136 ಸ್ಪಷ್ಟ ಬಹುಮತ ಇದ್ರೂ ಕಾಂಗ್ರೆಸ್ನವರಿಗೇಕೆ ಭಯ ಎಂದ ಹೆಚ್‌ಡಿಕೆ
ಬಿಜೆಪಿ ಲೀಡರ್ ಲೆಸ್, ಜೆಡಿಎಸ್ ಪೀಪಲ್ ಲೆಸ್ ಅಂತ ಹೇಳಿದ್ದೀರಾ!
ನಾನು ಮಾತ್ರ ಸುಳ್ಳು ಹೇಳ್ತೀನಿ ಇವರು ಮಾತ್ರ ಸತ್ಯ ಹರಿಶ್ಚಂದ್ರನಾ?
ಹಾಸನ: ರಾಜ್ಯ ರಾಜಕೀಯದಲ್ಲಿ ಆಪರೇಷನ್ ಹಸ್ತದ ಬಗ್ಗೆ ಚರ್ಚೆ ಆಗುತ್ತಿರುವಾಗ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರು ಸ್ಫೋಟಕ ಹೇಳಿಕೆ ಮಾಡಿದ್ದಾರೆ. ಇತ್ತೀಚೆಗೆ ಸಿಎಂ ಮನೆಯಲ್ಲಿ ನಡೆದ ಬ್ರೇಕ್ ಫಾಸ್ಟ್ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯನವರು ಹೊಸ ಟಾಸ್ಕ್ ಕೊಟ್ಟಿದ್ದಾರಂತೆ. ಕಾಂಗ್ರೆಸ್ ನಾಯಕರಿಗೆ ಪ್ರಮುಖ 50 ಜೆಡಿಎಸ್ ನಾಯಕರನ್ನು ಪಕ್ಷಕ್ಕೆ ಕರೆತರುವ ಸೂಚನೆ ಕೊಟ್ಟಿದ್ದಾರಂತೆ ಎಂದು ಆರೋಪಿಸಿದ್ದಾರೆ.
ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ ಅವರು, ಬಹಳ ಜನ ಪಕ್ಷಕ್ಕೆ ಬರ್ತಾರೆ ಅಂತ ಪದೇ ಪದೇ ಡಿಸಿಎಂ ಹೇಳ್ತಿದ್ದಾರೆ. 136 ಸ್ಪಷ್ಟ ಬಹುಮತ ಇದ್ರೂ ಕಾಂಗ್ರೆಸ್ನವರಿಗೇಕೆ ಭಯ. ನಮ್ಮ ಶಾಸಕರ ಮೇಲೆ ಒತ್ತಡ ತರುವ ಪ್ರಯತ್ನ ಮಾಡ್ತಿದ್ದಾರೆ ಎಂದು ಆಪರೇಷನ್ ಹಸ್ತದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
50 ಜೆಡಿಎಸ್ ನಾಯಕರಿಗೆ ಕಾಂಗ್ರೆಸ್ ಗಾಳ!
ಪ್ರಮುಖವಾಗಿ ಮೊನ್ನೆಯಷ್ಟೇ ಸಿಎಂ ಸಿದ್ದರಾಮಯ್ಯ ಬ್ರೇಕ್ ಫಾಸ್ಟ್ ಮೀಟಿಂಗ್ ಮಾಡಿದ್ದಾರೆ. ಈ ವೇಳೆ ಜೆಡಿಎಸ್‌ನ ಪ್ರಮುಖ 50 ಜನರನ್ನ ಕರೆತರುವ ಸೂಚನೆ ಕೊಟ್ಟಿದ್ದಾರೆ ಅಂತೆ. ಬಿಜೆಪಿಯವರ ಆಪರೇಷನ್ ಕಮಲ ನಡೀತಾ ಇದೆ ಅಂತಾ ಸಚಿವ ಪ್ರಿಯಾಂಕ್ ಖರ್ಗೆ ಅವರು ಹೇಳಿದ್ದಾರೆ. ಇದರ ಜೊತೆಗೆ ಪ್ರಿಯಾಂಕ್ ಖರ್ಗೆ ಅವರು ಹೇಳಿದ್ದಾರೆ ಬಿಜೆಪಿ ಲೀಡರ್ ಲೆಸ್, ಜೆಡಿಎಸ್ ಪೀಪಲ್ ಲೆಸ್ ಅಂತಾ. ನಮಗೆ ಪೀಪಲ್ ಲೆಸ್ ಅಂತಾ ಹೇಳ್ತಿದ್ದಾರೆ.
ಪೀಪಲ್ ಲೆಸ್ ಇರೋ ನಾವು ಪ್ರಧಾನ ಮಂತ್ರಿಯನ್ನ ಕೇಳೋಕೆ ಆಗುತ್ತಾ. ನಮ್ಮದು ಸಣ್ಣ ಪಕ್ಷ ಅಂತೀರಾ ನಮಗೆ ಕೇಂದ್ರಕ್ಕೆ ಒತ್ತಡ ಹೇರಿ ಅಂತೀರಾ. ಕುಮಾರಸ್ವಾಮಿ ಹೇಳೋದೇ ಸುಳ್ಳು ಅಂತಾ ಹೇಳಿದ್ದೀರಾ. ನಾನು ಮಾತ್ರ ಸುಳ್ಳು ಹೇಳ್ತೀನಿ ಇವರು ಮಾತ್ರ ಸತ್ಯ ಹರಿಶ್ಚಂದ್ರನಾ. ಗಾಜಿನ ಮನೆಯಲ್ಲಿ ಕೂತಿರೋದು ನೀವು. ಹೆಗ್ಗಣ ಸತ್ತು ಬಿದ್ದಿರೋದು ನಿಮ್ಮ ತಟ್ಟೆಯಲ್ಲಿ. ನಮ್ಮ ಶಾಸಕರ ಮಾನಸಿಕತೆ ಮೇಲೆ ಒತ್ತಡ ತರುವ ಕೀಳು ಮಟ್ಟದ ಪ್ರಯತ್ನ ಮಾಡ್ತಾ ಇದ್ದಾರೆ ಎಂದು ಕಿಡಿಕಾರಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ