newsfirstkannada.com

ಕೋಚ್​​ ಆಗಿ ಭಾರೀ ನಿರಾಸೆ ಮೂಡಿಸಿದ ದ್ರಾವಿಡ್​​​.. ಇವ್ರ ಮುಂದಿನ ಕಥೆಯೇನು..?

Share :

10-09-2023

    ಪ್ರತ್ಯೇಕ ಕೋಚ್​​ಗಳ ನೇಮಕಕ್ಕೆ ಬಿಸಿಸಿಐ ಒಲವು..!

    ಇಂಗ್ಲೆಂಡ್ ಮಾದರಿ ಅನುಷ್ಠಾನಕ್ಕೆ ಬಿಸಿಸಿಐ ಚಿಂತನೆ

    ಟೆಸ್ಟ್​ ತಂಡದ ಕೋಚ್ ಆಗಿರ್ತಾರಾ ರಾಹುಲ್​ ದ್ರಾವಿಡ್..?

ಏಕದಿನ ವಿಶ್ವಕಪ್ ಬೆನ್ನಲ್ಲೇ ರಾಹುಲ್​ ದ್ರಾವಿಡ್, ಕೋಚಿಂಗ್ ಅವಧಿ ಮುಕ್ತಾಯಗೊಳ್ಳಲಿದೆ. ಕೋಚ್ ಆಗಿ ಭಾರೀ ನಿರಾಸೆಯನ್ನೇ ಮೂಡಿಸಿರುವ ದ್ರಾವಿಡ್​, ಮುಂದಿನ ಅವಧಿಗೆ ಮುಂದುವರೀತಾರಾ ಅಂದ್ರೆ, ಬಹುತೇಕರು ಡೌಟ್ ಅನ್ನೋ ಉತ್ತರ ನೀಡ್ತಾರೆ. ಆದ್ರೆ, ಇದೀಗ ಈ ವಿಚಾರದಲ್ಲಿ ಮೇಜರ್ ಅಪ್​ಡೇಟ್​​ವೊಂದು ಹೊರಬಿದ್ದಿದೆ.

ಏಕದಿನ ವಿಶ್ವಕಪ್ ಮೆಗಾ ಟೂರ್ನಿಗೆ ಕೌಂಟ್​ಡೌನ್ ಶುರುವಾಗಿದೆ. 12 ವರ್ಷಗಳ ಟ್ರೋಫಿ ಬರ ನೀಗಿಸಿಕೊಳ್ಳುವತ್ತ ಟೀಮ್ ಇಂಡಿಯಾ ಚಿತ್ತ ನೆಟ್ಟಿದೆ. ಈ ನಿಟ್ಟಿನಲ್ಲಿ ರಾಹುಲ್ ದ್ರಾವಿಡ್ ಆ್ಯಂಡ್ ರೋಹಿತ್ ಜೋಡಿ ಇನ್ನಿಲ್ಲದ ಕಸರತ್ತು ನಡೆಸ್ತಿದ್ದಾರೆ. ಶತಯ ಗತಾಯ ವಿಶ್ವಕಪ್​ ಟ್ರೋಫಿ ಜಯಿಸಿ ತೆರೆಮರೆಗೆ ಸರಿಯೋ ಪ್ಲಾನ್​ನಲ್ಲಿದ್ದಾರೆ. ಇನ್​ಫ್ಯಾಕ್ಟ್​ ಕೋಚ್ ರಾಹುಲ್ ದ್ರಾವಿಡ್ ಒಪ್ಪಂದ ಕೂಡ ವಿಶ್ವಕಪ್​ ಬಳಿಕ ಅಂತ್ಯವಾಗಿಲಿದೆ.

ಕೋಚ್​ ರವಿ ಶಾಸ್ತ್ರಿ ನಿರ್ಗಮನದ ಬಳಿಕ ದ್ರೋಣಾಚಾರ್ಯರಾಗಿ ಎಂಟ್ರಿ ಕೊಟ್ಟ ರಾಹುಲ್​ ದ್ರಾವಿಡ್, ಸಿಕ್ಕಾಪಟ್ಟೆ ಭರವಸೆಯನ್ನ ಹುಟ್ಟಿಹಾಕಿದ್ರು. ಕ್ರಿಕೆಟ್ ವಲಯದಲ್ಲಿ ಅಸಾಧ್ಯವಾಗಿದ್ದನೆಲ್ಲಾ ಸಾಧಿಸ್ತೇವೆ ಎಂಬ ನಿರೀಕ್ಷೆ ಹೆಚ್ಚಿತ್ತು. ಆದ್ರೆ, 20 ತಿಂಗಳ ಅವಧಿಯಲ್ಲಿ ಇದೆಲ್ಲವೂ ಹುಸಿಯಾಯ್ತು. ಪ್ರಮುಖ ಟೂರ್ನಿಗಳಲ್ಲಿ ಸೋಲು ಕಂಡಿರೋದ್ರಿಂದ ದ್ರಾವಿಡ್​ ಕೋಚ್​ ಹುದ್ದೆಯಲ್ಲಿ ಮುಂದುವರೆಯೋದು ಅನುಮಾನ ಎನ್ನಲಾಗಿತ್ತು. ಇದೀಗ ಇದೆಲ್ಲವೂ ಬದಲಾಗುವ ಸಾಧ್ಯತೆ ಇದೆ.

ಅವಧಿ ಮುಕ್ತಾಯದ ಬಳಿಕವೂ ದ್ರಾವಿಡ್​​​​​​​​​​​​​​​ ಮುಂದುವರಿಕೆ..!
​ವಿಶ್ವಕಪ್​ ಬಳಿಕವೂ ಕೋಚ್​​​​​​​​​​​​​​​​​​​​​​​ ಆಗಿ ಉಳಿಯಲಿದ್ದಾರಾ ವಾಲ್..?

ಏಕದಿನ ವಿಶ್ವಕಪ್​ ಮುಕ್ತಾಯದ ಬಳಿಕ ಕೋಚ್ ದ್ರಾವಿಡ್​ರ 2 ವರ್ಷಗಳ ಒಪ್ಪಂದ ಅಂತ್ಯಗೊಳ್ಳಲಿದೆ. ಈ ಬಳಿಕ ಸ್ವತಃ ಕೋಚ್​ ಹುದ್ದೆಯಲ್ಲಿ ಮುಂದುವರಿಯಲು ದ್ರಾವಿಡ್ ಬಯಸೋದು ಅನುಮಾನ. ದ್ರಾವಿಡ್ ಅಷ್ಟೇ ಅಲ್ಲ.! ಏಕದಿನ ವಿಶ್ವಕಪ್​​ ಬಳಿಕ ಮೇಜರ್ ಸರ್ಜರಿಗೆ ಮುಂದಾಗಲಿರುವ ಬಿಸಿಸಿಐ, ನ್ಯೂ ಕ್ಯಾಪ್ಟನ್ ಜೊತೆ ಜೊತೆಗೆ ಹೊಸ ಕೋಚ್​​ಗಾಗಿ ಹುಡುಕಾಟ ನಡೆಸೋದು ಫಿಕ್ಸ್​. ಇದರ ಹೊರತಾಗಿಯೂ ರಾಹುಲ್ ದ್ರಾವಿಡ್, ಕೋಚ್ ಹುದ್ದೆಯಲ್ಲಿ ಮುಂದುವರಿಯುವ ಸಾಧ್ಯತೆ ದಟ್ಟವಾಗಿದೆ. ಇದಕ್ಕೆಲ್ಲಾ ಕಾರಣ ಬಿಸಿಸಿಐನ ನಡೆ.

ಇಂಗ್ಲೆಂಡ್ ಮಾದರಿ ಅನುಷ್ಠಾನಕ್ಕೆ ಬಿಸಿಸಿಐ ಚಿಂತನೆ..!

ಸಾಲು ಸಾಲು ವಿಶ್ವಕಪ್ ಟೂರ್ನಿಗಳು ಮುಂದಿವೆ. ಈ ಟೂರ್ನಿಗಳಲ್ಲಿ ಸಕ್ಸಸ್​​ ಕಾಣಲು ಇಚ್ಚಿಸಿರುವ ಬಿಸಿಸಿಐ, ವೈಟ್ ಬಾಲ್ ಹಾಗೂ ರೆಡ್​ ಬಾಲ್​​ಗೆ ಪ್ರತ್ಯೇಕ ಕೋಚ್​​ಗಳ ನೇಮಕಕ್ಕೆ ಒಲವು ತೋರಿದೆ. ಇಂಗ್ಲೆಂಡ್ ಮಾದರಿ ಅನುಷ್ಠಾನಕ್ಕೆ ಚಿಂತನೆಯನ್ನೂ ನಡೆಸಿದೆ. ಈಗಾಗಲೇ ಟೆಸ್ಟ್​ ಹಾಗೂ ವೈಟ್​ಬಾಲ್​ ಕ್ರಿಕೆಟ್​​ನಲ್ಲಿ ಇಂಗ್ಲೆಂಡ್ ಮಾದರಿಯನ್ನೇ ಅನುಸರಿಸಿರುವ ಬಿಸಿಸಿಐ, ಟಿ20 ಫಾರ್ಮೆಟ್​​ಗೆ ಪ್ರತ್ಯೇಕ ತಂಡವನ್ನೇ ಕಟ್ಟಿದೆ. ಇದೀಗ ಕೋಚಿಂಗ್ ವಿಚಾರದಲ್ಲೂ ಇಂಗ್ಲೆಂಡ್ ಮಾದರಿಯನ್ನೇ ಅನುಸರಿಸಲು ಭಾರೀ ಉತ್ಸುಕತೆ ತೋರಿದೆ. ಆ ಮೂಲಕ ಕೋಚ್​ಗಳ ಮೇಲಿನ ಹೊರೆ ಕಡಿತಕ್ಕೆ ಮುಂದಾಗಿದೆ. ಇದೇ ಕಾರಣಕ್ಕೆ ರಾಹುಲ್ ದ್ರಾವಿಡ್, ಒಂದು ಫಾರ್ಮೆಟ್​ನಲ್ಲಿ ಮುಂದುವರಿಯುವ ಸಾಧ್ಯತೆ ಇದೆ ಎನ್ನಲಾಗ್ತಿದೆ.

ಟೆಸ್ಟ್​ ತಂಡದ ಕೋಚ್ ಆಗಿರ್ತಾರಾ ದ್ರಾವಿಡ್..?

ಇಂಗ್ಲೆಂಡ್​ ಮಾದರಿಯನ್ನೇ ಬಿಸಿಸಿಐ ಅನುಷ್ಠಾನ ಮಾಡಿದ್ರೆ, ದ್ರಾವಿಡ್​ ಟೆಸ್ಟ್​ ತಂಡದ ಕೋಚ್​​ ಆಗಿ ಮುಂದುವರಿಯೋ ಸಾಧ್ಯತೆ ಇದೆ. ಯಾಕಂದ್ರೆ, ಏಕದಿನ ವಿಶ್ವಕಪ್ ಮುಗಿದ ಬೆನ್ನಲ್ಲೇ ಟೀಮ್ ಇಂಡಿಯಾ, ಸೌತ್ ಆಫ್ರಿಕಾ ಹಾಗೂ ಇಂಗ್ಲೆಂಡ್ ವಿರುದ್ಧದ ಟೆಸ್ಟ್​ ಸರಣಿಗಳಲ್ಲಿ ಆಡಬೇಕಾಗಿದೆ. ಈ ನಿಟ್ಟಿನಲ್ಲಿ ರಾಹುಲ್​​ ದ್ರಾವಿಡ್​ಗೆ ರೆಡ್​ ಬಾಲ್ ಫಾರ್ಮೆಟ್​ಗೆ ವರ್ಗಾಯಿಸಿ, ವೈಟ್​ಬಾಲ್ ಫಾರ್ಮೆಟ್​ಗೆ ಹೊಸ ಕೋಚ್​ನ ನೇಮಿಸಬಹುದಾಗಿದೆ.

ಭವಿಷ್ಯದ ಟಾಕ್​ ಏನೇ ಇದ್ರೂ, ಸದ್ಯ ರಾಹುಲ್ ದ್ರಾವಿಡ್ ಗುರಿ ಏಕದಿನ ವಿಶ್ವಕಪ್​ ಮಾತ್ರ.! ಈ ನಿಟ್ಟಿನಲ್ಲೇ ಕಾರ್ಯ ಪ್ರವೃತ್ತರಾಗಿರುವ ರಾಹುಲ್​​ ದ್ರಾವಿಡ್, ಆಟಗಾರನಾಗಿ ದಕ್ಕಿಸಿಕೊಳ್ಳದ ವಿಶ್ವಕಪ್​ ಟ್ರೋಫಿಯನ್ನ, ಕೋಚ್ ಆಗಿ ನೀಗಿಸಿಕೊಳ್ಳುವ ಲೆಕ್ಕಚಾರದಲ್ಲಿದ್ದಾರೆ. ದ್ರಾವಿಡ್​​ರ ಈ ಕನಸು ನನಸಾಗಲಿ ಅನ್ನೋದಷ್ಟೇ ನಮ್ಮೆಲ್ಲರ ಆಶಯ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೋಚ್​​ ಆಗಿ ಭಾರೀ ನಿರಾಸೆ ಮೂಡಿಸಿದ ದ್ರಾವಿಡ್​​​.. ಇವ್ರ ಮುಂದಿನ ಕಥೆಯೇನು..?

https://newsfirstlive.com/wp-content/uploads/2023/08/Rahul-dravid.jpg

Load More