ಕ್ಯಾಬಿನೆಟ್ ಸಭೆಯಲ್ಲಿ ಒಂದು ಸಾಲಿನ ನಿರ್ಣಯ ತೀರ್ಮಾನ
ಕಾನೂನು ಹೋರಾಟದ ಕಹಳೆ ಮೊಳಗಿಸಿದ ಮುಖ್ಯಮಂತ್ರಿ
ರಾಜೀನಾಮೆ ಕೇಳೋರ ವಿರುದ್ಧ ಸಿಎಂ ಸಿದ್ದರಾಮಯ್ಯ ಗರಂ
ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರ ಅನುಮತಿ ಬೆನ್ನಲ್ಲೇ ರಾಜ್ಯ ರಾಜಕಾರಣ ರಣಾಂಗಣ ರೂಪ ಪಡೆದುಕೊಂಡಿದೆ. ಸರ್ಕಾರ ವರ್ಸಸ್ ಗವರ್ನರ್ ಕದನ ಶುರುವಾಗಿದೆ. ಇಡೀ ಸಂಪುಟ ಒಗ್ಗೂಡಿ ಹೋರಾಡಲು ತೊಡೆ ತಟ್ಟಲಾಗಿದೆ. ಈ ಕ್ಯಾಬಿನೆಟ್ನ ಕ್ಯಾಪ್ಟನ್ ಸಿದ್ದರಾಮಯ್ಯ ಸಿಡಿದೆದ್ದಿದ್ದಾರೆ. ರಾಜೀನಾಮೆ ಕೇಳ್ತಿರೋರ ವಿರುದ್ಧ ರಣಕಹಳೆ ಮೊಳಗಿಸಿದ್ದಾರೆ.
ಇದನ್ನೂ ಓದಿ: 40 ವರ್ಷದಲ್ಲೇ ಸಿದ್ದರಾಮಯ್ಯಗೆ ಬಿಗ್ ಶಾಕ್.. ಸಿಎಂ ಸ್ಥಾನಕ್ಕೆ ಎದುರಾಗೋ 10 ಪರಿಣಾಮಗಳೇನು?
ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಡ್ತಿದ್ದಂತೆ ಇಡೀ ಸರ್ಕಾರ ಒಂದಾಗಿತ್ತು. ಎಲ್ಲಾ ಸಚಿವರೂ ಒಗ್ಗೂಡಿ ಒಗ್ಗಟ್ಟಿನ ಜಪ ಮಾಡಿದ್ರು. ಒಂದು ಸಾಲಿನ ನಿರ್ಣಯ ಅಂಗೀಕಾರ ಮಾಡಲಾಯ್ತು. ರಾಜ್ಯಪಾಲರು ತೆಗೆದುಕೊಂಡ ನಿರ್ಣಯ ಕಾನೂನು ಬಾಹೀರವಾಗಿದ್ದು, ಇದು ಪ್ರಜಾಪ್ರಭುತ್ವಕ್ಕೆ ಮಾರಕ ಅನ್ನೋ ಅಭಿಪ್ರಾಯ ಕ್ಯಾಬಿನೆಟ್ ಮೀಟಿಂಗ್ನಲ್ಲಿ ವ್ಯಕ್ತವಾಯ್ತು. ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟಿರೋದು ತಪ್ಪು. ಹೀಗಾಗಿ ಇದರ ವಿರುದ್ಧ ಇಡೀ ಸಂಪುಟ ಒಟ್ಟಾಗಿ ನಿಂತು ಕಾನೂನು ಹೋರಾಟ ಮಾಡೋಣ ಅಂತಾ ಒಂದು ಸಾಲಿನ ನಿರ್ಣಯ ಅಂಗೀಕರಿಸಲಾಗಿದೆ.
ಎಲ್ಲಾ ವೇದಿಕೆಯಲ್ಲೂ ರಾಜ್ಯಪಾಲರ ನಿರ್ಣಯದ ವಿರುದ್ಧ ಹೋರಾಡಲು ಕ್ಯಾಬಿನೆಟ್ ಮೀಟಿಂಗ್ನಲ್ಲಿ ತೀರ್ಮಾನಿಸಲಾಗಿದೆ. ಸಂಪುಟ ಸಭೆ ಮುಗೀತಿದ್ದಂತೆ ಹೊರಬಂದ ಸಿದ್ದರಾಮಯ್ಯ ತಾಳಿದ್ದು ಅಕ್ಷರಶಃ ಸಿಡಿಗುಂಡಿನ ಅವತಾರವನ್ನ. ರಾಜ್ಯಪಾಲರು ತೆಗೆದುಕೊಂಡಿರುವ ತೀರ್ಮಾನ ಕಾನೂನು ಬಾಹಿರವಾದದ್ದು. ಇಡೀ ಸಂಪುಟ ಇದನ್ನ ಖಂಡಿಸುತ್ತೆ ಎಂದ್ರು. ಕೇಂದ್ರ ಸರ್ಕಾರದ ಪ್ರತಿನಿಧಿಯಾಗಿ ಗವರ್ನರ್ ಕೆಲಸ ಮಾಡ್ತಿರೋದಾಗಿ ಆರೋಪದ ಕತ್ತಿವರಸೆಯಾಡಿದ್ರು. ರಾಜ್ಯಪಾಲರದ್ದು ಪೂರ್ಣ ರಾಜಕೀಯ ದುರುದ್ದೇಶದಿಂದ ತೀರ್ಮಾನ ಎಂದ ಸಿಎಂ ಸರ್ಕಾರವನ್ನ ಅಸ್ಥಿರಗೊಳಿಸಲು ಯತ್ನ ಅಂತಾ ಆರೋಪಿಸಿದ್ದಾರೆ.
ಅಷ್ಟೇ ಅಲ್ಲದೇ ಕಾನೂನು ಹೋರಾಟ ನಡೆಸೋದಾಗಿ ರಣಕಹಳೆ ಮೊಳಗಿಸಿದ್ದಾರೆ. ಇಷ್ಟಕ್ಕೆ ತಣ್ಣಗಾಗದ ಸಿದ್ದರಾಮಯ್ಯ, ಜನಾರ್ಧನ ರೆಡ್ಡಿ, ಕುಮಾರಸ್ವಾಮಿ ಹೆಸರು ಪ್ರಸ್ತಾಪಿಸಿ ನಾನೇ ಯಾಕೆ ಟಾರ್ಗೆಟ್ ಅಂತಾ ಪ್ರಶ್ನಿಸಿದ್ರು. ನಾನ್ಯಾಕೆ ರಾಜೀನಾಮೆ ನೀಡಬೇಕು, ತೆಗೆದುಕೊಂಡ ತೀರ್ಮಾನಕ್ಕೆ ರಾಜ್ಯಪಾಲರೇ ರಾಜೀನಾಮೆ ಕೊಡಬೇಕು ಅಂತಾ ಬೆಂಕಿಯುಂಡೆ ಉಗುಳಿದ್ರು. ಗವರ್ನರ್ ಸೆಂಟ್ರಲ್ ಗೌರ್ಮೆಂಟ್ನ ಪಪೆಟ್ ಎಂದ ಸಿಎಂ, ಸಮರ ಸಾರಿದ್ದಾರೆ.
ಮೂಡಾ ಪ್ರಕರಣದಲ್ಲಿ ತನಿಖೆ ನಡೆದಿಲ್ಲ. ಯಾವುದೇ ಪತ್ರ ನೀಡಿಲ್ಲ. ಯಾವುದೇ ದಾಖಲೆಗಳು ಇಲ್ಲ. ಆದರೂ ನನ್ನ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟಿದ್ದಾರೆ. ಸ್ವಂತ ಬುದ್ಧಿಯಿಂದ ರಾಜ್ಯಪಾಲರು ನಡೆದುಕೊಂಡಿಲ್ಲ. ಕುಮಾರಸ್ವಾಮಿ, ಅಶೋಕ್, ವಿಜಯೇಂದ್ರ ಹೇಳಿದಂತೆ ನಡೆದುಕೊಂಡಿದ್ದಾರೆ. ಜನಾರ್ಧನ ರೆಡ್ಡಿ ವಿರುದ್ಧವೂ ದೂರು ಇದ್ದರೂ ಪ್ರಾಸಿಕ್ಯೂಷನ್‌ಗೆ ಅನುಮತಿ ನೋಡಿಲ್ಲ. ಬಿಜೆಪಿಯವರ ವಿರುದ್ಧ ಗಂಭೀರ ಆರೋಪಗಳು ಇವೆ. ಆದರೂ ಅನುಮತಿ ನೀಡಿಲ್ಲ. ನನ್ನ ವಿಚಾರದಲ್ಲಿ ಆತುರಾತುರವಾಗಿ ಅನುಮತಿ ನೀಡಿದ್ದಾರೆ. ರಾಜ್ಯಪಾಲರು ರಾಜಕೀಯ ದುರುದ್ದೇಶದಿಂದ ಅನುಮತಿ ನೀಡಿದ್ದಾರೆ. ಇದು ರಾಜ್ಯದ ಏಳು ಕೋಟಿ ಜನರಿಗೆ ಗೊತ್ತಾಗಬೇಕು.
ಈಗಾಗಲೇ ತುರ್ತಾಗಿ ಸಚಿವ ಸಂಪುಟ ಸಭೆ ಕರೆಯಲಾಗಿತ್ತು. ಡಿ.ಕೆ ಶಿವಕುಮಾರ್, ಸಂಪುಟದ ಎಲ್ಲಾ ಸಹೋದ್ಯೋಗಿಗಳಿಗೆ ಧನ್ಯವಾದ ಸಲ್ಲಿಸುತ್ತೇನೆ. ಇಡೀ ಸಚಿವ ಸಂಪುಟ ನನ್ನ ಜೊತೆ ಇರುವುದಾಗಿ ಹೇಳಿದ್ದಾರೆ. ಪಕ್ಷ, ಸಚಿವರು, ಶಾಸಕರು ಬೆಂಬಲ ನೀಡಿದ್ದಾರೆ. ನನ್ನ ಜೊತೆ ಇರುತ್ತೇನೆಂದು ಹೈಕಮಾಂಡ್ ದೂರವಾಣಿ ಕರೆ ಮಾಡಿ ಹೇಳಿದೆ. ರಾಜ್ಯಸಭಾ, ಲೋಕಸಭಾ ಸಂಸದರಿಗೂ ಧನ್ಯವಾದ ಹೇಳುತ್ತೇನೆ. ರಾಜ್ಯಪಾಲರು ತೆಗೆದುಕೊಂಡಿರುವ ಕಾನೂನು ಬಾಹಿರ ತೀರ್ಮಾನವಾಗಿದೆ. ಇದು ಅಸಂವಿಧಾನಿಕ ತೀರ್ಮಾನವಾಗಿದೆ. ಇಡೀ ಸಚಿವ ಸಂಪುಟ ಇದನ್ನ ಖಂಡಿಸುತ್ತೆ. ಇದು ಯಾವುದೇ ಕಾರಣಕ್ಕೂ ಸಂವಿಧಾನದ ಬಲವಿಲ್ಲ ಎಂದು ತೀರ್ಮಾನ ಮಾಡಲಾಗಿದೆ. ರಾಜ್ಯಪಾಲರು ಸಂವಿಧಾನದ ಪ್ರತಿನಿಧಿಗಳಾಗಿ ಕೆಲಸ ಮಾಡಬೇಕು. ಅದನ್ನು ಬಿಟ್ಟು ಬಿಜೆಪಿ, ಕೇಂದ್ರ ಸರ್ಕಾರದ ಪ್ರತಿನಿಧಿಯಾಗಿ ಕೆಲಸ ಮಾಡಿದ್ದಾರೆ. ಈ ನಡವಳಿಕೆಯನ್ನು ಸಚಿವ ಸಂಪುಟ ಅತ್ಯಂತ ತೀವ್ರವಾಗಿ ಖಂಡಿಸಿದೆ.
ದೂರು ಕೊಟ್ಟ ದಿನವೇ ಶೋಕಾಸ್ ನೋಟಿಸ್ ನೀಡಿದ್ದಾರೆ. ರಾತ್ರಿ ಹತ್ತು ಗಂಟೆಗೆ ನನಗೆ ಶೋಕಾಸ್ ನೋಟಿಸ್ ರೆಡಿಯಾಗುತ್ತೆ. ಶಶಿಕಲಾ ಜೊಲ್ಲೆ ವಿರುದ್ಧವೂ ದೂರು ಇದೆ. ಅದನ್ನೂ ಪ್ರಾಸಿಕ್ಯೂಷನ್‌ಗೆ ಕೊಟ್ಟಿಲ್ಲ. ಲೋಕಾಯುಕ್ತರು ಕುಮಾರಸ್ವಾಮಿ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ಕೇಳಿದ್ದಾರೆ. ಅದಕ್ಕೂ ಅನುಮತಿ ನೀಡಿಲ್ಲ. ಪ್ರದೀಪ್ ಕುಮಾರ್ ಎಂಬುವರು ಜೆಡಿಎಸ್ ಕಾನೂನು ಘಟಕದ ಅಧ್ಯಕ್ಷ. ರಾಜ್ಯಪಾಲರ ವಿರುದ್ಧ ಕಾನೂನು ಹೋರಾಟ ಮಾಡುತ್ತೇವೆ. ಮುಂದಿನ ದಿನಗಳಲ್ಲಿ ಹೈಕಮಾಂಡ್ ಜೊತೆ ಚರ್ಚಿಸುತ್ತೇವೆ. ರಾಷ್ಟ್ರಪತಿಗಳಿಗೆ ರಾಜ್ಯಪಾಲರನ್ನ ವಾಪಸ್ ಕರೆಸಿಕೊಳ್ಳುವಂತೆ ಒತ್ತಾಯಿಸಲು ಚರ್ಚಿಸುತ್ತೇವೆ. ನಾನು ಯಾಕೆ ರಾಜೀನಾಮೆ ನೀಡಬೇಕು. ಏನು ಅಫೆನ್ಸ್ ಮಾಡಿದ್ದೇನೆ ಹೇಳಿ. ತೆಗೆದುಕೊಂಡ ತೀರ್ಮಾನಕ್ಕೆ ರಾಜ್ಯಪಾಲರೇ ರಾಜೀನಾಮೆ ನೀಡಬೇಕು.
ಸಿಎಂ ಸಿದ್ದರಾಮಯ್ಯ
ರಾಜಕೀಯ ಕದನ ಇದ್ದಿದ್ದೇ. ಆದ್ರೆ ಕಾನೂನಾತ್ಮಕವಾಗಿಯೂ ಹೋರಾಟದ ಕಹಳೆ ಮೊಳಗಿದ್ದು, ಸರ್ಕಾರ ಹಾಗೂ ಗವರ್ನರ್ ನಡುವಿನ ಸಂಘರ್ಷ ಮತ್ತಷ್ಟು ಉಗ್ರ ಸ್ವರೂಪ ಪಡೆದುಕೊಳ್ಳೋ ಎಲ್ಲಾ ಸಾಧ್ಯತೆಯೂ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ