newsfirstkannada.com

HDKಗೆ ಸಿದ್ದು ಅಭಿನಂದನೆ.. ಮುನಿಸು ಮರೆತ DK ಹ್ಯಾಂಡ್​ಶೇಕ್; ಬದ್ಧ ವೈರಿಗಳ ಮುಖಾಮುಖಿ ಹೇಗಿತ್ತು?

Share :

Published June 28, 2024 at 7:24am

  ಕೊನೆಗೂ ಮುನಿಸು ಮರೆತು ಹೆಚ್​ಡಿಕೆ, ಡಿಕೆಶಿವಕುಮಾರ್ ಹಸ್ತಲಾಘವ

  ಸಿದ್ದರಾಮಯ್ಯ ಮುಂದೆಯೇ ಪರಮೇಶ್ವರ್ ಕಾಲೆಳೆದ ಸಂಸದ ವಿ.ಸೋಮಣ್ಣ

  ಪ್ರಧಾನಿ ಮೋದಿ ಭೇಟಿಗೆ ಸಮಯ ನಿಗದಿ, ನಾಳೆ ಸಿಎಂ-ಪಿಎಂ ಚರ್ಚೆ

ಕೇಂದ್ರದಲ್ಲಿ ರಾಜ್ಯದಲ್ಲಿ ಬೇರೆ ಬೇರೆ ಸರ್ಕಾರ ಇದ್ದಾಗ ಪರಸ್ಪರ ದೂರೋದು ಹೊಸದೇನಲ್ಲ. ಅವ್ರು ಮಾಡಿಲ್ಲ ಅಂತ ಇವ್ರು. ಇವ್ರ ಸಪೋರ್ಟ್​ ಇಲ್ಲ ಅಂತಾ ಅವ್ರು ಕಿತ್ತಾಡ್ತಾನೇ ಇರ್ತಾರೆ. ಆದ್ರೆ ಈ ಕದನಕ್ಕೆ ತದ್ವಿರುದ್ಧ ಘಟನೆಗೆ ಗುರುವಾರ ರಾಷ್ಟ್ರ ರಾಜಧಾನಿ ಸಾಕ್ಷಿಯಾಗಿದೆ. ರಾಜ್ಯದ ಅಭಿವೃದ್ಧಿಗಾಗಿ ಕಾಂಗ್ರೆಸ್, ಬಿಜೆಪಿ ಜೆಡಿಎಸ್ ಒಗ್ಗಟ್ಟಿನ ಮಂತ್ರ ಜಪಿಸಿವೆ. ರಾಜಕೀಯ ಬದ್ಧವೈರಿಗಳು ಕೈ ಕುಲುಕಿ ಆಲಂಗಿಸಿದ್ದಾರೆ.

ನೂತನ ಸಂಸದರು, ಕೇಂದ್ರ ಸಚಿವರ ಜೊತೆ ಸಿಎಂ ಸಭೆ
ಪ್ರಧಾನಿ ಭೇಟಿಗೆ ಸಮಯ ನಿಗದಿ, ನಾಳೆ ಸಿಎಂ-ಪಿಎಂ ಚರ್ಚೆ

ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್​ ಹಾಗೂ ರಾಜ್ಯ ಸಚಿವರ ಬಳಗ ಮೂರು ದಿನಗಳ ಕಾಲ ರಾಷ್ಟ್ರ ರಾಜಧಾನಿ ಪ್ರವಾಸ ಕೈಗೊಂಡಿದೆ. ಈ ವೇಳೆ ಕರ್ನಾಟಕದಿಂದ ಚುನಾಯಿತ ಸಂಸದರು ಮತ್ತು ಕೇಂದ್ರ ಸಚಿವರು ಸೇರಿದಂತೆ ವಿವಿಧ ನಾಯಕರ ಭೇಟಿ ಮಾಡಿ, ರಾಜ್ಯಕ್ಕೆ ಸಂಬಂಧಿಸಿದ ವಿವಿಧ ಯೋಜನೆಗಳು, ಅನುದಾನ ಕುರಿತು ಮಾತುಕತೆಗೆ ಮುಂದಾಗಿದ್ದಾರೆ. ಇದರ ಭಾಗವಾಗಿ ಸಭೆಯೂ ನಡೀತು. ಇನ್ನು ನಾಳೆ ಪ್ರಧಾನಿ ಮೋದಿ ಮತ್ತು ಸಿಎಂ ಸಿದ್ದರಾಮಯ್ಯ ಭೇಟಿಗೆ ಸಮಯ ನಿಗದಿಯಾಗಿದೆ.

ಪಾಲಿಟಿಕ್ಸ್‌ ಏನಿದ್ರೂ ಆಚೆ.. ರಾಜ್ಯ ಅಂತ ಬಂದ್ರೆ ಫುಲ್ ಒಗ್ಗಟ್ಟು
ದೆಹಲಿಯ ಖಾಸಗಿ ಹೋಟೆಲ್​ನಲ್ಲಿ ಸಭೆ ನಡೆಸಲಾಯಿತು. ಕರ್ನಾಟಕದಿಂದ ಗೆದ್ದು ಸಂಸತ್ ಪ್ರವೇಶಿಸಿರುವ ನೂತನ ಸಂಸದರು, ರಾಜ್ಯಸಭಾ ಸದಸ್ಯರ ಸಭೆಯಲ್ಲಿ ಭಾಗಿಯಾದ್ರು. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ಈ ಸಭೆ ನಡೆಸಲಾಯಿತು. ರಾಜ್ಯದ ಕೆಲ ಸಚಿವರೂ ಇದರಲ್ಲಿ ಭಾಗಿಯಾಗಿದ್ದರು. ವಿಶೇಷ ಅಂದ್ರೆ ರಾಜ್ಯ ರಾಜಕಾರಣದಲ್ಲಿ ಬದ್ಧವೈರಿಗಳಂತೆ ಕಾದಾಡಿದ್ದ ಸಿಎಂ ಸಿದ್ದರಾಮಯ್ಯ, ಹೆಚ್‌.ಡಿ ಕುಮಾರಸ್ವಾಮಿ ಹಾಗೂ ಡಿಕೆಶಿ ಮುಖಾಮುಖಿಯಾದ್ರು.

ಇದನ್ನೂ ಓದಿ: ‘ಸಿಎಂ ಕುರ್ಚಿ ಬಿಟ್ಟು ಕೊಡಿ’- ಆಗಲ್ಲ ಎಂದ ರಾಜಣ್ಣಗೆ ಚಂದ್ರಶೇಖರನಾಥ ಸ್ವಾಮೀಜಿ ಹಿಗ್ಗಾಮುಗ್ಗ ವಾಗ್ದಾಳಿ; ಹೇಳಿದ್ದೇನು?

ಹೆಚ್​ಡಿಕೆಗೆ ಸಿದ್ದು ಅಭಿನಂದನೆ, ಡಾಕ್ಟರ್‌ಗೆ ಡಿಕೆ ಹ್ಯಾಂಡ್​ಶೇಕ್!
ಬೆಂಗಳೂರು ಗ್ರಾಮಾಂತರದಿಂದ ಗೆದ್ದು ಮೊದಲ ಬಾರಿ ಸಂಸತ್ ಪ್ರವೇಶಿಸಿರುವ ಡಾ. ಸಿಎನ್ ಮಂಜುನಾಥ್ ಕೂಡ ಸಭೆಯಲ್ಲಿ ಭಾಗಿಯಾಗಿದ್ದರು. ಈ ವೇಳೆ ತಮ್ಮ ಸಹೋದರ ಡಿ.ಕೆ ಸುರೇಶ್ ಸೋಲಿಸಿರುವ ಬೇಸರ ಮರೆತು, ಡಾ. ಮಂಜುನಾಥ್ ಜೊತೆ ಡಿಕೆಶಿ ಮಾತನಾಡಿದರು. ಸಂಸದರಾಗಿದ್ದಕ್ಕೆ ಅಭಿನಂದಿಸಿದ್ರು. ಅದಕ್ಕೆ ಡಾಕ್ಟರ್ ಕೂಡ ನಗುತ್ತಲೇ ಹ್ಯಾಂಡ್​ಶೇಕ್ ಮಾಡಿದ್ದಾರೆ.

ಕೊನೆಗೂ ಮುನಿಸು ಮರೆತು ಹೆಚ್​ಡಿಕೆ-ಡಿಕೆಶಿ ಹಸ್ತಲಾಘವ
ಪ್ರಜ್ವಲ್​ ಪೆನ್​ಡ್ರೈವ್​ ಕೇಸ್.. ಚನ್ನಪಟ್ಟಣ ಉಪ ಚುನಾವಣೆಗೆ ಪೈಪೋಟಿ ರಾಜಕೀಯ ವಾಗ್ದಾಳಿಗಳಿಂದ ಸಭೆಯಲ್ಲಿ ಅಕ್ಕಪಕ್ಕದಲ್ಲೇ ಕೂತ್ಕೊಂಡಿದ್ರು ಡಿಸಿಎಂ ಡಿಕೆಶಿ, ಕುಮಾರಣ್ಣ ಮುಖಾನೂ ನೋಡಿಲ್ಲ. ಮಾತಾಡ್ಲಿಲ್ಲ.. ಚರ್ಚೆ ಮಾತುಕತೆಗಳು ಮುಗಿದ ಬಳಿಕ ಕೊನೆಗೂ ಮುನಿಸು ಮರೆತ ಡಿ.ಕೆ ಶಿವಕುಮಾರ್ ಮತ್ತು ಹೆಚ್​.ಡಿ ಕುಮಾರಸ್ವಾಮಿ ಶೇಕ್ ಹ್ಯಾಂಡ್ ಮಾಡಿದ್ದಾರೆ.

ಸಿದ್ದು ಮುಂದೆಯೇ ಪರಮೇಶ್ವರ್ ಕಾಲೆಳೆದ ಸೋಮಣ್ಣ
ಕೇಂದ್ರ ಸಚಿವ ವಿ. ಸೋಮಣ್ಣರನ್ನ ನೋಡ್ತಿದ್ದಂತೆ ಸಿಎಂ ಸಿದ್ದರಾಮಯ್ಯ ಬಾಚಿ ತಬ್ಬಿಕೊಂಡರು. ನೋಡಿ ಸರ್… ಪರಮೇಶ್ವರ್ ಜಿಲ್ಲೆಯಿಂದ ಗೆದ್ದಿದ್ದೀನಿ. ಒಂದೇ ಒಂದು ದಿನ ಫೋನ್​ ಮಾಡಿ ವಿಶ್​ ಮಾಡಿಲ್ಲ ಅಂದ್ರು. ಅದಕ್ಕೆ ಪರಮೇಶ್ವರ್ ಹೇ.. ಅಂದ್ರು. ಅತ್ತ ಸೋಮಣ್ಣ ಏನ್​ ಹೇ.. ಬರ್ತೀನಿ ಮನೆಗೆ ಅಂತಾ ತಮಾಷೆ ಮಾಡಿದರು.

ಇದನ್ನೂ ಓದಿ: VIDEO: ‘ಸಿಎಂ ಸೀಟ್‌ ಡಿಕೆಶಿಗೆ ಬಿಟ್ಟು ಕೊಡಿ’- ಕೆಂಪೇಗೌಡ ಜಯಂತಿಯಲ್ಲಿ ಶಾಕ್ ಆದ ಸಿದ್ದು; ಏನಂದ್ರು? 

ಸಭೆ ಬಳಿಕ ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಮಾತನಾಡಿ, ರಾಜ್ಯ ಸರ್ಕಾರ ಹಲವಾರು ಯೋಜನೆ ಅನುಮತಿಗೆ ಮನವಿ ಮಾಡಿದ್ದಾರೆ. ನೆಲ, ಜಲ, ಸಂಸ್ಕೃತಿ ಭಾಷೆಗಾಗಿ ನಾವು ಬದ್ಧರಾಗಿ ಕೆಲಸ ಮಾಡುತ್ತೇವೆ ಅಂದರು. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಂಸದರು, ಮಂತ್ರಿಗಳ ಸಭೆ ನಡೆದಿದೆ. ಇದೊಂದು ಒಳ್ಳೆಯ ಸಂಪ್ರದಾಯ ಎಂದರು.

ರಾಜ್ಯ ಸರ್ಕಾರದಿಂದ ನಡೆದ ಈ ಸಭೆ ಉತ್ತಮ ಬೆಳವಣಿಗೆ ಅಂತಾನೇ ಹೇಳಬಹುದು. ರಾಜ್ಯದ ಮೇಲೆ ಕೇಂದ್ರ, ಕೇಂದ್ರದ ಮೇಲೆ ರಾಜ್ಯ ದೂರೋದನ್ನ ಬಿಟ್ಟು ಒಟ್ಟಿಗೆ ಕೆಲಸ ಮಾಡಿದ್ರೆ ಅಭಿವೃದ್ಧಿ ಆದ್ರೆ ಸಾಕು ಅನ್ನೋದು ಸಾಮಾನ್ಯ ಜನರ ಬಯಕೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

HDKಗೆ ಸಿದ್ದು ಅಭಿನಂದನೆ.. ಮುನಿಸು ಮರೆತ DK ಹ್ಯಾಂಡ್​ಶೇಕ್; ಬದ್ಧ ವೈರಿಗಳ ಮುಖಾಮುಖಿ ಹೇಗಿತ್ತು?

https://newsfirstlive.com/wp-content/uploads/2024/06/Delhi-Cm-Meeting.jpg

Load More