newsfirstkannada.com

ಕಾಸಿಗಾಗಿ ಪ್ರಶ್ನೆ ಕೇಳಿದ ಕೇಸ್‌.. ಸಿಬಿಐಗೆ ನನ್ನ ಶೂಗಳನ್ನ ಎಣಿಸಲು ಬನ್ನಿ ಎಂದ ಮಹುವಾ ಮೊಯಿತ್ರಾ

Share :

08-11-2023

    ಲಂಚ ಪಡೆದು ಸಂಸತ್‌ನಲ್ಲಿ ಪ್ರಶ್ನೆ ಕೇಳಿದ ಆರೋಪಿ ಮಹುವಾ ಮೊಯಿತ್ರಾ

    ಮಹುವಾ ಮೊಯಿತ್ರಾ ವಿರುದ್ಧ ಲೋಕಪಾಲ್‌ಗೆ ಬಿಜೆಪಿ ಸಂಸದ ದೂರು

    ಮಹುವಾ ಮೊಯಿತ್ರಾ ವಿರುದ್ಧ ಸಿಬಿಐ ತನಿಖೆಗೆ ಆದೇಶ ಎಂದ ಬಿಜೆಪಿ ನಾಯಕ

ನವದೆಹಲಿ: ಸಂಸತ್‌ನಲ್ಲಿ ಕಾಸಿಗಾಗಿ ಪ್ರಶ್ನೆ ಕೇಳಿದ ಪ್ರಕರಣದಲ್ಲಿ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರು ಸಿಬಿಐಗೆ ಸವಾಲು ಹಾಕಿದ್ದಾರೆ. ಸಿಬಿಐಗೆ ನಾನು ಸ್ವಾಗತ ಕೋರುತ್ತೇನೆ. ಅವರು ನನ್ನ ಬಳಿ ಇರುವ ಶೂಗಳನ್ನು ಬಂದು ಲೆಕ್ಕ ಮಾಡಲಿ ಎಂದು ವ್ಯಂಗ್ಯ ಮಾಡಿದ್ದಾರೆ.

ಲಂಚ ಪಡೆದು ಲೋಕಸಭೆಯಲ್ಲಿ ಪ್ರಶ್ನೆ ಕೇಳಿದ ಆರೋಪದಲ್ಲಿ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಮಹುವಾ ಮೊಯಿತ್ರಾ ವಿರುದ್ಧ ಸ್ಪೀಕರ್‌ಗೆ ದೂರು ನೀಡಿದ್ದರು. ಇದೀಗ ರಾಷ್ಟ್ರೀಯ ಭದ್ರತೆಯನ್ನು ಅಡವಿಟ್ಟು ಭ್ರಷ್ಟಾಚಾರ ಎಸಗಿದ್ದಾರೆ ಎಂದು ಭ್ರಷ್ಟಾಚಾರ ವಿರೋಧಿ ಸಂಸ್ಥೆ ಲೋಕಪಾಲ್‌ಗೂ ದೂರು‌ ಸಲ್ಲಿಕೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಸಿಬಿಐ ತನಿಖೆಗೆ ಆದೇಶಿಸಲಾಗಿದೆ ಎಂದು ನಿಶಿಕಾಂತ್ ದುಬೆ ಅವರು ಹೇಳಿದ್ದಾರೆ.

ಸಿಬಿಐ ತನಿಖೆ ಬಗ್ಗೆ X ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ನಿಶಿಕಾಂತ್ ದುಬೆ ಅವರು, ನನ್ನ ದೂರಿನ ಮೇರೆಗೆ ಲೋಕಪಾಲ್ ಇಂದು ರಾಷ್ಟ್ರೀಯ ಭದ್ರತೆಯ ವೆಚ್ಚದಲ್ಲಿ ಭ್ರಷ್ಟಾಚಾರದಲ್ಲಿ ತೊಡಗಿರುವ ಆರೋಪಿ ಮಹುವಾ ಮೊಯಿತ್ರಾ ವಿರುದ್ಧ ಸಿಬಿಐ ತನಿಖೆಗೆ ಆದೇಶಿಸಿದೆ ಎಂದು ಪೋಸ್ಟ್ ಮಾಡಿದ್ದಾರೆ.

ನಿಶಿಕಾಂತ್‌ ದುಬೆ ಅವರ ಈ ಪೋಸ್ಟ್‌ಗೆ ಸಂಸದೆ ಮಹುವಾ ಮೊಯಿತ್ರಾ ಅವರು ತೀಕ್ಷ್ಣವಾದ ಪ್ರತಿಕ್ರಿಯೆ ನೀಡಿದ್ದಾರೆ. ಸಿಬಿಐ ಮೊದಲು 13 ಸಾವಿರ ಕೋಟಿ ರೂಪಾಯಿ ಅದಾನಿ ಕಲ್ಲಿದ್ದಲು ಹಗರಣದ ಮೇಲೆ ಎಫ್‌ಐಆರ್ ಹಾಕಬೇಕು. ಇದು ರಾಷ್ಟ್ರೀಯ ಭದ್ರತೆಯ ವಿಚಾರ. ಅದಾನಿ ಸಂಸ್ಥೆಗಳು ಭಾರತೀಯ ಬಂದರು ಮತ್ತು ವಿಮಾನ ನಿಲ್ದಾಣಗಳನ್ನು ಹೇಗೆ ಖರೀದಿಸುತ್ತಿವೆ ಅನ್ನೋದರ ತನಿಖೆಯಾಗಬೇಕು. ಆದರೆ ನನ್ನ ವಿರುದ್ಧ ತನಿಖೆಗೆ ಬಂದರೆ ನಾನು ಸ್ವಾಗತಿಸುತ್ತೇನೆ. ನನ್ನ ಬಳಿ ಇರುವ ಶೂಗಳನ್ನು ಬಂದು ಲೆಕ್ಕ ಮಾಡಲಿ ಎಂದು ಮಹುವಾ ಮೊಯಿತ್ರಾ ಸಿಬಿಐಗೆ ಸವಾಲು ಹಾಕಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಾಸಿಗಾಗಿ ಪ್ರಶ್ನೆ ಕೇಳಿದ ಕೇಸ್‌.. ಸಿಬಿಐಗೆ ನನ್ನ ಶೂಗಳನ್ನ ಎಣಿಸಲು ಬನ್ನಿ ಎಂದ ಮಹುವಾ ಮೊಯಿತ್ರಾ

https://newsfirstlive.com/wp-content/uploads/2023/11/Mohuva-moitra.jpg

Load More