newsfirstkannada.com

ಕಾಮಿಡಿ ಕಿಲಾಡಿ ಶಿವರಾಜ್ ಕೆ.ಆರ್. ಪೇಟೆ ತಂದೆ ಡ್ರಾಮಾ ಮಾಸ್ಟರ್ ರಾಮೇಗೌಡ​ ನಿಧನ

Share :

31-08-2023

  ಸ್ಯಾಂಡಲ್​ವುಡ್ ನಟ ಶಿವರಾಜ್ ಕೆ.ಆರ್ ಪೇಟೆ ತಂದೆ ದೈವಾಧೀನ

  ರಾಮೇಗೌಡ ಡ್ರಾಮಾ ಮಾಸ್ಟರ್ ಆಗಿಯೂ ಪ್ರಖ್ಯಾತಿ ಹೊಂದಿದ್ದರು

  ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ನಟನ ತಂದೆ ಸಾವು

ಸ್ಯಾಂಡಲ್​ವುಡ್ ಹಾಗೂ ಕಾಮಿಡಿ ಕಿಲಾಡಿ ಖ್ಯಾತಿಯ ಹಾಸ್ಯ ನಟ ಶಿವರಾಜ್ ಕೆ.ಆರ್ ಪೇಟೆ ಅವರ ತಂದೆ ರಾಮೇಗೌಡ (80) ನಿಧನರಾಗಿದ್ದಾರೆ.

ಕೆ.ಆರ್.ಪೇಟೆ ‌ತಾಲೂಕಿನ ಶೀಳನೆರೆ ಹೋಬಳಿಯ ರಾಜಘಟ್ಟ ಗ್ರಾಮದ ನಿವಾಸಿಯಾಗಿದ್ದ ಅವರು ಡ್ರಾಮಾ ಮಾಸ್ಟರ್ ಆಗಿಯೂ ಪ್ರಖ್ಯಾತಿ ಹೊಂದಿದ್ದರು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರಿಗೆ ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ. ಮೃತ ರಾಮೇಗೌಡ ಅವರು ಪತ್ನಿ ಸಾವಿತ್ರಮ್ಮ, ಚಿತ್ರನಟ ಕೆ.ಆರ್.ಪೇಟೆ ಶಿವರಾಜ್ ಸೇರಿದಂತೆ ನಾಲ್ಕು ಗಂಡು ಮಕ್ಕಳು ಮೂರು ಹೆಣ್ಣುಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಶಿವರಾಜ್ ಕೆ.ಆರ್ ಪೇಟೆ ಅವರ ತಂದೆ ರಾಮೇಗೌಡರ ಅಂತ್ಯಕ್ರಿಯೆಯು ನಾಳೆ ಸೆಪ್ಟೆಂಬರ್ 1 ಮಧ್ಯಾಹ್ನ 01 ಘಂಟೆಗೆ ಮೃತರ ಸ್ವಗ್ರಾಮ ರಾಜಘಟ್ಟದಲ್ಲಿ ನೆರವೇರಲಿದೆ ಎಂದು  ಕುಟುಂಬದ ಮೂಲಗಳು ತಿಳಿಸಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಾಮಿಡಿ ಕಿಲಾಡಿ ಶಿವರಾಜ್ ಕೆ.ಆರ್. ಪೇಟೆ ತಂದೆ ಡ್ರಾಮಾ ಮಾಸ್ಟರ್ ರಾಮೇಗೌಡ​ ನಿಧನ

https://newsfirstlive.com/wp-content/uploads/2023/08/shivu.jpg

Load More