newsfirstkannada.com

ಕಾವೇರಿ ನೀರಿಗಾಗಿ ತಮಿಳುನಾಡು ಮತ್ತೆ ಕ್ಯಾತೆ; ಪ್ರಧಾನಿ ಮೋದಿಗೆ ಪತ್ರ ಬರೆದ CM ಸ್ಟಾಲಿನ್​​

Share :

04-08-2023

    ಕಾವೇರಿ ನೀರಿಗಾಗಿ ತಮಿಳುನಾಡು ಮತ್ತೆ ಕ್ಯಾತೆ

    ಪ್ರಧಾನಿ ಮೋದಿಗೆ ಪತ್ರ ಬರೆದ ಸಿಎಂ ಸ್ಟಾಲಿನ್​​

    ಕರ್ನಾಟಕಕ್ಕೆ ಸೂಚಿಸಿ ಎಂದು ಪ್ರಧಾನಿಗೆ ಮನವಿ

ಚೆನ್ನೈ: ತಮಿಳುನಾಡಿಗೆ ಕಾವೇರಿ ನೀರು ಹಂಚಿಕೆಗೆ ಕರ್ನಾಟಕಕ್ಕೆ ಸೂಚನೆ ನೀಡಿ ಎಂದು ಸಿಎಂ ಎಂಕೆ ಸ್ಟಾಲಿನ್ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ. ತಮ್ಮ ಕುರುವಾಯಿ ಭತ್ತದ ಬೆಳೆ ಉಳಿಸಲು ಕಾವೇರಿ ಡೆಲ್ಟಾದ ರೈತರು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಹೀಗಾಗಿ ನಮ್ಮ ಪಾಲಿನ ಕಾವೇರಿ ನೀರು ಬಿಡುಗಡೆಗೆ ಕರ್ನಾಟಕಕ್ಕೆ ಸೂಚಿಸಿ ಎಂದು ಸ್ಟಾಲಿನ್​ ಮನವಿ ಮಾಡಿದ್ದಾರೆ.

ಸ್ಟಾಲಿನ್​​ ಪತ್ರದಲ್ಲೇನಿದೆ..?

ಸುಪ್ರೀಂಕೋರ್ಟ್​ ಆದೇಶದ ಮೇರೆಗೆ ಕರ್ನಾಟಕ ತಮಿಳುನಾಡಿಗೆ ನೀಡಬೇಕಾದ ನೀರಿನ ಪಾಲನ್ನು ನಿಗದಿತ ವೇಳಾಪಟ್ಟಿ ಪ್ರಕಾರ ಬಿಡುಗಡೆ ಮಾಡಬೇಕಿತ್ತು. ಆದರೀಗ ಕರ್ನಾಟಕ ಸುಪ್ರೀಂಕೋರ್ಟ್​ ಆದೇಶವನ್ನು ಪಾಲಿಸುತ್ತಿಲ್ಲ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ನಿರ್ದೇಶನಗಳನ್ನು ಅನುಸರಣೆ ಮಾಡುತ್ತಿಲ್ಲ ಎಂದು ಎಂಕೆ ಸ್ಟಾಲಿನ್​​ ಪ್ರಧಾನಿ ಮೋದಿಗೆ ಬರೆದ ಪತ್ರದಲ್ಲಿ ಆರೋಪಿಸಿದ್ದಾರೆ.

ಜೂನ್​​, ಜುಲೈ ತಿಂಗಳಲ್ಲಿ 28 ಟಿಎಂಸಿ ಬಾಕಿ ನೀರು ಬಿಡುಗಡೆಗೆ ಕರ್ನಾಟಕಕ್ಕೆ ಸೂಚನೆ ನೀಡಿ ಎಂದು ಮೋದಿಗೆ ಪತ್ರ ಬರೆಯುವ ಮೂಲಕ ಸ್ಟಾಲಿನ್​ ಮತ್ತೆ ಕ್ಯಾತೆ ತೆಗೆದಿದ್ದಾರೆ. ಕಾವೇರಿಯ 4 ಡ್ಯಾಮ್​​ಗಳ ಸಾಮರ್ಥ್ಯ 114 ಟಿಎಂಸಿ ನೀರು. ಸದ್ಯ ಕಾವೇರಿ ಕಣಿವೆಯ 4 ಡ್ಯಾಮ್​​ಗಳಲ್ಲಿ 91 ಟಿಎಂಸಿ ನೀರಿದೆ. ಹೀಗಾಗಿ ಕೂಡಲೇ ನಮ್ಮ ಪಾಲಿನ ನೀರಿಗೆ ಬಿಡುಗಡೆ ಮಾಡಿ ಎಂದು ಸ್ಟಾಲಿನ್​ ಆಗ್ರಹಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಾವೇರಿ ನೀರಿಗಾಗಿ ತಮಿಳುನಾಡು ಮತ್ತೆ ಕ್ಯಾತೆ; ಪ್ರಧಾನಿ ಮೋದಿಗೆ ಪತ್ರ ಬರೆದ CM ಸ್ಟಾಲಿನ್​​

https://newsfirstlive.com/wp-content/uploads/2023/08/MK-Stalin.jpg

Load More