ಪಶ್ಚಿಮ ಬಂಗಾಳದಂತೆ ಸಿಬಿಐ ಎಂಟ್ರಿಗೆ ಕಡಿವಾಣ ಹಾಕಿದ ರಾಜ್ಯ ಸರ್ಕಾರ
ಇನ್ಮುಂದೆ ರಾಜ್ಯ ಸರ್ಕಾರದ ಅನುಮತಿ ಇಲ್ಲದೆ ಪ್ರವೇಶಿಸುವಂತಿಲ್ಲ ಸಿಬಿಐ
ಇದರಿಂದ ಸಿದ್ದರಾಮಯ್ಯಗೆ ಸಿಬಿಐ ತನಿಖೆಯಿಂದ ರಕ್ಷಣೆ ಸಿಗುತ್ತಾ?
ಬೆಂಗಳೂರು: ಅಕ್ರಮವಾಗಿ ಮುಡಾ ಸೈಟು ಪಡೆದ ಕೇಸ್‌ನಲ್ಲಿ ಸಿಎಂ ಸಿದ್ದರಾಮಯ್ಯ ಅತಿ ದೊಡ್ಡ ಸಂಕಷ್ಟಕ್ಕೆ ಸಿಲುಕಿದ್ದಾರೆ. ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ವಿರುದ್ಧ FIR ದಾಖಲಿಸಲು ಸಿದ್ಧತೆ ನಡೆಸಿದ್ದಾರೆ. 40 ವರ್ಷದ ರಾಜಕೀಯ ಬದುಕಿನಲ್ಲಿ ಸಿದ್ದರಾಮಯ್ಯ ಮೊದಲ ಬಾರಿಗೆ ತನಿಖೆಯ ತೂಗುಗತ್ತಿಗೆ ಸಿಲುಕಿಕೊಂಡಿದ್ದಾರೆ. ಇದು ಸಿದ್ದರಾಮಯ್ಯ ಅವರ ರಾಜಕೀಯ ವಿರೋಧಿಗಳಿಗೆ ಬ್ರಹ್ಮಾಸ್ತ್ರವಾಗಿದ್ದು, ವಿರೋಧ ಪಕ್ಷ ಹಾಗೂ ಕಾಂಗ್ರೆಸ್ ನಾಯಕರೇ ರಾಜೀನಾಮೆ ನೀಡುವಂತೆ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯಗೆ ಬಿಗ್ ಶಾಕ್.. ಕಾಂಗ್ರೆಸ್ ನಾಯಕನಿಂದಲೇ ರಾಜೀನಾಮೆಗೆ ಒತ್ತಾಯ; ಹೇಳಿದ್ದೇನು?
ಮುಡಾ ಕೇಸ್ ತನಿಖೆಗೆ ಕೋರ್ಟ್ ಆದೇಶ ನೀಡಿದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಕಾನೂನು ತಜ್ಞರು, ಕಾಂಗ್ರೆಸ್ ಹೈಕಮಾಂಡ್ ಜೊತೆ ಮಹತ್ವದ ಚರ್ಚೆ ನಡೆಸಿದ್ದರು. ಇದಾದ ಬಳಿಕ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ ಕೈಗೊಂಡಿದ್ದಾರೆ. ರಾಜ್ಯ ಸರ್ಕಾರ ಸಿಬಿಐ ನೇರ ಪ್ರವೇಶಕ್ಕೆ ಬ್ರೇಕ್ ಹಾಕೋ ನಿರ್ಧಾರ ಕೈಗೊಳ್ಳಲಾಗಿದೆ.
ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ರಕ್ಷಿಸಲು ಸಚಿವ ಸಂಪುಟ ಸದಸ್ಯರು ತೀರ್ಮಾನಿಸಿದ್ದಾರೆ. ಭವಿಷ್ಯದಲ್ಲಿ ಈ ಪ್ರಕರಣಕ್ಕೆ ಸಿಬಿಐ ಕೂಡ ಎಂಟ್ರಿಯಾಗಬಹುದು. ಹೀಗಾಗಿ ಸಿಬಿಐ ಭೀತಿಯಿಂದ ಸಿಎಂ ಸಿದ್ದರಾಮಯ್ಯ ಅವರನ್ನು ರಕ್ಷಿಸಲು ನಿರ್ಣಯ ಕೈಗೊಳ್ಳಲಾಗಿದೆ.
ಇದನ್ನೂ ಓದಿ: ಲಾಯರ್ ಸಿದ್ದರಾಮಯ್ಯಗೆ ಡಬಲ್ ಶಾಕ್.. ಮುಂದಿನ ತನಿಖೆ ಹೇಗಿರುತ್ತೆ? ಸಿಎಂ ಪತ್ನಿಗೂ ಸಂಕಷ್ಟ?
ಸಚಿವ ಸಂಪುಟ ಸಭೆಯಲ್ಲಿ ರಾಜ್ಯ ಸರ್ಕಾರ ಸಿಬಿಐ ಮುಕ್ತ ಅನುಮತಿ ನೀಡಿರುವ ಅಧಿಸೂಚನೆಯನ್ನು ವಾಪಸ್ ಪಡೆಯಲು ನಿರ್ಧಾರ ಮಾಡಿದೆ. ಈ ಹಿಂದೆ ಭ್ರಷ್ಟಾಚಾರ ತಡೆ ಕಾಯ್ದೆಯಡಿ ನೇರವಾಗಿ ಸಿಬಿಐ ತನಿಖೆ ನಡೆಸಲು ದೆಹಲಿ ವಿಶೇಷ ಪೊಲೀಸ್ ಸ್ಥಾಪನೆ ಕಾಯಿದೆ 1946ರ ಅಡಿ ಸರ್ಕಾರ ಅವಕಾಶ ನೀಡಿತ್ತು. ಇದೀಗ ಸಿಬಿಐ ಮುಕ್ತ ತನಿಖೆಗೆ ಇದ್ದ ಕಾಯ್ದೆಯನ್ನು ವಾಪಸ್ ಪಡೆಯಲಾಗಿದೆ. ಆ ಮುಕ್ತ ಅವಕಾಶದ ಬಿಲ್ ವಾಪಸ್‌ಗೆ ನಿರ್ಧಾರ ಮಾಡಲಾಗಿದೆ.
ಸಿಬಿಐ ನೇರ ಪ್ರವೇಶಕ್ಕೆ ಬ್ರೇಕ್ ಯಾಕೆ?
ರಾಜ್ಯದಲ್ಲಿ ಮುಡಾ ಹಾಗೂ ವಾಲ್ಮೀಕಿ ಪ್ರಕರಣ ಸಖತ್ ಸದ್ದು ಮಾಡುತ್ತಿದೆ. ಕೇಂದ್ರ ಸರ್ಕಾರ ಯಾವುದೇ ಸಂದರ್ಭದಲ್ಲಿ ಸಿಬಿಐ ಅನ್ನ ದುರ್ಬಳಕೆ ಮಾಡಿಕೊಳ್ಳಬಹುದೆಂಬ ಭೀತಿ ಸರ್ಕಾರಕ್ಕಿದೆ. ಇದರ ಸುಳಿವು ಅರಿಯುತ್ತಿದ್ದಂತೆ ರಾಜ್ಯ ಸರ್ಕಾರ ಈ ಹೆಜ್ಜೆ ಇಟ್ಟಿದೆ. ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಸಿಬಿಐ ನೇರ ಪ್ರವೇಶಕ್ಕೆ ಬ್ರೇಕ್ ಹಾಕಲಾಗುತ್ತಿದೆ.
ಪಶ್ಚಿಮ ಬಂಗಾಳ, ತಮಿಳುನಾಡು ಸೇರಿದಂತೆ ಬಿಜೆಪಿಯೇತರ ಸರ್ಕಾರಗಳಿರುವ ರಾಜ್ಯಗಳಲ್ಲಿ ಸಿಬಿಐ ದುರ್ಬಳಕೆ ಆರೋಪ ಕೇಳಿ ಬಂದಿದೆ. ಸಿಎಂ, ಸಚಿವರು ವಿರುದ್ಧವೂ ಕೇಂದ್ರ ಸರ್ಕಾರ ಸಿಬಿಐ ಬಳಸಿಕೊಳ್ಳಲು ಮುಂದಾಗಿದೆ ಅನ್ನೋ ಆರೋಪಗಳಿವೆ. ಈ ಹಿನ್ನೆಲೆಯಲ್ಲಿ ಇಂದಿನ ಸಂಪುಟ ಸಭೆಯಲ್ಲಿ ಸಿಬಿಐ ಪ್ರವೇಶಕ್ಕೆ ನಿರ್ಬಂಧ ವಿಧಿಸಲು ತೀರ್ಮಾನ ಮಾಡಲಾಗಿದೆ.
ಈ ಮೂಲಕ ಕೇಂದ್ರ ಸರ್ಕಾರಕ್ಕೆ ಟಕ್ಕರ್ ನೀಡಿರುವ ರಾಜ್ಯ ಸರ್ಕಾರ, ಯಾವುದೇ ಪ್ರಕರಣದೊಂದಿಗೆ ನೇರ ಪ್ರವೇಶ ಮಾಡುವಂತಿಲ್ಲ. ಸರ್ಕಾರದ ಅನುಮತಿ ಇಲ್ಲದಂತೆ ಸಿಬಿಐ ಪ್ರವೇಶಿಸುವಂತಿಲ್ಲ. ರಾಜ್ಯ ಸರ್ಕಾರದ ಅನುಮತಿ ದೊರೆತರಷ್ಟೇ ಎಂಟ್ರಿಗೆ ಅವಕಾಶ ನೀಡುವ ನಿರ್ಧಾರ ಕೈಗೊಂಡಿದೆ.
ಸಿಎಂಗೆ ಸುರಕ್ಷಾ ಕವಚ?
ಸಿಬಿಐ ನೇರ ಪ್ರವೇಶಕ್ಕೆ ಬ್ರೇಕ್ ಹಾಕಿದ ರಾಜ್ಯ ಸರ್ಕಾರ
ಪಶ್ಚಿಮ ಬಂಗಾಳದಂತೆ ಸಿಬಿಐ ಎಂಟ್ರಿಗೆ ದಿಢೀರ್ ಕಡಿವಾಣ
ಇನ್ಮುಂದೆ ಸರ್ಕಾರದ ಅನುಮತಿ ಇಲ್ಲದೆ ಪ್ರವೇಶಿಸುವಂತಿಲ್ಲ ಸಿಬಿಐ
2005 ಸಿಬಿಐ ಮುಕ್ತ ತನಿಖೆಗೆ ಜನರಲ್ ಕನ್ಸೆಂಟ್ ನೀಡಲಾಗಿತ್ತು
ಸಿಬಿಐ ವ್ಯಾಪ್ತಿಗೆ ಒಳಪಡುವ ಕೇಸ್‌ನ ತನಿಖೆ ಮಾಡಬಹುದಿತ್ತು
ಸಿದ್ದು ವಿರುದ್ಧದ ಮುಡಾ ಕೇಸ್ ಬಗ್ಗೆ ಮುನ್ನೆಚ್ಚರಿಕಾ ತಂತ್ರ ಇದು?

ದೂರುದಾರರು ಸಿಬಿಐಗಾಗಿ ಹೈಕೋರ್ಟ್‌ಗೆ ಹೋದ್ರೆ ಆತಂಕ ತಪ್ಪಿದ್ದಲ್ಲ
ಹೈಕೋರ್ಟ್ ಸಿಬಿಐ ತನಿಖೆಗೆ ಆದೇಶಿಸಿದ್ರೆ ಕ್ಯಾಬಿನೆಟ್ ನಿರ್ಣಯ ಅನ್ವಯವಾಗಲ್ಲ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ