newsfirstkannada.com

ಶ್ರೀಲಂಕಾ ಸೀರೀಸ್​​.. ‘ಪಂತ್​​ ಬೇಡ, ಈ ಸ್ಟಾರ್​ ಆಟಗಾರ ಬೇಕು’ ಎಂದ ಕೋಚ್​ ಗಂಭೀರ್​​!

Share :

Published July 15, 2024 at 5:35pm

Update July 15, 2024 at 6:10pm

    ಟೀಮ್​​ ಇಂಡಿಯಾ ಮುಖ್ಯ ಕೋಚ್​​ ಗೌತಮ್​ ಗಂಭೀರ್​​ ಆಯ್ಕೆ!

    ಗಂಭೀರ್​ ಕೋಚ್​​ ಆಗುತ್ತಿದ್ದಂತೆ ಸ್ಟಾರ್​ ಆಟಗಾರನಿಗೆ ಜಾಕ್​ ಪಾಟ್​

    ಶ್ರೀಲಂಕಾ ಸೀರೀಸ್​ನಿಂದಲೇ ಬದಲಾಗಲಿದೆ ಸ್ಯಾಮ್ಸನ್​​ ಅದೃಷ್ಟ

ಬಹುನಿರೀಕ್ಷಿತ 2024ರ ಐಸಿಸಿ ಮೆಗಾ ಟೂರ್ನಿ ಟಿ20 ವಿಶ್ವಕಪ್​​ ಫೈನಲ್​​ನಲ್ಲಿ ಸೌತ್​ ಆಫ್ರಿಕಾ ವಿರುದ್ಧ ಟೀಮ್​ ಇಂಡಿಯಾ ಗೆದ್ದು ಬೀಗಿದೆ. ಬರೋಬ್ಬರಿ 17 ವರ್ಷಗಳ ಬಳಿಕ ಟೀಮ್​ ಇಂಡಿಯಾ ಟಿ20 ವಿಶ್ವಕಪ್​ ಟ್ರೋಫಿ ಎತ್ತಿ ಹಿಡಿದಿದೆ. ಈ ಬೆನ್ನಲ್ಲೇ ಟೀಮ್​ ಇಂಡಿಯಾ ಮುಖ್ಯ ಕೋಚ್​​ ರಾಹುಲ್​ ದ್ರಾವಿಡ್​ ಕೂಡ ವಿದಾಯ ಹೇಳಿದ್ದಾರೆ. ರಾಹುಲ್​ ದ್ರಾವಿಡ್​ ಜಾಗಕ್ಕೆ ಗೌತಮ್​ ಗಂಭೀರ್ ಬಂದು ಕೂತಿದ್ದಾರೆ.

ಗೌತಮ್​​ ಗಂಭೀರ್​ ಟೀಮ್​ ಇಂಡಿಯಾ ಮುಖ್ಯ ಕೋಚ್​ ಆಗಿ ಅನೌನ್ಸ್​ ಆಗಿದ್ದಾರೆ. ಈಗಾಗಲೇ ಟೀಮ್​ ಇಂಡಿಯಾದಲ್ಲಿ ಹಲವು ಬದಲಾವಣೆಗಳನ್ನು ತರಲು ಗಂಭೀರ್​ ಮಾಸ್ಟರ್​ ಪ್ಲಾನ್​ ಮಾಡಿದ್ದಾರೆ. ತನ್ನ ಮಾಸ್ಟರ್​ ಪ್ಲಾನ್​​ ಜಾರಿಗಾಗಿ ಗಂಭೀರ್​​ ಯಾವುದೇ ರೀತಿಯ ಡೇರಿಂಗ್​ ಡಿಸಿಷನ್ಸ್​ ತೆಗೆದುಕೊಳ್ಳಲು ಹಿಂದೇಟು ಹಾಕುವುದಿಲ್ಲ. ಈ ವಿಚಾರ ಕೆಲವರಿಗೆ ಶಾಕಿಂಗ್​​ ಆದ್ರೆ, ಹಲವರಿಗೆ ವರವಾಗಿದೆ.

ಸಂಜು ಸ್ಯಾಮ್ಸನ್​​ಗೆ ಜಾಕ್​ ಪಾಟ್

2024ರ ಇಂಡಿಯನ್​​ ಪ್ರೀಮಿಯರ್​ ಲೀಗ್​ ಟಾಪ್​​ ಲೀಡಿಂಗ್​​ ಸ್ಕೋರರ್​​ ಪೈಕಿ ಸಂಜು ಸ್ಯಾಮ್ಸನ್​​ ಒಬ್ಬರು. ತಾನು ಆಡಿದ 15 ಪಂದ್ಯಗಳಲ್ಲಿ ಸಂಜು ಸ್ಯಾಮ್ಸನ್​​​ ಬರೋಬ್ಬರಿ 531 ರನ್​​ ಚಚ್ಚಿದ್ರು. ಇವರು ಸುಮಾರು 24 ಸಿಕ್ಸರ್​​, 48 ಫೋರ್​​ ಬಾರಿಸಿದ್ರು. ಹೈಎಸ್ಟ್​ ಸ್ಕೋರ್​ 86 ಆಗಿದ್ದು, ಸ್ಟ್ರೈಕ್​​ ರೇಟ್​ 150ಕ್ಕೂ ಹೆಚ್ಚಿತ್ತು. ಹಾಗಾಗಿಯೇ ಸಂಜು ಸ್ಯಾಮ್ಸನ್​​ 2024ರ ಟಿ20 ವಿಶ್ವಕಪ್​ಗೆ ಆಯ್ಕೆಯಾಗಿದ್ರು.

ಸಂಜು ಬದಲಿಗೆ ಪಂತ್​ಗೆ ಅವಕಾಶ

ಇನ್ನು, ಟಿ20 ವಿಶ್ವಕಪ್​​ನಲ್ಲಿ ಸಂಜು ಸ್ಯಾಮ್ಸನ್​ ಬದಲಿಗೆ ಮ್ಯಾನೇಜ್ಮೆಂಟ್​​ ಪಂತ್​ಗೆ ಅವಕಾಶ ನೀಡಿತ್ತು. ಅವಕಾಶ ನೀಡಿದ್ರೂ ಪಂತ್​ ಇತ್ತೀಚೆಗೆ ನಡೆದ ಟಿ20 ವಿಶ್ವಕಪ್​ನಲ್ಲಿ ಒಂದೆರಡು ಪಂದ್ಯ ಹೊರತುಪಡಿಸಿ ಹೇಳಿಕೊಳ್ಳುವಷ್ಟು ಪ್ರದರ್ಶನ ನೀಡಿಲ್ಲ. ಅಷ್ಟೇ ಅಲ್ಲ ಪಂತ್ ಇದುವರೆಗೂ ಆಡಿರೋ 74 ಅಂತರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಕೇವಲ 1158 ರನ್​ ಕಲೆ ಹಾಕಿದ್ದಾರೆ. ಆವರೇಜ್​​ ಕೇವಲ 22 ಇದ್ದು, ಸ್ಟ್ರೈಕ್​ ರೇಟ್​ ಕೂಡ 127 ಮಾತ್ರ ಇದೆ. ಹಾಗಾಗಿ ಪಂತ್​ ಜಾಗಕ್ಕೆ ಸಂಜು ಸ್ಯಾಮ್ಸನ್​ ಅವರನ್ನು ಗಂಭೀರ್​ ತಂದು ಕೂರಿಸೋ ಸಾಧ್ಯತೆ ಇದೆ.

ಈ ಹಿಂದೆಯೇ ಟೀಮ್​ ಇಂಡಿಯಾ ಪ್ಲೇಯಿಂಗ್​ ಎಲೆವೆನ್​ನಲ್ಲಿ ಸಂಜು ಸ್ಯಾಮ್ಸನ್​ಗೆ ಅವಕಾಶ ಸಿಗದಿದ್ದಕ್ಕೆ ಗಂಭೀರ್​ ಆಕ್ರೋಶ ಹೊರಹಾಕಿದ್ರು. ಸಂಜು ಸ್ಯಾಮ್ಸನ್​ ಭಾರತ ತಂಡದ ಬೆಸ್ಟ್​ ವಿಕೆಟ್​ ಕೀಪರ್​ ಬ್ಯಾಟರ್​ ಎಂದು ಟ್ವೀಟ್​ ಮಾಡಿದ್ರು. ಅಷ್ಟೇ ಅಲ್ಲದೆ ಬಿಸಿಸಿಐ ಎಷ್ಟು ಅವಕಾಶ ನೀಡಿದ್ರೂ ಪಂತ್​​​ ಸದ್ಬಳಕೆ ಮಾಡಿಕೊಳ್ಳುತ್ತಿಲ್ಲ. ಪದೇ ಪದೇ ಪಂತ್​ ಫೇಲ್ಯೂರ್​ ಆಗುತ್ತಿದ್ದಾರೆ. ಹಾಗಾಗಿ ಇವರು ಕೀಪಿಂಗ್​​ ಮೇಲೆ ಫುಲ್​ ಫೋಕಸ್​ ಮಾಡುವಾಗ ಹೇಗೆ ಬ್ಯಾಟಿಂಗ್​​ನಲ್ಲಿ ಸಕ್ಸಸ್​ ಆಗಲು ಸಾಧ್ಯ ಎಂದು ಪ್ರಶ್ನಿಸಿದ್ರು.

ಇದನ್ನೂ ಓದಿ: ಶ್ರೀಲಂಕಾ ಪ್ರವಾಸ.. ಕೋಚ್​​ ಆಗುತ್ತಿದ್ದಂತೆ ಪಂತ್​ಗೆ ಬಿಗ್​ ಶಾಕ್​ ಕೊಟ್ಟ ಗೌತಮ್​ ಗಂಭೀರ್​!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಶ್ರೀಲಂಕಾ ಸೀರೀಸ್​​.. ‘ಪಂತ್​​ ಬೇಡ, ಈ ಸ್ಟಾರ್​ ಆಟಗಾರ ಬೇಕು’ ಎಂದ ಕೋಚ್​ ಗಂಭೀರ್​​!

https://newsfirstlive.com/wp-content/uploads/2024/05/Gambhir_2.jpg

Load More