newsfirstkannada.com

ಕಾವೇರಿಯ ಕುತಂತ್ರಕ್ಕೆ ಲಕ್ಷ್ಮೀ- ವೈಷ್ಣವ್​​ ಸಂಸಾರದಲ್ಲಿ ಬಿರುಕು ಮೂಡುತ್ತಾ..? ಅತ್ತೆ ಸಂಚಿನ ಪರಿಣಾಮ ಏನಾಗಬಹುದು?

Share :

12-09-2023

  ಪ್ರೇಕ್ಷಕರಲ್ಲಿ ಮತ್ತಷ್ಟು ಕುತೂಹಲ ಹೆಚ್ಚಿಸಿದ ಕಾವೇರಿ ಪಾತ್ರ!

  ಉರಿಯುವ ಬೆಂಕಿಗೆ ತುಪ್ಪ ಸುರಿಯಲು ಶುರು ಮಾಡಿದ್ದಾಳೆ ಸುಪ್ರೀತಾ!

  ಪ್ರೀತಿಯ ಮಗನ ಮೇಲಿರೋ ಮೋಹವನ್ನ ಬಿಡ್ತಾಳಾ ತಾಯಿ ಕಾವೇರಿ

ಕನ್ನಡ ಕಿರುತೆರೆಯಲ್ಲಿ ಜನ ಮೆಚ್ಚಿದ ಸೀರಿಯಲ್​ಗಳಲ್ಲಿ ಲಕ್ಷ್ಮೀ ಬಾರಮ್ಮ ಕೂಡ ಒಂದು. ಕಥೆಗೆ ತಕ್ಕಂತ ಪಾತ್ರಗಳು, ಪಾತ್ರಗಳಿಗೆ ತಕ್ಕಂತೆ ಕಲಾವಿದರು. ಹೀಗೆ ಈ ಧಾರಾವಾಹಿಗೆ ಅದೃಷ್ಟವಶಾತ್ ಎಲ್ಲಾ ಕೂಡಿ ಬಂದಿದೆ. ಸದ್ಯ ಧಾರಾವಾಹಿಯು ಜನರಿಗೆ ಇಷ್ಟವಾಗುವ ರೀತಿಯಲ್ಲಿ ಒಳ್ಳೆ ಸಂದೇಶ ನೀಡುವ ರೀತಿಯಲ್ಲಿ ಮೂಡಿ ಬರ್ತಿದೆ.

ತಾಯಿಗೆ ಮಗನ ಮೇಲೆ ಅತಿಯಾದ ಮೋಹವಾಗಲಿ, ದ್ವೇಷವಾಗಲಿ ಇರಬಾರದು ಅನ್ನೋದು ಕತೆಯ ತಿರುಳು. ಕಾವೇರಿಗೆ ವೈಷ್ಣವ್​ ಮೇಲೆ ಅಪಾರವಾದ ಪ್ರೀತಿ ಇದೆ. ಅವಳ ಕೈಯಲ್ಲಿ ಏನೇನೋ ಮಾಡಿಸುತ್ತಿದೆ. ತಾನು ಆರಿಸಿದ ಸೊಸೆ ತನಗೆ ಮುಳುವಾಗ್ತಿದ್ದಾಳೆ ಅನ್ನೋ ಕೆಟ್ಟ ಭಾವನೆ ಕಾವೇರಿಯ ಮನಸ್ಸಲ್ಲಿ ಬಿತ್ತಿದೆ. ಕಾವೇರಿನೇ ಇಷ್ಟ ಪಟ್ಟು ಲಕ್ಷ್ಮೀಯನ್ನು ಮನೆ ಸೊಸೆಯಾಗಿ ಬರಬೇಕು ಅಂತ ಪ್ಲಾನ್​ ಮಾಡಿದ್ದಳು. ಇತ್ತ ಕೀರ್ತಿಗೂ ಮೋಸದ ಬಣ್ಣ ಹಚ್ಚಿ ರಂಪಾಟ ಮಾಡಿ ಸೊಸೆ ಮಾಡಿಕೊಂಡಿದ್ದಾಳೆ. ಆದರೆ ಈಗ ಲಕ್ಷ್ಮೀ ನಾನು ಅಂದುಕೊಳ್ಳೊವಷ್ಟು ಸಾದ ಸ್ವಭಾವದವಳಲ್ಲ ಅಂತ ಗೊತ್ತಾಗುತ್ತಿದೆ.

ಕಾವೇರಿ ಲಕ್ಷ್ಮೀ ವಿರುದ್ಧ ಏನೇ ಮಾಡಿಕೊಂಡು ಹೋದರು ಅದು ಕೊನೆಗೆ ಕಾವೇರಿಯನ್ನೇ ಪರೀಕ್ಷೆ ಮಾಡ್ತಿದೆ. ಮಗ ಸೊಸೆ ಕಡೆ ವಾಲ್ತಿರೋದು ಹಾವೇರಿ ಹೊಟ್ಟೆಗೆ ಬೆಂಕಿ ಇಟ್ಟಂತಾಗಿದೆ. ಅಲ್ಲದೇ ಈ ಬೆಂಕಿಗೆ ತುಪ್ಪ ಸುರಿಯೋ ಸುಪ್ರೀತಾ ಕೂಡ ತನ್ನ ಆಟವನ್ನ ಶುರುಮಾಡಿದ್ದಾಳೆ. ಕಾವೇರಿಗೆ ತನ್ನ ಅತ್ತೆ ಬಂದು ಕರ್ಮ ಅನ್ನೋದು ಯಾರನ್ನು ಬಿಡೋದಿಲ್ಲ ಅಂತ ಭೋದನೆ ಮಾಡೋ ರೀತಿ ಕನಸು ಕಾಣ್ತಿದ್ದಾಳೆ.

ಕಾವೇರಿ ಸೊಸೆ ಆಗಿದ್ದಾಗ ಯಾವ ರೀತಿ ಎಲ್ಲ ನನ್ನ ಮುಷ್ಠಿಯಲ್ಲಿ ಇರಬೇಕು ಅಂತ ಬಯಸಿದ್ದಳು. ಈಗ ಲಕ್ಷ್ಮೀಗೆ ಅದೆಲ್ಲ ತಾನಾಗೆ ಒಲಿದು ಬರ್ತಿದೆ ಅಂತ ಹಿಂಸೆ ಪಡುತ್ತಿದ್ದಾಳೆ. ಒಟ್ಟಿನಲ್ಲಿ ಕಥೆಯು ಹಳಿಯ ಮೇಲೆ ಹೋಗುತ್ತಿದ್ದು, ಈಗ ಜನರೇಷನ್​ಗೆ ಸೂಕ್ತವಾಗಿ ಕಥೆ ಮೂಡಿ ಬರ್ತಿದೆ. ಕಾವೇರಿ ಮಗನ ಮೇಲಿರೋ ಮೋಹ ಬಿಡ್ತಾಳಾ ಎಲ್ಲವನ್ನ ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಾವೇರಿಯ ಕುತಂತ್ರಕ್ಕೆ ಲಕ್ಷ್ಮೀ- ವೈಷ್ಣವ್​​ ಸಂಸಾರದಲ್ಲಿ ಬಿರುಕು ಮೂಡುತ್ತಾ..? ಅತ್ತೆ ಸಂಚಿನ ಪರಿಣಾಮ ಏನಾಗಬಹುದು?

https://newsfirstlive.com/wp-content/uploads/2023/09/laxmi-8.jpg

Load More