newsfirstkannada.com

ರಾಷ್ಟ್ರಪತಿ ಅಂಗಳ ತಲುಪಿದ ಡಿಎಂಕೆ VS ಗವರ್ನರ್​​ ಜಗಳ; ರಾಜ್ಯಪಾಲರ ವಜಾಕ್ಕೆ CM MK ಸ್ಟಾಲಿನ್​​ ಒತ್ತಡ

Share :

09-07-2023

    ಬಾಲಾಜಿ ಅವರನ್ನು ಸಂಪುಟದಿಂದ ವಜಾಗೊಳಿಸಿದ್ದ ಗವರ್ನರ್​​

    ಈಗ ರಾಷ್ಟ್ರಪತಿ ಅಂಗಳ ತಲುಪಿದ ಡಿಎಂಕೆ VS ಗವರ್ನರ್​​ ಜಗಳ

    ರಾಜ್ಯಪಾಲ ಆರ್.ಎನ್ ರವಿ ವಜಾಕ್ಕೆ CM MK ಸ್ಟಾಲಿನ್​​ ಒತ್ತಡ

ಚೆನ್ನೈ: ಇತ್ತೀಚೆಗೆ ಡಿಎಂಕೆ ನಾಯಕ ವಿ. ಸೆಂಥಿಲ್ ಬಾಲಾಜಿ ಅವರನ್ನು ರಾಜ್ಯ ಸಚಿವ ಸಂಪುಟದಿಂದ ವಜಾಗೊಳಿಸಿದ್ದ ತಮಿಳುನಾಡು ರಾಜ್ಯಪಾಲ ಆರ್.ಎನ್ ರವಿ ಬಳಿಕ ತಮ್ಮ ನಿರ್ಧಾರದಿಂದ ಹಿಂದೆ ಸರಿದರು. ಸಿಎಂ ಎಂ.ಕೆ ಸ್ಟಾಲಿನ್ ಕೇಂದ್ರ ಬಿಜೆಪಿ ನಾಯಕರಿಗೆ ಎಚ್ಚರಿಕೆ ನೀಡಿದ ಮೇಲೆ ಗವರ್ನರ್​​ ಈ ನಿರ್ಧಾರವನ್ನು ಕೈ ಬಿಟ್ಟಿದ್ದು ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇಷ್ಟಾದರೂ ಸಿಎಂ ಎಂ.ಕೆ ಸ್ಟಾಲಿನ್​​ ಮತ್ತು ರಾಜ್ಯಪಾಲರ ಮಧ್ಯದ ಸಂಘರ್ಷ ಇನ್ನೂ ನಿಂತಿಲ್ಲ. ಬದಲಿಗೆ ಇಬ್ಬರ ನಡುವಿನ ಸಂಘರ್ಷ ದಿನೇ ದಿನೇ ತಾರಕಕ್ಕೇರಿದ್ದು, ಈಗ ರಾಷ್ಟ್ರಪತಿಗಳ ಅಂಗಳಕ್ಕೆ ತಲುಪಿದೆ.

ರಾಜ್ಯಪಾಲರು ಉದ್ದೇಶಪೂರ್ವಕವಾಗಿ ತಮ್ಮ ಅಧಿಕಾರದ ಪರಿಧಿಯನ್ನು ಮೀರಿ ಸೆಂಥಿಲ್ ಬಾಲಾಜಿ ಅವರನ್ನು ವಜಾಗೊಳಿದ್ದಾರೆ. ಈ ಮೂಲಕ ರಾಜ್ಯಪಾಲ ರವಿಯವರು ತಮ್ಮ ಅಧಿಕಾರ ವ್ಯಾಪ್ತಿಯನ್ನು ಉಲ್ಲಂಘಿಸಿದ್ದಾರೆ. ಯಾರೂ ಊಹಿಸದ ರೀತಿಯಲ್ಲಿ ರಾಜ್ಯಪಾಲ ರವಿಯವರು ಸೆಂಥಿಲ್ ಅವರನ್ನು ಸಂಪುಟದಿಂದ ಕೈಬಿಡುವ ನಿರ್ಧಾರ ತಾಳಿದ್ದಾರೆ. ಬಾಲಾಜಿ ಅವರನ್ನು ವಜಾಗೊಳಿಸಿದ ರಾಜ್ಯಪಾಲರ ಕ್ರಮವನ್ನು ತಮಿಳುನಾಡು ಸರ್ಕಾರ ಖಂಡಿಸುತ್ತದೆ. ಈ ಕೂಡಲೇ ರಾಜ್ಯಪಾಲ ರವಿ ಅವರನ್ನು ವಜಾಗೊಳಿಸಿ ಎಂದು ಎಂ.ಕೆ ಸ್ಟಾಲಿನ್​​​ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

ಇನ್ನು, ಸಚಿವರ ನೇಮಕ ಮತ್ತು ವಜಾ ಮಾಡುವ ಅಧಿಕಾರ ಸಿಎಂ ಆದ ನನಗೆ ಮಾತ್ರ ಇದೆ. ಸಚಿವ ಸಂಪುಟದಿಂದ ಸೆಂಥಿಲ್ ಬಾಲಾಜಿ ಅವರನ್ನು ವಜಾಗೊಳಿಸಿ ರಾಜ್ಯಪಾಲರು ತಮ್ಮ ಅಧಿಕಾರವನ್ನು ಮೀರಿದ್ದಾರೆ. ಇದು ತಮಿಳುನಾಡಿಗೆ ಮಾಡುವ ಅವಮಾನ. ಈ ಕೂಡಲೇ ರವಿ ಅವರನ್ನು ವಜಾ ಮಾಡದೆ ಹೋದರೆ ಹೋರಾಟ ಮಾಡಲಿದ್ದೇವೆ ಎಂದು ಎಚ್ಚರಿಕೆ ನೀಡಿದ್ದಾರೆ ಎಂ.ಕೆ ಸ್ಟಾಲಿನ್​​.

ಬಾಲಾಜಿ ಅವರನ್ನು ವಜಾಗೊಳಿಸಿದ್ದೇಕೆ?

ಸಚಿವ ಸಂಪುಟದಿಂದ ಬಾಲಾಜಿ ಅವರನ್ನು ವಜಾಗೊಳಿಸಿದ ಬಳಿಕ ತಮಿಳುನಾಡು ರಾಜಭವನ ಹೇಳಿಕೆಯೊಂದು ಬಿಡುಗಡೆ ಮಾಡಿತ್ತು. ಉದ್ಯೋಗಕ್ಕಾಗಿ ಹಣ ಪಡೆದ ಕೇಸ್​ನಲ್ಲಿ ಬಾಲಾಜಿಯನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ. ಇದುವೇ ಇವರನ್ನು ವಜಾಗೊಳಿಸಲು ಕಾರಣ ಎಂದಿತ್ತು.

ಖಾತೆ ಇಲ್ಲದ ಮಂತ್ರಿ ಬಾಲಾಜಿ

ಬಂಧನಕ್ಕೂ ಮುನ್ನ ಬಾಲಾಜಿ ಡಿಎಂಕೆ ಸರ್ಕಾರದಲ್ಲಿ ವಿದ್ಯುತ್, ನಿಷೇಧ ಮತ್ತು ಅಬಕಾರಿ ಸಚಿವರಾಗಿದ್ದರು. ಅರೆಸ್ಟ್​ ಆದ ಬಳಿಕ ಖಾತೆಯ ಜವಾಬ್ದಾರಿಗಳನ್ನು ಬೇರೆಯವರಿಗೆ ನೀಡಲಾಗಿದೆ. ಹೀಗಾಗಿ ಇವರು ಖಾತೆ ಇಲ್ಲದ ಮಂತ್ರಿಯಾಗಿ ಉಳಿದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಷ್ಟ್ರಪತಿ ಅಂಗಳ ತಲುಪಿದ ಡಿಎಂಕೆ VS ಗವರ್ನರ್​​ ಜಗಳ; ರಾಜ್ಯಪಾಲರ ವಜಾಕ್ಕೆ CM MK ಸ್ಟಾಲಿನ್​​ ಒತ್ತಡ

https://newsfirstlive.com/wp-content/uploads/2023/07/MK-Stalin.jpg

Load More