newsfirstkannada.com

WATCH: ಸ್ಪಂದನಾ ವಯಸ್ಸಿನ ಮಹಿಳೆಯರ ಹೃದಯಾಘಾತಕ್ಕೆ ಇದೇ ಕಾರಣ; ಡಾ. ಸಿ.ಎನ್ ಮಂಜುನಾಥ್ ಎಚ್ಚರಿಕೆ

Share :

Published August 7, 2023 at 6:17pm

Update August 7, 2023 at 6:53pm

    ಮಹಿಳೆಯರಲ್ಲಿ ಸಾಮನ್ಯವಾಗಿ ಹೃದಯಾಘಾತ ಏಕೆ ಸಂಭವಿಸುತ್ತದೆ?

    ಅತಿ ಹೆಚ್ಚು ಕೆಲಸ, ಸಂಸಾರದ ಒತ್ತಡದಿಂದಲೂ ಹೀಗೆ ಆಗಬಹುದು

    ಇತ್ತೀಚೆಗೆ ಯುವಕರು, ಮಧ್ಯ ವಯಸ್ಕರಲ್ಲಿ ಹಾರ್ಟ್​ ಅಟ್ಯಾಕ್​ ಹೆಚ್ಚು

ಬೆಂಗಳೂರು: ಸ್ಯಾಂಡಲ್​ವುಡ್​ ನಟ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರು ಬ್ಯಾಂಕಾಕ್‌ನಲ್ಲಿ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಸ್ಪಂದನಾ ಅವರು ತಮ್ಮ ಕಾಲೇಜು ಸ್ನೇಹಿತರೊಂದಿಗೆ ವಿದೇಶ ಪ್ರವಾಸಕ್ಕೆ ಹೋಗಿದ್ದರು. ಈ ವೇಳೆ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ. ಹೋಟೆಲ್​ವೊಂದರಲ್ಲಿ ಮಲಗಿದ್ದ ಸ್ಪಂದನಾ ಅವರು ಮೇಲೆ ಎದ್ದಿಲ್ಲ. ಲೋ ಬಿಪಿ ಆಗಿ ಕೊನೆಗೆ ಹೃದಯಾಘಾತ ಆಗಿರಬಹುದು ಎನ್ನುಲಾಗುತ್ತಿದೆ.

37 ವರ್ಷದ ಸ್ಪಂದನಾ ಮೃತಪಟ್ಟ ಸುದ್ದಿ ತಿಳಿಯುತ್ತಿದ್ದಂತೆ ವಿಜಯ್ ರಾಘವೇಂದ್ರ ಕುಟುಂಬಕ್ಕೆ ಹಾಗೂ ಅಭಿಮಾನಿಗಳಿಗೆ ದೊಡ್ಡ ಆಘಾತವುಂಟು ಮಾಡಿದೆ. ನಾಳೆ ಸಂಜೆ ಸ್ಪಂದನಾ ಅವರ ಪಾರ್ಥಿವ ಶರೀರವನ್ನು ಬೆಂಗಳೂರಿಗೆ ತರಲಾಗುವುದು ಎಂದು ಸ್ಪಂದನಾ ತಂದೆ ಬಿ.ಕೆ ಶಿವರಾಂ ಸಹೋದರ ಬಿ.ಕೆ ಹರಿಪ್ರಸಾದ್ ಮಾಹಿತಿ ನೀಡಿದ್ದಾರೆ. ಇನ್ನು, ನಟ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರಿಗೆ ಹಾರ್ಟ್ ಅಟ್ಯಾಕ್ ಆಗೋದಕ್ಕೆ ಮುಖ್ಯ ಕಾರಣ ಏನು? ಇತ್ತೀಚಿನ ದಿನಗಳಲ್ಲಿ ಹೃದಯಾಘಾತ ಸಂಭವಿಸುತ್ತಿರುವುದಕ್ಕೆ ಕಾರಣವೇನು? ಒಬ್ಬ ವ್ಯಕ್ತಿ ಆರೋಗ್ಯವಂತ ಆಗಿರಲು ಲೈಫ್ ಸ್ಟೈಲ್ ಹೇಗಿರಬೇಕು? ಹೃದಯಾಘಾತ ಆಗುವಾಗ ವ್ಯಕ್ತಿಗೆ ಮುನ್ಸೂಚನೆ ಏನು? ಹೀಗೆ ಸಾಕಷ್ಟು ಪ್ರಶ್ನೆಗಳು ಜನ ಸಾಮಾನ್ಯರಲ್ಲಿ ಮೂಡುತ್ತಿವೆ. ಈ ರೀತಿಯ ಎಲ್ಲ ಪ್ರಶ್ನೆಗಳಿಗೆ ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇಶಕ ಡಾಕ್ಟರ್ ಸಿ.ಎನ್ ಮಂಜುನಾಥ್ ಮಾಹಿತಿ ನೀಡಿದ್ದಾರೆ.

  • ಶೇ. 90ರಷ್ಟು ಕಾರ್ಡಿಯಾಕ್ ಅರೆಸ್ಟ್ ಹಾರ್ಟ್​ ಅಟ್ಯಾಕ್​ನಿಂದ ಆಗುತ್ತೆ
  • ಕೇವಲ 45 ವಯಸ್ಸಿನವರಲ್ಲಿ ಶೇ.35 ರಷ್ಟು ಕಾರ್ಡಿಯಾಕ್ ಅರೆಸ್ಟ್ ಆಗುತ್ತಿದೆ
  • ಯುವ ರೋಗಿಗಳ ಪೈಕಿ ಶೇ.8ರಷ್ಟು ಮಹಿಳೆಯರೇ ಹಾರ್ಟ್​ ಅಟ್ಯಾಕ್​​ಗೆ ಒಳಗಾಗಿದ್ದಾರೆ
  • ಯುವಕರು ಹಾಗೂ ಮಧ್ಯ ವಯಸ್ಕರಲ್ಲಿ ಹೆಚ್ಚಾಗಿ ಹಾರ್ಟ್​ ಅಟ್ಯಾಕ್ ಆಗುತ್ತಿದೆ
  • ಕಳೆದ 10 ವರ್ಷಗಳಲ್ಲಿ ಹೃದಯಾಘಾತದ ಪ್ರಮಾಣ ಶೇ.22ರಷ್ಟು ಹೆಚ್ಚಾಗಿದೆ
  • ಕೆಲಸದ ಒತ್ತಡ, ಮಕ್ಕಳ ಪೋಷಣೆ, ಸಂಸಾರದ ಒತ್ತಡಗಳಿಂದ ಶುಗರ್​ ಕಾಯಿಲೆ ಬರುತ್ತಿದೆ
  • ಒತ್ತಡ ಅನ್ನೋದು ಒಂದು ಹೊಸ ತಂಬಾಕು ಆಗಿ ಮಾರ್ಪಟ್ಟಿದೆ
  • ಫಾಸ್ಟ್ ಫುಡ್, ಪ್ರೈಸ್, ಸಾಲ್ಟೆಡ್ ಚಿಪ್ಸ್​​ ಕೂಡ ಹೃದಯಕ್ಕೆ ಹಾನಿಯುಂಟು ಮಾಡುತ್ತದೆ
  • ಕೆಮಿಕಲ್, ಕಲರಿಂಗ್ ಹಾಕಿದ ಪದಾರ್ಥಗಳನ್ನ ಸಣ್ಣ ಪ್ರಮಾಣದಲ್ಲಿ ಸ್ವೀಕರಿಸುತ್ತಿದ್ದೇವೆ
  • ವಿದ್ಯಾರ್ಥಿಗಳು ಡ್ರಗ್ಸ್, ಗಾಂಜಾ, ಕೊಕೇನ್​​ ಸೇವನೆಯಿಂದ ಹಾರ್ಟ್​ ಅಟ್ಯಾಕ್​​ ಆಗಬಹುದು

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

WATCH: ಸ್ಪಂದನಾ ವಯಸ್ಸಿನ ಮಹಿಳೆಯರ ಹೃದಯಾಘಾತಕ್ಕೆ ಇದೇ ಕಾರಣ; ಡಾ. ಸಿ.ಎನ್ ಮಂಜುನಾಥ್ ಎಚ್ಚರಿಕೆ

https://newsfirstlive.com/wp-content/uploads/2023/08/vijay-ragavendra-4.jpg

Load More