newsfirstkannada.com

‘ರಾಮಚಾರಿ’ ಪ್ರೀತಿಗೆ ಹುಳಿ ಹಿಂಡಿದ ವೈಶಾಖ.. ಅಕ್ಕನ ಮಾತು ಕೇಳಿ ತಪ್ಪು ಮಾಡಿಬಿಟ್ಟ ಚಾರು..!!

Share :

13-09-2023

    ಮನರಂಜನೆಯ ಸ್ಪೆಷಲ್‌ ಧಮಾಕ ನೀಡುತ್ತಿದೆ ರಾಮಾಚಾರಿ

    ಚಾರುವಿನ ಮನವೊಲಿಕೆ ಪ್ರಯತ್ನಕ್ಕೆ ತಣ್ಣೀರೆರಚಿದ ಪತಿ!

    ಥ್ರಿಲ್ಲಿಂಗ್‌ ಜೊತೆಗೆ ಹೊಸ ಟ್ವಿಸ್ಟ್​ನೊಂದಿಗೆ ಬರ್ತಿದೆ ಸೀರಿಯಲ್​

ಕಿರುತೆರೆಯ ನೆಚ್ಚಿನ ಧಾರಾವಾಹಿಗಳಲ್ಲಿ ರಾಮಾಚಾರಿ ಟಾಪ್ ಲಿಸ್ಟ್​ನಲ್ಲಿ ಹೊರ ಹೊಮ್ಮಲಿದೆ. ಈ ಧಾರಾವಾಹಿ ಎಲ್ಲಾ ಕತೆಗಿಂತ ತುಂಬಾನೇ ಭಿನ್ನ ವಿಭಿನ್ನವಾಗಿದೆ. ಮೊದಲಿನಿಂದಲೂ ಕೂಡ ರಾಮಾಚಾರಿ ಕಥೆ ಸಿಕ್ಕಾಪಟ್ಟೆ ಡಿಫ್ರೆಂಟ್ ಆಗಿ ಮೂಡಿ ಬರ್ತಿದೆ. ಸದ್ಯದ ಕತೆ ವೀಕ್ಷಕರಿಗೆ ಬಲು ಇಷ್ಟವಾಗ್ತಿದೆ. ರಾಮಾಚಾರಿಗೋಸ್ಕರ ಚಾರು ತನ್ನ ಹಳೇ ಸ್ಟೈಲ್​ನ ಬಿಟ್ಟು ಒಬ್ಬ ಒಳ್ಳೆ ಗೃಹಿಣಿಯಾಗಿ ನಾರಾಯಣ ಆಚಾರ್ ಮನೆಯ ಸೊಸೆಯಾಗಿ ನಡೆದುಕೊಳ್ಳುತ್ತಿದ್ದಾಳೆ.

ಇದನ್ನು ಓದಿ: PHOTOS: ಕನಸಿನ ಮನೆಗೆ ಬಲಗಾಲಿಟ್ಟ ನಾಗಿಣಿ ಸೀರಿಯಲ್​ ನಟಿ ನಮ್ರತಾ ಗೌಡ; ಯಾರ್ ಯಾರು ಬಂದಿದ್ರು?

ಚಾರು ಒಳ್ಳೆ ರೀತಿಯಲ್ಲಿ ಬದಲಾಗಿರೋದಾಗಲಿ, ರಾಮಾಚಾರಿಯನ್ನ ಮದುವೆ ಆಗಿರೋದಾಗಲಿ, ಚಾರು ಮನೆಯಲ್ಲಿರೋದಾಗಲಿ, ಇದ್ಯಾವುದೋ ವೈಶಾಖಳಗೆ ಸುತರಾಮ್ ಇಷ್ಟ ಆಗ್ತಿಲ್ಲ. ಚಾರುಳನ್ನು ಮನೆಯವರ ಮುಂದೆ ಕೆಟ್ಟವಳಾಗಿಸೋಕೆ ವೈಶಾಖ ಶತಾಯ-ಗತಾಯ ಪ್ರಯತ್ನ ನಡೆಸುತ್ತಿದ್ದಾಳೆ. ಈ ಪ್ರಯತ್ನದಲ್ಲಿ ಮೊನ್ನೆಯಷ್ಟೇ ವೈಶಾಖಗೆ ಗೆಲುವು ಸಿಕ್ಕಿದೆ. ಇವಳ ಮಾತು ಕೇಳಿ ಚಾರು ತನಗೆ ಅರಿವೇ ಇಲ್ಲದೆ ತಪ್ಪು ಮಾಡಿದ್ದಾಳೆ. ರಾಮಾಚಾರಿಯನ್ನ ಗೆಲ್ಲೋದಕ್ಕೆ ನಾರಾಯಣ್ ಆಚಾರ್ ಅವರ ಧ್ವನಿಯಲ್ಲಿ ರಾಮಾಚಾರಿ ಹತ್ತಿರ ಒಳ್ಳೆ ರೀತಿಯಲ್ಲಿ ಮಾತಾಡಿದ್ದಾಳೆ.

‘ಮಗನೇ ನಾನು ನಿಮ್ಮಿಬ್ಬರನ್ನು ಒಪ್ಕೊಂಡಿದ್ದೀನಿ. ಈ ವಿಷಯದಲ್ಲಿ ನಿನ್ನದೇನೂ ತಪ್ಪಿಲ್ಲ ಅನ್ನೋದು ನನಗೆ ಅರಿವಾಗಿದೆ. ನೀವಿಬ್ಬರು ಈ ಮನೆಯಲ್ಲೇ ಇದ್ದು ಸುಖ ಜೀವನ ನೆಡೆಸಿ ಅಂತ ನಾರಾಯಣ್ ಅವರ ಧ್ವನಿಯ ರೀತಿಯಲ್ಲೇ ಮಾತಾಡಿದ್ದಾಳೆ ಚಾರು’. ಈ ಕುತಂತ್ರದ ಐಡಿಯಾ ಮಾತ್ಯಾರದು ಇಲ್ಲಾ ಇದು ವೈಶಾಖಾಳ. ಈ ವೈಶಾಖ ಚಾರುಳ ತಲೆಗೆ ಈ ಐಡಿಯನಾ ತುಂಬಿ ಆಕೆಯ ಕೈಯಲ್ಲೇ ಈ ಕೆಲಸ ಮಾಡಿಸಿದ್ದಾಳೆ. ಒಟ್ಟಿನಲ್ಲಿ ಈ ವೈಶಾಖಾಳಿಂದ ಚಾರು ರಾಮಾಚಾರಿ ದೂರ ದೂರ ಆಗಿದ್ದಾರೆ. ಚಾರು ಸಂಸರಕ್ಕೆ ಹುಳಿ ಹಿಂಡಿದ್ದಾಳೆ ವೈಶಾಖ. ಈಗ ಚಾರು ರಾಮಾಚಾರಿಯನ್ನ ಹೇಗೆ ನಂಬಿಸುತ್ತಾಳೆ ಅನ್ನೋದು ಮುಂಬರೋ ಎಪಿಸೋಡ್​ಗಳಲ್ಲಿ ಗೊತ್ತಾಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ರಾಮಚಾರಿ’ ಪ್ರೀತಿಗೆ ಹುಳಿ ಹಿಂಡಿದ ವೈಶಾಖ.. ಅಕ್ಕನ ಮಾತು ಕೇಳಿ ತಪ್ಪು ಮಾಡಿಬಿಟ್ಟ ಚಾರು..!!

https://newsfirstlive.com/wp-content/uploads/2023/09/ramachari.jpg

Load More