ದೀ ವಾಲ್ಗೆ ಎಂದೇ ಖ್ಯಾತಿ ಪಡೆದಿರುವ ಕೋಚ್ ರಾಹುಲ್ ದ್ರಾವಿಡ್
ಶುಭಮನ್ ಗಿಲ್ಗಾಗಿ ಭವಿಷ್ಯದ ಆಟಗಾರನ ಮೇಲೆ ಕರಿ ನೆರಳು ಬಿತ್ತಾ?
ಅಂಡರ್-19 ವಿಶ್ವಕಪ್ನಲ್ಲಿ ಸೆಂಚುರಿ ಬಾರಿಸಿ ದ್ರಾವಿಡ್ ಮನ ಗೆದ್ದ ಗಿಲ್
ಕ್ರಿಕೆಟ್ ಅನ್ನೋ ಜಂಟಲ್ಮನ್ ಗೇಮ್ನ ರಿಯಲ್ ಜಂಟಲ್ಮನ್ ಅಂತಾನೇ ರಾಹುಲ್ ದ್ರಾವಿಡ್ ಫೇಮಸ್. ಇಂತಹ ದ್ರಾವಿಡ್ ಈ ಒಬ್ಬ ಯುವ ಆಟಗಾರಿಗೆ ಮೋಸ ಮಾಡಿದ್ರಾ ಎಂದು ಹೀಗೊಂದು ಚರ್ಚೆ ನಡೆಯುತ್ತಿದೆ. ತನ್ನ ಶಿಷ್ಯನನ್ನ ಬೆಳೆಸಲು ಇನ್ನೊಬ್ಬ ಆಟಗಾರನ ಭವಿಷ್ಯವನ್ನ ಹಾಳು ಮಾಡಿಬಿಟ್ರಾ ಎಂಬ ಪ್ರಶ್ನೆ ಹುಟ್ಟಿದೆ.
ರಾಹುಲ್ ದ್ರಾವಿಡ್ ಜಂಟಲ್ಮನ್ ಗೇಮ್ ಸಿಕ್ಕ ರಿಯಲ್ ಜಂಟಲ್ ಮೆನ್. ವಿಶ್ವ ಕ್ರಿಕೆಟ್ ಲೋಕದಲ್ಲಿ ಒಬ್ಬೇ ಒಬ್ಬ ಹೇಟರ್ ಇಲ್ಲದೇ ಎಲ್ಲರು ಪ್ರೀತಿಸುವ ಆಟಗಾರರ ಪಟ್ಟಿಯಲ್ಲಿ ದ್ರಾವಿಡ್ ಅಗ್ರಸ್ಥಾನ. ಒಬ್ಬ ಆಟಗಾರನಾಗಿ ದಿ ವಾಲ್ ಮಾಡಿರುವ ಸಾಧನೆಗೆ ಸಲಾಂ ಅನ್ನದಿರೋ ಕ್ರಿಕೆಟ್ ಅಭಿಮಾನಿಯೇ ಇಲ್ಲ.
ಟೀಮ್ ಇಂಡಿಯಾದಲ್ಲಿ ಶುಭಮನ್ ಗಿಲ್ ಸಂಚಲನ.!
ಸದ್ಯ ಟೀಮ್ ಇಂಡಿಯಾದಲ್ಲಿ ಶುಭಮನ್ ಗಿಲ್ ಅಬ್ಬರ ಜೋರಾಗಿದೆ. ಮುರೂ ಫಾರ್ಮೆಟ್ನಲ್ಲಿ ಮಿಂಚಿನ ಪ್ರದರ್ಶನ ನೀಡ್ತಿರೋ ಗಿಲ್, ಎಲ್ಲರನ್ನೂ ದಂಗು ಬಡಿಸಿದ್ದಾರೆ. ಆರಂಭಿಕನಾಗಿ ಕನ್ಸಿಸ್ಟೆಂಟ್ ಪ್ರದರ್ಶನ ನೀಡೋದ್ರೊಂದಿಗೆ ಸಂಚಲನ ಮೂಡಿಸಿದ್ದಾರೆ. ಅಂತರಾಷ್ಟ್ರೀಯ ಕ್ರಿಕೆಟ್ಗೆ ಕಾಲಿಟ್ಟ ಕೆಲವೇ ವರ್ಷದಲ್ಲಿ ಟೀಮ್ ಇಂಡಿಯಾದ ನ್ಯೂ ಪ್ರಿನ್ಸ್ ಎಂದು ಕರೆಸಿಕೊಳ್ತಿದ್ದಾರೆ. ಗಿಲ್ ಈ ಯಶಸ್ಸೇ, ಇದೀಗ ದ್ರಾವಿಡ್ ಮೇಲೆ ಪ್ರಶ್ನೆ ಹಟ್ಟುವಂತೆ ಮಾಡಿರುವುದು.
ಶಿಷ್ಯ ಶುಭಮನ್ ಗಿಲ್ ಸಕ್ಸಸ್ಗೆ ಗುರುವಿನ ಕೃಪಾಕಟಾಕ್ಷ.!
ಗಿಲ್ ಈ ಟ್ಯಾಲೆಂಟೆಡ್ ಪ್ಲೇಯರ್ ಪಳಗಿದ್ದೇ ದ್ರಾವಿಡ್ ಗರಡಿಯಲ್ಲಿ. ದ್ರಾವಿಡ್ ಎನ್ಸಿಎ ಡೈರೆಕ್ಟರ್ ಆಗಿ ಕಾರ್ಯ ನಿರ್ವಹಿಸ್ತಿದ್ದ ವೇಳೆ ಜೂನಿಯರ್ ಕ್ರಿಕೆಟರ್ಗಳಿಗೂ ಪಾಠವನ್ನೂ ಮಾಡ್ತಿದ್ರು. ಆ ಬಳಿಕ ಅಂಡರ್-19 ವಿಶ್ವಕಪ್ ತಂಡಕ್ಕೆ ಕೋಚ್ ಕೂಡ ಆಗಿದ್ರು. ಆ ಸಮಯದಲ್ಲೇ ಗಿಲ್ ಉದಯವಾಗಿತ್ತು. ಅಂಡರ್-19 ವಿಶ್ವಕಪ್ ಸೆಂಚುರಿ ಬಾರಿಸಿದ ಗಿಲ್ ದ್ರಾವಿಡ್ ಮನ ಗೆದ್ದಿದ್ರು. ಆ ಬಳಿಕ ಟೀಮ್ ಇಂಡಿಯಾಗೆ ಎಂಟ್ರಿ ಕೊಟ್ಟ ಗಿಲ್, ದ್ರಾವಿಡ್ ಹೆಡ್ ಕೋಚ್ ಆದ ಮೇಲೆ ಖಾಯಂ ಪ್ಲೇಯರ್ ಆಗಿಬಿಟ್ರು.
ಗಿಲ್ ಸಾಮರ್ಥ್ಯವನ್ನ ಈಗ ಯಾರೂ ಪ್ರಶ್ನಿಸೋರೆ ಇಲ್ಲ. 3 ಫಾರ್ಮೆಟ್ನಲ್ಲಿ ಗಿಲ್ ಖದರ್ ತೋರಿದ್ದಾರೆ. ಆದ್ರೆ, ಆರಂಭದಲ್ಲಿ ಗಿಲ್ ಕೂಡ ವೈಫಲ್ಯ ಅನುಭವಿಸಿದ್ರು. ರನ್ಗಳಿಕೆಗೆ ಪರದಾಡಿದ್ರು. ಆದ್ರೆ, ತಂಡದಲ್ಲಿ ಸ್ಥಾನ ಮಾತ್ರ ಮಿಸ್ ಆಗ್ಲಿಲ್ಲ. ಮ್ಯಾನೇಜ್ಮೆಂಟ್ ಬ್ಯಾಕ್ ಮಾಡಿತ್ತು. ಗಿಲ್ ಸಕ್ಸಸ್ಗೆ ಇಷ್ಟೇಲ್ಲ ಅವಕಾಶ ಕೊಟ್ಟ ಮ್ಯಾನೇಜ್ಮೆಂಟ್ ಇದೇ ಸಂದರ್ಭದಲ್ಲಿ ಇನ್ನೊಬ್ಬ ಯುವ ಆಟಗಾರನನ್ನ ಮರೆತು ಬಿಡ್ತು.
ಋತುರಾಜ್ ಗಾಯಕ್ವಾಡ್ ಸಿಗಲಿಲ್ಲ ಹೆಚ್ಚಿನ ಬೆಂಬಲ.!
ಗಿಲ್, ಋತುರಾಜ್ ಗಾಯಕ್ವಾಡ್ ಇಬ್ಬರೂ ಭವಿಷ್ಯದ ಸೂಪರ್ ಸ್ಟಾರ್ಸ್.. ಇಬ್ಬರಿಗೂ ಆ ಕೆಪಾಸಿಟಿ ಇದೆ. ಆದ್ರೆ, ಗಿಲ್ಗೆ ಸಿಕ್ಕಷ್ಟು ಅವಕಾಶ, ಬೆಂಬಲ ಋತುರಾಜ್ಗೆ ಸಿಗಲಿಲ್ಲ. ಹಾಗೇ ನೋಡಿದ್ರೆ, ದ್ರಾವಿಡ್ ಕೋಚ್ ಆಗಿ ಲಂಕಾ ಪ್ರವಾಸಕ್ಕೆ ತೆರಳಿದ್ದಾಗಲೇ ಋತುರಾಜ್ ಟೀಮ್ ಇಂಡಿಯಾಗೆ ಎಂಟ್ರಿ ಕೊಟ್ಟಿದ್ರು. ಋತುರಾಜ್ ಸಾಮರ್ಥ್ಯ, ಬ್ಯಾಟಿಂಗ್ ಬಗ್ಗೆ ದ್ರಾವಿಡ್ಗು ಚನ್ನಾಗೇ ಗೊತ್ತು. ಆದ್ರೆ, ಅವಕಾಶ ಮಾತ್ರ ಸಿಗಲಿಲ್ಲ.
ಋತುರಾಜ್ಗೆ ಹೋಲಿಸಿದ್ರೆ ಶುಭಮನ್ ಗಿಲ್ ಡಲ್..!
ಗಿಲ್ಗೆ ಹೋಲಿಸಿದ್ರೆ ಋತುರಾಜ್ ಗಾಯಕ್ವಾಡ್ ಏಕದಿನ ಮಾದರಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಆದ್ರೆ, ಋತುರಾಜ್ಗೆ ಈವರೆಗೆ ಸಿಕ್ಕಿರೋದು ಒಂದೇ ಒಂದು ಏಕದಿನ ಪಂದ್ಯದಲ್ಲಿ ಅವಕಾಶ. ಆದ್ರೆ, ಗಿಲ್ ಅದಾಗಲೇ 24 ಏಕದಿನ ಆಡಿದ್ದಾರೆ.
ಲಿಸ್ಟ್ ಎ ಪರ್ಫಾಮೆನ್ಸ್
ಲಿಸ್ಟ್ ಎ ಮಾದರಿಯಲ್ಲಿ 71 ಇನ್ನಿಂಗ್ಸ್ ಆಡಿರುವ ಋತುರಾಜ್ 61.12ರ ಸರಾಸರಿಯಲ್ಲಿ 4,034 ರನ್ಗಳಿಸಿ 15 ಶತಕ, 16 ಅರ್ಧಶತಕ ಸಿಡಿಸಿದ್ದಾರೆ. 78 ಪಂದ್ಯವನ್ನಾಡಿರುವ ಗಿಲ್ 52.57 ಸರಾಸರಿಯಲ್ಲಿ 3,575 ರನ್ಗಳಿಸಿ 10 ಶತಕ, 16 ಅರ್ಧಶತಕ ಸಿಡಿಸಿದ್ದಾರೆ. ಲಿಸ್ಟ್ ಎ ಟ್ರ್ಯಾಕ್ ರೆಕಾರ್ಡ್ ನೋಡಿದ್ರೆ, ಶುಭಮನ್ ಗಿಲ್ಗಿಂತ ಋತುರಾಜ್ ಗಾಯಕ್ವಾಡ್ ಉತ್ತಮ ಪ್ರದರ್ಶನ ನೀಡಿದ್ದಾರೆ. ಆದ್ರೆ, ಟೀಮ್ ಇಂಡಿಯಾ ಪರ ಹೆಚ್ಚಿನ ಅವಕಾಶ ಮಾತ್ರ ಸಿಕ್ಕಿಲ್ಲ.
ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಏನಾಗುತ್ತೆ.?
ಮುಂಬರುವ ವೆಸ್ಟ್ ಇಂಡೀಸ್ ಪ್ರವಾಸದ ಟೆಸ್ಟ್ ಏಕದಿನ ಸರಣಿಗೆ ಟೀಮ್ ಅನೌನ್ಸ್ ಆಗಿದೆ. ಈ 2 ತಂಡದಲ್ಲಿ ಗಿಲ್- ಋತುರಾಜ್ ಗಾಯಕ್ವಾಡ್ ಇಬ್ಬರಿಗೂ ಮಣೆ ಹಾಕಲಾಗಿದೆ. ಹೀಗಾಗಿ ಮತ್ತೆ ಪ್ಲೇಯಿಂಗ್ ಇಲೆವೆನ್ನಲ್ಲಿ ಯಾರಿಗೆ ಚಾನ್ಸ್ ಸಿಗುತ್ತೆ ಅನ್ನೋದು ಕುತೂಹಲ ಮೂಡಿದೆ. ಮೆಲ್ನೋಟಕ್ಕೆ ಗಿಲ್ಗೆ ಸ್ಥಾನ ಸಿಗೋದು ಬಹುತೇಕ ಪಕ್ಕಾ. ಹಾಗಿದ್ರೂ, ಕೋಚ್ ದ್ರಾವಿಡ್ ದೊಡ್ಡ ಮನಸ್ಸು ಮಾಡಿ ಋತುರಾಜ್ಗೆ ಮಣೆ ಹಾಕ್ತಾರಾ ಕಾದು ನೋಡೋಣ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ