ಸಿಎಂ ಸಿದ್ದರಾಮಯ್ಯರ ಮೂಡ್ ಹಾಳು ಮಾಡಿದ್ದ ಪ್ರಕರಣ
ಮುಡಾ ತೂಗುಗತ್ತಿಯಿಂದ ಸಿಎಂ ವಾರದ ರಿಲೀಫ್ ಕಂಪ್ಲೀಟ್
ಮುಡಾ ಕೇಸ್; ಸಿಎಂ ಸಿದ್ದರಾಮಯ್ಯ ಅರ್ಜಿ ಮತ್ತೆ ವಿಚಾರಣೆ
ಮುಡಾ ಕೇಸಲ್ಲಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ರಾಜ್ಯಪಾಲರ ಕ್ರಮ ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಸಲ್ಲಿಸಿರೋ ರಿಟ್ ಅರ್ಜಿ ವಿಚಾರಣೆ ಇಂದು ಹೈಕೋರ್ಟ್‌ನಲ್ಲಿ ನಡೆಯಲಿದೆ.
ದೂರುದಾರ ಸ್ನೇಹಮಯಿ ಕೃಷ್ಣ ಪರ ವಕೀಲರು ಇಂದು ವಾದ ಮಾಡಿದ್ರೆ ಸರ್ಕಾರದ ಪರ ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ವಾದ ಮಂಡಿಸಲಿದ್ದಾರೆ. ಇದಲ್ಲದೇ, ಸೆಪ್ಟೆಂಬರ್ 12ರಂದು ಕೂಡ ವಾದ ಸರಣಿ ಮುಂದುವರೆಯಲಿದೆ. ಅಂದು ಸಿಎಂ ಪರ ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಲಿದ್ದಾರೆ.
ಇದನ್ನೂ ಓದಿ: ಆಪ್ತರಿಂದಲೇ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಕಂಟಕ; ನಾನು ಸಿಎಂ ಆಗಬೇಕು ಎಂದ MB ಪಾಟೀಲ್
ಇತ್ತ ತೆರೆಮರೆಯಲ್ಲಿ ಒಂದಷ್ಟು ಚಟುವಟಿಕೆಗಳು ಕಾಂಗ್ರೆಸ್ನಲ್ಲಿ ಯಾವುದೂ ಸರಿಯಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತಿದೆ. ಇದರ ನಡುವೆ ಬಹಿರಂಗವಾಗಿಯೇ ಕೆಲವರು ಮುಖ್ಯಮಂತ್ರಿ ಹುದ್ದೆಯ ಬಗ್ಗೆ ಚರ್ಚೆ ಮಾಡುತ್ತಿರುವುದು ರಾಜಕೀಯವಾಗಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಸಚಿವರಾದ ಎಂ.ಬಿ.ಪಾಟೀಲ್ ಮತ್ತು ಶಿವಾನಂದ ಪಾಟೀಲ್ ಅವರ ನಡುವೆ ಮುಖ್ಯಮಂತ್ರಿ ಹುದ್ದೆಯ ಬಗ್ಗೆ ಬಹಿರಂಗ ವಾಗ್ವಾದಗಳು ನಡೆದಿವೆ.
ಇದನ್ನೂ ಓದಿ: ‘ಚಾಮುಂಡಿ ಬೆಟ್ಟ ನಮ್ಮ ಆಸ್ತಿ’: ಸಿದ್ದರಾಮಯ್ಯ ನೇತೃತ್ವದ ಸಭೆ ವಿಚಾರದಲ್ಲಿ ಪ್ರಮೋದಾದೇವಿ ದೊಡ್ಡ ನಿರ್ಧಾರ, ಆಕ್ರೋಶ
ಒಂದ್ಕಡೆ ಮುಡಾ ತಲೆಬಿಸಿ, ಮತ್ತೊಂದ್ಕಡೆ ಆಪ್ತರ ಟೆನ್ಷನ್
ಸಿಎಂ ಮುಡಾ ಮುಳ್ಳಲ್ಲಿ ಸಿಲುಕಿ ಒದ್ದಾಡ್ತಿರುವಾಗ ಆಪ್ತರೇ ತಮ್ಮ ಕುರ್ಚಿ ಕಸಿದುಕೊಳ್ಳುವ ಬಗ್ಗೆ ಮಾತಾಡ್ತಿದ್ದಾರೆ. ಆಪ್ತರಲ್ಲೇ ಸಿಎಂ ಗಾದಿ ಬಗ್ಗೆ ಕಿತ್ತಾಟಗಳು ಜೋರಾಗಿವೆ. ಮುಂದಿನ ಸಿಎಂ ನಾನೇ ಎಂದು ಟವೆಲ್ ಹಾಕಿ ಕೂತಿದ್ದಾರೆ. ಅದರಲ್ಲೂ ಬಹಿರಂಗವಾಗಿಯೇ ಕೆಲವರು ಮುಖ್ಯಮಂತ್ರಿ ಹುದ್ದೆ ಬಗ್ಗೆ ಚರ್ಚೆ ಮಾಡ್ತಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ. ದೇಶಪಾಂಡೆ ಬೆನ್ನಲ್ಲೇ ಸಚಿವ ಎಂ.ಬಿ. ಪಾಟೀಲ್ ಮುಂದೊಂದಿನ ಸಿಎಂ ಆಗ್ತೀನಿ ಎಂದಿದ್ದಾರೆ.
ಮುಡಾ ಹಗರಣ ಸಂಬಂಧ ಇಂದು ಮಧ್ಯಾಹ್ನ 2:30ಕ್ಕೆ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯಲಿದೆ. ಸದ್ಯ ಇದು ಸಿಎಂ ತಲೆಬಿಸಿಗೆ ಕಾರಣವಾಗಿದೆ. ಸೆಪ್ಟೆಂಬರ್ 12ರಂದು ಅಭಿಷೇಕ್ ಮನು ಸಿಂಘ್ವಿ ಕೂಡ ವಾದ ಮಂಡಿಸಲಿದ್ದಾರೆ. ಈ ಎಲ್ಲಾ ವಾದ-ಪ್ರತಿವಾದದ ಮೇಲೆ ಸಿದ್ದು ಕುರ್ಚಿ ಹಾಗೂ ಅವರ ಭವಿಷ್ಯ ನಿಂತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ