ಇದೇ ತಿಂಗಳು 10ನೇ ತಾರೀಖು ಜೈಲರ್ ಸಿನಿಮಾ ತೆರೆಗೆ
8 ಬ್ರ್ಯಾಂಚ್ಗಳಿಗೆ ರಜೆ ಘೋಷಿಸಿದ ತಲೈವಾ ಅಭಿಮಾನಿ
ಜೈಲರ್ ಸಿನಿಮಾ ನೋಡಲು ನೌಕರರಿಗೆ ಉಚಿತ ಟಿಕೆಟ್
ಸೂಪರ್ ಸ್ಟಾರ್ ರಜಿನಿಕಾಂತ್ ಫ್ಯಾನ್ಸ್ ಬಗ್ಗೆ ಹೇಳಬೇಕಾಗಿಲ್ಲ. ತಲೈವಾ ಹೊಸ ಸಿನಿಮಾ ಥಿಯೇಟರ್ಗೆ ಬಂತಂದ್ರೆ ಸಾಕು ನೂಕು ನುಗ್ಗಲು, ಹೌಸ್ ಫುಲ್ಗಳ ಬಗ್ಗೆಯೇ ಹೆಚ್ಚು ಚರ್ಚೆ. ಯಾಕೆಂದರೆ 72 ನೇ ವಯಸ್ಸಿನಲ್ಲೂ ತೆರೆ ಮೇಲೆ ಹೀರೋ ಆಗಿ ಮಿಂಚುವ ಈ ನಟನ ಸ್ಟೈಲ್ಗೆ, ಅಭಿನಯಕ್ಕೆ ಎಂಥವರೂ ಕೂಡ ಫಿದಾ ಆಗೇ ಆಗುತ್ತಾರೆ. ಅಷ್ಟರ ಮಟ್ಟಿಗೆ ಹಾರ್ಡ್ ಫ್ಯಾನ್ಸ್ ರಜನಿಗಿದ್ದಾರೆ. ಅದರಂತೆಯೇ ಇದೀಗ ಜೈಲರ್ ಸಿನಿಮಾದಲ್ಲಿ ತಲೈವಾ ನಟಿಸುತ್ತಿದ್ದಾರೆ. ಇದೇ ತಿಂಗಳು 10ನೇ ತಾರೀಖು ಈ ಸಿನಿಮಾ ತೆರೆ ಮೇಲೆ ಬರುತ್ತಿದೆ. ಅದರಂತೆಯೇ ಇಲ್ಲೊಬ್ಬ ಸೂಪರ್ ಸ್ಟಾರ್ನ ಅಭಿಮಾನಿಯೊಬ್ಬರು ಏನು ಮಾಡಿದ್ದಾನೆ ಗೊತ್ತಾ?. ಸಿನಿಮಾ ನೋಡಲು ತನ್ನ ಖಾಸಗಿ ಕಂಪನಿಗೆ ರಜೆ ಘೋಷಿಸಿದ್ದಾರೆ.
ಹೌದು. UNO ಆಕ್ವಾ ಕೇರ್ ಕಂಪನಿಯಿಂದ ರಜನಿಕಾಂತ್ ಅವರ ಸಿನಿಮಾ ನೋಡಲು ರಜೆ ಘೋಷಿಸಿದ್ದಾರೆ. ಇದೇ ತಿಂಗಳು 10ನೇ ತಾರೀಖು ಬಹುನಿರೀಕ್ಷಿತ ಜೈಲರ್ ಸಿನಿಮಾ ರಿಲೀಸ್ ಆಗುತ್ತಿದೆ. ವಿಶ್ವದಾದ್ಯಂತ ಬಹುಭಾಷೆಗಳಲ್ಲಿ ಜೈಲರ್ ಸಿನಿಮಾ ತೆರೆ ಮೇಲೆ ಬರುತ್ತಿದೆ. ಹೀಗಾಗಿ ರಜನಿ ಅಪ್ಪಟ್ಟ ಅಭಿಮಾನಿಯೊಬ್ಬರು ತನ್ನ ಕಂಪನಿಗೆ ರಜೆ ಘೋಷಿಸಿದ್ದಲ್ಲದೆ, ಬೆಂಗಳೂರು, ಚೆನ್ನೈ ಸೇರಿದಂತೆ 8 ಬ್ರ್ಯಾಂಚ್ಗಳಿಗೆ ರಜೆ ಘೋಷಣೆ ಮಾಡಿದ್ದಾರೆ.
A private firm announces HOLIDAY for superstar #Rajinikanth's #Jailer with free tickets for watching the film.#JailerFromAug10 pic.twitter.com/4jPwbDX9Pd
— Manobala Vijayabalan (@ManobalaV) August 4, 2023
ನೌಕರರಿಗೆ ರಜೆ ಘೋಷಣೆ ಮಾತ್ರವಲ್ಲದೆ, ಜತೆಗೆ ಉಚಿತವಾಗಿ ಸಿನಿಮಾ ಟಿಕೆಟ್ ವಿತರಣೆ ಕೂಡ ಮಾಡಲು ಮುಂದಾಗಿದ್ದಾರೆ. ಸಂಸ್ಥೆಯ ಎಲ್ಲಾ ಸಿಬ್ಬಂದಿಗೆ ಉಚಿತವಾಗಿ ಜೈಲರ್ ಸಿನಿಮಾ ಟಿಕೆಟ್ ನೀಡುತ್ತಿದ್ದಾರೆ. ಈ ಘೋಷಣೆ ಬಗ್ಗೆ ಎಲ್ಲಾ ಬ್ರಾಂಚ್ಗಳಿಗೆ ಮಾಹಿತಿಯನ್ನು ಹಂಚಿದ್ದಾರೆ.
ಜೈಲರ್ ಸಿನಿಮಾ ರಿಲೀಸ್ಗೂ ಮೊದಲೇ ಹಲ್ಚಲ್ ಎಬ್ಬಿಸಿದೆ. ಈಗಾಗಲೇ ಈ ಸಿನಿಮಾದ ಮೇಲೆ ಭಾರೀ ನಿರೀಕ್ಷೆ ಇದೆ. ಇತ್ತೀಚೆಗೆ ಬಿಡುಗಡೆಗೊಂಡ ಕಾವಲಯ್ಯ ಹಾಡು ಕೂಡ ಭಾರೀ ಸೌಂಡ್ ಮಾಡಿತ್ತು. ಮಿಲ್ಕಿ ಬ್ಯೂಟಿ ತಮನ್ನಾ ಈ ಹಾಡಿಗೆ ಭರ್ಜರಿ ಡ್ಯಾನ್ಸ್ ಕೂಡ ಮಾಡಿದ್ದರು.
ದಿಲೀಪ್ ಕುಮಾರ್ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬಂದಿದ್ದು, ಕಲಾನಿಧಿ ಮಾರನ್ ಜೈಲರ್ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಸ್ಯಾಂಡಲ್ವುಡ್ ನಟ ಶಿವ ರಾಜ್ಕುಮಾರ್, ಮಾಲಿವುಡ್ ಮೋಹನ್ಲಾಲ್, ವಿನಾಯಕನ್, ರಮ್ಯಾ ಕೃಷ್ಣ ಸೇರಿ ಅನೇಕ ತಾರಾಗಣ ಸಿನಿಮಾದಲ್ಲಿದ್ದಾರೆ.
ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ