newsfirstkannada.com

ಕಾಲೇಜು ಹುಡುಗಿಗೆ ಅಂಕಲ್​ ಮೇಲೆ ಲವ್.. ಇವರಿಬ್ಬರ ಪ್ರೀತಿಯೇ ದುರಂತ; ಅಸಲಿಗೆ ಆಗಿದ್ದೇನು?

Share :

Published June 23, 2024 at 10:34pm

    19 ವರ್ಷದ ಅನನ್ಯ, 50 ವರ್ಷದ ರಂಗಶಾಮಣ್ಣ ನಡುವೆ ಪ್ರೀತಿ

    ಕದ್ದು-ಮುಚ್ಚಿ ಇರುತ್ತಿದ್ದ ಪ್ರೀತಿಯ ವಿಚಾರ ಮನೆಯವರಿಗೆ ಗೊತ್ತಾಗಿದೆ

    ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿದ್ದಕ್ಕೆ ಪ್ರೇಮಿಗಳಿಬ್ಬರು ನಾಪತ್ತೆ

ತುಮಕೂರು: ಹದಿ ಹರೆಯದ ಹುಡುಗ ಹುಡುಗಿಯರು ಪ್ರೀತಿಯಲ್ಲಿ ಬೀಳೋದು ಕಾಮನ್‌. ಆದ್ರೆ ಇಲ್ಲಿನ ಪ್ರೇಮ ಕಥೆಯೇ ವಿಚಿತ್ರ. ಇಲ್ಲಿ ಹುಡುಗಿಯೇನೋ ಹದಿಹರೆಯದ ವಯಸ್ಸಿನವಳು. ಆದ್ರೆ ಅವನಿಗೆ 50 ವರ್ಷ. ಆದರೂ ಕೂಡ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಇವರಿಬ್ಬರ ಪ್ರೀತಿಯಲ್ಲಿ ಕ್ಲೈಮಾಕ್ಸ್‌ನಲ್ಲಿ ಬಂದಿರೋದು ದುರಂತ ಅಂತ್ಯ.

ಇದನ್ನೂ ಓದಿ: ‘ರೇಣುಕಾಸ್ವಾಮಿ ನನಗೂ ಆ ಫೋಟೋ ಕಳುಹಿಸಿದ್ದ’- ಸಾಕ್ಷಿ ಸಮೇತ ಶಾಕಿಂಗ್ ವಿಷ್ಯ ಬಿಚ್ಚಿಟ್ಟ ನಟಿ ಚಿತ್ರಾಲ್! 

ಪ್ರೀತಿಗೆ ವಯಸ್ಸಿಲ್ಲ, ಸ್ಕೂಲ್​-ಕಾಲೇಜು ಮೆಟ್ಟಿಲು ಏರಿದ್ದಾರೆ ಅಂದ್ರೆ ಹುಡುಗ-ಹುಡುಗಿ ಮನಸು ಪ್ರೀತಿಯ ಕಡೆ ವಾಲೋದು ಸಹಜ. ಹಂಗೆ ಇಲ್ಲೂ, ಹುಡುಗಿಗೆ 19 ವರ್ಷ, ಈಕೆ ಪ್ರೀತಿಸಿದ ಪ್ರೀಯಕರನಿಗೆ 50 ವರ್ಷ, ಇಬ್ಬರೂ ಪರಸ್ಪರ ಪ್ರೀತಿಸಿದ್ರು, ಆದ್ರೆ.. ಇವರಿಬ್ಬರ ಪ್ರೀತಿಗೆ ಕುಟುಂಬವರು ಒಪ್ಪಿರಲಿಲ್ಲ, ಅದಕ್ಕವರು ತೆಗೆದುಕೊಂಡ ನಿರ್ಧಾರ ಮಾತ್ರ ಸರಿಯಿರಲಿಲ್ಲ.

ಸುಂದರಿಗೆ ಅಂಕಲ್​ ಮೇಲೆ ಲವ್!​​

ಇಬ್ಬರ ಮಧ್ಯೆ ವಯಸ್ಸಿನ ಅಂತರ ಇದ್ರೂ ಕೂಡ ಚಿಗುರಿದ್ದ ಪ್ರೀತಿ

ಪ್ರೀತಿಗೆ ಕುಟುಂಬಸ್ಥರು ವಿರೋಧ, ಪ್ರೇಮಿಗಳು ಆತ್ಮಹತ್ಯೆಗೆ ಶರಣು
ಮಾವತ್ತೂರು ಕೆರೆಯಲ್ಲಿ ಅನನ್ಯ, ರಂಗಶಾಮಣ್ಣ ಶವ ಪತ್ತೆ

ಅನನ್ಯ ಮತ್ತು ರಂಗಶಾಮಣ್ಣ ನಡುವಿನ ಪ್ರೀತಿಗೆ ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿದ್ದಕ್ಕೆ ಪ್ರೇಮಿಗಳಿಬ್ಬರು ನಾಪತ್ತೆಯಾಗಿದ್ದರು ಎನ್ನಲಾಗಿದೆ. ನಿನ್ನೆ ಮಾವತ್ತೂರು ಕೆರೆ ದಡದಲ್ಲಿ ಇಬ್ಬರ ಚಪ್ಪಲಿ, ಮೊಬೈಲ್​​ ಹಾಗೂ ಕಾರೊಂದು ಪತ್ತೆಯಾಗಿತ್ತು.. ಇಂದು ಬೆಳಗ್ಗೆ ಇಬ್ಬರ ಮೃತದೇಹಗಳು ಪತ್ತೆಯಾಗಿದೆ.

ಮೊದಲಿಗೆ ಇಬ್ಬರಿಬ್ಬರ ಪ್ರೀತಿಗೆ ಕುಟುಂಬವದರು ವಿರೋಧ ವ್ಯಕ್ತಪಡಿಸಿದ್ದರಿಂದ ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿತ್ತು. ಆದ್ರೆ ಈ ಬಗ್ಗೆ ಅನನ್ಯ ಮನೆಯವರು ಬೇರೆ ವಿಷಯ ಹೇಳ್ತಿದ್ದಾರೆ.

ಇದನ್ನೂ ಓದಿ: ದರ್ಶನ್​ ಸಂಸಾರದಲ್ಲಿ ಮೊದಲು ಹುಳಿ ಹಿಂಡಿದ್ದೇ ಆ ನಟಿ; ಸ್ಫೋಟಕ ಹೇಳಿಕೆ ನೀಡಿದ ನಿರ್ಮಾಪಕ ಓಂ ಪ್ರಕಾಶ್

ಮನೆಯವರು ಹೇಳುವ ಪ್ರಕಾರ ಪರೀಕ್ಷೆಯಲ್ಲಿ ಫೇಲ್ ಆಗಿದ್ದರೆ, ಮನನೊಂದು ಆಕೆ ಒಬ್ಬಳೇ ಆತ್ಮಹತ್ಯೆ ಮಾಡಿಕೊಳ್ಳಬೇಕಿತ್ತು. ಆದ್ರೆ ಯುವತಿಯ ಶವ ರಂಗಶಾಮಣ್ಣನ ಜೊತೆ ಪತ್ತೆಯಾಗಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ. ಇದು ಆತ್ಮಹತ್ಯೆಯೋ.. ಇಲ್ಲ ಕೊಲೆಯೋ ಎನ್ನುವುದು ಪೊಲೀಸ್ ತನಿಖೆಯಿಂದ ಸತ್ಯ ಹೊರ ಬರಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಾಲೇಜು ಹುಡುಗಿಗೆ ಅಂಕಲ್​ ಮೇಲೆ ಲವ್.. ಇವರಿಬ್ಬರ ಪ್ರೀತಿಯೇ ದುರಂತ; ಅಸಲಿಗೆ ಆಗಿದ್ದೇನು?

https://newsfirstlive.com/wp-content/uploads/2024/06/tmk.jpg

Load More