newsfirstkannada.com

ಸಿದ್ದರಾಮಯ್ಯ ಕರಾವಳಿ ಪ್ರವಾಸದ ಹಿಂದಿತ್ತಾ ಸ್ಟ್ರಾಟಜಿ.. ಮುಖ್ಯಮಂತ್ರಿ ಕೊಟ್ಟ ಸಂದೇಶ ಏನು..

Share :

02-08-2023

    ಚಂಡಮಾರುತ, ಮಳೆಯಿಂದ ಆದ ಹಾನಿ ಪರಿಶೀಲನೆ

    ಧರ್ಮಸ್ಥಳದ ಸೌಜನ್ಯ ಪ್ರಕರಣ ಮರು ತನಿಖೆಗೆ ಮನವಿ

    ಉಡುಪಿಯ ವಿಡಿಯೋ ಕೇಸ್​​ ಬಗ್ಗೆ ಸಿಎಂ ಹೇಳಿದ್ದೇನು..?

ಸಿದ್ದರಾಮಯ್ಯ ಸಿಎಂ ಆದ ಬಳಿಕ ಮೊದಲ ಬಾರಿಗೆ ಕರಾವಳಿ ಜಿಲ್ಲೆಗಳಿಗೆ ಭೇಟಿ ನೀಡಿದ್ದಾರೆ. ಸಿಎಂ ಕರಾವಳಿ ವಿಸಿಟ್ ಹಿಂದೆ ಅದೊಂದು ಸ್ಟ್ರಾಟಜಿ ಇದೆ ಎನ್ನಲಾಗ್ತಿದೆ. ವಿಡಿಯೋ ಪ್ರಕರಣ ಬಳಿಕ ವಿದ್ಯಾರ್ಥಿನಿಯರ ಜೊತೆ ನಾವಿದ್ದೇವೆ ಅನ್ನೋ ಸಂದೇಶ ಸಾರಿದ್ದಾರೆ.

ಜೊತೆಗೆ ಅಭಿವೃದ್ಧಿಯ ಮಂತ್ರಗಳನ್ನು ಜಪಿಸಿದ್ದಾರೆ. ಮಾತ್ರವಲ್ಲ ಕಾನೂನು ಕೈಗೆತ್ತಿಕೊಳ್ಳುವವರಿಗೆ ಕಠಿಣ ಎಚ್ಚರಿಕೆಯನ್ನೂ ನೀಡಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದು 3 ತಿಂಗಳಾಗ್ತಿದೆ. ಸದ್ಯ ವರುಣ ಕೊಂಚ ಬಿಡುವು ನೀಡಿದ್ದಾನೆ. ಸಿಎಂ ಸಿದ್ದರಾಮಯ್ಯ ಸರ್ಕಾರದ ಕಾರ್ಯವೈಖರಿಗಳ ಬಗ್ಗೆ ಅವಲೋಕನಕ್ಕೆ ಮುಂದಾಗಿದ್ದಾರೆ. ನಿನ್ನೆ ದಕ್ಷಿಣ ಕನ್ನಡ, ಹಾಗೂ ಉಡುಪಿ ಜಿಲ್ಲೆಯಲ್ಲಿ ಪ್ರವಾಸ ಮಾಡಿದ್ದಾರೆ.

ಕರಾವಳಿ ಜಿಲ್ಲೆಗಳಲ್ಲಿ ಸಿಎಂ ಸಿದ್ದರಾಮಯ್ಯ ರೌಂಡ್ಸ್
ಚಂಡಮಾರುತ, ಮಳೆಯಿಂದ ಆದ ಹಾನಿ ಪರಿಶೀಲನೆ!

ಸಿಎಂ ಸಿದ್ದರಾಮಯ್ಯ ಕರಾವಳಿ ಭಾಗದಲ್ಲಿ ರೌಂಡ್ಸ್ ಹಾಕಿದ್ದಾರೆ. ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಿಎಂಗೆ ಕಾಂಗ್ರೆಸ್ ಮುಖಂಡರು ಅದ್ಧೂರಿ ಸ್ವಾಗತ ಕೋರಿದ್ರು. ಇದೇ ವೇಳೆ ಸಿಎಂಗೆ ಹಾರ ಹಾಕಲು ನಾರಿಮಣಿಯರು ನಾ ಮುಂದು ತಾ ಮುಂದು ಅಂತ ಮುಗಿಬಿದ್ದಿದ್ದರು. ಕಾಂಗ್ರೆಸ್ ಮಹಿಳಾ ನಾಯಕಿಯರ ಅಭಿಮಾನಕ್ಕೆ ಸಿಎಂ ಸಿದ್ದರಾಮಯ್ಯ ಆಶ್ಚರ್ಯಚಕಿತರಾದರು.

ಧರ್ಮಸ್ಥಳದ ಸೌಜನ್ಯ ಪ್ರಕರಣ ಮರುತನಿಖೆಗೆ ಮನವಿ
ಸಿಬಿಐ ಕೋರ್ಟ್ ತೀರ್ಪು ಓದಿ ನಿರ್ಧಾರ ಸಿಎಂ ಸಿದ್ದು

ರಾಜ್ಯಾದ್ಯಂತ ತೀವ್ರ ಸಂಚಲನ ಸೃಷ್ಠಿಸಿದ್ದ ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರು ತನಿಖೆ ಆಗಬೇಕೆಂಬ ಕೂಗು ಹೆಚ್ಚಾಗಿದೆ. ಕೆಲ ದಿನಗಳ ಹಿಂದೆ ಸಿಎಂ ಭೇಟಿ ಮಾಡಿದ್ದ ಸೌಜನ್ಯ ಪೋಷಕರು ಮರು ತನಿಖೆಗೆ ಆಗ್ರಹಿಸಿದ್ದರು. ಕಾನೂನು ಪ್ರಕಾರ ನಿರ್ಧಾರ ಕೈಗೊಳ್ತೀವಿ ಅಂತ ಇದೇ ವೇಳೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.

ಉಡುಪಿ ಸರ್ಕಾರಿ ವಿದ್ಯಾರ್ಥಿನಿಲಯಕ್ಕೆ ಸಿಎಂ ಭೇಟಿ
ವಿದ್ಯಾರ್ಥಿನಿಯರ ಜೊತೆ ಚರ್ಚೆ, ಫೋಟೋಗೆ ಪೋಸ್!

ಮಂಗಳೂರು ಬಳಿಕ ಉಡುಪಿಗೆ ತೆರಳಿದ ಸಿಎಂ ಸಿದ್ದರಾಮಯ್ಯ ಬನ್ನಂಜೆಯಲ್ಲಿರುವ ಸರ್ಕಾರಿ ವಿದ್ಯಾರ್ಥಿನಿಯರ ಹಾಸ್ಟೆಲ್​​ಗೆ ಭೇಟಿ ನೀಡಿ ಮೇಲ್ವಿಚಾರಕರು ಹಾಗೂ ಬಾಲಕಿಯರ ಜೊತೆ ಚರ್ಚೆ ನಡೆಸಿದ್ದಾರೆ. ಗೃಹಲಕ್ಷ್ಮಿ ಹಣ ನಿಮಗೆ ಬರಲ್ಲ, ನಿಮ್ಮ ಅಮ್ಮನಿಗೆ ಬರುತ್ತೆ ಅಂತ ಹಾಸ್ಯ ಚಟಾಕಿ ಹಾರಿಸಿದ್ದರು. ವಿದ್ಯಾರ್ಥಿನಿಯರಿಗೆ ಶುಭ ಕೋರಿ ಫೋಟೋ ಕೂಡ ತೆಗೆಸಿಕೊಂಡರು. ಸಿಎಂಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸಾಥ್ ಕೊಟ್ಟರು.

ಉಡುಪಿ ಪ್ರಕರಣ ಕುರಿತು ಕೇಸ್​​ ದಾಖಲಾಗಿದೆ. ಇನ್​ಸ್ಟೇಕೇಶನ್ ರಿಪೋಟ್​ ಬಂದ ಕೂಡಲೇ ಕೋರ್ಟ್​ಗೆ ಕಳುಹಿಸಲಾಗುತ್ತದೆ. ಅಧಿಕಾರಿಗಳು ಜನರ ಪರ ಕೆಲಸ ಮಾಡಬೇಕು. ಜೊತೆಗೆ ಮಳೆಯಿಂದ ಆಗಿರುವ ಹಾನಿಗೆ ಪರಿಹಾರ ಕಾರ್ಯ ಸಮರ್ಪಕವಾಗಿ ಆಗಬೇಕು– ಸಿಎಂ ಸಿದ್ದರಾಮಯ್ಯ

ಉಡುಪಿಯ ಪಡುಬಿದ್ರೆ ಬೀಚ್​​ಗೆ ಸಿಎಂ ಸಿದ್ದು ವಿಸಿಟ್!

ಪಡುಬಿದ್ರೆ ಸಮುದ್ರ ತೀರಕ್ಕೆ ಭೇಟಿ ನೀಡಿದ ಸಿಎಂ ಸಿದ್ದರಾಮಯ್ಯ ಬಿಪರ್​ಜಾಯ್ ಚಂಡಮಾರುತ ಹಾಗೂ ಮಳೆಯಿಂದ ಆಗಿರುವ ಹಾನಿ ವೀಕ್ಷಿಸಿದ್ದರು. ಬಳಿಕ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಮಳೆಹಾನಿ ವೀಕ್ಷಣೆ ಬಳಿಕ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಿಎಂ ಸಿದ್ದು, ಅಧಿಕಾರಿಗಳು ಜನರ ಪರ ಕೆಲಸ ಮಾಡಬೇಕು. ಜೊತೆಗೆ ಮಳೆಯಿಂದ ಆಗಿರುವ ಹಾನಿಗೆ ಪರಿಹಾರ ಕಾರ್ಯ ಸಮರ್ಪಕವಾಗಿ ಆಗಬೇಕು ಅಂತ ಸೂಚನೆ ನೀಡಿದ್ದಾರೆ.

ಒಟ್ಟಿನಲ್ಲಿ ವಿಡಿಯೋ ಪ್ರಕರಣ ಸದ್ದು ಮಾಡ್ತಿರುವ ಹೊತ್ತಲ್ಲೇ ಸಿಎಂ ಸಿದ್ದರಾಮಯ್ಯ ಉಡುಪಿಗೆ ಭೇಟಿ ನೀಡಿದ್ದಾರೆ. ಇದೇ ವಿಚಾರ ಹಿಡಿದು ಸರ್ಕಾರದ ವಿರುದ್ಧ ಹೋರಾಟ ಮಾಡ್ತಿರುವ ಬಿಜೆಪಿಗೆ ತಿರುಗೇಟು ನೀಡುವ ಜೊತೆಗೆ ಕೌಂಟರ್ ಕೂಡ ಕೊಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಿದ್ದರಾಮಯ್ಯ ಕರಾವಳಿ ಪ್ರವಾಸದ ಹಿಂದಿತ್ತಾ ಸ್ಟ್ರಾಟಜಿ.. ಮುಖ್ಯಮಂತ್ರಿ ಕೊಟ್ಟ ಸಂದೇಶ ಏನು..

https://newsfirstlive.com/wp-content/uploads/2023/08/siddu-3.jpg

Load More