newsfirstkannada.com

ದರ್ಶನ್​​ ಸಹವಾಸ ಮಾಡಿದ್ದೇ ತಪ್ಪಾಯ್ತ? ಕೊಲೆ ಕೇಸಲ್ಲಿ ಜೈಲು ಸೇರ್ತಾರಾ ಚಿಕ್ಕಣ್ಣ?

Share :

Published June 17, 2024 at 9:00pm

    2013 ದರ್ಶನ್ ಮತ್ತು ರೆಬೆಲ್ ಸ್ಟಾರ್ ಅಂಬರೀಶ್ ಜತೆ ಚಿಕ್ಕಣ ನಟನೆ

    ದರ್ಶನ್ ಕೇಸ್‌ ಸಿಲುಕಿಕೊಂಡ ಸ್ಯಾಂಡಲ್​ವುಡ್​ ಹಾಸ್ಯ ನಟ ಚಿಕ್ಕಣ

    ಚಿಕ್ಕಣ್ಣ ಫಾರ್ಮಹೌಸ್​ ಮಾಡಲು ಸ್ಫೂರ್ತಿಯೇ ಚಾಲೆಂಜಿಂಗ್ ಸ್ಟಾರ್ ದರ್ಶನ್

ಸ್ಯಾಂಡಲ್​ವುಡ್​ ಹಾಸ್ಯ ನಟ ಚಿಕ್ಕಣನಿಗೂ ದರ್ಶನ್ ಕೇಸ್‌ ಸಿಲುಕಿಕೊಂಡಿದೆ. ಚಿಕ್ಕಣ್ಣ ಇಂಡಸ್ಟ್ರಿಯಲ್ಲಿ ಎಲ್ಲರ ಜೊತೆ ಒಳ್ಳೆ ಸ್ನೇಹ ಇಟ್ಕೊಂಡಿದ್ದಾರೆ. ಆದ್ರೆ ದರ್ಶನ್​ ಮೇಲೆ ಕೊಂಚ ಹೆಚ್ಚು ಪ್ರೀತಿ ಅಂದ್ರೆ ತಪ್ಪಾಗಲ್ಲ. ದರ್ಶನ್​ಗೂ ಕೂಡ ಚಿಕ್ಕಣ್ಣ ಅಂದ್ರೆ ಅಷ್ಟೆ ಪ್ರೀತಿ. ಆದ್ರೀಗ, ದರ್ಶನ್ ಸಹವಾಸದಿಂದ ಮತ್ತೆ ಚಿಕ್ಕಣ್ಣನಿಗೆ ಸಂಕಷ್ಟ ಎದುರಾಗಿದೆ.

ಇದನ್ನೂ ಓದಿ: ಮೆಗ್ಗರ್​​ ರಾಜುನ ಕ್ರೌರ್ಯದ ಇತಿಹಾಸ ತುಂಬಾನೇ ಭಯಾನಕ.. ಚಿತ್ರಹಿಂಸೆ ಅನುಭವಿಸಿದ್ದು ರೇಣುಕಾಸ್ವಾಮಿ ಒಬ್ಬರೇ ಅಲ್ಲ..!

ಬಣ್ಣದ ಲೋಕದಲ್ಲಿ ಬ್ಯಾಕ್​ಗ್ರೌಂಡ್ ಇರಬೇಕು. ಇಲ್ಲ ಹಣ ಇರಬೇಕು. ಇವೆರಡು ಇಲ್ಲ ಅಂದ್ರೆ ಸಿನಿಮಾ ಇಂಡಸ್ಟ್ರಿಯಲ್ಲಿ ನೆಲೆ ನಿಲ್ಲೋದಕ್ಕೆ ಹರ ಸಾಹಸವೇ ಪಡಬೇಕಾಗುತ್ತೆ. ಈ ಎರಡು ಮಾನದಂಡ ಇಲ್ಲದೇ ಗಟ್ಟಿಯಾಗಿ ನಿಲ್ಲಬೇಕು ಅಂದ್ರೆ ಟ್ಯಾಲೆಂಟ್ ಇರ್ಬೇಕು. ಅಂಥಾ ಟ್ಯಾಲೆಂಟ್ ಸ್ಯಾಂಡಲ್​ವುಡ್ ಕಾಮಿಡಿ ಸ್ಟಾರ್ ಚಿಕ್ಕಣ್ಣ. ಮೈಸೂರಿನ ಸಣ್ಣ ಹಳ್ಳಿಯೊಂದ್ರಲ್ಲಿ ಗಾರೆ ಕೆಲಸ ಮಾಡ್ಕೊಂಡು ಜೀವನ ಸಾಗಿಸ್ತಿದ್ದ ಚಿಕ್ಕಣ್ಣ. ಇವತ್ತು ಚಂದನವನದಲ್ಲಿ ಫುಲ್ ಬ್ಯುಸಿಯಾಗಿರುವ ನಟ. ಒಂದು ಟೈಮ್​ನಲ್ಲಿ ಚಿಕ್ಕಣ್ಣ ವರ್ಷದ 365 ದಿನ ಕೂಡ ಬ್ಯುಸಿಯಾಗಿರ್ತಿದ್ರು. ಓದಿದ್ದು ಬೆಳೆದಿದ್ದು ಎಲ್ಲ ಮೈಸೂರಿನಲ್ಲೇ. ಆದ್ರೆ ಬಣ್ಣದ ಗೀಳು ಹಚ್ಕೊಂಡು ಸಿಲಿಕಾನ್ ಸಿಟಿಗೆ ಬಂದಿದ್ದ ಚಿಕ್ಕಣ್ಣ. ಆರಂಭದಲ್ಲಿ ಜೀ ಕನ್ನಡದ ಕಾಮಿಡಿ ಕಿಲಾಡಿಗಳ ಮೂಲಕ ಹಾಸ್ಯದ ಕಚಗುಳಿ ಇಡೋಕೆ ಶುರು ಮಾಡಿದ್ರು.

ಕಿರಾತಕ ಮೂಲಕ ಸ್ಯಾಂಡಲ್​​ವುಡ್​ಗೆ ಚಿಕ್ಕಣ್ಣ ಎಂಟ್ರಿ

ರಾಕಿಂಗ್ ಸ್ಟಾರ್ ಯಶ್​ ನಟಿಸಿದ್ದ ಕಿರಾತಕ ಸಿನಿಮಾ ಬಿಗ್​​ ಹಿಟ್ ಆದ ಚಿತ್ರ. ಈ ಸಿನಿಮಾ ಚಿಕ್ಕಣ್ಣಗೆ ಸ್ಯಾಂಡಲ್​ವುಡ್​ನಲ್ಲಿ ನೆಲೆ ನಿಲ್ಲುವಂತೆ ಮಾಡ್ತು. ಯಶ್ ಜೊತೆಗಿನ ಕಾಮಿಡಿ ಸೀನ್​​ಗಲು ಜನರನ್ನ ನಗೆಗಡಲಲ್ಲಿ ತೇಲಿಸಿತ್ತು. ಇಲ್ಲಿಂದ ಚಿಕ್ಕಣ್ಣ ಸಿನಿ ಜರ್ನಿ ಶುರುವಾಗಿತ್ತು. ಇದಾದ ಮೇಲೆ ಕೆಲ ಸಿನಿಮಾಗಳು ಮಾಡಿದ್ರೂ ಅಂದುಕೊಂಡಷ್ಟು ಸಕ್ಸಸ್​​ ಸಿಗಲಿಲ್ಲ. ಬಳಿಕ ಇದೇ ಯಶ್ ಜೊತೆಗೆ ರಾಜಾಹುಲಿ ಸಿನಿಮಾದಲ್ಲಿ ನಟಿಸಿದ್ರೂ ಅದು ಸೂಪರ್ ಡೂಪರ್ ಹಿಟ್ ಆಗಿತ್ತು. ಈ ಸಿನಿಮಾ ನಂತ್ರ ಚಿಕ್ಕಣ್ಣ ದರ್ಶನ್ ಅಡ್ಡ ಸೇರಿದ್ರು.

2013 ದರ್ಶನ್ ಮತ್ತು ರೆಬೆಲ್ ಸ್ಟಾರ್ ಅಂಬರೀಶ್ ಒಟ್ಟಿಗೆ ಕಾಣಿಸಿಕೊಂಡಿದ್ದ ಬುಲ್ ಬುಲ್ ಚಿತ್ರ ಸೂಪರ್ ಡೂಪರ್ ಹಿಟ್ ಆಗಿತ್ತು. ಇದೇ ಸಿನಿಮಾದಲ್ಲಿ ಚಿಕ್ಕಣ್ಣ ಕೂಡ ನಟನೆ ಮಾಡಿದ್ರು.. ಇಲ್ಲಿಂದಲೇ ದರ್ಶನ್ ಮತ್ತು ಚಿಕ್ಕಣ್ಣ ನಡುವಿನ ಸ್ನೇಹ ಶುರುವಾಗಿತ್ತು. ಇದಾದ ಮೇಲೆ ಐರಾವತದಲ್ಲೂ ಚಿಕ್ಕಣ್ಣ ಕಾಮಿಡಿ ಕಮಾಲ್ ಮಾಡಿದ್ರು. ಇಲ್ಲಿಂದ ಇಬ್ಬರ ಬಾಂಧವ್ಯ ಇನ್ನಷ್ಟು ಕ್ಲೋಸ್ ಆಗಿತ್ತು. ಬಳಿಕ ಒಡೆಯ, ರಾಬರ್ಟ್​ ಸಿನಿಮಾದಲ್ಲೂ ಚಿಕ್ಕಣ್ಣ ದರ್ಶನ್ ಜೊತೆ ಬಣ್ಣ ಹಚ್ಚಿದ್ದಾರೆ. ಹೀಗೆ ದರ್ಶನ್ ಮತ್ತು ಚಿಕ್ಕಣ್ಣ ನಡುವಿನ ಸ್ನೇಹ ಇನ್ನಷ್ಟ ಗಟ್ಟಿಯಾಗಿತ್ತು. ಚಿಕ್ಕಣ್ಣ ಅಂದ್ರೆ ದರ್ಶನ್​ಗೂ ಅಷ್ಟೆ ಇಷ್ಟ. ಕಾಮಿಡಿ ನಟನಾದ್ರೂ ದರ್ಶನ್​ಗೆ ಚಿಕ್ಕಣ್ಣ ಬಗ್ಗೆ ಗೌರವ ಇತ್ತು. ಇದೇ ಕಾರಣಕ್ಕೆ ಚಿಕ್ಕಣ ಸಿನಿಮಾಗಳಿಗೆ ದರ್ಶನ್ ಸಪೋರ್ಟ್ ಮಾಡ್ತಾನೆ ಬಂದಿದ್ರು. ಚಿಕ್ಕಣ್ಣ ಕೂಡ ಯಾವುದೇ ಕಾರ್ಯಕ್ರಮವಿದ್ರೂ ದರ್ಶನ್​ರನ್ನ ಹಾಡಿ ಹೊಗಳ್ತಿದ್ರು.

ಕಾಟೇರ್​ ರಿಲೀಸ್ ಇವೆಂಟ್​ನಲ್ಲೂ ಸಹ ಭಾಗಿಯಾಗಿದ್ದ ಚಿಕ್ಕಣ್ಣ ದರ್ಶನ್ ಸಿನಿಮಾ ಬಗ್ಗೆ ಹಾಡಿ ಹೊಗಳಿದ್ರು. ಇನ್​ಫ್ಯಾಕ್ಟ್​ ಈ ಸಿನಿಮಾದಲ್ಲಿ ಚಿಕ್ಕಣ್ಣ ನಟನೆ ಮಾಡಿಲ್ಲ. ಆದ್ರೂ ದರ್ಶನ್ ಮೇಲಿನ ಪ್ರೀತಿಯಿಂದಾಗಿ ರಿಲೀಸ್ ಇವೆಂಟ್​​ನಲ್ಲಿ ಭಾಗಿಯಾಗಿ ಸಿನಿಮಾ ಬಗ್ಗೆ ಮಾತನಾಡಿದ್ರು. ನಿಮಗೆ ಚಿಕ್ಕಣ್ಣ ಫಾರ್ಮಹೌಸ್​​ ಮಾಡಿದ್ದಾರೆ ಅನ್ನೋದು ಗೊತ್ತೆ ಇದೆ. ಮೈಸೂರಿನ ಸಾಗರ ಅನ್ನೋ ಹಳ್ಳಿಯಲ್ಲಿ ಈ ಫಾರ್ಮಹೌಸ್​ ಇದೆ. ವಿಚಾರ ಏನಪ್ಪ ಅಂದ್ರೆ ಚಿಕ್ಕಣ್ಣಗೆ ಈ ಫಾರ್ಮಹೌಸ್​ ಮಾಡೋದಕ್ಕೆ ಸ್ಪೂರ್ತಿಯೇ ನಟ ದರ್ಶನ್. ದರ್ಶನ್ ಕೂಡ ಮೈಸೂರಿನಲ್ಲಿ ದೊಡ್ಡ ಫಾರ್ಮಹೌಸ್ ಮಾಡಿದ್ದಾರೆ.  ಅಲ್ಲಿ ತರಹೇವಾರಿ ಗಿಡ ಮರಗಳು. ಪ್ರಾಣಿ ಪಕ್ಷಿಗಳು ಎಲ್ಲ ಇವೆ. ಇದನ್ನ ನೋಡಿದ್ದ ಚಿಕ್ಕಣ್ಣ ದರ್ಶನ್​ ತರಹವೇ ಒಂದು ಫಾರ್ಮಹೌಸ್ ಮಾಡ್ಬೇಕು ಅಂತ ಮೈಸೂರಿನ ಸಾಗರ ಹಳ್ಳಿಯಲ್ಲಿ ಈ ಫಾರ್ಮಹೌಸ್ ಮಾಡಿದ್ರು. ಇತ್ತ ದರ್ಶನ್​ ಚಿಕ್ಕಣ್ಣನವರ ತೋಟಕ್ಕೆ ಭೇಟಿ ಕೂಡ ನೀಡಿದ್ರು. ಇಡೀ ಫಾರ್ಮಹೌಸ್ ಓಡಾಡಿ ಕುರಿ ಮೇಕೆ ನೋಡಿ ಖುಷಿ ಪಟ್ಟಿದ್ರು.

ಚಿಕ್ಕಣ್ಣ ನಾಯಕನಾಗಿದ್ದ ಉಪಾಧ್ಯಕ್ಷ ಸಿನಿಮಾಗೆ ದರ್ಶನ್ ಬೆಂಬಲ!

ಚಿಕ್ಕಣ್ಣ ಫಸ್ಟ್ ಟೈಮ್ ನಾಯಕ ನಟನಾಗಿ ಉಪಾಧ್ಯಕ್ಷ ಸಿನಿಮಾ ಮೂಲಕ ಅದೃಷ್ಟ ಪರೀಕ್ಷೆಗೆ ಇಳಿದಿದ್ರು. ವಿಚಾರ ಏನಂದ್ರೆ ಈ ಸಿನಿಮಾವನ್ನು ರಾಬರ್ಟ್ ಸಿನಿಮಾ ಮಾಡಿದ್ದ ಉಮಾಪತಿ ನಿರ್ಮಾಣ ಮಾಡಿದ್ರು. ಆದ್ರೆ ಈ ಟೈಮ್​ನಲ್ಲಿ ಉಮಾಪತಿ ಮತ್ತು ದರ್ಶನ್ ಸಂಬಂಧ ಹಳಸಿ ಹೋಗಿತ್ತು. ಆದ್ರೂ ದರ್ಶನ್ ಚಿಕ್ಕಣ್ಣನಿಗೋಸ್ಕರ ಸಿನಿಮಾ ಬಗ್ಗೆ ಪ್ರಮೋಷನ್ ಮಾಡಿದ್ರು. ಅದು ಜೆಟ್​ಲ್ಯಾಗ್​ ಪಾರ್ಟಿ ಗಲಾಟೆ ವೇಳೆಯಲ್ಲಿ ಮಾತನಾಡುವಾಗ ಚಿಕ್ಕಣ್ಣ ಸಿನಿಮಾ ರಿಲೀಸ್ ಆಗ್ತಿದೆ ನೋಡಿ ಅಂತ ಅಲ್ಲೂ ಪ್ರಮೋಷನ್ ಮಾಡಿದ್ರು. ಇಷ್ಟೆ ಅಲ್ಲ ಕಾಟೇರ್​ 25ನೇ ದಿನ ಸಂಭ್ರಮದಲ್ಲಿ ಚಿಕ್ಕಣರನ್ನ ಕರೆಸಿ ಉಪಾಧ್ಯಕ್ಷ ಸಿನಿಮಾದ ಪ್ರಚಾರ ಮಾಡಿಸಿದ್ರು. ಆಗ ಚಿಕ್ಕಣ್ಣ ದರ್ಶನ್​ ಪ್ರಮೋಷನ್ ವಿಚಾರವನ್ನು ಮನಸ್ಸಿಂದ ಹಾಡಿ ಹೊಗಳಿದ್ರು. 50 ಲಕ್ಷ ಖರ್ಚು ಮಾಡಿದ್ರೂ ಈ ಪ್ರಮಾಣದಲ್ಲಿ ಪ್ರಮೋಷನ್ ಆಗ್ತಿರಲಿಲ್ಲ. ಎಲ್ಲ ನಿಮ್ಮಿಂದಲೇ ಅಂತ ಹೇಳೋ ಮೂಲಕ ಧನ್ಯವಾದ ತಿಳಿಸಿದ್ರು. ಈ ಮೂಲಕ ದರ್ಶನ್ ಚಿಕ್ಕಣ್ಣ ಯಾವುದೇ ಸಿನಿಮಾ ಇದ್ರೂ ಅಲ್ಲಿ ಬೆಂಬಲವಾಗಿ ನಿಂತಿದ್ರು. ಜೊತೆಯಲ್ಲಿ ನಟಿಸಲಿ ನಟಿಸದೇ ಇರಲಿ ಜೊತೆಯಾಗಿ ಇರ್ತಿದ್ದು.

ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಪ್ರಕರಣದ ಹಿಂದೆ ಓರ್ವ PSI ನೆರಳು..? ಏನಿದು ಶಾಕಿಂಗ್ ವಿಚಾರ..?

ಇನ್ನು ಪಾರ್ಟಿ ಅಂತೆಲ್ಲ ಇದ್ರೆ ಅಲ್ಲಿ ಚಿಕ್ಕಣ್ಣ ಹಾಜರಿ ಇರ್ತಾ ಇತ್ತು. ಅದಕ್ಕೆ ಜೆಟ್​ಲ್ಯಾಗ್​ನಲ್ಲಿ ನಡೆದಿದ್ದ ಕಾಟೇರ್ ಸಕ್ಸಸ್ ಪಾರ್ಟಿ ಗಲಾಟೆ ಬೆಸ್ಟ್ ಎಕ್ಸಾಂಪಲ್. ಚಿಕ್ಕಣ್ಣ ಮತ್ತು ದರ್ಶನ್‌ ಸಂಬಂಧ ಕೇವಲ ಸಿನಿಮಾಗಳಿಗೆ ಸೀಮಿತವಾಗಿಲ್ಲ. ಇಬ್ಬರ ಮನೆಯೂ ಆರ್‌ಆರ್‌ನಗರವಾಗಿರೋ ಕಾರಣ, ಬಹುತೇಕ ಪಾರ್ಟಿಗಳಲ್ಲಿ ಚಿಕ್ಕಣ್ಣ ಭಾಗಿಯಾಗ್ತಿದ್ರು. ಆದ್ರೆ, ಜೆಟ್‌ಲ್ಯಾಗ್‌ ಗಲಾಟೆ ಆದ್ಮೇಲೆ ಕಲ ನಟರೂ ಎಚ್ಚೆತ್ತುಕೊಂಡರು. ಆದ್ರೆ, ಚಿಕ್ಕಣ್ಣ ಮಾತ್ರ ಅವೇರ್ ಆಗ್ಲಿಲ್ಲ. ಅವರಿಗೆ ದರ್ಶನ್ ಅವರ ಇನ್ನೊಂದು ಮುಖ ಗೊತ್ತಿಲ್ಲ ಅಂತೇನಲ್ಲ. ಗೊತ್ತಿತ್ತು. ಸ್ಟಿಲ್‌, ದರ್ಶನ್‌ ಜೊತೆ ಯಾಕಷ್ಟು ಕ್ಲೋಸ್ ಆದ್ರೂ ಅನ್ನೋದೇ ಯಕ್ಷಪ್ರಶ್ನೆ. ಈಗ ರೇಣುಕಾಸ್ವಾಮಿ ಕೊಲೆಯಾದ ದಿನವೂ ನಡೆದ ಪಾರ್ಟಿಯಲ್ಲಿ ಚಿಕ್ಕಣ್ಣ ಇರೋ ವಿಚಾರ ದೊಡ್ಡ ಹಲ್ ಚಲ್ ಸೃಷ್ಟಿಸಿದ್ದು. ಈಗ ಚಿಕ್ಕಣ್ಣನಿಗೂ ಕಾನೂನಿನ ಸಂಕಷ್ಟ ಎದುರಾಗಿರುವುದಂತು ಸುಳ್ಳಲ್ಲ. ಹೀಗಾಗಿ ದರ್ಶನ್ ಸಹವಾಸ ಮಾಡಿದವರಿಗೆ ಪೊಲೀಸ್ ಠಾಣೆ ಮೆಟ್ಟಿಲು ಹತ್ತೋದು ತಪ್ಪೋದಿಲ್ಲ ಅನ್ನೋದು ಮತ್ತೊಮ್ಮೆ ಸಾಬೀತಾಗಿರುವುದಂತು ಸುಳ್ಳಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದರ್ಶನ್​​ ಸಹವಾಸ ಮಾಡಿದ್ದೇ ತಪ್ಪಾಯ್ತ? ಕೊಲೆ ಕೇಸಲ್ಲಿ ಜೈಲು ಸೇರ್ತಾರಾ ಚಿಕ್ಕಣ್ಣ?

https://newsfirstlive.com/wp-content/uploads/2024/06/dboss22.jpg

Load More