newsfirstkannada.com

50 ವರ್ಷದ ವಿವಾಹಿತ ಪುರುಷನ ಪ್ರೀತಿಸಿದ್ದ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ; ಅಸಲಿಗೆ ಆಗಿದ್ದೇನು?

Share :

Published June 23, 2024 at 2:32pm

  ಮಾವತ್ತೂರು ಕೆರೆಯ ದಂಡೆಯಲ್ಲಿ ಕಾರು, ಇಬ್ಬರ ಚಪ್ಪಲಿಗಳು ಪತ್ತೆ!

  ನಾಲ್ಕು ದಿನದ ಹಿಂದೆ ಮನೆಯಿಂದ ನಾಪತ್ತೆಯಾಗಿದ್ದ ಪ್ರೇಮಿಗಳು

  50 ವರ್ಷದ ವಿವಾಹಿತನ ಪ್ರೀತಿ ಬಲೆಗೆ ಬಿದ್ದಿದ್ದ 19 ವರ್ಷ ಅನನ್ಯ!

ತುಮಕೂರು: ವಿವಾಹಿತ ಪುರುಷನ ಪ್ರೀತಿಸಿದ್ದ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿರೋ ದಾರುಣ ಘಟನೆ ಕೊರಟಗೆರೆ ತಾಲೂಕಿನ ಮಾವತ್ತೂರು ಕೆರೆಯಲ್ಲಿ ಬೆಳಕಿಗೆ ಬಂದಿದೆ. ಇಬ್ಬರೂ ಪ್ರೇಮಿಗಳು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. 19 ವರ್ಷದ ಅನನ್ಯ ಹಾಗೂ 50 ವರ್ಷದ ರಂಗಶಾಮಣ್ಣ ಮೃತ ದುರ್ದೈವಿಗಳು.

ಇದನ್ನೂ ಓದಿ: ರೇಣುಕಾಸ್ವಾಮಿ ಹತ್ಯೆ ಪ್ರಕರಣ.. ಆರೋಪಿಗಳು ಸೇರಿ 27 ಜನರ ಫೋನ್​ ಜಪ್ತಿ.. ಸಿಕ್ಕ ಸಾಕ್ಷ್ಯವೇನು ಗೊತ್ತಾ? 

ಕಳೆದ ಶನಿವಾರ ಮಾವತ್ತೂರು ಕೆರೆಯ ದಡದಲ್ಲಿ ಅನನ್ಯ ಹಾಗೂ ರಂಗಶಾಮಣ್ಣ ಇಬ್ಬರ ಚಪ್ಪಲಿ ಹಾಗೂ ಮೊಬೈಲ್‌ಗಳು ಪತ್ತೆಯಾಗಿತ್ತು. ಇಂದು ಬೆಳಗ್ಗೆ ಶೋಧ ಕಾರ್ಯಾಚರಣೆ ನಡೆಸಿದ ಅಗ್ನಿ ಶಾಮಕ ಸಿಬ್ಬಂದಿ ಇಬ್ಬರು ಶವವನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಆತ್ಮಹತ್ಯೆ ಮಾಡಿಕೊಂಡಿರುವ ಅನನ್ಯ ಕೋಳಾಲ ಹೋಬಳಿಯ ಲಕ್ಕಯ್ಯನಪಾಳ್ಯದ ಮೂಲದವರು. ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿ. ವಿವಾಹಿತ ಪುರುಷ ರಂಗಶಾಮಣ್ಣ ಅವರು ಬೈರಗೊಂಡ್ಲು ಗ್ರಾಮದವರು ಅನ್ನೋ ಮಾಹಿತಿ ಲಭ್ಯವಾಗಿದೆ. ಇಬ್ಬರೂ ಕಳೆದ 4 ದಿನಗಳ ಹಿಂದೆ ಮನೆಯಿಂದ ನಾಪತ್ತೆಯಾಗಿದ್ದರು.

ಇದನ್ನೂ ಓದಿ: 50 ವಯಸ್ಸಿನ ವ್ಯಕ್ತಿ ಜೊತೆ ಕಾಲೇಜು ವಿದ್ಯಾರ್ಥಿನಿ ನಾಪತ್ತೆ ಕೇಸ್​.. ಇಬ್ಬರ ಮೃತದೇಹಗಳು ಪತ್ತೆ 

ವಿವಾಹಿತ ಪುರುಷನ ಪ್ರೀತಿ ಬಲೆಗೆ ಕಾಲೇಜು ವಿದ್ಯಾರ್ಥಿನಿ ಅನನ್ಯ ಬಿದ್ದಿದ್ದಳು. ತಮ್ಮ ಪ್ರೀತಿಗೆ ಕುಟುಂಬದವರು ವಿರೋಧ ವ್ಯಕ್ತಪಡಿಸಿದ್ದರಿಂದ ಇಬ್ಬರೂ ಆತ್ಮಹತ್ಯೆಗೆ ಶರಣಾಗಿದ್ದಾರೆ ಅನ್ನೋದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.

ಅನನ್ಯ ಹಾಗೂ ರಂಗಶಾಮಣ್ಣ ಇಬ್ಬರು ಮಾವತ್ತೂರು ಕೆರೆಯ ಬಳಿ ಕಾರು ನಿಲ್ಲಿಸಿದ್ದಾರೆ. ಕಾರಿನಲ್ಲೇ ಮೊಬೈಲ್‌ಗಳನ್ನು ಇಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೆರೆಯ ದಡದಲ್ಲಿ ಚಪ್ಪಲಿಗಳು ಸಿಕ್ಕ ಮೇಲೆ ಅಗ್ನಿಶಾಮಕ ದಳದ ಸಿಬ್ಬಂದಿ ಇಬ್ಬರ ಶವಕ್ಕಾಗಿ ಕೆರೆಯಲ್ಲಿ ಹುಡುಕಾಟ ನಡೆಸಿದ್ದರು. ಈಜು ಪಟುಗಳು ಬೋಟ್ ಸಹಾಯದಿಂದ ಇಬ್ಬರಿಗಾಗಿ ಹುಡುಕಾಟ ನಡೆಸಿದ್ದು ಇಂದು ಬೆಳಗ್ಗೆ ಇಬ್ಬರ ಮೃತದೇಹಗಳು ಪತ್ತೆಯಾಗಿದೆ. ಕೊಳಾಲ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

50 ವರ್ಷದ ವಿವಾಹಿತ ಪುರುಷನ ಪ್ರೀತಿಸಿದ್ದ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ; ಅಸಲಿಗೆ ಆಗಿದ್ದೇನು?

https://newsfirstlive.com/wp-content/uploads/2024/06/Tumkur-Girl-Death.jpg

Load More