newsfirstkannada.com

ಎಣ್ಣೆ ಏಟಲ್ಲಿ ನಡು ರೋಡಲ್ಲಿ ಯುವಕ ಯುವತಿಯರು ಗುದ್ದಾಟ.. ಅಸಲಿಗೆ ಆಗಿದ್ದೇನು..?

Share :

22-10-2023

    ಮಿಡ್​ನೈಟ್​ನಲ್ಲಿ ಯುವಕ-ಯುವತಿಯರ ಗ್ಯಾಂಗ್​ವಾರ್!

    ಕುಡಿದ ಮತ್ತಿನಲ್ಲಿ ಹೆಣ್ಣು-ಗಂಡೈಕ್ಳ ಹೊಡೆದಾಟ ಯಾರದ್ದು ತಪ್ಪು?

    ಮಾರ್ಯಾದೆಗೆ ಅಂಜಲ್ಲ ಪೊಲೀಸರ ಭಯ ಇಲ್ಲವೇ ಇಲ್ಲ ಇಲ್ಲ

ಬೆಂಗಳೂರು: ಒಳಗಡೆ ಪರಮಾತ್ಮ ಸೇರಿದರೇ ಈ ಯುವಕ ಯುವತಿಯರಿಗೆ ಏನಾಗುತ್ತೋ ಗೊತ್ತಿಲ್ಲ. ನಶೆ ಲೋಕದಲ್ಲಿ ತೇಲಾಡ್ತಿದ್ದವರು ಜಗಳ ಶುರು ಮಾಡ್ಕೊಬಿಡ್ತಾರೆ. ಮೊನ್ನೆಯಷ್ಟೇ ಕುಡಿದ ಮತ್ತಿನಲ್ಲಿ ಯುವತಿ ಬೀದಿ ರಂಪಾಟ ಮಾಡಿದ್ದಳು. ಆ ಘಟನೆ ನಡೆದು ಎರಡು ದಿನ ಸಹ ಕಳೆದಿಲ್ಲ ಅಷ್ಟರಲ್ಲೇ ಚರ್ಚಸ್ಟ್ರೀಟ್​ ಬೀದಿಯಲ್ಲಿ ಹುಡುಗ ಹುಡುಗಿಯರು ಹೊಡೆದಾಡ್ಕೊಂಡಿದ್ದಾರೆ.

ಎಣ್ಣೆ ಏಟು.. ನಡು ಬೀದಿಯಲ್ಲೇ ಯುವಕ ಯುವತಿಯರ ಫೈಟ್​

ಬೀದಿ ಅಂತಾನೂ ನೋಡ್ತಿಲ್ಲ. ಪೊಲೀಸರ ಭಯವೂ ಇಲ್ಲ. ನವ ಯುಗದ ಯುವಕ ಯುವತಿಯರು ರಸ್ತೆ ಮಧ್ಯದಲ್ಲಿ ಮನಸೋ ಇಚ್ಛೆ ಹೊಡೆದಾಡಿಕೊಂಡಿದ್ದಾರೆ. ಅದ್ಯಾಕೋ ಏನೋ ಗೊತ್ತಿಲ್ಲ ಇವತ್ತಿನ ಹುಡುಗ ಹುಡುಗಿಯರಿಗೆ ಪರಮಾತ್ಮ ಒಳಗೆ ಸೇರಿದ್ರೆ ಯಾವುದರ ಅರಿವೇ ಇರಲ್ಲ. ದೇಹದೊಳಗೆ ಎಣ್ಣೆ ಸೇರಿದ್ರೆ ಮೈಮೇಲೆ ದೆವ್ವ ಬಂದಂತೆ ಆಡುತ್ತಾರೆ. ಒಳಗೆ ಸೇರಿದ್ರೆ ಗುಂಡು ಹುಡುಗಿಯಾಗುವಳು ಗಂಡು. ಅಕ್ಕ ಫುಲ್ ಟೈಟಾಗಿ ರೋಡ್​​ನ್ನೇ ಬೆಡ್ ಮಾಡ್ಕೊಂಡು ನಿದ್ದೆ ಮಾಡ್ತಿದ್ದಾಳೆ. ಈ ಯುವತಿಗೆ ಹೊರ ಜಗತ್ತಿನ ಅರಿವೇ ಇಲ್ಲ. ನಿಂತುಕೊಳ್ಳಲು ಹಾಗೂ ಕುಳಿತುಕೊಳ್ಳಲು ಆಗ್ತಿಲ್ಲ. ಕಾರಿನ ಮೇಲೆ ಹತ್ತಿ ಪಬ್​ ಮುಂದೆ ನಿಂತಿದ್ದ ಬಾಯ್ಸ್​ಗೆ ಹಾಯ್ ಹಾಯ್ ಮಾಡಿದ್ದಾರೆ. ಕೋರಮಂಗಲದ ಡ್ರಂಕನ್ ಡ್ಯಾಡಿ ಪಬ್​ನಲ್ಲಿ ಯುವತಿ- ಯುವಕರ ಗ್ಯಾಂಗ್ ಫುಲ್ ಪಾರ್ಟಿ ಮಾಡಿ ರೋಡ್​​ನಲ್ಲಿ ಬಿದ್ದು ಒದ್ದಾಡಿತ್ತು. ಆದ್ರೆ, ಈ ಘಟನೆ ನಡೆದು ಎರಡು ದಿನ ಕಳೆದಿಲ್ಲ. ಅಷ್ಟರಲ್ಲೇ ಚರ್ಚ್ ಸ್ಟ್ರೀಟ್​ನ ಬರ್ಗರ್ ಸೈನೆರ್​ನಲ್ಲಿ ಮತ್ತೊಂದು ಗಲಾಟೆ ನಡೆದಿದೆ.

ಬೀದಿ ರಂಪಾಟದ ಜಗಳ ಸುಸಂಸ್ಕೃತವಾಗಿತ್ತು. ಹುಡುಗ ಹುಡುಗಿ ಅಂತಾನೂ ನೋಡ್ತಿಲ್ಲ. ನಡು ರಸ್ತೆಯಲ್ಲೇ ಒಬ್ಬರಿಗೊಬ್ಬರು ಕೈ ಕೈ ಮಿಲಾಯಿಸಿ ಹೊಡೆದಾಡ್ಕೊಂಡಿದ್ದಾರೆ. ಯುವತಿಯರನ್ನ ಚುಡಾಯಿಸಿದಕ್ಕೆ ಯುವಕರ ಮಧ್ಯೆ ಮಾತಿಗೆ ಮಾತು ಬೆಳೆದು ಗಲಾಟೆ ನಡೆದಿದೆ. ಎರಡು ಗ್ಯಾಂಗ್​ ನಡುವೆ ರಣ ಕಾಳಗವೇ ನಡೆದಿದೆ. ಒಬ್ಬರಿಗೊಬ್ಬರು ತಳ್ಳಾಡಿ ನೂಕಾಡಿ ಪಬ್​ ಮುಂದೆಯೇ ಹೊಡೆದಾಡಿಕೊಂಡಿದ್ದಾರೆ. ಹುಡುಗರು ಮಾತ್ರವಲ್ಲ ಹುಡುಗಿಯರು ರೊಚ್ಚಿಗೆದ್ದು, ಹುಡುಗರ ಮೇಲೆ ಹಲ್ಲೆ ಮಾಡಿದ್ದಾರೆ.

ಯುವಕನ ಮೇಲೆ ಹಲ್ಲೆ ಮಾಡುತ್ತಿರುವ ಹುಡುಗಿ

ಹುಡುಗಿ ಎಣ್ಣೆಯ ಮತ್ತಿನಲ್ಲಿ ಹುಡುಗನ ಮೇಲೆ ಅದೇಗೆ ಮುಗಿಬಿದ್ದಿದ್ದಾಳೆ ಅಂತ ಯುವಕನನ್ನ ತಳ್ಳಾಡಿ ಹಲ್ಲೆ ಮಾಡಿದ್ದಾಳೆ. ಹುಡುಗ ಹೋಗಿ ಹುಲ್ಲಿನ ಗಾರ್ಡನ್​ ಒಳಗೆ ಬಿದ್ದಿದ್ದಾನೆ. ಪರಮಾತ್ರ ಒಳಗೆ ಸೇರಿದ್ದಾನೆ ಅಂದ್ರೆ ಕೇಳಬೇಕಾ ಅದಕ್ಕೆ ಜಗಳ ಬಿಡಿಸೋಕೆ ಹೋದ ಸ್ಥಳೀಯರ ಮೇಲೂ ಈ ಯುವಕ ಯುವತಿ ಗ್ಯಾಂಗ್ ಅಟ್ಟಹಾಸ ತೋರಿದೆ. ಸ್ಥಳೀಯರ ಮೇಲೂ ಹಲ್ಲೆ ಮಾಡಿರೋ ಆರೋಪ ಕೇಳಿ ಬಂದಿದೆ. ಅಪ್ಪ ಅಮ್ಮ ನಮ್ಮ ಮಕ್ಕಳು ಚೆನ್ನಾಗಿ ಓದಿ ಒಂದೊಳ್ಳೆ ಜೀವನ ಕಟ್ಕೊಳ್ಳಿ ಅಂತ ಬೆಂಗಳೂರಿಗೆ ಕಳಿಸಿರುತ್ತಾರೆ. ಆದರೆ ಇವರು ವೀಕೆಂಡ್ ಪಾರ್ಟಿ ಮಾಡಿ ನೆಟ್ಟಗೆ ಮನೆಗೆ ಹೋಗೋದು ಬಿಟ್ಟು ಪ್ರಾಣಿಗಳ ಹಾಗೇ ಕಿತ್ತಾಡಿದ್ದಾರೆ. ಜವಾಬ್ದಾರಿಯಿಂದ ವರ್ತಿಸಬೇಕಾದ ಯುವಕ ಯುವತಿಯರೇ ಹೀಗೆ ಬೇಜವಾಬ್ದಾರಿಯಿಂದ ವರ್ತಿಸಿದ್ರೆ ಮುಂದಿನ ಯುವಕ ಪೀಳಿಗೆಗೆ ಇವರು ತೋರಿಸೋ ದಾರಿ ಇದೇನಾ ಅನ್ನೋ ಪ್ರಶ್ನೆ ಮೂಡುತ್ತೆ. ಎರಡು ದಿನದ ಅಂತರದಲ್ಲಿ ಎರಡು ಗಲಾಟೆ ನಡೆದಿದ್ದು, ಪೊಲೀಸರು ಏನ್ ಮಾಡ್ತಿದ್ದಾರೆ ಅಂತ ಜನ ಪ್ರಶ್ನೆ ಮಾಡ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಎಣ್ಣೆ ಏಟಲ್ಲಿ ನಡು ರೋಡಲ್ಲಿ ಯುವಕ ಯುವತಿಯರು ಗುದ್ದಾಟ.. ಅಸಲಿಗೆ ಆಗಿದ್ದೇನು..?

https://newsfirstlive.com/wp-content/uploads/2023/10/bng-11.jpg

Load More