newsfirstkannada.com

ಭಾಗ್ಯಾಳ ಕೈ ಹಿಡಿದು ಶಾಲೆಗೆ ಕರೆ ತಂದ ಕುಸುಮಾ; ಅತ್ತೆ- ಸೊಸೆ ಕಾಂಬಿನೇಷನ್​ಗೆ ಫ್ಯಾನ್ಸ್​​ ಹೇಳ್ತಿರೋದೇನು?

Share :

26-07-2023

    ಭಾಗ್ಯಳ ನೋವು, ಒತ್ತಡ, ಯಾತನೆಯನ್ನ ಅರ್ಥ ಮಾಡಿಕೊಂಡ ಅತ್ತೆ ಕುಸುಮಾ

    ಅತ್ತೆ-ಸೊಸೆ ಈ ಕಾಂಬಿನೇಷನ್‌ಗೆ​ ಮಹಿಳಾ ಮಣಿಗಳಿಂದ ಫುಲ್​ ಮಾರ್ಕ್ಸ್​

    ಹಲವರ ಬದುಕಲ್ಲಿ ಹೊಸ ಕನಸು ಚಿಗುರೊಡೆಯುವಂತೆ ಮಾಡಿದ ಭಾಗ್ಯ

ಕಲರ್ಸ್​ ಕನ್ನಡದಲ್ಲಿ ಪ್ರಸಾರವಾಗುತ್ತಿರೋ ಟಾಪ್​​​​​ ಧಾರಾವಾಹಿ ಎಂದರೆ ಅದು ಭಾಗ್ಯಲಕ್ಷ್ಮೀ. ಈಗ ಭಾಗ್ಯಳ ಲೈಫ್​ನಲ್ಲಿ ಹೊಸ ಅಧ್ಯಾಯವೊಂದು ಶುರುವಾಗಿದೆ. ಹೆಣ್ಣು ಮಕ್ಕಳ ಶಿಕ್ಷಣದ ಬಗ್ಗೆ ಮಹತ್ವದ ಸಂದೇಶ ನೀಡುತ್ತಿದೆ ಭಾಗ್ಯಲಕ್ಷ್ಮೀ ಸೀರಿಯಲ್​​​. ಓದಿಗೆ ವಯಸ್ಸಿನ ಮಿತಿಯಿಲ್ಲ. ಛಲ ಇದ್ದರೆ ಸಾಕು ಪ್ರತಿಯೊಬ್ಬರು ಸಾಧಿಸಬಹುದು ಎಂಬುವುದು ಸಾಕಷ್ಟು ಮಹಿಳೆಯರಿಗೆ ಸ್ಪೂರ್ತಿ ತುಂಬುತ್ತಿದೆ ಭಾಗ್ಯಳ ಈ ಕಥೆ.

ಭಾಗ್ಯ ಅನುಭವಿಸುತ್ತಿರುವ ನೋವು ಸ್ಪೋಟಗೊಂಡಿದೆ. ಗಂಡನ ಮೋಸ, ಮಗಳ ತಿರಸ್ಕಾರ, ಭಾಗ್ಯಳ ಸಹನೆ ಮೀರುವಂತೆ ಮಾಡಿತ್ತು. ಭಾಗ್ಯಳ ನೋವು, ಯಾತನೆಯನ್ನ ಅರ್ಥ ಮಾಡಿಕೊಂಡ ಅತ್ತೆ ದಿಟ್ಟ ನಿರ್ಧಾರ ತೆಗೆದುಕೊಂಡಿದ್ದಾಳೆ. ಭಾಗ್ಯಳನ್ನ ಓದಿಸಲು ಹೆಜ್ಜೆ ಇಟ್ಟಿದ್ದಾಳೆ. ಇನ್ನು ತಾಂಡವ್​ ತನ್ನ ಸ್ವಾರ್ಥಕ್ಕೆ ಮಗಳ ಭವಿಷ್ಯವನ್ನ ಹಾಳು ಮಾಡುತ್ತಿದ್ದಾನೆ. ಭಾಗ್ಯಳ ವಿರುದ್ಧ ಮಗಳನ್ನ ಅಸ್ತ್ರವಾಗಿ ಬಳಸಿಕೊಳ್ಳುತ್ತಿದ್ದಾನೆ.

ಇದು ಸದ್ಯದ ಭಾಗ್ಯಲಕ್ಷ್ಮೀ ಧಾರಾವಾಹಿಯ ಸಾರಾಂಶ. ಭಾಗ್ಯಲಕ್ಷ್ಮೀಗೆ ಹೆಣ್ಣುಮಕ್ಕಳು ಕನೆಕ್ಟ್​ ಆಗುತ್ತಿದ್ದು, ಅತ್ತೆ-ಸೊಸೆ ಇಬ್ಬರ ಕಾಂಬಿನೇಷನ್​ ಅನ್ನು ಇಷ್ಟಪಟ್ಟಿದ್ದಾರೆ. ಅದೇ ರೀತಿ ತಮ್ಮ ಬದುಕಿನ ಘಟನೆಗಳನ್ನ ಸೋಷಿಯಲ್ ಮೀಡಿಯಾದಲ್ಲಿ ತೆರೆದಿಡುತ್ತಿದ್ದಾರೆ. ನಾವು ಭಾಗ್ಯ ಲೈಫ್​ನ ಇನ್​ಸ್ಪೈರ್​ ಆಗಿ ತೆಗೆದುಕೊಳ್ತಿದ್ದೀವಿ. ಇದ್ದರೆ ಕುಸುಮಾ ತರಹ ಅತ್ತೆ ಇರಬೇಕು ಅಂತಾ ಭಾಗ್ಯಲಕ್ಷ್ಮೀಗೆ ಬಹುಪರಾಕ್​ ಹೇಳುತ್ತಿದ್ದಾರೆ ವೀಕ್ಷಕರು.

ಒಟ್ಟಿನಲ್ಲಿ ಭಾಗ್ಯಲಕ್ಷ್ಮೀ ಹಲವರ ಬದುಕಿನಲ್ಲಿ ಹೊಸ ಕನಸು ಚಿಗುರೊಡೆಯುವಂತೆ ಮಾಡುತ್ತಿದೆ. ಮತ್ತಷ್ಟು ರೋಚಕ ಸಂಚಿಕೆಗಳು ಬರಲಿದ್ದು, ತಾಂಡವ್​ಗೆ ಬುದ್ದಿ ಕಲಿಸುವ ಕಾಲ ಕೂಡ ಸನ್ನಿಹಿತವಾಗುತ್ತಿದೆ. ಮಾನಸಿಕ ಒತ್ತಡವನ್ನ ಹೇಗೆ ನಿಭಾಯಿಸ್ತಾಳೆ ಅನ್ನೋದನ್ನು ನೋಡೋದಕ್ಕೆ ಭಾಗ್ಯಲಕ್ಷ್ಮೀಯನ್ನ ಫಾಲೋ ಮಾಡಿ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ಭಾಗ್ಯಾಳ ಕೈ ಹಿಡಿದು ಶಾಲೆಗೆ ಕರೆ ತಂದ ಕುಸುಮಾ; ಅತ್ತೆ- ಸೊಸೆ ಕಾಂಬಿನೇಷನ್​ಗೆ ಫ್ಯಾನ್ಸ್​​ ಹೇಳ್ತಿರೋದೇನು?

https://newsfirstlive.com/wp-content/uploads/2023/07/bhagyalaxmi-4.jpg

Load More