newsfirstkannada.com

WATCH: ಟಗರು ಬಂತು ಟಗರು.. ವಿಧಾನಸೌಧಕ್ಕೆ ಉಡುಗೊರೆ ತಂದ ಸಿದ್ದರಾಮಯ್ಯ ಅಪ್ಪಟ ಅಭಿಮಾನಿ!

Share :

07-07-2023

    ಬಜೆಟ್ ಮಂಡಿಸುವ ಸಿದ್ದರಾಮಯ್ಯಗೆ ಮೈಸೂರಿನ ಟಗರು ಗಿಫ್ಟ್

    ಟಗರು ನೋಡಿದ ಸಿದ್ದರಾಮಯ್ಯ ಅಭಿಮಾನಿಗಳು ಫುಲ್‌ ಖುಷಿ

    ವಿಧಾನಸೌಧದಲ್ಲಿ ಗಮನ ಸೆಳೆದ ವರುಣಾದಿಂದ ಬಂದ ‘ಟಗರು’

ವಿಧಾನಸಭೆಯಲ್ಲಿ ಇಂದು ಸಿಎಂ ಸಿದ್ದರಾಮಯ್ಯ ತಮ್ಮ ಐತಿಹಾಸಿಕ ಹಾಗೂ ಬಹು ನಿರೀಕ್ಷಿತ ಬಜೆಟ್ ಮಂಡಿಸುತ್ತಿದ್ದಾರೆ. ಸದನದಲ್ಲಿ ಸಿಎಂ ಮಂಡಿಸುವ ಬಜೆಟ್ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಸಿದ್ದರಾಮಯ್ಯ ಬಜೆಟ್‌ ಮಂಡನೆಗೂ ಮುನ್ನ ವಿಧಾನಸೌಧಕ್ಕೆ ಬಂದ ಟಗರು ಎಲ್ಲರ ಗಮನ ಸೆಳೆದಿದೆ.

ಮೈಸೂರು ಜಿಲ್ಲೆ ವರುಣಾ ಕ್ಷೇತ್ರದ ಅಭಿಮಾನಿಯೊಬ್ಬರು ಸಿಎಂ ಸಿದ್ದರಾಮಯ್ಯ ಅವರಿಗೆ ಉಡುಗೊರೆಯಾಗಿ ಕೊಡಲು ಟಗರನ್ನೇ ವಿಧಾನಸೌಧಕ್ಕೆ ತಂದಿದ್ದಾರೆ. ವರುಣಾ ಕ್ಷೇತ್ರದ ಬಸವರಾಜ್ ಎಂಬ ಅಭಿಮಾನಿ ಸಿದ್ದರಾಮಯ್ಯಗೆ ಟಗರು ಉಡುಗೊರೆಯಾಗಿ ನೀಡುವುದಾಗಿ ಹೇಳಿದ್ದಾರೆ. ಬಸವರಾಜ್ ಅವರು ತಂದಿರುವ ಟಗರನ್ನು ನೋಡಿದ ಸಿದ್ದರಾಮಯ್ಯ ಅಭಿಮಾನಿಗಳು ಫುಲ್‌ ಖುಷಿಯಾಗಿದ್ದಾರೆ.

ಇನ್ನು, ಸಿಎಂ ಸಿದ್ದರಾಮಯ್ಯ ಅವರು 2023-24ನೇ ಸಾಲಿನ ಬಜೆಟ್‌ ಮಂಡಿಸುವ ಮುನ್ನ ರಾಜ್ಯದ ಜನರ ಆಶೀರ್ವಾದ ಕೋರಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ, ನನ್ನ ಪ್ರೀತಿಯ ಕನ್ನಡಿಗ ಬಂಧುಗಳೇ, ಜನತೆಯೇ ನನ್ನ ಪಾಲಿನ ಜನಾರ್ಧನರು. ಇನ್ನು ಕೆಲವೇ ಹೊತ್ತಿನಲ್ಲಿ ನನ್ನ 14ನೇ ಬಜೆಟ್ ಮಂಡಿಸಲಿದ್ದೇನೆ. ನನ್ನ ಮತ್ತು ನನ್ನ ಸರ್ಕಾರದ ಮೇಲೆ ನಿಮ್ಮೆಲ್ಲರ ಆಶೀರ್ವಾದ ಇರಲಿ.

ನನ್ನ ಹಿಂದಿನ ಎಲ್ಲ ಬಜೆಟ್ ಗಳಲ್ಲಿ ‘ಸರ್ವರಿಗೂ ಸಮಪಾಲು, ಸಮಬಾಳು’ ಎಂಬ ಮೂಲಮಂತ್ರದ ‘ಕರ್ನಾಟಕ ಮಾದರಿ’ಯ ಆಡಳಿತವನ್ನು ನೀಡುವ ಪ್ರಯತ್ನ ಮಾಡುತ್ತಾ ಬಂದಿದ್ದೆ. ಪ್ರಸ್ತುತ ಮಂಡಿಸುತ್ತಿರುವ ಆಯವ್ಯಯ ಪತ್ರದಲ್ಲಿ ಈ ಮಾದರಿಯನ್ನು ಇನ್ನಷ್ಟು ಆಳವಾಗಿಸುವ, ವಿಸ್ತಾರವಾಗಿಸುವ ಪ್ರಯತ್ನ ಮಾಡುತ್ತೇನೆ.

ರಾಜಕೀಯ ಪ್ರೇರಿತ ಟೀಕೆ-ಟಿಪ್ಪಣಿಗಳಿಗೆ ಕಿವಿಗೊಡಬೇಡಿ. ನುಡಿದಂತೆಯೇ ನಡೆದಿದ್ದೇನೆ, ಮುಂದೆಯೂ ನಡೆಯುತ್ತೇನೆ. ನಿಮ್ಮ ನಂಬಿಕೆ-ವಿಶ್ವಾಸಗಳನ್ನು ಹುಸಿಗೊಳಿಸುವುದಿಲ್ಲ. ಇದು ನಾನು ನೀಡುವ ಅತ್ಯುನ್ನತ ಗ್ಯಾರಂಟಿ ಎಂದು ಭರವಸೆ ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

WATCH: ಟಗರು ಬಂತು ಟಗರು.. ವಿಧಾನಸೌಧಕ್ಕೆ ಉಡುಗೊರೆ ತಂದ ಸಿದ್ದರಾಮಯ್ಯ ಅಪ್ಪಟ ಅಭಿಮಾನಿ!

https://newsfirstlive.com/wp-content/uploads/2023/07/Vidhanasoudha-Tagaru.jpg

Load More