ಉದ್ಯೋಗಿಗಳಿಗಾಗಿ ಒಂದು ದಿನದ ವಿಶ್ರಾಂತಿಯ ರಜೆ
ಬಾಸ್ ನಿರ್ಧಾರಕ್ಕೆ ಫಿದಾ ಆದ ಉದ್ಯೋಗಿಗಳು!
ಆಸೀಸ್ ವಿರುದ್ಧ ಸೋತದ್ದಕ್ಕೆ ಉದ್ಯೋಗಿಗಳಿಗೆ ರಜೆ
ವಿಶ್ವಕಪ್ ಪಂದ್ಯದ ಸೋಲನ್ನು ನಿವಾರಿಸಿಕೊಳ್ಳಲು ಕಂಪನಿಯೊಂದು ತನ್ನ ಉದ್ಯೋಗಿಗಳಿಗೆ ಒಂದು ದಿನ ರಜೆಯನ್ನು ನೀಡಿದ ಅಚ್ಚರಿಯ ಘಟನೆಯೊಂದು ಬೆಳಕಿಗೆ ಬಂದಿದೆ. ಗುರುಗ್ರಾಮ್ ಮೂಲದ ಕಂಪನಿ ತನ್ನ ಉದ್ಯೋಗಿಗಳಿಗಾಗಿ ಒಂದು ದಿನದ ವಿಶ್ರಾಂತಿ ರಜೆಯನ್ನು ನೀಡಿದೆ.
ನವೆಂಬರ್ 19ರಂದು ಆದಿತ್ಯವಾರದಂದು ಟೀಂ ಇಂಡಿಯಾ ಮತ್ತು ಆಸ್ಟ್ರೇಲಿಯಾ ತಂಡದ ನಡುವೆ ಫೈನಲ್ ಪಂದ್ಯ ಏರ್ಪಡಿಸಲಾಗಿತ್ತು. ಗುಜರಾತ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಈ ಪಂದ್ಯವನ್ನು ನಡೆಸಲಾಗಿತ್ತು. ಆದರೆ ಟೀಂ ಇಂಡಿಯಾದ ನೀಡಿದ 240 ರನ್ಗಳ ಸಾಧಾರಣ ಸವಾಲನ್ನು ಆಸೀಸ್ ಸುಲಭವಾಗಿ ಸ್ವೀಕರಿಸಿ ವಿಶ್ವಕಪ್ ಗೆದ್ದಿದೆ. ಈ ವಿಚಾರ ಭಾರತೀಯ ಕ್ರಿಕೆಟ್ ಫ್ಯಾನ್ಸ್ಗೆ ಬೇಸರ ತರಿಸಿದೆ.
Boss ne sach me leave de di aaj😭
Healing Monday 🥹@iMarketingMoves #marketingmoves #INDvsAUS pic.twitter.com/Jc6M20Sia3— Diksha Gupta (@thedikshagupta) November 20, 2023
ಇದನ್ನು ಓದಿ: ವಿಶ್ವಕಪ್ನಲ್ಲಿ ರೋಹಿತ್ ಶರ್ಮಾ ಕಣ್ಣೀರು ಸುರಿಸಿದ್ದನ್ನು ಕಂಡು ಹೃದಯಾಘಾತ; ಸಾವನ್ನಪ್ಪಿದ ಅಪ್ಪಟ ಅಭಿಮಾನಿ
ಅದರಂತೆಯೇ ಗುರುಗ್ರಾಮ್ನ ಮಾರ್ಕೆಟಿಂಗ್ ಮೂವ್ಸ್ ಏಜೆನ್ಸಿಯ ಉದ್ಯೋಗಿ ದೀಕ್ಷಾ ಗುಪ್ತಾ ಟೀಂ ಇಂಡಿಯಾ ವಿಶ್ವಕಪ್ ಸೋತ ಬೆನ್ನಲ್ಲೇ ಈ ಬೇಸರವನ್ನು ನಿವಾರಿಸಿಕೊಳ್ಳಲು ಒಂದು ದಿನದ ರಜೆಯನ್ನು ನೀಡಿರುವ ಬಗ್ಗೆ ಲಿಂಕ್ಡ್ ಇನ್ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಸದ್ಯ ಅವರು ಹಂಚಿರುವ ಪೋಸ್ಟ್ ವೈರಲ್ ಆಗಿದೆ.
ಸದ್ಯ ದೀಕ್ಷಾ ಹಂಚಿಕೊಂಡಿರುವ ಫೋಸ್ಟ್ ಕಂಡು ಅನೇಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲದೆ ಬಗೆ ಬಗೆ ಕಾಮೆಂಟ್ ಬರೆದು ಹಾಕಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ