ಮುಡಾದಿಂದ ಪಡೆದಿದ್ದ 14 ಸೈಟ್ ವಾಪಸ್ ಮಾಡಿದ ಸಿಎಂ ಪತ್ನಿ
ಪತ್ರ ಬರೆದ 24 ಗಂಟೆಗಳಲ್ಲಿ ಸೈಟ್‌ಗಳು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ
ತನಿಖೆ ನಡೆಯುತ್ತಿದ್ದರೂ ಸೈಟ್ ವಾಪಸ್ ಮಾಡಲು ಅವಕಾಶ ಇದ್ಯಾ?
ಮೈಸೂರು: ಮುಡಾ ಕೇಸ್‌ನಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಅತಿದೊಡ್ಡ ಸಂಕಷ್ಟ ಎದುರಾಗಿದೆ. ರಾಜಕೀಯದ ಆರೋಪ, ಪ್ರತ್ಯಾರೋಪಗಳ ಮಧ್ಯೆ ಸಿಎಂ ಪತ್ನಿ ಪಾರ್ವತಮ್ಮನವರು ಮುಡಾದಿಂದ ತಾವು ಪಡೆದಿದ್ದ 14 ಸೈಟ್‌ಗಳನ್ನು ವಾಪಸ್ ಮಾಡಿದ್ದಾರೆ. ಸಿಎಂ ಪತ್ನಿ ಪತ್ರ ಬರೆದ 24 ಗಂಟೆಗಳ ಒಳಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಮುಡಾ ಸೈಟ್‌ಗಳನ್ನು ವಾಪಸ್ ಪಡೆದಿದೆ.
ಮುಡಾ ಸೈಟ್‌ಗಳನ್ನು ವಾಪಸ್ ಪಡೆಯಲು ತೀರ್ಮಾನ ಮಾಡಿದ್ದ ಸಿಎಂ ಪತ್ನಿ ಖುದ್ದು ಮೈಸೂರು ನೋಂದಣಿ ಕಚೇರಿಗೆ ಹೋಗಿದ್ದರು. ಮೈಸೂರು ನೋಂದಣಿ ಕಚೇರಿಗೆ ಹೋಗಿ ಸಿಎಂ ಪತ್ನಿ ಸೈಟ್ ರದ್ದು ಮಾಡುವಂತೆ ಕೇಳಿದ್ದಾರೆ. ಮುಡಾ ಸೈಟ್‌ಗಳನ್ನು ಸಿಎಂ ಪತ್ನಿ ಹಿಂತಿರುಗಿಸಿದ ಹಿನ್ನೆಲೆಯಲ್ಲಿ ಪ್ರಾಧಿಕಾರ 14 ಸೈಟ್ ಖಾತೆ ರದ್ದು ಮಾಡಿದೆ.
ಸಿಎಂ ಸಿದ್ದರಾಮಯ್ಯ ಪತ್ನಿ ಮುಡಾ ಸೈಟ್‌ಗಳನ್ನು ವಾಪಸ್ ಪಡೆದ ಹಿನ್ನೆಲೆಯಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಆಯುಕ್ತ ರಘುನಂದನ್ ಅವರು ನ್ಯೂಸ್ ಫಸ್ಟ್‌ಗೆ ಮಾಹಿತಿ ನೀಡಿದ್ದಾರೆ. ಪಾರ್ವತಮ್ಮ ಸಿದ್ದರಾಮಯ್ಯ ಅವರು ಸ್ವಇಚ್ಛೆಯಿಂದ ಸೈಟ್ ವಾಪಾಸ್ ಕೊಟ್ಟಿದ್ದಾರೆ. ಕಾನೂನು ಪರಿಗಣಿಸಿ ನಾವು ಪಾರ್ವತಮ್ಮ ಅವರ ಹೆಸರಿನಲ್ಲಿ ಇದ್ದ 14 ಸೈಟ್‌ಗಳ ಸೇಲ್ ಡೀಡ್ ರದ್ದು ಮಾಡಿದ್ದೇವೆ ಎಂದಿದ್ದಾರೆ.
ಇದನ್ನೂ ಓದಿ: ಮನನೊಂದು ಸೈಟ್ ವಾಪಸ್ ಕೊಟ್ಟಿದ್ದು; ನನ್ನ ಹೆಂಡತಿ ಮಾಡಿದ್ದು ತಪ್ಪಲ್ಲ.. ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?
ಸಿಎಂ ಪತ್ನಿ ಅವರ ಹೆಸರಲ್ಲಿದ್ದ ಆ 14 ನಿವೇಶನ ಈಗ ಮುಡಾ ವ್ಯಾಪ್ತಿಗೆ ಬಂದಿವೆ. ಈ ಸೈಟ್‌ಗಳನ್ನು ಬೇರೆಯವರಿಗೆ ಹಂಚಬಹುದಾ ಅಥವಾ ತನಿಖೆ ಮುಗಿಯುವವರೆಗೂ ಅದನ್ನು ಹಂಚಬಾರದಾ ಎಂಬ ಬಗ್ಗೆ ಕಾನೂನು ತಜ್ಞರ ಅಭಿಪ್ರಾಯ ಪಡೆಯುತ್ತೇವೆ. ಪಾರ್ವತಮ್ಮ ಅವರ ಸೈಟ್‌ಗಳು ತಮ್ಮ ವಶಕ್ಕೆ ಪಡೆದ ಬಗ್ಗೆ ತನಿಖಾ ಸಂಸ್ಥೆಗಳಿಗೆ ಮಾಹಿತಿ ಕೊಡುತ್ತೇವೆ. ತನಿಖೆ ನಡೆಯುತ್ತಿದ್ದರೂ ಸಂಬಂಧಿತರು ಸೈಟ್ ವಾಪಸ್ ಕೊಟ್ಟರೆ ವಾಪಸ್ ಪಡೆಯಬಹುದು. ಇದಕ್ಕೆ ಕಾನೂನಿನಲ್ಲಿ ಅವಕಾಶ ಇದೆ ಎಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಆಯುಕ್ತ ರಘುನಂದನ್ ಸ್ಪಷ್ಟಪಡಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ