newsfirstkannada.com

ಫೇಸ್​ಬುಕ್​ನಲ್ಲಿ ಸಂಸದ ಪ್ರತಾಪ್​ ಸಿಂಹ ವಿರುದ್ಧ ಕಾಮೆಂಟ್; ಹೆಡ್ ಕಾನ್ಸ್​​​​ಟೇಬಲ್ ಅಮಾನತು

Share :

01-07-2023

    ಸಂಸದರ ವೈಯುಕ್ತಿಕ ವಿಚಾರಗಳನ್ನು ಉದ್ದೇಶಿಸಿ ಕಾಮೆಂಟ್

    ಹೆಡ್ ಕಾನ್ಸ್ ಟೇಬಲ್ ವಿರುದ್ಧ ಸಂಸದರು ಕಮೀಷನರ್​ಗೆ ಪತ್ರ

    ನಗರ ಪೊಲೀಸ್ ಆಯುಕ್ತರು ಅಮಾನತುಗೊಳಿಸಿ ಎಂದು ಆದೇಶ

ಮೈಸೂರು: ಸಂಸದ ಪ್ರತಾಪ್​ ಸಿಂಹ ವಿರುದ್ಧ ಫೇಸ್ ಬುಕ್ ಖಾತೆಯಲ್ಲಿ ಕಾಮೆಂಟ್ ಮಾಡಿದ ಹೆಡ್ ಕಾನ್ಸ್ ಟೇಬಲ್ ರನ್ನು ಅಮಾನತುಗೊಳಿಸುವಂತೆ ನಗರ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ಮೈಸೂರು ನಗರದ ವಿ ವಿ ಪುರಂ ಪೊಲೀಸ್ ಠಾಣೆಯ ಹೆಡ್ ಕಾನ್ಸ್‌ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ CHC 478, 2005 ನೇ ಬ್ಯಾಚ್ ನವರಾಗಿದ್ದ ಪ್ರಕಾಶ್ ಅವರನ್ನು ಅಮಾನತುಗೊಳಿಸಲಾಗಿದೆ.

ವೈಯುಕ್ತಿಕ ವಿಚಾರಗಳನ್ನು ಉದ್ದೇಶಿಸಿ ಕಾಮೆಂಟ್

ಸಾಮಾಜಿಕ ಜಾಲತಾಣವಾದ ಫೇಸ್ ಬುಕ್ ನಲ್ಲಿ ಪೇಜ್ ನಲ್ಲಿ ಹೆಡ್ ಕಾನ್ಸ್‌ಟೇಬಲ್ ಪ್ರಕಾಶ್ ಪೋಸ್ಟ್ ಒಂದಕ್ಕೆ ಸಂಸದ ಸಂಸದ ಪ್ರತಾಪ್ ಸಿಂಹ ಅವರ ವೈಯುಕ್ತಿಕ ವಿಚಾರಗಳನ್ನು ಉದ್ದೇಶಿಸಿ ಕಾಮೆಂಟ್ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸಂಸದರು ಸಂಬಂಧ ಪಟ್ಟ ಹೆಡ್ ಕಾನ್ಸ್ ಟೇಬಲ್ ವಿರುದ್ಧ ಕ್ರಮ ಕೈಗೊಳ್ಳುವಂತೆ  ಕಮೀಷನರ್ ಅವರಿಗೆ ಪತ್ರ ಬರೆದಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಗರ ಪೊಲೀಸ್ ಆಯುಕ್ತರು ಅಮಾನತುಗೊಳಿಸಿ ಎಂದು ಆದೇಶ ಹೊರಡಿಸಿದ್ದಾರೆ. ಈ ಹಿನ್ನಲೆ ಪ್ರಕಾಶ್ ಅಮಾನತುಗೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಫೇಸ್​ಬುಕ್​ನಲ್ಲಿ ಸಂಸದ ಪ್ರತಾಪ್​ ಸಿಂಹ ವಿರುದ್ಧ ಕಾಮೆಂಟ್; ಹೆಡ್ ಕಾನ್ಸ್​​​​ಟೇಬಲ್ ಅಮಾನತು

https://newsfirstlive.com/wp-content/uploads/2023/07/Prathap-Simha.jpg

Load More