ಕರುನಾಡಿನ ಬೆಟ್ಟದ ಹೂ ಮರೆಯಾಗಿ ಇಂದಿಗೆ ಎರಡು ವರ್ಷ ಕಳೆದಿದೆ
ಕಂಠೀರವ ಸ್ಟುಡಿಯೋದಲ್ಲಿ ದೊಡ್ಮನೆ ಸದಸ್ಯರಿಂದ ವಿಶೇಷ ಪೂಜೆ, ನಮನ
ಸದಾ ಪ್ರೀತಿ ತೋರುವ ಅಭಿಮಾನಿಗಳಿಗೆ ನಮ್ಮ ಗೌರವಪೂರ್ಣ ವಂದನೆಗಳು
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಗಲಿ ಇಂದಿಗೆ ಎರಡು ವರ್ಷ ಕಳೆದಿದೆ. ನಗರದ ಕಂಠೀರವ ಸ್ಟುಡಿಯೋ ಬಳಿ ಆಗಮಿಸುತ್ತಿರುವ ಅಪ್ಪು ಅಭಿಮಾನಿಗಳು ಸಮಾಧಿಗೆ ನಮನ ಸಲ್ಲಿಸುತ್ತಿದ್ದಾರೆ. ದೊಡ್ಮನೆ ಕುಟುಂಬದ ಸದಸ್ಯರು ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ.
ಪುನೀತ್ ರಾಜ್ ಕುಮಾರ್ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ಕಂಠೀರವ ಸ್ಟುಡಿಯೋಗೆ ರಾಘವೇಂದ್ರ ರಾಜ್ ಕುಮಾರ್, ಅಶ್ವಿನಿ ಪುನೀತ್ ರಾಜ್‌ಕುಮಾರ್, ಡಾ.ರಾಜ್ ಕುಮಾರ್ ಪುತ್ರಿಯರಾದ ಲಕ್ಷ್ಮೀ, ಪೂರ್ಣಿಮಾ ರಾಮ್ ಕುಮಾರ್ , ಧೀರನ್ ರಾಮ್ ಕುಮಾರ್ , ಧನ್ಯಾ ರಾಮ್ ಕುಮಾರ್ ಮುಂತಾದವರು ಆಗಮಿಸಿದ್ದರು.
ರಾಜ್ಯದ ಹಲವೆಡೆ ಇಂದು 2ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಪುನೀತ್ ರಾಜ್‌ಕುಮಾರ್ ಅವರನ್ನು ಸ್ಮರಿಸಿಕೊಳ್ಳಲಾಗುತ್ತಿದೆ. ಈ ಸಂದರ್ಭದಲ್ಲಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಭಾವನಾತ್ಮಕ ಪೋಸ್ಟ್ ಒಂದನ್ನ ಮಾಡಿದ್ದಾರೆ.
ಇದನ್ನೂ ಓದಿ: ಇಂದು ಅಪ್ಪು 2ನೇ ಪುಣ್ಯಸ್ಮರಣೆ; ಕಂಠೀರವ ಸ್ಟುಡಿಯೋದಲ್ಲಿ ಹೇಗಿರಲಿದೆ ಸಕಲ ಸಿದ್ಧತೆ..!
ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು, ಬೆಟ್ಟದ ಹೂ ಮರೆಯಾಗಿದೆ ಇಂದಿಗೆ ಎರಡು ವರ್ಷ ಕಳೆದಿದೆ. 2ನೇ ವರ್ಷದ ಸವಿನೆನಪು ಎಂದು ವಿಶೇಷ ನಮನ ಸಲ್ಲಿಸಿದ್ದಾರೆ.
ನೆನಪಿನ ಆಳದಲ್ಲಿ ಎರಡು ವರ್ಷಗಳು…
Two years in the abyss of his memories…#DrPuneethRajkumar #FondRemembrance pic.twitter.com/ZjmeE2j1Vy— Ashwini Puneeth Rajkumar (@Ashwini_PRK) October 29, 2023
ನಮ್ಮೆಲ್ಲರ ಸತ್ಕಾರ್ಯಗಳಿಗೆ ಮಾರ್ಗದರ್ಶಿಯಾಗಿ ನಿಂತಿರುವ ಅಪ್ಪು ಅವರ ಅನನ್ಯ ಚೇತನಕ್ಕೆ ಕಾಲವೇ ಸಾಕ್ಷಿಯಾಗಿದೆ. ಅಪ್ಪು ಅವರ ಮೇಲೆ ಸದಾ ತಮ್ಮ ಅಭಿಮಾನ ಮತ್ತು ಪ್ರೀತಿಯನ್ನು ತೋರುವ ಎಲ್ಲಾ ಬಂಧು ಮಿತ್ರರು ಹಾಗೂ ಅಭಿಮಾನಿಗಳಿಗೆ ನಮ್ಮ ಗೌರವಪೂರ್ಣ ವಂದನೆಗಳು. ನಾವೆಲ್ಲರೂ ಸದಾ ಅಪ್ಪು ಅವರ ನೆನಪುಗಳನ್ನು ಸ್ಮರಿಸುತ್ತಾ ಹಾಗೂ ಅವರ ನಲೆಯ ನಗುವನ್ನು ಸಂಭ್ರಮಿಸೋಣ ಎಂದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ