/newsfirstlive-kannada/media/post_attachments/wp-content/uploads/2024/07/Gambhir_KL-Rahul_Kohli.jpg)
ಕಳೆದ ವರ್ಷ ಟೀಮ್​ ಇಂಡಿಯಾವನ್ನು ಯಶಸ್ವಿಯಾಗಿ ಮುನ್ನಡೆಸಿದ್ದ ಕನ್ನಡಿಗ ಕೆಎಲ್ ರಾಹುಲ್ ಸೌತ್​ ಆಫ್ರಿಕಾ ವಿರುದ್ಧ 3 ಪಂದ್ಯಗಳ ಏಕದಿನ ಸರಣಿಯನ್ನು 2-1 ರಿಂದ ಗೆದ್ದು ಸಂಭ್ರಮಿಸಿದ್ರು. ಈ ಮೂಲಕ ಬರೋಬ್ಬರಿ 21 ವರ್ಷಗಳ ಬಳಿಕ ವಿರಾಟ್ ಕೊಹ್ಲಿ ಬಳಿಕ ಹರಿಣಿಗಳ ನಾಡಿನಲ್ಲಿ ಸೌತ್​ ಆಫ್ರಿಕಾ ತಂಡವನ್ನು ಮಣಿಸಿದ 2ನೇ ಟೀಮ್ ಇಂಡಿಯಾ ನಾಯಕ ಎಂಬ ದಾಖಲೆ ನಿರ್ಮಿಸಿದ್ರು. ಹಾಗಾಗಿ ರೋಹಿತ್​ ಶರ್ಮಾ ಉಪಸ್ಥಿತಿಯಲ್ಲಿ ಶ್ರೀಲಂಕಾ ವಿರುದ್ದ ಕೆ.ಎಲ್​ ರಾಹುಲ್​ ಅವರೇ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ ಅನ್ನೋ ಮಾತುಗಳು ಕೇಳಿ ಬಂದಿದ್ದವು.
ಶ್ರೀಲಂಕಾ ವಿರುದ್ಧ ಜೂನ್​​ 27ನೇ ತಾರೀಕಿನಿಂದ 3 ಟಿ20 ಪಂದ್ಯ ಮತ್ತು 3 ಏಕದಿನ ಪಂದ್ಯಗಳ ಸರಣಿ ಶುರುವಾಗಲಿದೆ. ಈಗಾಗಲೇ ಶ್ರೀಲಂಕಾ ವಿರುದ್ಧದ ಸರಣಿಗೆ ಬಲಿಷ್ಠ ಟೀಮ್​ ಇಂಡಿಯಾ ಅನೌನ್ಸ್ ಆಗಿದೆ. ಟೀಮ್​ ಇಂಡಿಯಾ ವಿಶ್ವಕಪ್​ ಗೆದ್ದ ಬೆನ್ನಲ್ಲೇ ವಿರಾಟ್​ ಕೊಹ್ಲಿ, ರೋಹಿತ್​ 20 ಅಂತರಾಷ್ಟ್ರೀಯ ಕ್ರಿಕೆಟ್​ಗೆ ಗುಡ್​ ಬೈ ಹೇಳಿದ್ರು. ಅಷ್ಟೇ ಅಲ್ಲದೇ ಶ್ರೀಲಂಕಾ ಪ್ರವಾಸದಿಂದ ರೆಸ್ಟ್​ ಕೂಡ ಕೇಳಿದ್ದರು. ಬಿಸಿಸಿಐ ಕೊಹ್ಲಿ, ರೋಹಿತ್​​ ಮತ್ತು ಬುಮ್ರಾಗೆ ರೆಸ್ಟ್​ ನೀಡಿತ್ತು. ಗಂಭೀರ್​ ಕೋಚ್​ ಆದ ಬಳಿಕ ಇದು ಮೊದಲ ಸರಣಿ ಆಗಿದ್ದು, ಮೂವರು ಸ್ಟಾರ್​ ಆಟಗಾರರು ಶ್ರೀಲಂಕಾ ವಿರುದ್ಧ ಏಕದಿನ ಸೀರೀಸ್​ ಆಡಲೇಬೇಕು ಎಂದು ಮನವಿ ಮಾಡಿಕೊಂಡಿದ್ದರು. ಇದಕ್ಕೆ ವಿರಾಟ್​ ಕೊಹ್ಲಿ, ರೋಹಿತ್​​ ಸಮ್ಮತಿಸಿದ್ದು, ಈಗ ತಂಡಕ್ಕೆ ವಾಪಸ್ಸಾಗಿದ್ದಾರೆ.
ಇನ್ನು, ಟಿ20 ವಿಶ್ವಕಪ್​ನಿಂದ ದೂರ ಉಳಿದಿದ್ದ ಕೆ.ಎಲ್​ ರಾಹುಲ್​ ಮತ್ತು ಶ್ರೇಯಸ್​ ಅಯ್ಯರ್​ ಕೂಡ ಏಕದಿನ ಸರಣಿಗೆ ಆಯ್ಕೆಯಾಗಿದ್ದಾರೆ. ಬುಮ್ರಾ ಮಾತ್ರ ರೆಸ್ಟ್​ನಲ್ಲಿದ್ದಾರೆ.
/newsfirstlive-kannada/media/post_attachments/wp-content/uploads/2024/07/KL-Rahul_Gambhir1.jpg)
ರಾಹುಲ್​ ಭಾರೀ ಮೋಸ!
ರೋಹಿತ್​ ಶರ್ಮಾ ಏಕದಿನ ಸೀರೀಸ್​ನಿಂದ ರೆಸ್ಟ್​ ತೆಗೆದುಕೊಂಡಿದ್ದಾರೆ ಎನ್ನಲಾಗಿತ್ತು. ಹಾಗಾಗಿ ಏಕದಿನ ಮಾದರಿಯಲ್ಲಿ ಭಾರತ ತಂಡವನ್ನು ರಾಹುಲ್​ ಅವರೇ ಮುನ್ನಡೆಸಲಿದ್ದಾರೆ. ಕೋಚ್​​ ಗೌತಮ್​​ ಗಂಭೀರ್​​ ಕೂಡ ಕೆ.ಎಲ್​ ರಾಹುಲ್​ ಭಾರತ ಏಕದಿನ ತಂಡದ ಕ್ಯಾಪ್ಟನ್​ ಆಗಲಿ ಎಂಬ ಅಭಿಪ್ರಾಯ ಕೂಡ ವ್ಯಕ್ತಪಡಿಸಿದ್ದಾರೆ ಅನ್ನೋ ವಿಚಾರ ತಿಳಿದು ಬಂದಿತ್ತು. ಆದರೀಗ, ರೋಹಿತ್​​ ವಾಪಸ್​ ಬಂದಿದ್ದು, ಅವರೇ ಮುನ್ನಡೆಸುತ್ತಿದ್ದಾರೆ. ವಿಚಿತ್ರ ಎಂದರೆ ಶುಭ್ಮನ್​ ಗಿಲ್​​ ಉಪನಾಯಕನ ಪಟ್ಟ ಕಟ್ಟಲಾಗಿದೆ. ಈ ಮೂಲಕ ಟೀಮ್​ ಇಂಡಿಯಾ ಮುಂದಿನ ಕ್ಯಾಪ್ಟನ್​ ಆಗಬೇಕಿದ್ದ ಕೆ.ಎಲ್​ ರಾಹುಲ್​ಗೆ ಬಿಗ್​ ಶಾಕ್​ ನೀಡಲಾಗಿದೆ.
ವಿರಾಟ್​​ ಕೊಹ್ಲಿ ಮೇಲೆ ಸಿಟ್ಟಿಗೆ ಹೀಗೆ ಮಾಡಿದ್ರಾ ಗಂಭೀರ್​​..?
ಸದ್ಯ ಗಂಭೀರ್​ ಮಾತಾಡಿರೋ ಹಳೆ ವಿಡಿಯೋ ಒಂದು ವೈರಲ್​ ಆಗಿದೆ. ನಾನು ಉಪನಾಯಕ ಆಗಿದ್ದೆ, ಧೋನಿ ಕ್ಯಾಪ್ಟನ್​ ಇದ್ದರು. ಬಾಂಗ್ಲಾದೇಶ ವಿರುದ್ಧ ಸರಣಿಗೆ ಟೀಮ್​ ಇಂಡಿಯಾ ಪ್ರಕಟ ಆಯ್ತು. ಆಗ ಒಂದೇ ಒಂದು ಚೇಂಜಸ್​ ಆಗಿದ್ದು, ನನ್ನನ್ನು ಉಪನಾಯಕನ ಸ್ಥಾನದಿಂದ ತೆಗೆದು ಹಾಕಲಾಯ್ತು. ವಿರಾಟ್​​ ಕೊಹ್ಲಿಗೆ ವೈಎಸ್​ ಕ್ಯಾಪ್ಟನ್ಸಿ ನೀಡಲಾಗಿತ್ತು. ಕ್ಯಾಪ್ಟನ್​​ ಇರುವಾಗ ಉಪನಾಯಕನನ್ನು ಬದಲಿಸಿದ್ದು ಕ್ರಿಕೆಟ್​​ ಇತಿಹಾಸದಲ್ಲೇ ಅದೇ ಮೊದಲು ಎಂದಿದ್ದರು. ಹಾಗಾಗಿ ಕೊಹ್ಲಿ, ಧೋನಿ ಮೇಲಿನ ಸಿಟ್ಟಿಗಾಗಿ ಗಂಭೀರ್​ ಕೆ.ಎಲ್​ ರಾಹುಲ್​ ಅವರ ಉಪನಾಯಕನ ಪಟ್ಟ ಕಿತ್ತುಕೊಂಡಿದ್ದಾರೆ ಅನ್ನೋ ಮಾತುಗಳು ಕೇಳಿ ಬಂದಿವೆ.
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us