ಇಂದು ದಾಖಲೆಯ ಬಜೆಟ್ ಮಂಡಿಸಲಿರುವ ಸಿದ್ದು
ಸಿದ್ದರಾಮಯ್ಯ ಬಜೆಟ್ ಮೇಲೆ ನೂರಾರು ನಿರೀಕ್ಷೆ
ಸಿದ್ದು ಲೆಕ್ಕಾಚಾರ.. ಯಾರಿಗೆ ಸಿಹಿ? ಯಾರಿಗೆ ಕಹಿ?
ಬೆಂಗಳೂರು: ಒಂದು ಕಡೆ ಗ್ಯಾರಂಟಿ ಯೋಜನೆಗಳು, ಮತ್ತೊಂದೆಡೆ ಸಾಲದ ಹೊರೆ..! ಜನಪರ ಬಜೆಟ್ ಜೊತೆಗೆ ಲೋಕಸಭೆ ಹಾಗೂ ಬಿಬಿಎಂಪಿ ಚುನಾವಣೆ ಗೆಲ್ಲುವ ದೃಷ್ಟಿಯ ಬಜೆಟ್. ದಾಖಲೆಯ 14ನೇ ಬಜೆಟ್ ಮಂಡಿಸುತ್ತಿರುವ ಭಾಗ್ಯರಾಮಯ್ಯನ ಲೆಕ್ಕಾಚಾರ ನೂರೆಂಟು ನಿರೀಕ್ಷೆಗಳನ್ನ ಮೂಡಿಸಿದೆ.
ಕರುನಾಡ ಜನತೆಗೆ ಭಾಗ್ಯಗಳನ್ನು ಕೊಟ್ಟಿದ್ದ ಸಿಎಂ ಸಿದ್ದರಾಮಯ್ಯ ಮತ್ತೊಂದು ಬಜೆಟ್ ಮಂಡನೆಗೆ ಸಜ್ಜಾಗಿದ್ದಾರೆ. ಇಂದು 14ನೇ ಬಜೆಟ್ ಮಂಡಿಸಲಿದ್ದು ಅತಿ ಹೆಚ್ಚು ಬಜೆಟ್ ಮಂಡಿಸಿದ ಖ್ಯಾತಿ ಸಿದ್ದರಾಮಯ್ಯ ಮುಡಿಗೇರಲಿದೆ. ಡಿಸಿಎಂ ಆಗಿ 7 ಬಾರಿ ಹಾಗೂ ಸಿಎಂ ಆಗಿ 6 ಬಾರಿ ಬಜೆಟ್ ಮಂಡಿಸಿದಂತಾಗಲಿದೆ. ಇಂದಿನ ಸಿದ್ದರಾಮಯ್ಯ ಬಜೆಟ್ ಮೇಲೆ ನೂರಾರು ನಿರೀಕ್ಷೆಗಳಿವೆ.
ಇಂದೇ ಸಿದ್ದು ಸರ್ಕಾರದ ಬಜೆಟ್, ಯಾರಿಗೆ ಸಿಹಿ, ಯಾರಿಗೆ ಕಹಿ..?
ಪ್ರಚಂಡ ಬಹುಮತಗಳ ಮೂಲಕ ಅಧಿಕಾರಕ್ಕೆ ಬಂದ ಸಿಎಂ ಸಿದ್ದರಾಮಯ್ಯ ತಮ್ಮ 14ನೇ ಬಜೆಟ್ ಮಂಡಿಸಲ ಸಜ್ಜಾಗಿದ್ದಾರೆ. 16ನೇ ವಿಧಾನಸಭೆಯ ಮೊದಲ ಬಜೆಟ್ ಇದಾಗಿದ್ದು, ಇಂದು ಸಿಎಂ ಸಿದ್ದರಾಮಯ್ಯ ಐತಿಹಾಸಿಕ ಬಜೆಟ್ ಮಂಡಿಸಲಿದ್ದಾರೆ. ಇನ್ನು ಬಜೆಟ್ನಲ್ಲಿ ಗ್ಯಾರಂಟಿ ಯೋಜನೆಗಳೇ ಪಾರುಪತ್ಯ ಸಾಧಿಸಲಿವೆ ಎನ್ನಲಾಗ್ತಿದೆ.
ಸಿದ್ದರಾಮಯ್ಯ ಲೆಕ್ಕಾಚಾರ!
ಕಳೆದ ಬಾರಿಯ ಬಜೆಟ್ ಗಾತ್ರ 3 ಲಕ್ಷದ 9 ಸಾವಿರ ಕೋಟಿ ಇತ್ತು. ಈ ಬಾರಿ 3 ಲಕ್ಷದ 35 ಸಾವಿರ ಕೋಟಿ ದಾಟುವ ಸಾಧ್ಯತೆ ಇದ್ದು ಕಳೆದ ಬಾರಿಗಿಂತ 26 ಸಾವಿರ ಕೋಟಿ ಅಧಿಕ ಮೊತ್ತದ ಬಜೆಟ್ ಮಂಡನೆ ಆಗಲಿದೆ. ಎಲ್ಲಾ ವರ್ಗಗಳನ್ನು ಕೇಂದ್ರೀಕರಿಸಿ ಬಜೆಟ್ ಮಂಡನೆ ಮಂಡಿಸಲಿದ್ದು ಬಿಜೆಪಿ ಅವಧಿಯಲ್ಲಿನ ಕೆಲ ಯೋಜನೆಗಳಿಗೆ ಕೊಕ್ ನೀಡುವ ಸಾಧ್ಯತೆ ಇದೆ. ಇನ್ನು 2013-18ರ ಕಾಂಗ್ರೆಸ್ ಸರ್ಕಾರದ ಅವಧಿಯ ಯೋಜನೆಗಳ ಮರುಜೀವ ಸಿಗಲಿದ್ದು ಈ ಬಾರಿ ಶೇ. 15ರಷ್ಟು ಹೆಚ್ಚುವರಿ ಆದಾಯ ಸಂಗ್ರಹದ ಗುರಿ ಹೊಂದಲಾಗಿದೆ. ಅನಗತ್ಯ ವೆಚ್ಚಗಳನ್ನು ಕಡಿತ ಮಾಡಿ ಹೆಚ್ಚುವರಿ ತೆರಿಗೆ ಸಂಗ್ರಹ ಗುರಿ ಹೊಂದಲಾಗಿದೆ.
ಬಜೆಟ್ ನಿರೀಕ್ಷೆಗಳು!
ಇಂದಿರಾ ಕ್ಯಾಂಟೀನ್, ಪಶುಭಾಗ್ಯ, ಅನುಗ್ರಹ, ಕೃಷಿ ಹೊಂಡ, ಒಣ ಬೇಸಾಯಗಾರರಿಗೆ ಬಿತ್ತನೆ ಬೀಜ ಯೋಜನೆಗಳಿಗೆ ಕಾಯಕಲ್ಪ ನೀಡುವುದು, ಮಹಿಳೆಯರು, ಮಕ್ಕಳು, ಯುವಕರು, ವೃದ್ಧರಿಗಾಗಿ ಯೋಜನೆಗಳು, ಇಲಾಖೆಗಳ ಹೊಸ ಪ್ರಸ್ತಾವನೆಗೆ ಅವಕಾಶ ನೀಡದಿರುವ ಸಾಧ್ಯತೆ, ಗ್ಯಾರಂಟಿಗಳ ಕಾರಣ ಹೊಸ ಯೋಜನೆಗಳಿಗೆ ಕೊಕ್ ಸಾಧ್ಯತೆ ಇದೆ.
ಸಿದ್ದು ಮುಂದೆ ಸವಾಲು!
ವರ್ಷದಿಂದ ವರ್ಷ ಸಾಲದ ಪ್ರಮಾಣ ಹೆಚ್ಚಳವಾಗುತ್ತಿದ್ದು ರಾಜ್ಯಕ್ಕೆ ಮಾತ್ರ ತೆರಿಗೆಯ ಮೂಲ ಸೀಮಿತವಾಗಿದೆ. ಹೊಸ ಆದಾಯದ ಮೂಲ ಹುಡುಕುವಲ್ಲಿ ವಿಫಲವಾಗಿದ್ದು ಪೆಟ್ರೋಲ್, ಡೀಸೆಲ್ ತೆರಿಗೆ ಹೆಚ್ಚಿಸಿದರೆ ಜನಾಕ್ರೋಶ ಎದುರಾಗುವ ಆತಂಕ ಇದೆ. ಅಬಕಾರಿ ತೆರಿಗೆ ಈಗಾಗಲೇ ಗರಿಷ್ಠ ಹಂತಕ್ಕೆ ತಲುಪಿದ್ದು ವಾಹನ ನೋಂದಣಿಯಲ್ಲೂ ರಾಜ್ಯದಲ್ಲಿ ತೆರಿಗೆ ಅಧಿಕ ಹೇರಲಾಗ್ತಿದೆ. ವಿದ್ಯುತ್ ತೆರಿಗೆ ಇಳಿಸುವಂತೆ ಉದ್ಯಮ ವಲಯದ ಒತ್ತಡ ಇದೆ. ಇದೆಲ್ಲದರ ಮಧ್ಯೆ ಗ್ಯಾರಂಟಿಗಳಿಗೆ ಸಂಪನ್ಮೂಲದ ಸವಾಲು ಇದ್ದು 6 ತಿಂಗಳ ನಂತರ 7ನೇ ವೇತನ ಆಯೋಗದ ಸಮಸ್ಯೆ ಸೃಷ್ಟಿಯಾಗಲಿದೆ.
ಗ್ಯಾರಂಟಿ ಭರವಸೆಗಳನ್ನು ಈಡೇರಿಸುವುದೇ ದೊಡ್ಡ ಸವಾಲಾಗಿದ್ದು ರಾಜ್ಯ ಸರ್ಕಾರದ ಮೇಲೆ ಹಿಂದಿನ ಸಾಲದ ಹೊರೆ ಬೆಟ್ಟದಷ್ಟಿದೆ. ಹೀಗಾಗಿ ಉಳಿತಾಯ ಬಜೆಟ್ ಮಂಡಿಸಲು ಸಿಎಂ ಸಿದ್ದರಾಮಯ್ಯ ಪ್ಲಾನ್ ಮಾಡಿದ್ದಾರೆ ಎನ್ನಲಾಗಿದೆ.
ಯಾವುದಕ್ಕೆ ಕೊಕ್?
ಜಿಲ್ಲೆಗಳಿಗೊಂದು ಗೋಶಾಲೆ, ಯಡಿಯೂರಪ್ಪ ಸರ್ಕಾರ ಜಾರಿಗೆ ತಂದಿದ್ದ ಕಿಸಾನ್ ಸಮ್ಮಾನ್ ರಾಜ್ಯದ ಪಾಲು ಹಾಗೂ ರೈತರ ಮಕ್ಕಳಿಗೆ ನೀಡುತ್ತಿರುವ ವಿದ್ಯಾರ್ಥಿ ವೇತನ ಯೋಜನೆ ವಿದ್ಯಾನಿಧಿಗೆ ಕೊಕ್ ನೀಡುವ ಸಾಧ್ಯತೆ ಇದೆ.
ಒಟ್ಟಿನಲ್ಲಿ ಜೋಡೆತ್ತು ಸರ್ಕಾರದ ಮೊದಲ ಬಜೆಟ್ ನೂರೆಂಟು ನಿರೀಕ್ಷೆಗಳನ್ನು ಮೂಡಿಸಿದೆ. ಇಂದು ಬಜೆಟ್ ಸಿದ್ದರಾಮಯ್ಯ ರಾಜಕೀಯ ಜೀವನದ ಪ್ರಮುಖ ಮೈಲಿಗಲ್ಲಾಗಲಿದೆ. ಸಾವಿರ ಸವಾಲುಗಳ ಮಧ್ಯೆ ಸಿದ್ದರಾಮಯ್ಯ 14ನೇ ಬಜೆಟ್ ಮಂಡಿಸಲಿದ್ದು ಚರಿತ್ರೆ ಸೃಷ್ಟಿಸಲಿದ್ದಾರೆ. ಬಜೆಟ್ನಲ್ಲಿ ಭಾಗ್ಯದ ಬಾಗಿಲು ತೆರೆಯುತ್ತಾ ಅಥವಾ ಬರೆ ಬೀಳುತ್ತಾ, ಯಾಱರಿಗೆ ಶುಭ ಶುಕ್ರವಾರ ಅನ್ನೋದು ತೀವ್ರ ಕುತೂಹಲ ಮೂಡಿಸಿದೆ.
ಬಜೆಟ್ ಮೈಲುಗಲ್ಲು ಹೀಗಿದೆ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ