newsfirstkannada.com

×

ಸಿಎಂ ಸಿದ್ದರಾಮಯ್ಯಗೆ ಬಿಗ್ ಶಾಕ್.. ಕಾಂಗ್ರೆಸ್ ನಾಯಕನಿಂದಲೇ ರಾಜೀನಾಮೆಗೆ ಒತ್ತಾಯ; ಹೇಳಿದ್ದೇನು?

Share :

Published September 26, 2024 at 2:19pm

    ಆರೋಪ ಮುಕ್ತರಾದ ಬಳಿಕ ಮತ್ತೆ ಸಿದ್ದರಾಮಯ್ಯ ಸಿಎಂ ಆಗಲಿ

    ಮಾಜಿ ಸ್ಪೀಕರ್, ಕಾಂಗ್ರೆಸ್ ಶಿಸ್ತು ಸಮಿತಿ ಸದಸ್ಯ ಅಚ್ಚರಿಯ ಹೇಳಿಕೆ

    ರಾಜೀನಾಮೆ ಕೊಟ್ಟು ತನಿಖೆ ಎದುರಿಸಿದರೆ ಅವರ ಗೌರವ ಹೆಚ್ಚಾಗುತ್ತೆ

ಬೆಂಗಳೂರು: ಅಕ್ರಮ ಮುಡಾ ಸೈಟು ಪಡೆದ ಕೇಸ್‌ನಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ತನಿಖೆ ನಡೆಯೋದು ಪಕ್ಕಾ ಆಗಿದೆ. FIR ದಾಖಲಿಸಲು ಕೋರ್ಟ್‌ ಆದೇಶಿಸಿದ ಬಳಿಕ ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನ ಸೃಷ್ಟಿಯಾಗಿದೆ. ಬಿಜೆಪಿ ನಾಯಕರು ಆರೋಪ ಎದುರಿಸುತ್ತಿರುವ ಸಿದ್ದರಾಮಯ್ಯ ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಹೋರಾಟ ಮಾಡುತ್ತಿದ್ದಾರೆ.

ಕಾನೂನು ಹೋರಾಟ ಹಾಗೂ ಬಿಜೆಪಿ ನಾಯಕರ ವಾಗ್ಬಾಣ ರಾಜ್ಯ ಸರ್ಕಾರ ಹಾಗೂ ಕಾಂಗ್ರೆಸ್ ನಾಯಕರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಈ ರಾಜಕೀಯ ಬೆಳವಣಿಗೆಯ ಮಧ್ಯೆ ಮಾಜಿ ಸ್ಪೀಕರ್, ಕಾಂಗ್ರೆಸ್ ಶಿಸ್ತು ಸಮಿತಿ ಸದಸ್ಯ ಕೆ.ಬಿ ಕೋಳಿವಾಡ ಅವರು ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಸ್ವಪಕ್ಷಿಯ ನಾಯಕನೇ ಸಿದ್ದರಾಮಯ್ಯ ರಾಜೀನಾಮೆಯ ಮಾತನಾಡಿರೋದು ಕಾಂಗ್ರೆಸ್ ನಾಯಕರಿಗೆ ಇರಿಸು ಮುರಿಸು ಉಂಟು ಮಾಡಿದೆ.

ಇದನ್ನೂ ಓದಿ: ಲಾಯರ್‌ ಸಿದ್ದರಾಮಯ್ಯಗೆ ಡಬಲ್ ಶಾಕ್.. ಮುಂದಿನ ತನಿಖೆ ಹೇಗಿರುತ್ತೆ? ಸಿಎಂ ಪತ್ನಿಗೂ ಸಂಕಷ್ಟ? 

ನ್ಯೂಸ್ ಫಸ್ಟ್‌ ಜೊತೆ ಮಾತನಾಡಿರುವ ಮಾಜಿ ಸ್ಪೀಕರ್ ಕೆ.ಬಿ ಕೋಳಿವಾಡ, ಸಿದ್ದರಾಮಯ್ಯ ಅವರು ಸ್ವಯಂಪ್ರೇರಿತವಾಗಿ ರಾಜೀನಾಮೆ ನೀಡಬೇಕು. ಕೋರ್ಟ್ ತನಿಖೆಗೆ ಆದೇಶ ನೀಡಿರುವ ಕಾರಣ ರಾಜೀನಾಮೆ ನೀಡಬೇಕು. ಆರೋಪ ಮುಕ್ತರಾದ ಬಳಿಕ ಮತ್ತೆ ಸಿಎಂ ಆಗಲಿ. ಅಲ್ಲಿಯವರೆಗೂ ರಾಜೀನಾಮೆ ನೀಡಬೇಕು. ಸಿದ್ದರಾಮಯ್ಯ ಅವರು ರಾಜೀನಾಮೆ ಕೊಟ್ಟು ತನಿಖೆ ಎದುರಿಸಿದರೆ ಅವರ ಗೌರವ ಮತ್ತಷ್ಟು ಹೆಚ್ಚಾಗುತ್ತೆ. ಸಿದ್ದರಾಮಯ್ಯ ಅವರು ನೂರಕ್ಕೆ ನೂರರಷ್ಟು ನಿಷ್ಕಳಂಕರಾಗಿ ಬರ್ತಾರೆ. ಅವರಿಗೆ ಶಾಸಕರು, ಹೈಕಮಾಂಡ್ ಬೆಂಬಲವೂ ಇದೆ. ಹೀಗಾಗಿ ಸಿದ್ದರಾಮಯ್ಯ ಅವರು ಮತ್ತೆ ಸಿಎಂ ಆಗೇ ಆಗುತ್ತಾರೆ ಎಂದಿದ್ದಾರೆ.

ಇನ್ನು ಮಾತು ಮುಂದುವರಿಸಿದ ಕೋಳಿವಾಡ ಅವರು ಬಿಜೆಪಿ ಷಡ್ಯಂತ್ರದಿಂದ ಇದೆಲ್ಲಾ ಆಗಿದೆ. ಸಿಎಂ ಸಿದ್ದರಾಯಮಯ್ ಪ್ರಶ್ನಾತೀತ ನಾಯಕರ ಇದರಲ್ಲಿ ಎರಡು ಮಾತಿಲ್ಲ. ಕಳೆದ 40 ವರ್ಷದಿಂದ ಒಂದೂ ಕಪ್ಪು ಚುಕ್ಕೆ ಇಲ್ಲದಂತೆ ಆಡಳಿತ ನಡೆಸಿದ್ದಾರೆ. ಅವರ ಮೇಲೆ ಯಾವುದೇ ಆಪಾದನೆಗಳು ಇಲ್ಲ. ಬಿಜೆಪಿ, ಜೆಡಿಎಸ್ ಕುತಂತ್ರ ನಡೆಸಿ ಆಪಾದನೆ ಮಾಡಿವೆ ಎಂದಿದ್ದಾರೆ.

ಸಿದ್ದರಾಮಯ್ಯ ಅವರು ನೂರಕ್ಕೆ ನೂರರಷ್ಟು ಎಲ್ಲಿಯೂ ತಪ್ಪು ಮಾಡಿಲ್ಲ. ಯಾವುದೇ ಆಮಿಷ, ಸಹಿ‌ ಕೂಡ ಇಲ್ಲ. ಆದರೂ ಸಿಎಂ ವಿರುದ್ಧ ಹೈಕೋರ್ಟ್, ಜನಪ್ರತಿನಿಧಿಗಳ ಕೋರ್ಟ್‌ನಲ್ಲಿ ತೀರ್ಪು ಬಂದಿದೆ. ಕೋರ್ಟ್ ತೀರ್ಪು ಇರುವ ಕಾರಣ ಸಿಎಂ ರಾಜೀನಾಮೆ ನೀಡಬೇಕು. ತನಿಖೆ ನಡೆದು ನಿಷ್ಕಳಂಕರಾದ ಬಳಿಕ ಅವರೇ ಮತ್ತೆ ಸಿಎಂ ಆಗಲಿ.

ಇದನ್ನೂ ಓದಿ: ಮುಡಾ ಕೇಸ್​; ಸಿಎಂ ಸಿದ್ದರಾಮಯ್ಯ ವಿರುದ್ಧ ಯಾವ್ಯಾವ IPC ಸೆಕ್ಷನ್​ ಏನ್ ಹೇಳುತ್ತೆ? 

ದೇಶದಲ್ಲಿ ಬೇರೆ ಬೇರೆ ರಾಜ್ಯಗಳ ಚುನಾವಣೆ ನಡೆಯುತ್ತಿದೆ. ಅಲ್ಲಿ ಪಕ್ಷಕ್ಕೆ ಮುಜುಗರ ಆಗುತ್ತಿದೆ. ಹಾಗಾಗಿ ರಾಜೀನಾಮೆ ನೀಡಬೇಕು. ಇದು ಪಕ್ಷದ ಅಭಿಪ್ರಾಯ ಅಲ್ಲ, ನನ್ನ ವೈಯಕ್ತಿಕ ಅಭಿಪ್ರಾಯ. ಪಕ್ಷದ ಹಿತದೃಷ್ಟಿಯಿಂದ ಹೇಳುತ್ತಿದ್ದೇನೆ. ಹೈಕಮಾಂಡ್ ನೋಟಿಸ್ ನೀಡಿದರೂ ಉತ್ತರ ನೀಡುತ್ತೇನೆ. ನಾನೇನು ಪಕ್ಷದ ವಿರುದ್ಧ ಮಾತನ್ನಾಡಿಲ್ಲ. ನನ್ನ ಅಭಿಪ್ರಾಯ ನಾನು ಹೇಳಿದ್ದೇನೆ. ಪಕ್ಷದ ಹಿತದೃಷ್ಟಿಯಿಂದ ಸಿಎಂ ರಾಜೀನಾಮೆ ನೀಡಬೇಕು ಎಂದು ನ್ಯೂಸ್ ಫಸ್ಟ್‌ಗೆ ಕೆ.ಬಿ ಕೋಳಿವಾಡ ಹೇಳಿಕೆ ನೀಡಿದ್ದಾರೆ.

ಕೋಳಿವಾಡಗೆ ಸಿಎಂ ಉತ್ತರವೇನು?
ಮಾಜಿ ಸ್ಪೀಕರ್ ಕೆ.ಬಿ ಕೋಳಿವಾಡ ಅವರ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ಕೂಡ ಉತ್ತರಿಸಿದ್ದಾರೆ. ಅವರ ಅಭಿಪ್ರಾಯ ಹೇಳಿದ್ದಾರೆ. ಆದರೆ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ. ಗೋದ್ರಾ ಗಲಭೆಯಲ್ಲಿ ನರೇಂದ್ರ ಮೋದಿ ರಾಜೀನಾಮೆ ಕೊಟ್ಟಿದ್ರಾ. ಕೇಂದ್ರ ಸಚಿವ ಕುಮಾರಸ್ವಾಮಿ ಅವರು ನರೇಂದ್ರ ಮೋದಿ ಸರ್ಕಾರದಲ್ಲಿ ಇದ್ದಾರಲ್ಲಾ. ಜಾಮೀನಿನ ಮೇಲೆ ಇರೋ ಹೆಚ್‌.ಡಿ ಕುಮಾರಸ್ವಾಮಿ ಅವರು ಅವರು ರಾಜೀನಾಮೆ ಕೊಟ್ಟಿದ್ದಾರಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಸಿಎಂ ಸಿದ್ದರಾಮಯ್ಯಗೆ ಬಿಗ್ ಶಾಕ್.. ಕಾಂಗ್ರೆಸ್ ನಾಯಕನಿಂದಲೇ ರಾಜೀನಾಮೆಗೆ ಒತ್ತಾಯ; ಹೇಳಿದ್ದೇನು?

https://newsfirstlive.com/wp-content/uploads/2024/09/Cm-Siddaramaiah-KB-Koliwada.jpg

Load More