newsfirstkannada.com

ಸಾಯೋ ಮುನ್ನ ಮನೆಯವರ ಕಾಲ್ ಕಟ್ ಮಾಡಿ ಬ್ಯುಸಿ ಎಂದಿದ್ದ ಕರ್ನಲ್; ಮನ್ಪ್ರೀತ್ ಸಿಂಗ್ ಮನೆಯಲ್ಲಿ ಆಕ್ರಂದನ

Share :

14-09-2023

    ಅನಂತನಾಗ್‌ನಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಯೋಧರು ಹುತಾತ್ಮ

    ಬೆಳಗ್ಗೆ 6.45ಕ್ಕೆ ತನ್ನ ಕುಟುಂಬಸ್ಥರಿಗೆ ಕರೆ ಮಾಡಿದ್ದ ಮನ್ಪ್ರೀತ್ ಸಿಂಗ್

    ಮಧ್ಯಾಹ್ನ ಉಗ್ರರ ಗುಂಡೇಟಿಗೆ ವೀರಮರಣವನ್ನಪ್ಪಿದ ಕರ್ನಲ್

ಶ್ರೀನಗರ: ಕಾಶ್ಮೀರದ ಅನಂತನಾಗ್‌ನಲ್ಲಿ ನಿನ್ನೆ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಭಾರತೀಯ ಯೋಧರು ವೀರಮರಣವನ್ನಪ್ಪಿದ್ದಾರೆ. ಭಾರತೀಯ ಸೇನೆಯ ಪ್ರತಿದಾಳಿಯಲ್ಲಿ ಇಬ್ಬರು ಲಷ್ಕರ್ ಇ-ತೊಯ್ಬಾ ಉಗ್ರರ ಸಂಹಾರ ಮಾಡಲಾಗಿದೆ. ಅನಂತನಾಗ್‌ನಲ್ಲಿ ಸೇನಾ ಕಾರ್ಯಾಚರಣೆ ಮುಂದುವರಿದಿದ್ದು, ಹುತಾತ್ಮರಾದ ಯೋಧರ ಕುಟುಂಬಸ್ಥರು ಶೋಕ ಸಾಗರದಲ್ಲಿ ಮುಳುಗಿದ್ದಾರೆ.

ಅನಂತನಾಗ್ ಎನ್‌ಕೌಂಟರ್‌ನಲ್ಲಿ ಕರ್ನಲ್ ಮನ್ಪ್ರೀತ್ ಸಿಂಗ್, ಮೇಜರ್ ಆಶಿಶ್ ಧೋನಕ್ ಮತ್ತು ಉಪ ಅಧೀಕ್ಷಕ ಹುಮಾಯೂನ್ ಭಟ್ ಹುತಾತ್ಮರಾಗಿದ್ದಾರೆ. ಮೂವರಲ್ಲಿ ಹರಿಯಾಣದ ಕರ್ನಲ್ ಮನ್ಪ್ರೀತ್ ಸಿಂಗ್ ಈ ಬೆಟಾಲಿಯನ್‌ ಅನ್ನು ಮುನ್ನೆಡೆಸುತ್ತಿದ್ದರು. ಮನ್ಪ್ರೀತ್ ಸಿಂಗ್ ಹರಿಯಾಣ ಮೂಲದವರಾಗಿದ್ದು, ಇವರು ಸೇನೆಯಲ್ಲಿ 17 ವರ್ಷಗಳ ಸೇವೆ ಸಲ್ಲಿಸಿದ್ದಾರೆ. ಮನ್ಪ್ರೀತ್ ಸಿಂಗ್ ಕುಟುಂಬಸ್ಥರಿಗೆ ಕರ್ನಲ್ ಹುತಾತ್ಮರಾದ ಸುದ್ದಿಯನ್ನು ಭಾರತೀಯ ಸೇನೆ ತಿಳಿಸಿದೆ. ವೀರ ಯೋಧನ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.

ಇದನ್ನೂ ಓದಿ: ಉಗ್ರರ ವಿರುದ್ಧ ಎನ್​​ಕೌಂಟರ್​: ಸೈನಿಕರ ರಕ್ಷಣೆಗೆ ಮುಂದಾಗಿ ಪ್ರಾಣವನ್ನೇ ಅರ್ಪಿಸಿದ ಸೇನಾ ಶ್ವಾನ

ಕರ್ನಲ್ ಮನ್ಪ್ರೀತ್ ಸಿಂಗ್ ಅವರು ಕಾಶ್ಮೀರದ ಉಗ್ರರ ವಿರುದ್ಧ ಕಾರ್ಯಾಚರಣೆಗಿಳಿದಿದ್ದ ಬೆಟಾಲಿಯನ್‌ನ ಮುಂದಾಳತ್ವ ವಹಿಸಿಕೊಂಡಿದ್ದರು. ಭಯೋತ್ಪಾದಕರ ದಾಳಿಯಲ್ಲಿ ಕರ್ನಲ್ ಮನ್ಪ್ರೀತಿ ಸಿಂಗ್ ಅವರ ದೇಹಕ್ಕೆ ಹಲವು ಗುಂಡುಗಳು ತಗುಲಿದ್ದು, ತೀವ್ರವಾಗಿ ಗಾಯಗೊಂಡು ಅಸುನೀಗಿದ್ದಾರೆ. ಕರ್ನಲ್ ಮನ್ಪ್ರೀತ್ ಸಿಂಗ್ ಇಬ್ಬರು ಮಕ್ಕಳ ತಂದೆಯಾಗಿದ್ದು, ಯೋಧರ ಪತ್ನಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹರಿಯಾಣ ಶಿಕ್ಷಣ ಇಲಾಖೆ ತಡವಾಗಿ ಕರ್ನಲ್ ಸಾವನ್ನಪ್ಪಿದ ಸುದ್ದಿಯನ್ನು ಅವರ ಕುಟುಂಬಸ್ಥರಿಗೆ ತಿಳಿಸಿದೆ.

ಬೆಳಗ್ಗೆಯಷ್ಟೇ ಕುಟುಂಬಸ್ಥರಿಗೆ ಕರೆ ಮಾಡಿದ್ದ ಕರ್ನಲ್

ಕರ್ನಲ್ ಮನ್ಪ್ರೀತ್ ಸಿಂಗ್ ಅವರು ನಿನ್ನೆ ಬೆಳಗ್ಗೆ 6.45ಕ್ಕೆ ತನ್ನ ಕುಟುಂಬಸ್ಥರಿಗೆ ಕರೆ ಮಾಡಿದ್ದರು. ಆಗ ನಾನು ಸದ್ಯ ತುಂಬಾ ಬ್ಯುಸಿಯಾಗಿದ್ದೇನೆ. ಸ್ವಲ್ಪ ಸಮಯದ ಬಳಿಕ ಕರೆ ಮಾಡಿ ಮಾತನಾಡುತ್ತೇನೆ ಎಂದಿದ್ದರು. ಆದರೆ ಆ ಸ್ವಲ್ಪ ಸಮಯ ಮತ್ತೆ ಬರಲೇ ಇಲ್ಲ. ಬೆಳಗ್ಗೆ ಕುಟುಂಬಸ್ಥರ ಜೊತೆ ಮಾತನಾಡಿದ್ದ ಕರ್ನಲ್ ಮನ್ಪ್ರೀತ್ ಸಿಂಗ್ ಅವರು ಮಧ್ಯಾಹ್ನ ಉಗ್ರರ ಗುಂಡೇಟಿಗೆ ಬಲಿಯಾಗಿದ್ದಾರೆ. ಮನ್ಪ್ರೀತ್ ಸಿಂಗ್ ಅವರು ಹೆಂಡತಿ, 6 ವರ್ಷದ ಮಗ ಹಾಗೂ 2 ವರ್ಷದ ಮಗಳನ್ನು ಅಗಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಾಯೋ ಮುನ್ನ ಮನೆಯವರ ಕಾಲ್ ಕಟ್ ಮಾಡಿ ಬ್ಯುಸಿ ಎಂದಿದ್ದ ಕರ್ನಲ್; ಮನ್ಪ್ರೀತ್ ಸಿಂಗ್ ಮನೆಯಲ್ಲಿ ಆಕ್ರಂದನ

https://newsfirstlive.com/wp-content/uploads/2023/09/Manpreet-Singh.jpg

Load More