಹಾಸಿಕ ಕ್ಷಣಕ್ಕೆ ಕಾರಣವಾದ ಕಚೇರಿಗೆ ಸಿಎಂ ಭೇಟಿ ನೀಡಿ ವಿಜ್ಞಾನಿಗಳಿಗೆ ಶುಭ ಕೋರಿದರು. ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಇಸ್ರೋ ಸಂಸ್ಥೆಗೆ ನಿನ್ನೆ ಭೇಟಿ ನೀಡಿ ಅಧಿಕಾರಿಗಳಿಗೆ ಹಾಗೂ ಮುಖ್ಯಸ್ಥರಿಗೆ ಅಭಿನಂದನೆ ಸಲ್ಲಿಸಿದ್ದರು. ವಿದೇಶ ಪ್ರವಾಸದಲ್ಲಿರುವ ಪ್ರಧಾನಿ ಮೋದಿಯವರು ಆಗಸ್ಟ್ 26 ರಂದು ಬೆಂಗಳೂರಿನ ಇಸ್ರೋ ಸಂಸ್ಥೆಗೆ ಭೇಟಿ ನೀಡಿ ಎಸ್ ಸೋಮನಾಥ್ ಟೀಮ್ ಅನ್ನು ಅಭಿನಂದಿಸಲಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ